ಥಾಲಿಪಟ್ಟು (ತಾಲೀಪಿಟ್ಟು) ಒಂದು ಬಗೆಯ ಖಾರದ ಬಹು ಧಾನ್ಯಗಳ ಖಾದ್ಯ. ಇದು ಪಶ್ಚಿಮ ಭಾರತ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ಕಣಕವನ್ನು (ಅಕ್ಕಿ, ಗೋಧಿ, ಸಜ್ಜೆ, ಮತ್ತು ಜೋಳ ಸೇರಿದಂತೆ)[೧] ಹುರಿದ ಧಾನ್ಯಗಳು, (ಕಡಲೆ ಮತ್ತು ಉದ್ದು ಸೇರಿದಂತೆ) ಬೇಳೆಗಳು ಹಾಗೂ ಅತ್ಯಂತ ಸಾಮಾನ್ಯವಾಗಿ ಹವೀಜ ಹಾಗೂ ಜೀರಿಗೆ ಬೀಜಗಳಂತಹ ಸಂಬಾರ ಪದಾರ್ಥಗಳಿಂದ ತಯಾರಿಸಿದ ಭಾಜಣಿ ಎಂದು ಕರೆಯಲಾಗುವ ಹಿಟ್ಟಿನಿಂದ ತಯಾರಿಸಲಾಗುತ್ತದೆ.[೨] ಥಾಲಿಪಟ್ಟಿನ ಕಣಕವನ್ನು ತಯಾರಿಸುವಾಗ ಈರುಳ್ಳಿ, ತಾಜಾ ಕೊತ್ತಂಬರಿ ಮತ್ತು ಇತರ ತರಕಾರಿಗಳು ಹಾಗೂ ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ.[೩] ಥಾಲಿಪಟ್ಟನ್ನು ಸಾಮಾನ್ಯವಾಗಿ ಬೆಣ್ಣೆ, ತುಪ್ಪ ಅಥವಾ ಮೊಸರಿನ ಜೊತೆಗೆ ಬಡಿಸಲಾಗುತ್ತದೆ.

ಥಾಲಿಪಟ್ಟು
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ
ವಿವರಗಳು
ಮುಖ್ಯ ಘಟಕಾಂಶ(ಗಳು)ಹಿಟ್ಟು (ಕಡಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಗೋಧಿ, ಮತ್ತು ಅಕ್ಕಿ)

ಉಲ್ಲೇಖಗಳು ಬದಲಾಯಿಸಿ

  1. Olivia Smith. West India Recipes. p. 9.[ಶಾಶ್ವತವಾಗಿ ಮಡಿದ ಕೊಂಡಿ]
  2. Kapoor, Sanjeev (2000). Sanjeev Kapoor’s Khana khazana: celebration of Indian cookery. Mumbai: Popular Prakashan. p. 8. ISBN 9788171546800.
  3. Khatau, Asha (2004). Epicure S Vegetarian Cuisines Of India. Mumbai: Popular Prakashan ltd. p. 63. ISBN 81-7991-119-5.