ತಿಗಣೆ

ಮಾನವನ ರಕ್ತವನ್ನು ಕುಡಿಯುವ ಕೀಟಗಳು

ತಿಗಣೆಯು ಸಾಮಾನ್ಯವಾಗಿ ರಾತ್ರಿ ವೇಳೆ ಮನುಷ್ಯರ ರಕ್ತವನ್ನು ಕುಡಿಯುವ ಒಂದು ಬಗೆಯ ಕೀಟ.[೧] ಇದರ ಕಡಿತವು ದದ್ದುಗಳು, ಮಾನಸಿಕ ಪರಿಣಾಮಗಳು ಮತ್ತು ಅಲರ್ಜಿಕ ಲಕ್ಷಣಗಳು ಸೇರಿದಂತೆ ಅನೇಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ತಿಗಣೆ ಕಡಿತವು ಅಗೋಚರ ಬೊಕ್ಕೆಗಳಿಂದ ಹಿಡಿದು ಎದ್ದುಕಾಣುವ ಬೊಕ್ಕೆಗಳವರೆಗೆ ಚರ್ಮದ ಬದಲಾವಣೆಗಳಿಗೆ ಕಾರಣವಾಗಬಹುದು. ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ನಿಮಿಷಗಳು ಅಥವಾ ದಿನಗಳವರೆಗೆ ಬೇಕಾಗಬಹುದು. ತುರಿಕೆಯು ಸಾಮಾನ್ಯವಾಗಿರುತ್ತದೆ, ಮತ್ತು ಕೆಲವರಿಗೆ ಸುಸ್ತು ಎನಿಸಬಹುದು ಅಥವಾ ಜ್ವರ ಇರಬಹುದು. ಸಾಮಾನ್ಯವಾಗಿ, ಶರೀರದ ತೆರೆದ ಪ್ರದೇಶಗಳು ಬಾಧಿತವಾಗುತ್ತವೆ ಮತ್ತು ಸಾಲಾಗಿ ಮೂರು ಕಡಿತಗಳು ಉಂಟಾಗುತ್ತವೆ. ತಿಗಣೆ ಕಡಿತಗಳು ಯಾವುದೇ ಸಾಂಕ್ರಾಮಿಕ ರೋಗವನ್ನು ಹರಡುತ್ತವೆಂದು ತಿಳಿದುಬಂದಿಲ್ಲ.

ಉಲ್ಲೇಖಗಳು ಬದಲಾಯಿಸಿ

  1. "Bed Bugs FAQs". Centers for Disease Control and Prevention. 2 May 2017. Retrieved 2 October 2018. {{cite web}}: Cite has empty unknown parameter: |dead-url= (help)
"https://kn.wikipedia.org/w/index.php?title=ತಿಗಣೆ&oldid=904266" ಇಂದ ಪಡೆಯಲ್ಪಟ್ಟಿದೆ