ದಾವಣಗೆರೆ ಮೆಣಸಿನಕಾಯಿ
ಬಳ್ಳಾರಿಯಲ್ಲಿ ಹೆಚ್ಚಾಗಿ ಜನಪ್ರಿಯವಾದ ಮೆಣಸಿನಕಾಯಿ ಬೋಂಡ ಅಥವಾ ಮೆಣಸಿನಕಾಯಿ ಬಜ್ಜಿಗೆ ಬಳ್ಳಾರಿ ಮೆಣಸಿನಕಾಯಿ ಎಂದೇ ಕರೆಯಲಾಗುತ್ತದೆ. ಕೆಲವೊಮ್ಮೆ ಬರೆ ಮೆಣಸಿನಕಾಯಿ ಎಂದು ಆಡುಮಾತಿನಲ್ಲಿ ಉಪಯೋಗಿಸುವುದುಂಟು. ಕಡಲೇ ಹಿಟ್ಟಿನಲ್ಲಿ ಮೆಣಸಿನಕಾಯಿ ಅದ್ದಿ ಕರಿದ ಖಾದ್ಯವಿದು, ಖಾರ - ಮಂಡಕ್ಕಿಯೊಂದಿಗೆ ತಿನ್ನುತ್ತಾರೆ. ಕೊಟ್ಟೂರು , ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಹರಿಹರ, ಚಿತ್ರದುರ್ಗ, ಹಿರಿಯೂರು,ಗದಗ್ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ದಾರಿಯಲ್ಲಿ, ಗಲ್ಲಿಗಲ್ಲಿಗಳಲ್ಲಿ ಮೆಣಸಿನಕಾಯಿ ಬೋಂಡ, ಖಾರ - ಮಂಡಕ್ಕಿ ಮಾರಿ ಜೀವನ ಸಾಗಿಸುವವರು ಇಂದಿಗೂ ಇದ್ದಾರೆ.
ಮಾಡುವ ವಿಧಾನ
ಬದಲಾಯಿಸಿಕಡಲೆ ಹಿಟ್ಟಿಗೆ ಖಾರ, ಜೀರಿಗೆ ಬೆರೆಸಿ ಮೆಣಸಿನಕಾಯಿಯನ್ನು ಅದರಲ್ಲಿ ಅದ್ದಿ ಕರೆಯಲಾಗುತ್ತದೆ. ಸುಲಭ ವಿಧಾನವಾದ್ದರಿಂದ ಕನ್ನಡಿಗರ 'ಫಾಸ್ಟ್ ಫುಡ್'ಗಳಲ್ಲಿ ಇದೊಂದು.