ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣತಾಲೂಕಿನ ತೊಂಡನೂರಿನಲ್ಲಿರುವ ಒಂದು ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಸುಮಾರು ೨೧೫೦ ಎಕರೆಯಷ್ಟು ಜಾಗವನ್ನು ಆಕ್ರಮಿಸಿರುವ, ಸುತ್ತ ಮುತ್ತ ಬೆಟ್ಟ-ಗುಡ್ಡಗಳಿಂದ ಆವರಿಸಿರುವ ಈ ಕೆರೆಯನ್ನು ನೋಡುವುದೆ ಒಂದು ಆನಂದ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿ ಬರುತ್ತದೆ. ತೊಣ್ಣೂರು ಕೆರೆಯು ಸುಮಾರು ೧೦೦೦ ವರ್ಷಗಳ ಹಿಂದೆ ವೈಷ್ಣವ ಸಂತರಾದ ಶ್ರೀ ರಾಮಾನುಜಚಾರ್ಯ ಅವರ ಆಶಯದಂತೆ ನಿರ್ಮಾಣವಾಯಿತು.

ಇದು ಒಂದು ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ. ಹಾಗು ಮೇಲುಕೋಟೆಗೆ ಹತ್ತಿರದಲ್ಲಿ ಇದೆ.ದೊಡ್ಡ ತೆಂಗಿನಕಲ್ಲು ಬೆಟ್ಟವು ಸಹ ಇದರ ಹತ್ತಿರದಲ್ಲಿಯೇ ಇದೆ.

ಕೆರೆಯ ಸುತ್ತ ಮುತ್ತ ವೆಂಕಟರಮಣ, ನಂಬಿ ನಾರಾಯಣ, ಪಾರ್ಥಸಾರಥಿ, ವೇಣುಗೋಪಾಲ, ಯೋಗನರಸಿಂಹ ಮತ್ತು ಶ್ರೀ ರಾಮಾನುಜಚಾರ್ಯರ ದೇವಾಲಯಗಳಿವೆ. ಕುಂತಿ ಬೆಟ್ಟವು ಇಲ್ಲಿಂದ ೫ ಕಿ.ಮೀ ದೂರದಲ್ಲಿದೆ.

ಈ ಕೆರೆಯನ್ನು ತಲುಪಲು ಪಾಂಡವಪುರದಿಂದ ೮ ಕಿ.ಮೀ ದೂರ, ಬೆಂಗಳೂರಿನಿಂದ ೧೩೦ಕಿ.ಮೀ, ಮೇಲುಕೋಟೆಯಿಂದ ೨೫ ಕಿ.ಮೀ ಹಾಗು ಮೈಸೂರಿನಿಂದ ೩೦ ಕಿ.ಮೀ ದೂರ. ಈ ಕೆರೆ ೨೧೫೦ ಎಕರೆ ಪ್ರದೇಶದಲ್ಲಿದೆ.