ದಿನೇಶ್ ಕುಮಾರ್ ಖನ್ನಾರವರು ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ. ಇವರು ಜನವರಿ ೪, ೧೯೪೩ ರಲ್ಲಿ ಪಂಜಾಬ್‌ನ ಗುರುದಾಸ್ಪುರ್‌ ಜಿಲ್ಲೆಯಲ್ಲಿರುವ ಫತೇಘರ್ ಚುರಿಯನ್‌ ಎಂಬ ಪ್ರದೇಶದಲ್ಲಿ ಜನಿಸಿದರು.[]

ದಿನೇಶ್ ಖನ್ನಾ
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು (1943-01-04) ೪ ಜನವರಿ ೧೯೪೩ (ವಯಸ್ಸು ೮೧)
ಫತೇಘರ್ ಚುರಿಯನ್, ಗುರ್‌ದಾಸ್ಪುರ, ಪಂಜಾಬ್, ಭಾರತ
ದೇಶಭಾರತ

ಮೂಲತಃ ಸ್ವಯಂ ಕಲಿಕೆಯ ಬ್ಯಾಡ್ಮಿಂಟನ್ ತಾರೆಯಾದ ದಿನೇಶ್ ಖನ್ನಾರವರು ತಮ್ಮ ಐದನೇ ವಯಸ್ಸಿನಲ್ಲಿಯೇ ಆಟವನ್ನು ಪ್ರಾರಂಭಿಸಿದರು. ಅವರು ೧೯೫೬ ರಲ್ಲಿ ತಮ್ಮ ೧೩ ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಜೂನಿಯರ್ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದರು. ಮುಂದಿನ ವರ್ಷ ಅವರು ಈ ಚಾಂಪಿಯನ್ ಶಿಪ್ ನ ಫೈನಲ್ ತಲುಪಿದರು. ೧೯೬೧ ರಲ್ಲಿ ಮುಂಬೈನಲ್ಲಿ ಮಲೇಷ್ಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ಮೂಲಕ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಪ್ರಾರಂಭವಾಯಿತು.[]

ವೃತ್ತಿ

ಬದಲಾಯಿಸಿ

ದಿನೇಶ್ ಖನ್ನಾ ೧೯೬೫ ರಲ್ಲಿ ಪುರುಷರ ಸಿಂಗಲ್ಸ್ ಏಷ್ಯನ್ ಚಾಂಪಿಯನ್ ಆಗಿದ್ದರು ಮತ್ತು ೧೪ ನವೆಂಬರ್ ೧೯೬೫ ರಂದು ಏಷ್ಯನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[][][] ಅವರು ೧೯೬೬ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದರು.[] ಅವರು ೧೯೬೬ ರಲ್ಲಿ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು ಮತ್ತು ೧೯೬೫ ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.[] ಸ್ವಾತಂತ್ರ್ಯದ ನಂತರ, ೧೯೬೭ ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯರಾಗಿದ್ದಾರೆ.[] ಇವರು ೧೯೭೪ರಲ್ಲಿ ಟೆಹ್ರಾನ್ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡವನ್ನು ಮುನ್ನಡೆಸಿದವರಾಗಿದ್ದಾರೆ.[] ೧೯೬೬ ರಲ್ಲಿ ವಿವಿಧ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ, ಅವರು ೧೯೬೭ ರ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್‌ನಲ್ಲಿ ಜಂಟಿ ೩ ನೇ ಶ್ರೇಯಾಂಕವನ್ನು ಪಡೆದರು. ಇದು ಆ ಸಮಯದಲ್ಲಿ ನಿಯಮಿತ ಔಪಚಾರಿಕ ವಿಶ್ವ ಶ್ರೇಯಾಂಕದ ಅನುಪಸ್ಥಿತಿಯಲ್ಲಿ ಅನಧಿಕೃತ ವಿಶ್ವ ಶ್ರೇಯಾಂಕವನ್ನು ಪ್ರತಿಬಿಂಬಿಸಿತು. ೧೯೭೨- ೧೯೭೩ರ ಥಾಮಸ್ ಕಪ್ ಸರಣಿಗಳಲ್ಲಿ ಭಾರತ ತಂಡ ಫೈನಲ್‌(ಅಂತಿಮ ಸುತ್ತು)ಗೆ ತಲುಪಲು ನೆರವಾದರು.[೧೦] ೧೯೬೨ ರಲ್ಲಿ ರ್ ಅಪ್

ಚಂಡೀಗಢ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ ದಿನೇಶ್ ಖನ್ನಾರವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ರಾಷ್ಟ್ರೀಯ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದರು.[೧೧]

ಸಾಧನೆಗಳು

ಬದಲಾಯಿಸಿ

ಏಷ್ಯನ್ ಚಾಂಪಿಯನ್‌ಶಿಪ್‌ಗಳು

ಬದಲಾಯಿಸಿ

ಪುರುಷರ ಸಿಂಗಲ್ಸ್

ವರ್ಷ ಸ್ಥಳ ಎದುರಾಳಿ ಅಂಕ ಫಲಿತಾಂಶ
೧೯೬೫ ಲಕ್ನೋ, ಭಾರತ   ಸಂಗೋಬ್ ರತ್ತನುಸೋರ್ನ್ ೧೫-೩, ೧೫-೧೧   ಚಿನ್ನ
೧೯೬೯] ಮನಿಲಾ, ಫಿಲಿಪೈನ್ಸ್   ಪಂಚ್ ಗುಣಲನ್ ೭-೧೫, ೧೩-೧೮   ಕಂಚು

ಕಾಮನ್ವೆಲ್ತ್ ಗೇಮ್ಸ್

ಬದಲಾಯಿಸಿ

ಪುರುಷರ ಸಿಂಗಲ್ಸ್

ವರ್ಷ ಸ್ಥಳ ಎದುರಾಳಿ ಅಂಕ ಫಲಿತಾಂಶ
೧೯೬೬ ಕಿಂಗ್ಸ್ಟನ್, ಜಮೈಕಾ   ಬಾಬ್ ಮೆಕೊಯಿಗ್ ೧೫-೮, ೧೫-೭   ಕಂಚು

ಉಲ್ಲೇಖಗಳು

ಬದಲಾಯಿಸಿ
  1. https://web.archive.org/web/20160910182501/http://www.sportsbharti.com/badminton/whos-who/dinesh-khanna/
  2. https://web.archive.org/web/20160910182501/http://www.sportsbharti.com/badminton/whos-who/dinesh-khanna/
  3. https://web.archive.org/web/20160910182501/http://www.sportsbharti.com/badminton/whos-who/dinesh-khanna/
  4. https://sports.ndtv.com/badminton/this-is-the-golden-age-of-indian-badminton-dinesh-khanna-1490885
  5. https://books.google.co.in/books?id=4aQKAwAAQBAJ&pg=PA176&redir_esc=y#v=onepage&q&f=false
  6. https://web.archive.org/web/20160910182501/http://www.sportsbharti.com/badminton/whos-who/dinesh-khanna/
  7. https://web.archive.org/web/20160910182501/http://www.sportsbharti.com/badminton/whos-who/dinesh-khanna/
  8. https://web.archive.org/web/20160910182501/http://www.sportsbharti.com/badminton/whos-who/dinesh-khanna/
  9. https://web.archive.org/web/20160910182501/http://www.sportsbharti.com/badminton/whos-who/dinesh-khanna/
  10. https://web.archive.org/web/20160910182501/http://www.sportsbharti.com/badminton/whos-who/dinesh-khanna/
  11. https://web.archive.org/web/20160910182501/http://www.sportsbharti.com/badminton/whos-who/dinesh-khanna/