ತಿರುಪತಿ (೨೦೦೬ ಕನ್ನಡ ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ತಿರುಪತಿ ಶಿವಮಣಿ ನಿರ್ದೇಶಿಸಿದ 2006 ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಚಲನಚಿತ್ರವಾಗಿದ್ದು, ಸುದೀಪ್, ಪೂಜಾ ಕನ್ವಾಲ್, ಚರಣ್ ರಾಜ್ ಮತ್ತು ಶಾನೂರ್ ಸನಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಸುರುಳಿಯನ್ನು ರಾಜೇಶ್ ರಾಮನಾಥ್ ಸಂಯೋಜಿಸಿದ್ದಾರೆ. ಕವಿರಾಜ್, ಶಿವಮಣಿ ಮತ್ತು ಕೃಷ್ಣ ಅವರು ಹಾಡುಗಳನ್ನು ಬರೆದಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು.

ತಿರುಪತಿ
ನಿರ್ದೇಶನಶಿವಮಣಿ
ನಿರ್ಮಾಪಕಪದ್ಮಾ ಆರ್. ಎಸ್. ಗೌಡ
ಲೇಖಕಬಿ. ಎ. ಮಧು (ಸಂಭಾಷಣೆ)
ಚಿತ್ರಕಥೆಶಿವಮಣಿ
ಎಸ್. ಎಸ್. ಡೇವಿಡ್
ಕಥೆಎಸ್. ಎಸ್. ಡೇವಿಡ್
ಪಾತ್ರವರ್ಗ
ಸಂಗೀತರಾಜೇಶ್ ರಾಮನಾಥ್
ಛಾಯಾಗ್ರಹಣಎ. ಸಿ. ಮಹೇಂದ್ರನ್
ಸಂಕಲನನಾಗೇಂದ್ರ ಅರಸ್
ಸ್ಟುಡಿಯೋಗೌಡ ಎಂಟರ್‌ಪ್ರೈಸಸ್
ವಿತರಕರುರಾಮು ಫಿಲಂಸ್
ಬಿಡುಗಡೆಯಾಗಿದ್ದು
  • 30 ಜೂನ್ 2006 (2006-06-30)
ಅವಧಿ144 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ಬದಲಾಯಿಸಿ

ಎಸಿಪಿ ತಿರುಪತಿ ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡುತ್ತಾನೆ ಮತ್ತು ಮಾಫಿಯಾ ಕಿಂಗ್‌ಪಿನ್ ಮೈಕೆಲ್ ರಾಜ್ ಅಪರಾಧಿ ಎಂದು ಕಂಡುಕೊಳ್ಳುತ್ತಾನೆ. ನಂತರ ಅವನು ಮೈಕೆಲ್‌ನನ್ನು ನ್ಯಾಯಕ್ಕೆ ತರಲು ಹೊರಟಾಗ ಆಘಾತಕಾರಿ ರಹಸ್ಯಗಳು ಬಯಲಾಗುತ್ತವೆ.

ತಾರಾಗಣ

ಬದಲಾಯಿಸಿ

ನಿರ್ಮಾಣ

ಬದಲಾಯಿಸಿ

‘ರಾಜಕೀಯ’, ‘ದೊರೆ’, ‘ವಿಶ್ವ’, ‘ಓಂಕಾರ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಶಿವಮಣಿ ಅವರು ‘ಕಾಪ್‌ ಆ್ಯಕ್ಷನ್‌’ ಸಿನಿಮಾ ಮಾಡಬೇಕೆಂದುಕೊಂಡಿದ್ದರು. ಅವರು ಓಂಕಾರ (2004) ಚಿತ್ರದಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ತಮ್ಮ ಸ್ನೇಹಿತ- ನಟ ಉಪೇಂದ್ರ ಅವರನ್ನು ಸಂಪರ್ಕಿಸಿದರು. ಆದರೆ ದಿನಾಂಕಗಳ ಸಮಸ್ಯೆಯಿಂದಾಗಿ ಅವರು ಸುದೀಪ್ ಬಗ್ಗೆ ಶಿವಮಣಿಗೆ ಸಲಹೆ ನೀಡಿದರು. ಸುದೀಪ್ ಅವರು ಕಥೆ ಕೇಳಿ ಒಪ್ಪಿಕೊಂಡರು.ಈ ಮೂಲಕ, ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದರು. [೧] [೨] ಅವರು ಮೊದಲು ನಲ್ಲ (2004) ಚಿತ್ರದಲ್ಲಿ ಹಾಸ್ಯ ಸನ್ನಿವೇಶವೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. [೩] ಆರಂಭದಲ್ಲಿ ನಾಯಕಿಯಾಗಿ ದೀಪು ಅವರನ್ನು ಪರಿಗಣಿಸಲಾಗಿತ್ತು. [೩]ಇದು 7 ಓ ಕ್ಲಾಕ್ (2006) ನಂತರ ಪೂಜಾ ಕನ್ವಾಲ್ ಅವರ ಎರಡನೇ ಕನ್ನಡ ಚಿತ್ರವಾಗಿದೆ[೧] ಮತ್ತು ಮಹಾರಾಜ (2005) ನಂತರ ನಿರ್ಮಾಪಕ ಆರ್.ಎಸ್.ಗೌಡ ಜೊತೆ ಸುದೀಪ್ ಅವರ ಎರಡನೇ ಚಿತ್ರವಾಗಿದೆ. [೪] [೩] ಸುದೀಪ್ ಅವರ ತಾಯಿಯಾಗಿ ಸೀತಾ ಮತ್ತು ಭಾನುಪ್ರಿಯಾ ಅವರನ್ನು ಪರಿಗಣಿಸಲಾಗಿತ್ತು. [೩] ಹುಚ್ಚ (2001) ಮತ್ತು ಚಂದು (2002) ಚಿತ್ರಗಳಲ್ಲಿ ಸುದೀಪ್ ಅವರೊಂದಿಗೆ ನಟಿಸಿದ್ದ ಶಾನೂರ್ ಸನಾ ಅವರನ್ನು ತಾಯಿ ಪಾತ್ರಕ್ಕೆ ಅಂತಿಮಗೊಳಿಸಲಾಯಿತು. ನಟ ಚರಣ್ ರಾಜ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಧ್ವನಿಮುದ್ರಿಕೆ

ಬದಲಾಯಿಸಿ

ಹುಚ್ಚ (2001), ವಾಲಿ (2001), ಸ್ವಾತಿ ಮುತ್ತು (2003) ಮತ್ತು ಮೈ ಆಟೋಗ್ರಾಫ್ (ಹಿನ್ನೆಲೆ ಸಂಗೀತ) ನಂತರ ಐದನೇ ಬಾರಿಗೆ ಸುದೀಪ್ ಅವರೊಂದಿಗೆ ರಾಜೇಶ್ ರಾಮನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. [೫]

ಪ್ರತಿಕ್ರಿಯೆ

ಬದಲಾಯಿಸಿ

ಐಎಎನ್‌ಎಸ್‌ನಿಂದ ಆರ್‌ಜಿ ವಿಜಯಸಾರಥಿ " ತಿರುಪತಿಯು ಎಂಗೇಜಿಂಗ್ ಎಂಟರ್‌ಟೈನರ್ ಆಗಿದ್ದು, ಇದು ಆಕ್ಷನ್ ಚಲನಚಿತ್ರಗಳ ಅಭಿಮಾನಿಗಳಿಗೆ ರಸದೌತಣವಾಗಲಿದೆ" ಎಂದು ಹೇಳಿದ್ದಾರೆ. [೬] ರೆಡಿಫ್ ನ ವಿಮರ್ಶಕರು "ಇದು ಸಂಪೂರ್ಣವಾಗಿ ಸುದೀಪ್ ಅವರ ಚಿತ್ರವಾಗಿದೆ. ಅವರು ಪ್ರತಿ ಫ್ರೇಮ್‌ನಲ್ಲಿಯೂ ಪ್ರತಿಭೆಯನ್ನು ಹೊರಹಾಕುತ್ತಾರೆ ಮತ್ತು ನಿಜವಾಗಿಯೂ ತಿರುಪತಿಯಾಗಿ ಅವರ ಉತ್ಸಾಹಭರಿತ ಅಭಿನಯವೇ ಚಿತ್ರವನ್ನು ಉಳಿಸುತ್ತದೆ." ಎಂದಿದ್ದಾರೆ. [೭] ಚಿತ್ರಲೋಕ ಡಾಟ್ ಕಾಮ್‌ನ ವಿಮರ್ಶಕರು "ಆಕ್ಷನ್ ಪ್ರಿಯರು ಈ ಚಿತ್ರವನ್ನು ತಪ್ಪಿಸಿಕೊಳ್ಳಬಾರದು" ಎಂದು ಬರೆದಿದ್ದಾರೆ. [೮] ಚಿತ್ರವು ಆರಂಭದಲ್ಲಿ ಹೆಚ್ಚಿನ ಕಲೆಕ್ಷನ್‌ಗಳನ್ನು ಹೊಂದಿತ್ತು ಆದರೆ ನಂತರ ಗಳಿಕೆಯಲ್ಲಿ ಕುಸಿಯಿತು. [೯]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Warrier, Shobha; Rajamani, Radhika; Vijayasarathy, R. G. (14 June 2006). "Sudeep in Tirupathi". Rediff.com. Archived from the original on 4 May 2022. Retrieved 5 May 2022.
  2. Vijayasarathy, R. G. (9 March 2006). "Sudeep: Back with My Autograph". Rediff.com. Archived from the original on 4 May 2022. Retrieved 5 May 2022.
  3. ೩.೦ ೩.೧ ೩.೨ ೩.೩ "Sudeep and Deepu teamed in "Thirupathi"". Indiaglitz. 26 November 2005. Archived from the original on 5 May 2022. Retrieved 5 May 2022.
  4. "Tirupati – a cop story". Viggy. Archived from the original on 5 May 2022. Retrieved 5 May 2022.
  5. "Thirupathi". JioSaavn. 1 July 2006. Archived from the original on 3 December 2020. Retrieved 5 May 2022.
  6. Vijayasarathy, R. G. (30 June 2006). "Tirupati Kannada Movie". IANS. Archived from the original on 4 May 2022. Retrieved 5 May 2022 – via Nowrunning.
  7. Vijayasarathy, R. G. (3 July 2006). "Tirupati: A good action film". Rediff.com. Archived from the original on 13 December 2007. Retrieved 5 May 2022.
  8. "THIRUPATHI MOVIE REVIEW". Chitraloka.com. 1 July 2006. Archived from the original on 4 March 2016. Retrieved 5 May 2022.
  9. Vijayasarathy, R. G. (26 December 2006). "Top Kannada Heroes". Rediff.com. Archived from the original on 10 February 2012. Retrieved 5 May 2022.