ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ, ತಹಸೀಲುದಾರನು ಕಂದಾಯ ನಿರೀಕ್ಷಣಾಧಿಕಾರಿಗಳು ಜೊತೆಗಿರುವ ತೆರಿಗೆ ಅಧಿಕಾರಿಯಾಗಿರುತ್ತಾನೆ. ಇವರು ಭೂಕಂದಾಯಕ್ಕೆ ಸಂಬಂಧಿಸಿದಂತೆ ಒಂದು ತಾಲ್ಲೂಕಿನಿಂದ ತೆರಿಗೆಗಳನ್ನು ಸಂಗ್ರಹಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಈ ಪದವು ಮೊಘಲ್ ಅವಧಿಯ ಮೂಲದ್ದು ಎಂದು ಊಹಿಸಲಾಗಿದೆ.

ಭಾರತ ಬದಲಾಯಿಸಿ

ಪ್ರತಿ ರಾಜ್ಯವನ್ನು ಜಿಲ್ಲೆಗಳಾಗಿ ವಿಭಜಿಸಲಾಗಿರುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟು ಜಿಲ್ಲೆಯ ಹಿರಿಯ ನಾಗರೀಕ ಸೇವಕನಾಗಿರುತ್ತಾನೆ. ಇವನು ಐಎಎಸ್ ಕಾಡರ್‌ನ ಅಧಿಕಾರಿಯಾಗಿರುತ್ತಾನೆ. ಇಷ್ಟೇ ಅಲ್ಲದೇ ಈ ಜಿಲ್ಲೆಗಳನ್ನು ಕಂದಾಯ ಉಪವಿಭಾಗಗಳು ಅಥವಾ ಪ್ರಾಂತಗಳಾಗಿ ವಿಭಾಗಿಸಲಾಗಿರುತ್ತದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟು ಎಂಬ ಅಧಿಕಾರಿಯು ಪ್ರತಿ ಉಪವಿಭಾಗದ ಪ್ರಭಾರದಲ್ಲಿರುತ್ತಾನೆ. ಈ ಉಪವಿಭಾಗಗಳನ್ನು ವಿವಿಧ ತಹಸೀಲುಗಳು ಅಥವಾ ತಾಲ್ಲೂಕುಗಳಾಗಿ ವಿಭಾಗಿಸಲಾಗಿರುತ್ತದೆ. ತಹಸೀಲುದಾರನು ಈ ತಹಸೀಲುಗಳು ಅಥವಾ ತಾಲ್ಲೂಕುಗಳ ಆಡಳಿತ ನಡೆಸುತ್ತಾನೆ.

ಉಲ್ಲೇಖ ಬದಲಾಯಿಸಿ