ತಿರುವನ್ಮಿಯೂರ್
ತಿರುವನ್ಮಿಯೂರ್ ಭಾರತದ ತಮಿಳುನಾಡು ರಾಜ್ಯದ ಚೆನ್ನೈನ ದಕ್ಷಿಣದಲ್ಲಿರುವ ಬಹುತೇಕವಾಗಿ ವಾಸಕ್ಕೆ ತಕ್ಕುದಾದ ಪ್ರದೇಶವಾಗಿದೆ. ನೆರೆಯ ತಾರಾಮಣಿಯಲ್ಲಿ ಚೆನ್ನೈನ ಮೊದಲ ಮೀಸಲು ತಂತ್ರಜ್ಞಾನ ಕಚೇರಿ ಸ್ಥಳವಾದ ಟೈಡೆಲ್ ಮಾಹಿತಿ ತಂತ್ರಜ್ಞಾನ ಪಾರ್ಕ್‌ನ ನಿರ್ಮಾಣದೊಂದಿಗೆ ತಿರುವನ್ಮಿಯೂರ್ ತನ್ನ ಆರ್ಥಿಕತೆಯ ಏಳಿಗೆಗೆ ಸಾಕ್ಷಿಯಾಯಿತು. ಶಿವನಿಗೆ ಸಮರ್ಪಿತವಾದ ಮರುಂಡೀಶ್ವರರ್ ದೇವಾಲಯವು ಈ ಪ್ರದೇಶವನ್ನು ಮೊದಲು ವ್ಯಾಖ್ಯಾನಿಸಿತ್ತು. ಹಾಗಾಗಿ ಇದನ್ನು ಸಂಗಮ್ ತಮಿಳು ಮಹಾಕಾವ್ಯಗಳಲ್ಲಿ ಉಲ್ಲೇಖಿಸಲಾಗಿದೆ. ಇತರ ಪ್ರಸಿದ್ಧ ದೇವಾಲಯಗಳೆಂದರೆ ಅಷ್ಟಲಕ್ಷ್ಮಿ ದೇವಾಲಯ ಮತ್ತು ಆರುಪಾದೈ ಮುರುಗನ್ ದೇವಾಲಯ.
ಸೌಲಭ್ಯಗಳು ಮತ್ತು ಆಕರ್ಷಣೆಗಳು
ಬದಲಾಯಿಸಿತಿರುವನ್ಮಿಯೂರ್ ಬೀಚ್ ಅಥವಾ ಆರ್‌ಟಿಒ ಬೀಚ್ ಜನಪ್ರಿಯ ಆಕರ್ಷಣೆಯಾಗಿದೆ. ಬೀಚ್‍ನಲ್ಲಿ ನಡೆಯುವವರಿಗೆ ವಿಹಾರಪಥವಿದ್ದು ಇದು ಸ್ಥಳೀಯ ನಿವಾಸಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಸ್ಥಳೀಯ ಸಮುದಾಯದ ಸಕ್ರಿಯ ಬೆಂಬಲದೊಂದಿಗೆ ಬೀಚ್ ಸ್ವಚ್ಛವಾಗಿದೆ.
ಪೂಜಾ ಸ್ಥಳಗಳು
ಬದಲಾಯಿಸಿದೇವಾಲಯಗಳು
ಬದಲಾಯಿಸಿ- ವಾಲ್ಮೀಕಿ ದೇವಸ್ಥಾನ
- ಮರುಂಡೀಶ್ವರರ್ ದೇವಸ್ಥಾನ, ತಿರುವನ್ಮಿಯೂರ್, ಮರುಂಡೀಶ್ವರರ್ ದೇವಸ್ಥಾನ Archived 2021-10-24 ವೇಬ್ಯಾಕ್ ಮೆಷಿನ್ ನಲ್ಲಿ.
- ಪಾಂಬನ್ ಸ್ವಾಮಿಗಳ್ ದೇವಸ್ಥಾನ
- ಪುತ್ತುರಂಗಣ್ಣಿ ಅಮ್ಮನ್ ದೇವಸ್ಥಾನ
- ತಿರುವೀತಿ ಅಮ್ಮನ್ ದೇವಸ್ಥಾನ
- ಆರುಪಾದೈ ವೀಡು ಮುರುಗನ್ ದೇವಸ್ಥಾನ
- ಶಿರಡಿ ಸಾಯಿಬಾಬಾ ದೇವಸ್ಥಾನ, ಕಾಮರಾಜ್ ನಗರ, ತಿರುವನ್ಮಿಯೂರು
- ಸರ್ಕಾರೈ ಅಮ್ಮಾಳ್ ದೇವಸ್ಥಾನ
- 'ಶ್ರೀನಿವಾಸ ಪೆರುಮಾಳ್' ದೇವಸ್ಥಾನವನ್ನು ಮಂಗಣಿ ವಿನಾಯಕರ್ ದೇವಸ್ಥಾನ ಎಂದೂ ಕರೆಯುತ್ತಾರೆ
- ವೆಂಬುಲಿ ಅಮ್ಮನ್ ದೇವಸ್ಥಾನ,
- ಕಾಶಿವಿಶ್ವನಾಥರ್ ದೇವಸ್ಥಾನ
ಉಲ್ಲೇಖಗಳು
ಬದಲಾಯಿಸಿ