ತಾತ್ವಿಕ ಕಾವ್ಯ
ತಾತ್ವಿಕ ಕಾವ್ಯದ ಪರಿಚಯ
ಬದಲಾಯಿಸಿತಾತ್ವಿಕ ಕವನ-ಕಗ್ಗಗಳು
ಬದಲಾಯಿಸಿ- ಸತ್ಯ - ಮಿಥ್ಯ,
- ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ;
- ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ;
- ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ;
- ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧||
-
- ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ;
- ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ;
- ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ?
- ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨||
-
- ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ;
- ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ;
- ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ;
- ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩||
-
- ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು,
- ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು,
- ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು,
- ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪||
-
- ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ
. -
ಕವನ ೨: ನಾನೆಂಬುವನಾರು ?
ಬದಲಾಯಿಸಿ- <ನಾನೆಂಬುವನಾರು ?>
- ನಾನು ನಾನೆಂದೆನುತ ನನಗೆ ನನಗೆಂದೆನುತ
- ಎನ್ನೊಳಗಡಗಿದ್ದು ಆಳುವನಾರೋ ಇವನು?
- ಪರಿಪರಿಯ ತರದಲ್ಳಿ ಪರಿಪರಿಯ ಊಹೆಗಳ
- ತೆರವಿಲ್ಲದಯೆ ಮಾಡುವ ಗೂಢನಿವನಾರು? ||೧||
-
- ಹಿಂದು ಮುಂದಿನದೆಲ್ಲ ಕಂಡಂತೆ ಚಿತ್ರಿಸುತ
- ಸುಂದರದ ಕನಸುಗಳ ಹೆಣೆವನಾರೊ ಇವನು?
- ಐದು ಇಂದ್ರಿಯಗಳಲಿ ಬೇರೆ ಬೇರೆಯೆ ತೋರಿ
- ಬಗೆ ಬಗೆಯ ಅನುಭವವ ಪಡೆವನಾರೊ ಇವನು
-
- ವಿವಿಧ ಅಣುಗಳು ಸೇರಿ ವಿವಿಧ ಅನ್ನವ ಸೇರಿ
- ಸವೆಯುವೀ ದೇಹಕ್ಕೆ ಕೊರಗುವವನಾರೊ ಇವನು?
- ಸುಪ್ತ ಚೇತನದಲ್ಲಿ ಸುಪ್ತವಲ್ಲದೆ ತೋರಿ
- ಸುಪ್ತವಾನಿರ್ಗುಣದಿ ಸಗುಣನಿವನಾರೋ?
-
- ನಾನು ನನಗೆಂದೆನುತ ತನ್ನಿಷ್ಟದಲೆ ನಡೆದು
- ತನ್ನ ಹುಟ್ಟರಿಯದಿಹನಾರೊ ಇವನು?
- ಎಲ್ಲಿಂದ ಬಂದಿರುವ ಎಲ್ಲಿ ಹೋಗುವನಿವನು
- ಇಲ್ಲಿ ಇಂತೇಕೆ ಬಂಡಾಟಗೊಳುವನಿವನು?
- (ರಚನೆ :-ಬಿ.ಎಸ್.ಚಂದ್ರಶೇಖರ,ಸಾಗರ ಕಾಪಿ ರೈಟಿನಿಂದ ಮುಕ್ತ))
- ಶ್ರೀ ಡಿ.ವಿ.ಜಿ
- ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು: ಇದು ಕನ್ನಡ ಭಗವದ್ಗೀತೆ ಎಂದು ಹೆಸರಾಗಿದೆ.
- ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
- ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
- ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
- ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||"
- (ಡಿ.ವಿ.ಜಿ - ತಾಣದಿಂದ)
-
- ಕನ್ನಡ ವಿಕಿಸೊರ್ಸನಲ್ಲಿ | ಮಂಕುತಿಮ್ಮನ ಕಗ್ಗ
- ೪.ಏನು ಜೀವನಾರ್ಥ
- ೫. ದೇವರೆಂಬುದದೇನು
- ೬. ಒಗಟೆಯೇನೀ ಸೃಷ್ಟಿ
- ೭. ಬದುಕಿಗಾರ್ ನಾಯಕರು
- ೮. ಕ್ರಮವೊಂದು ಲಕ್ಷ್ಯವೊಂದುಂಟೇನು
ಸರ್ವಜ್ಞ ವಚನ
ಬದಲಾಯಿಸಿ- ಒಂದರ ಮೊದಲೊಳಗೆ ಬಂದಿಹುದು ಜಗವೆಲ್ಲ
- ಒಂದರ ಮೊದಲನರಿದರೆ ಜಗ ಕಣ್ಣ -
- ಮುಂದೆ ಬಂದಿಹುದು ಸರ್ವಜ್ಞ ||
- ಟಿ : ಜಗದ ಮೂಲವಾದ ಆ ಒಂದು ಬ್ರಹ್ಮವನ್ನು ಅರಿತರೆ ಜಗತ್ತನ್ನೇ ಅರಿಯಬಹುದು.
-
- ತನ್ನ ತಾ ಅರಿದಂಗೆ ಭಿನ್ನ ಭಾವನೆ ಯಿಲ್ಲ,
- ತನ್ನವರು ಇಲ್ಲ ,ಪರರಿಲ್ಲ, ತ್ರಿಭುವನ
- ತನ್ನೊಳಗೆ ಇಹುದು ಸರ್ವಜ್ಞ ||
- ಟಿ : ತಾನು ಆತ್ಮ ಸ್ವರೂಪನು ಎಂದು ಅರಿತವನು, ಎಲ್ಲವನ್ನೂ ತನ್ನೊಳಗೆ ಕಾಣುತ್ತಾನೆ. "ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ, ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ|| ಈಶಾವಾಸ್ಯೋಪನಿಷತ್ ||
-
ನೋಡಿ :
ಬದಲಾಯಿಸಿ- ನೋಡಿ
- ಕನ್ನಡ ಸಾಹಿತ್ಯ ಪ್ರಕಾರಗಳು | ಕಾವ್ಯ