ತ್ರಿಪುರಾಂತಕೇಶ್ವರ ದೇವಸ್ಥಾನ, ತ್ರಿಪುರಾಂತಕಂ

ತ್ರಿಪುರಾಂತಕೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದ್ದು ಭಾರತದ ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ತ್ರಿಪುರಾಂತಕಮ್‍ನಲ್ಲಿದೆ.

ತ್ರಿಪುರಾಂತಕಂ ಗ್ರಾಮದಿಂದ 2 ಕಿ.ಮಿ. ದೂರದಲ್ಲಿ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮಾವರಿ ದೇವಸ್ಥಾನವಿದೆ. ಶ್ರೀ ತ್ರಿಪುರಾಂತಕೇಶ್ವರ ಸ್ವಾಮಿಯು ಒಂದು ಗುಡ್ಡದ ತುದಿಯಲ್ಲಿದೆ. ಶ್ರೀ ಬಾಲ ತ್ರಿಪುರ ಸುಂದರಿ ದೇವಿಯು ಬೆಟ್ಟದ ಕೆಳಗೆ, ಒಂದು ಕಲ್ಯಾಣಿಯ ಮಧ್ಯದಲ್ಲಿ ನೆಲೆಸಿದ್ದಾಳೆ. ದೇವಾಲಯದ ದಂತಕಥೆಯ ಪ್ರಕಾರ, ಶ್ರೀ ಬಾಲ ತ್ರಿಪುರಸುಂದರಿ ಅಮ್ಮಾವರಿ ದೇವಾಲಯವು ಶ್ರೀಶೈಲಮ್‍ನ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪೂರ್ವ ದ್ವಾರವಾಗಿದೆ.[]

ಪ್ರಧಾನ ದೇವತೆ

ಬದಲಾಯಿಸಿ

ಲಿಂಗದಿಂದ ಪ್ರತಿನಿಧಿತವಾಗಿರುವ ಗರ್ಭಗುಡಿಯಲ್ಲಿರುವ ಪ್ರಧಾನ ದೇವತೆಯನ್ನು ಶ್ರೀ ಬಾಲ ತ್ರಿಪುರಾಂತಕೇಶ್ವರ ಎಂದು ಕರೆಯಲಾಗುತ್ತದೆ.

ವೈಪ್ಪು ಸ್ಥಳಮ್

ಬದಲಾಯಿಸಿ

ಇದು ತಮಿಳು ಶೈವರಾದ ನಾಯನಾರ್ ಅಪ್ಪರ್ ಅವರು ಹಾಡಿರುವ ವೈಪ್ಪು ಸ್ಥಳಮ್‍ಗಳ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ.[] ಈ ದೇವಾಲಯವು ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಬಹಳ ಹತ್ತಿರದಲ್ಲಿದೆ. ಶಕ್ತಿ ಪೀಠಗಳಲ್ಲಿ ಇದೂ ಕೂಡ ಒಂದು.

ಉಲ್ಲೇಖಗಳು

ಬದಲಾಯಿಸಿ
  1. Staff Reporter (2015-09-07). "Chandi Mahayagam begins at Tripurantakam". The Hindu (in Indian English). ISSN 0971-751X. Retrieved 2020-10-24.
  2. மூவர் தேவார வைப்புத் தலங்கள், Muvar Thevara Vaippu Thalangal, 6-7-5


ಹೊರಗಿನ ಕೊಂಡಿಗಳು

ಬದಲಾಯಿಸಿ