ತೈಯಬ್ ಮೆಹ್ತಾ
ತೈಯಬ್ ಮೆಹ್ತಾ (೨೫ ಜುಲೈ ೧೯೨೫ - ೨ ಜುಲೈ ೨೦೦೯) ಒಬ್ಬ ಖ್ಯಾತ ಭಾರತೀಯ ವರ್ಣ ಚಿತ್ರಕಾರ. ಅವರು ಪ್ರಸಿದ್ಧ ಬಾಂಬೆ ಪ್ರೊಗ್ರೆಸ್ಸಿವ್ ಆರ್ಟಿಸ್ಟ್ಸ್ ಗ್ರೂಪ್‌ನಲ್ಲಿದ್ದರು, ಇದು F.N. ಸೌಜ, S.H. ರಾಜ ಮತ್ತು M.F. ಹುಸೇನ್ ಮೊದಲಾದ ಹೆಸರಾಂತ ಕಲಾವಿದರನ್ನು ಹಾಗೂ ಭಾರತದ ವಸಾಹತು ಕಾಲದ ನಂತರದ ಆರಂಭಿಕ ಕಲಾವಿದ-ಪೀಳಿಗೆಯನ್ನು ಒಳಗೊಂಡಿತ್ತು. ಈ ಪೀಳಿಗೆಯವರಾದ ಜಾನ್ ವಿಲ್ಕಿನ್ಸ್ ರಾಷ್ಟ್ರೀಯತಾವಾದಿ ಬಂಗಾಳ ಶಾಲೆಯಿಂದ ಬೇರ್ಪಟ್ಟು, ಇಂಪ್ರೆಷನಿಸ್ಟ್-ನಂತರದ ಬಣ್ಣಗಳು, ಘನಾಕೃತಿಕಲಾವಾದಿ ಶೈಲಿ ಮತ್ತು ಚಿತ್ರಣ ವಿಧಾನಗಳು ಹಾಗೂ ಅಭಿವ್ಯಕ್ತಿವಾದಿ ಶೈಲಿಗಳೊಂದಿಗೆ ಆಧುನಿಕತಾ ವಾದವನ್ನು ಕೈಕೊಂಡರು.
ತೈಯಬ್ ಮೆಹ್ತಾ | |
ಹುಟ್ಟು | [೧] | ೨೬ ಜುಲೈ ೧೯೨೫
ಸಾವು | 2 July 2009[೨] Mumbai, India | (aged 83)
ರಾಷ್ಟ್ರೀಯತೆ | ಭಾರತೀಯ |
ಕ್ಷೇತ್ರ | ವರ್ಣ ಚಿತ್ರಕಾರ |
ತರಬೇತಿ | ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ (1952) |
ಕೃತಿಗಳು | Celebration Kali |
ಅವರ ಸುಪ್ರಸಿದ್ಧ ವರ್ಣಚಿತ್ರಗಳಲ್ಲಿ ಮುಖ್ಯವಾದುದು ಮೂರಂಕಣ ಚಿತ್ರ ಸೆಲೆಬ್ರೇಶನ್ , ಇದು ೨೦೦೨ರಲ್ಲಿ ಕ್ರೈಸ್ಟಿಯ ಹರಾಜಿನಲ್ಲಿ ಸುಮಾರು ೧.೫ ಕೋಟಿ ($೩೧೭,೫೦೦) ರೂಪಾಯಿಗೆ ಮಾರಾಟವಾಯಿತು. ಇದು ಅಂತಾರಾಷ್ಟ್ರೀಯ ಹರಾಜಿನಲ್ಲಿ ಒಂದು ಭಾರತೀಯ ವರ್ಣಚಿತ್ರಕ್ಕೆ ಸಿಕ್ಕಿದ ಅತಿ ಹೆಚ್ಚಿನ ಮೊತ್ತವಾಗಿದೆ, ಅಲ್ಲದೆ ಇದು ಅನಂತರದ ಭಾರತೀಯ ಶ್ರೇಷ್ಠ ಕಲಾ ಜನಪ್ರಿಯತೆಯನ್ನು ಉತ್ತೇಜಿಸಿತು; ಅವರ ಇತರ ಪ್ರಸಿದ್ಧ ವರ್ಣಚಿತ್ರಗಳೆಂದರೆ 'ಡಯಾಗ್ನಲ್ ಸೀರೀಸ್', ಶಾಂತಿನಿಕೇತನ ಮೂರಂಕಣ ಚಿತ್ರ ಸರಣಿ, ಕಾಳಿ , ಮಹಿಷಾಸುರ (೧೯೯೬)[೩]. ಲಂಡನ್, ನ್ಯೂಯಾರ್ಕ್ ಮತ್ತು ಶಾಂತಿನಿಕೇತನದಲ್ಲಿ ಸ್ವಲ್ಪ ಕಾಲ ಕಳೆದುದನ್ನು ಹೊರತುಪಡಿಸಿದರೆ ಅವರು ತಮ್ಮ ಜೀವನದ ಹೆಚ್ಚಿನ ಅವಧಿಯನ್ನು ಮುಂಬಯಿಯಲ್ಲಿ ಕಳೆದರು ಮತ್ತು ಅಲ್ಲಿಯೇ ತಮ್ಮ ಕೆಲಸವನ್ನು ಮಾಡಿದರು, ಈ ಮೂರು ಸ್ಥಳಗಳೂ ಅವರ ವರ್ಣಚಿತ್ರ ಕಲೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಿವೆ. ಅವರು ೨೦೦೭ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣವನ್ನು ಸ್ವೀಕರಿಸುವುದರೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.[೪][೫][೬]
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿತೈಯಬ್ ಮೆಹ್ತಾ ಭಾರತದ ಗುಜರಾತ್ ರಾಜ್ಯದ ಖೇದಾ ಜಿಲ್ಲೆಯ ಕಪಾಡ್‌ವಂಜ್ ಎಂಬ ಒಂದು ನಗರದಲ್ಲಿ ಜನಿಸಿದರು. ಅವರು ದಾವೋದಿ ಬೊಹ್ರಾಸ್ ವಾಸಿಸುತ್ತಿದ್ದ ಮುಂಬಯಿಯ ಹತ್ತಿರದ ಕ್ರಾಫೋರ್ಡ್ ಮಾರ್ಕೆಟ್‌ನಲ್ಲಿ ಬೆಳೆದರು. ತಮ್ಮ ೨೨ನೇ ವರ್ಷ ವಯಸ್ಸಿನಲ್ಲಿ, ಮುಂಬಯಿಯಲ್ಲಿ ೧೯೪೭ರ ವಿಭಜನೆ ದಂಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರು ಮಹಮ್ಮದ್ ಅಲಿ ರೋಡ್‌ನ ಲೆಹ್ರಿ ಹೌಸ್‌ನಲ್ಲಿ ತಂಗಿದ್ದಾಗ ದಂಗೆಕೋರ ಗುಂಪೊಂದು ಒಬ್ಬ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಸಾಯಿಸುವುದನ್ನು ಕಂಡರು. ಅದನ್ನು ಅವರು ಚಿತ್ರವೊಂದರಲ್ಲಿ ವ್ಯಕ್ತಪಡಿಸಿದುದು ಮಾತ್ರವಲ್ಲದೆ ಅದು ಅವರ ಕೆಲಸದ ಮೇಲೆ ತೀವ್ರ ಪರಿಣಾಮವನ್ನೂ ಬೀರಿತು[೪][೭].
ಆರಂಭದಲ್ಲಿ ಸ್ವಲ್ಪ ಕಾಲದವರೆಗೆ ಅವರು ಮುಂಬಯಿಯ ಟಾರ್ಡಿಯೊದ ಫೇಮಸ್ ಸ್ಟುಡಿಯೋಸ್‌ನ ಒಂದು ಸಿನಿಮಾ ಪ್ರಯೋಗಾಲಯದಲ್ಲಿ ಚಿತ್ರ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು ೧೯೫೨ರಲ್ಲಿ ಸರ್ J.J. ಸ್ಕೂಲ್ ಆಫ್ ಆರ್ಟ್‌ನಿಂದ ಡಿಪ್ಲೋಮಾವನ್ನು ಪಡೆದರು ಹಾಗೂ ಬಾಂಬೆ ಪ್ರೊಗ್ರೆಸ್ಸಿವ್ ಆರ್ಟಿಸ್ಟ್ಸ್ ಗ್ರೂಪ್‌ಅನ್ನು ಸೇರಿಕೊಂಡರು, ಇದು ಪಾಶ್ಚಿಮಾತ್ಯ ಆಧುನಿಕತಾ ವಾದದಿಂದ ಶೈಲಿಯ ಪ್ರೇರಣೆಯನ್ನು ಪಡೆದಿತ್ತು ಹಾಗೂ F.N. ಸೌಜ, S.H. ರಾಜ ಮತ್ತು M.F. ಹುಸೇನ್[೮] ಮೊದಲಾದ ಹೆಸರಾಂತ ಭಾರತೀಯ ವರ್ಣಚಿತ್ರಕಲಾವಿದರನ್ನು ಒಳಗೊಂಡಿತ್ತು.
ವೃತ್ತಿಜೀವನ
ಬದಲಾಯಿಸಿಅವರು ೧೯೫೯ರಲ್ಲಿ ಲಂಡನ್‌ಗೆ ಹೋದರು, ಅಲ್ಲಿ ೧೯೬೪ರವರೆಗೆ ಕೆಲಸ ಮಾಡಿದರು. ಅನಂತರ ಅವರು ನ್ಯೂಯಾರ್ಕ್, USಗೆ ಭೇಟಿನೀಡಿದರು, ಅಲ್ಲಿ ೧೯೬೮ರಲ್ಲಿ ರಾಕೆಫೆಲ್ಲರ್ ಫೆಲೋಶಿಪ್ಅನ್ನು ಪಡೆದರು[೯]. ಲಂಡನ್‌ನಲ್ಲಿದ್ದ ಸಂದರ್ಭದಲ್ಲಿ ಮೆಹ್ತಾರವರ ಶೈಲಿಯು ಫ್ರಾನ್ಸಿಸ್ ಬೇಕನ್‌ರ ಅಭಿವ್ಯಕ್ತಿವಾದಿ ಕೆಲಸಗಳಿಂದ ಪ್ರಭಾವಿತವಾಯಿತು. ಆದರೆ ನ್ಯೂಯಾರ್ಕ್‌ನಲ್ಲಿದ್ದಾಗ ಅವರ ಕೆಲಸವು ಕನಿಷ್ಠೀಯತೆಯಿಂದ ವೈಶಿಷ್ಟ್ಯಗೊಂಡಿತು.[೧೦] ಅವರು ಕೂಡಲ್ ('ಸಂಧಿಸುವ ಸ್ಥಳ'ಕ್ಕಿರುವ ತಮಿಳು ಪದ) ಎಂಬ ಮೂರು-ನಿಮಿಷದ ಚಿತ್ರವೊಂದನ್ನು ನಿರ್ಮಿಸಿದರು. ಅದನ್ನು ಅವರು ಬಾಂದ್ರ ವಧಾಸ್ಥಾನದಲ್ಲಿ ಚಿತ್ರೀಕರಿಸಿದರು. ಆ ಚಿತ್ರವು ೧೯೭೦ರಲ್ಲಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು[೯]. ಅವರು ೧೯೮೪–೮೫ರ ಅವಧಿಯಲ್ಲಿ ಶಾಂತಿನಿಕೇತನದ ನಿಲಯದ ಕಲಾವಿದರಾಗಿದ್ದರು ಹಾಗೂ ನಂತರ ತಮ್ಮ ಕೆಲಸದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಮುಂಬಯಿಗೆ ಹಿಂದಿರುಗಿದರು. ಅವರ ವರ್ಣಚಿತ್ರಗಳಲ್ಲಿದ್ದ ಸಾಮಾನ್ಯ ಅಂಶಗಳೆಂದರೆ ಕಟ್ಟಿಹಾಕಿದ ಗೂಳಿ, ರಿಕ್ಷಾ ಎಳೆಯುವವನು. ನಂತರ ಅವರು ಈ ಅಂಶಗಳಿಂದ 'ಡಯಾಗ್ನಲ್ ಸೀರೀಸ್'ಗೆ ಸರಿದರು, ಅದನ್ನು ಅವರು ೧೯೬೯ರಲ್ಲಿ ಆಶಾಭಂಗಗೊಂಡ ಸಂದರ್ಭದಲ್ಲಿ ತಮ್ಮ ಕ್ಯಾನ್ವಾಸಿನ ಮೇಲೆ ಕಪ್ಪು ಗೆರೆಯನ್ನು ಎಳೆದಾಗ ಅನಿರೀಕ್ಷಿತವಾಗಿ ಕಂಡುಹಿಡಿದ ನಂತರ ೧೯೭೦ರ ದಶಕದಲ್ಲಿ ರಚಿಸಿದರು[೪]. ನಂತರ ಅವರು ತಮ್ಮ ವರ್ಣಚಿತ್ರಕ್ಕೆ 'ಫಾಲಿಂಗ್ ಫಿಗರ್ಸ್'ಅನ್ನು ಹಾಗೂ ಕಾಳಿ ದೇವತೆಯ ಮತ್ತು ಮಹಿಷಾಸುರ ರಾಕ್ಷಸನ ಚಿತ್ರಣಗಳನ್ನು ಎತ್ತಿತೋರಿಸುವ ಕೆಲವು ಪೌರಾಣಿಕ ಆಕೃತಿಗಳನ್ನು ಸೇರಿಸಿದರು.[೧೧].
ತೈಯಬ್ ಮೆಹ್ತಾರ ಸೆಲೆಬ್ರೇಶನ್ ೨೦೦೨ರಲ್ಲಿ ಕ್ರೈಸ್ಟಿಯ ಹರಾಜಿನಲ್ಲಿ ($೩೧೭,೫೦೦ USD ಅಥವಾ ೧೫ ದಶಲಕ್ಷ ಭಾರತೀಯ ರೂಪಾಯಿಗೆ) ಮಾರಾಟವಾಗುವುದರೊಂದಿಗೆ ಅದು ಒಂದು ಭಾರತೀಯ ವರ್ಣಚಿತ್ರವು ಅತಿ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ದಾಖಲೆಯನ್ನು ನಿರ್ಮಿಸಿತು.[೧೨] ೨೦೦೫ರ ಮೇಯಲ್ಲಿ ಅವರ ಕಾಳಿ ವರ್ಣಚಿತ್ರವು ಭಾರತೀಯ ಹರಾಜು ಕೇಂದ್ರ ಸ್ಯಾಫ್ರನಾರ್ಟ್‌ನ ಆನ್‌ಲೈನ್ ಹರಾಜಿನಲ್ಲಿ ೧೦ ದಶಲಕ್ಷ ಭಾರತೀಯ ರೂಪಾಯಿಗೆ (ಸರಿಸುಮಾರು ೨೩೦,೦೦೦ US ಡಾಲರ್‌ಗಳಿಗೆ) ಮಾರಾಟವಾಯಿತು.[೧೩] ರಾಕ್ಷಸ ಮಹಿಷಾಸುರನ ಕಥೆಯ ಮೆಹ್ತಾರವರ ಪುನರ್ವ್ಯಾಖ್ಯಾನವಾದ, ದುರ್ಗಾ ದೇವತೆಯು ರಾಕ್ಷಸನ ಹಿಡಿತದಲ್ಲಿ ಬಂಧಿಸಿರುವುದನ್ನು ತೋರಿಸುವ ಚಿತ್ರವು $೧.೫೮೪ ದಶಲಕ್ಷ ರೂಪಾಯಿಗೆ ಮಾರಾಟವಾಯಿತು.[೧೪][೧೫][೧೬] ೨೦೦೮ರಲ್ಲಿ ಅವರ ವರ್ಣಚಿತ್ರಗಳಲ್ಲಿ ಒಂದು $೨ ದಶಲಕ್ಷಕ್ಕೆ ಮಾರಾಟವಾಯಿತು.[೧೭].
೨೦೦೫ರ ಡಿಸೆಂಬರ್‌ನಲ್ಲಿ ಮೆಹ್ತಾರವರ ವರ್ಣಚಿತ್ರ ಗೆಸ್ಚರ್ ಓಷ್ಯನ್ ಹರಾಜಿನಲ್ಲಿ ಕುಯೋಮಿ ಟ್ರಾವೆಲ್‌ನ ಅಧ್ಯಕ್ಷ ರಂಜಿತ್ ಮಲ್ಕಾನಿಗೆ ೩೧ ದಶಲಕ್ಷ ಭಾರತೀಯ ರೂಪಾಯಿಗೆ ಮಾರಾಟವಾಯಿತು. ಇದು ಭಾರತದಲ್ಲಿ ಭಾರತೀಯ ಆಧುನಿಕ ಕಲೆಗೆ ಒಬ್ಬ ಭಾರತೀಯನು ಇದುವರೆಗೆ ಪಾವತಿಸಿದುದರಲ್ಲಿ ಅತಿ ಹೆಚ್ಚಿನದಾಗಿದೆ.[೧೮]
ಮೆಹ್ತಾರ ವರ್ಣಚಿತ್ರಗಳು ಒಬ್ಬ ಆಧುನಿಕ ಭಾರತೀಯ ಕಲಾವಿದನ ವರ್ಣಚಿತ್ರಗಳು ಸುಮಾರು ದಶಲಕ್ಷದಷ್ಟು ಡಾಲರ್‌ಗಳಿಗೆ ಮಾರಾಟವಾದ ಮೊದಲ ವರ್ಣಚಿತ್ರಗಳಾಗಿವೆ; ಆದ್ದರಿಂದ ಮೆಹ್ತಾ ಒಬ್ಬ ಸಾಂಸ್ಕೃತಿಕ ನಾಯಕರಾದರು.[೧೭]
ವೈಯಕ್ತಿಕ ಜೀವನ
ಬದಲಾಯಿಸಿತೈಯಬ್ ಮೆಹ್ತಾರವರು ತಮ್ಮ ಜೀವನದ ಹೆಚ್ಚಿನ ಕಾಲವನ್ನು ಮುಂಬಯಿಯಲ್ಲಿ ಕಳೆದರು ಮತ್ತು ನಂತರ ಮುಂಬಯಿಯ ಲೋಕಂದ್ವಾಲದಲ್ಲಿ ವಾಸಿಸಿದರು. ಅವರು ೨೦೦೯ರ ಜುಲೈ ೨ರಂದು ಹೃದಯಾಘಾತದಿಂದಾಗಿ ಮುಂಬಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.[೧೯] ಅವರು ಪತ್ನಿ ಸಾಕಿನ, ಮಗ ಯೂಸುಫ್ ಮತ್ತು ಮಗಳು ಹಿಮಾನಿ ಹಾಗೂ ಅನೇಕ ಮೊಮ್ಮಕ್ಕಳನ್ನು ಬಿಟ್ಟುಹೋಗಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿಅವರು ೧೯೬೮ರಲ್ಲಿ ರಾಕೆಫೆಲ್ಲರ್ ಫೆಲೋಶಿಪ್ಅನ್ನು ಪಡೆದರು. ಅದೇ ವರ್ಷದಲ್ಲಿ ಅವರು ನವದೆಹಲಿಯಲ್ಲಿ ಮೊದಲ ತ್ರೈವಾರ್ಷಿಕ ಭೇಟಿಯಲ್ಲಿ ವರ್ಣಚಿತ್ರಕ್ಕಾಗಿ ಚಿನ್ನದ ಪದಕವನ್ನು ಗೆದ್ದರು. ಇದಲ್ಲದೆ ಅವರು ೧೯೭೪ರಲ್ಲಿ ಫ್ರಾನ್ಸಿನ ಕ್ಯಾಗ್ನೆಸ್-ಸುರ್-ಮರ್‌ನ[೧೭] ಅಂತಾರಾಷ್ಟ್ರೀಯ ವರ್ಣಚಿತ್ರೋತ್ಸವದಲ್ಲಿ ಪ್ರಿಕ್ಸ್ ನ್ಯಾಷನಲೆ, ೧೯೮೮ರಲ್ಲಿ ಮಧ್ಯಪ್ರದೇಶ ಸರ್ಕಾರ ಏರ್ಪಡಿಸಿದುದರಲ್ಲಿ ಕಾಳಿದಾಸ್ ಸಮ್ಮಾನ್, ೨೦೦೫ರಲ್ಲಿ ಕಲೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ದಯಾವತಿ ಮೋದಿ ಫೌಂಡೇಶನ್ ಪ್ರಶಸ್ತಿ[೧೭] ಮತ್ತು ೨೦೦೭ರಲ್ಲಿ ಪದ್ಮಭೂಷಣವನ್ನು ಪಡೆದರು.[೨೦] ಅವರ ಚಿತ್ರ ‘ಕೂಡಲ್’ ೧೯೭೦ರಲ್ಲಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೨೦]
ಮೆಹ್ತಾರ ವರ್ಣಚಿತ್ರಗಳು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್‌ನಲ್ಲಿ ಮತ್ತು ಹಿರ್ಶ್‌ಹಾರ್ನ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಂಡವು. ೨೦೦೯ರ ಉತ್ತರಾರ್ಧದಲ್ಲಿ ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಒಂದು ಸಿಂಹಾವಲೋಕನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.[೧೭]
ಗ್ರಂಥಸೂಚಿ
ಬದಲಾಯಿಸಿ- ತೈಯಬ್ ಮೆಹ್ತಾ: ಐಡಿಯಾಸ್ ಇಮೇಜಸ್ ಎಕ್ಸ್‌ಚೇಂಜಸ್ - ತೈಯಬ್ ಮೆಹ್ತಾ, ರಂಜಿತ್ ಹೊಸಕೋಟೆ, ರೋಶನ್ ಶಹಾನಿ ಪ್ರಕಾಶಕರು: ವದೇಹ್ರ ಆರ್ಟ್ ಗ್ಯಾಲರಿ, ೨೦೦೮. ISBN ೮೧೮೭೭೩೭೦೫೦.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ತೈಯಬ್ ಮೆಹ್ತಾ - ಜಾರ್ಜಿನಾ ಮತ್ತು ಉಲ್ಲಿ ಬೈಯರ್. ಇನ್‌ಸ್ಟಿಟ್ಯೂಟ್ ಆಫ್ ಪಪ್ವಾ ನ್ಯೂಜಿನೇವಾ ಸ್ಟಡೀಸ್, ೧೯೭೭.
- ಸ್ವರಾಜ್: ಎ ಜರ್ನಿ ವಿದ್ ತೈಯಬ್ ಮೆಹ್ತಾಸ್ "ಶಾಂತಿನಿಕೇತನ್ ಟ್ರಿಪ್ಟಿಕ್" - ರಾಮಚಂದ್ರ ಗಾಂಧಿ. ವದೇಹ್ರ ಆರ್ಟ್ ಗ್ಯಾಲರಿ, ೨೦೦೨. ISBN ೮೧೮೭೭೩೭೦೨೬.
ಉಲ್ಲೇಖಗಳು
ಬದಲಾಯಿಸಿ- ↑ "Tyeb Mehta". Retrieved 2009-07-02.
- ↑ "Noted artist Tyeb Mehta dies". The Times Of India. 2009-07-02. Retrieved 2009-07-02.
- ↑ ಆರ್ಟಿಸ್ಟ್ ತೈಯಬ್ ಮೆಹ್ತಾ ಡೈಸ್ ಆಫ್ಟರ್ ಲಾಂಗ್ ಇಲ್ನೆಸ್ Archived 2018-08-08 ವೇಬ್ಯಾಕ್ ಮೆಷಿನ್ ನಲ್ಲಿ. ರೂಟರ್ಸ್, ಜುಲೈ ೨, ೨೦೦೯.
- ↑ ೪.೦ ೪.೧ ೪.೨ ತೈಯಬ್ ಮೆಹ್ತಾ ಸ್ಟುಡ್ ಫಾರ್ ಹೋಪ್ ಓವರ್ ಹೈಪ್ ನೈನ ಮಾರ್ಟಿರಿಸ್, ಟೈಮ್ಸ್ ಆಫ್ ಇಂಡಿಯಾ, ಜುಲೈ ೩, ೨೦೦೯.
- ↑ ತೈಯಬ್ ಮೆಹ್ತಾ, ಹು ವೀವ್ಡ್ ಮೆಟಾಫರ್ ಇನ್ಟು ಇಮೇಜಸ್ ಪಾಸಸ್ ಎವೇ ದಿ ಎಕನಾಮಿಕ್ ಟೈಮ್ಸ್, ಜುಲೈ ೩, ೨೦೦೯.
- ↑ ತೈಯಬ್ ಮೆಹ್ತಾ ವಾಸ್ ಇಂಡಿಯಾಸ್ ಮೋಸ್ಟ್ ಎಕ್ಸ್‌ಪೆನ್ಸಿವ್ ಲಿವಿಂಗ್ ಆರ್ಟಿಸ್ಟ್, ಆಲ್ಸೊ ಇಟ್ಸ್ ಫೈನೆಸ್ಟ್ ಕಿಶೋರ್ ಸಿಂಗ್, ಬ್ಯುಸಿನೆಸ್ ಸ್ಟ್ಯಾಂಡರ್ಡ್, ಜುಲೈ ೦೩, ೨೦೦೯.
- ↑ ಸ್ವರಾಜ್: ಎ ಜರ್ನಿ ವಿದ್ ತೈಯಬ್ ಮೆಹ್ತಾಸ್ "ಶಾಂತಿನಿಕೇತನ್ ಟ್ರಿಪ್ಟಿಕ್" - ರಾಮಚಂದ್ರ ಗಾಂಧಿ. ವದೇಹ್ರ ಆರ್ಟ್ ಗ್ಯಾಲರಿ, ೨೦೦೨. ISBN ೮೧೮೭೭೩೭೦೨೬. ಪುಟ ೬೦
- ↑ 'ಐ ಡೋನ್ಟ್ ಪೈಂಟ್ ಫಾರ್ ಮನಿ' ದಿ ಟೈಮ್ಸ್ ಆಫ್ ಇಂಡಿಯಾ, ಜೂನ್ ೧೪, ೨೦೦೯.
- ↑ ೯.೦ ೯.೧ ತೈಯಬ್ ಮೆಹ್ತಾ: ಫ್ರಮ್ ಫಿಲ್ಮ್‌ಮೇಕರ್ ಟು ಪೈಂಟರ್ ದಿ ಟೈಮ್ಸ್ ಆಫ್ ಇಂಡಿಯಾ, ಸೆಪ್ಟೆಂಬರ್ ೨೦, ೨೦೦೨.
- ↑ ಟುಲ್ಲಿ, ಜುದ್ದ್. “ತೈಯಬ್ ಮೆಹ್ತಾ” ಆರ್ಟ್+ಆಕ್ಷನ್ , ನವೆಂಬರ್ ೨೦೦೯.
- ↑ ತೈಯಬ್ ಮೆಹ್ತಾ ಪಾಸಸ್ ಎವೆ Archived 2009-07-09 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ದಿ ಸ್ಟೇಟ್ಸ್‌ಮ್ಯಾನ್, ಜುಲೈ ೨, ೨೦೦೯.
- ↑ Rajamani, Radhika (2003-01-23). "Artist for all times". ದಿ ಹಿಂದೂ. Archived from the original on 2005-05-08. Retrieved 2006-06-17.
- ↑ "Tyeb Metha's Kali fetches Rs 1 crore". ಟೈಮ್ಸ್ ಆಫ್ ಇಂಡಿಯ. 2005-05-20.
- ↑ "Bull run in art bazaar". Deccan Herald. 2005-05-28. Retrieved 2006-06-17. [dead link]
- ↑ Sengupta, Somini (2006-01-26). "Indian Artist Enjoys His World Audience". New York Times. Retrieved 2006-06-17.
- ↑ "Tyeb Mehta painting fetches $1.54 million". Rediff.com. 2005-09-22. Retrieved 2006-06-17.
- ↑ ೧೭.೦ ೧೭.೧ ೧೭.೨ ೧೭.೩ ೧೭.೪ Cotter, Holland (2009-07-04). "Tyeb Mehta, Painter of Emerging India, Dies at 84". New York Times. Retrieved 2000-07-23.
{{cite news}}
: Check date values in:|accessdate=
(help) - ↑ "Tyeb Mehta painting sold for Rs. 3.1 crore". Rediff.com. 2005-12-05. Retrieved 2006-06-17.
- ↑ ತೈಯಬ್ ಮೆಹ್ತಾ ಡೆಡ್ Archived 2009-07-09 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದುಸ್ತಾನ್ ಟೈಮ್ಸ್ . ೨೦೦೯-೦೭-೦೩ರಂದು ಪುನಃಸಂಪಾದಿಸಲಾಗಿದೆ.
- ↑ ೨೦.೦ ೨೦.೧ "Tyeb Mehta". Archived from the original on 2009-07-06. Retrieved 2009-07-02.
ಬಾಹ್ಯ ಕೊಂಡಿಗಳು
ಬದಲಾಯಿಸಿ- ತೈಯಬ್ ಮೆಹ್ತಾ, ಟ್ರಿಬ್ಯೂಟ್ ಸೈಟ್ Archived 2011-04-30 ವೇಬ್ಯಾಕ್ ಮೆಷಿನ್ ನಲ್ಲಿ.
- ತೈಯಬ್ ಮೆಹ್ತಾ- ಲಿಸ್ಟ್ ಆಫ್ ಮೋಸ್ಟ್ ಎಕ್ಸ್‌ಪೆನ್ಸಿವ್ ಇಂಡಿಯನ್ ಪೈಂಟಿಂಗ್ಸ್ Archived 2007-10-07 ವೇಬ್ಯಾಕ್ ಮೆಷಿನ್ ನಲ್ಲಿ.
- ತೈಯಬ್ ಮೆಹ್ತಾ - ಪ್ರೊಫೈಲ್ Archived 2009-07-10 ವೇಬ್ಯಾಕ್ ಮೆಷಿನ್ ನಲ್ಲಿ.