ತಪನ್ ಮಿಶ್ರಾ
ತಪನ್ ಮಿಶ್ರಾರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ , ಬಾಹ್ಯಾಕಾಶ ಅನ್ವಯಗಳ ಕೇಂದ್ರದ ನಿರ್ದೇಶಕರಾಗಿದ್ದರು.
ಜನನ
ಬದಲಾಯಿಸಿತಪನ್ ಮಿಶ್ರಾ ರವರು ೧೯೬೧ ರಲ್ಲಿ ಒಡಿಶಾದ ರಾಯಗಡದಲ್ಲಿ ಜನಿಸಿದರು.
ಶಿಕ್ಷಣ
ಬದಲಾಯಿಸಿ೧೯೮೪ ರಲ್ಲಿ ಜೆ.ಸಿ.ಬೋಸ್ ನ್ಯಾಷನಲ್ ಟ್ಯಾಲೆಂಟ್ ಸರ್ಚ್ (ಜೆಬಿಎನ್ಎಸ್ಟಿಎಸ್) ಸ್ಕಾಲರ್ ಆಗಿ ಜಾದವ್ಪುರ್ವ ಯುನಿವರ್ಸಿಟಿ, ಕಲ್ಕತ್ತಾದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್,ಅಧ್ಯಯನ ಮಾಡಿದರು.[೧]
ವೃತ್ತಿಜೀವನ
ಬದಲಾಯಿಸಿ- ಮಿಶ್ರಾ ರವರು ತಮ್ಮ ವೃತ್ತಿಜೀವನವನ್ನು ಡಿಜಿಟಲ್ ಹಾರ್ಡ್‌ವೇರ್ ಎಂಜಿನಿಯರ್ ಆಗಿ ಪ್ರಾರಂಭಿಸಿದರು ಹಾಗೂ ಮೈಕ್ರೋವೇವ್ ರಿಮೋಟ್ ಸೆನ್ಸಿಂಗ್ ಪೇಲೋಡ್ಗಳಲ್ಲಿ ಸ್ಪೇಸ್ ಅಪ್ಲಿಕೇಷನ್ ಸೆಂಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.
- ೧೯೯೦ ರಲ್ಲಿ ಜರ್ಮನ್ ಏರೋಸ್ಪೇಸ್ ಏಜೆನ್ಸಿಯಲ್ಲಿನ ಅತಿಥಿ ವಿಜ್ಞಾನಿಯಾಗಿ ಎಸ್ಎಆರ್ (SAR)ಡಾಟಾದ ನೈಜ - ಸಮಯ ಸಂಸ್ಕರಣೆಗೆ ಅವರು ಆಲ್ಗರಿದಮ್ ಅನ್ನು ಬರೆದರು.
- ಅವರು ೧೯೯೫ - ೧೯೯೯ ರ ಅವಧಿಯಲ್ಲಿ ಐಆರ್ ಎಸ್ - ಪಿ4 ಗಾಗಿ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋ ಮೀಟರ್ (ಎಮ್ಎಸ್ಎಮ್ಆರ್) ಪೇಲೋಡ್ ಸಿಸ್ಟಮ್ ಎಂಜಿನಿಯರಿಂಗ್ ನಿರ್ವಹಿಸುತ್ತಿದ್ದರು.
- ಅವರು ರಿಸ್ಯಾಟ್ -1 ರ ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡರ್(ಎಸ್ಎಆರ್) ಅಭಿವೃದ್ಧಿಯ ವಿನ್ಯಾಸದಲ್ಲಿ ತೊಡಗಿದ್ದರು.
- ೨೦೧೫, ಫೆಬ್ರವರಿಯಲ್ಲಿ ನಿರ್ದೇಶಕರಾಗಿ ನೇಮಕವಾಗುವ ಮೊದಲು ಅವರು ಬಾಹ್ಯಾಕಾಶ ಅನ್ವಯಗಳ ಕೇಂದ್ರದ ಮೈಕ್ರೋವೇವ್ ರಿಮೋಟ್ ಸಂವೇದಿ ಪ್ರದೇಶದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
- ಓಶಿಯನ್ ಸ್ಯಾಟ್ -1 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ಮೀಟರ್ನ ಓಶಿಯನ್ ಸ್ಯಾಟ್ -2 ಮತ್ತು ಸ್ಕ್ಯಾನಿಂಗ್ ಸ್ಕ್ಯಾಟರ್ ಮೀಟರ್‌ಗಳ ಬಹು - ಆವರ್ತನ ಸ್ಕ್ಯಾನಿಂಗ್ ಮೈಕ್ರೋವೇವ್ ರೇಡಿಯೋಮೀಟರ್ ಸಾಧನದ ಅಭಿವೃದ್ಧಿಯೊಂದಿಗೆ ಸಹ ಸಂಬಂಧ ಹೊಂದಿದ್ದರು.[೨]
ಸದಸ್ಯತ್ವ
ಬದಲಾಯಿಸಿ- ಅವರು ೨೦೦೭ರಲ್ಲಿ ಭಾರತೀಯ ರಾಷ್ಟ್ರೀಯ ಅಕಾಡೆಮಿ ಆಫ್ ಇಂಜಿನಿಯರಿಂಗ್ ಫೆಲೋ ಆಗಿ ಆಯ್ಕೆಯಾದರು.
- ಅವರು ೨೦೦೮ರಲ್ಲಿ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೊನಾಟಿಕ್ಸ್ ನ ಸದಸ್ಯರಾಗಿದ್ದರು.
- ಅವರಿಗೆ ಐದು ಹಕ್ಕು ಸ್ವಾಮ್ಯಗಳನ್ನು ಮತ್ತು ಇಪ್ಪತ್ತೈದು ಪತ್ರಿಕೆಗಳನ್ನು ತಮ್ಮ ಕ್ರೆಡಿಟ್ಗೆ ನೀಡಲಾಗಿದೆ.
ಪ್ರಶಸ್ತಿಗಳು
ಬದಲಾಯಿಸಿ- ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿ - ೨೦೦೪.
- ಇಸ್ರೋ ಮೆರಿಟ್ ಪ್ರಶಸ್ತಿ - ೨೦೦೮.
ಉಲ್ಲೇಖಗಳು
ಬದಲಾಯಿಸಿ- ↑ https://www-ndtv-com.cdn.ampproject.org/v/s/www.ndtv.com/india-news/indias-key-spy-satellite-maker-sacked-made-advisor-to-isro-chairman-1886609?amp_js_v=a2&_gsa=1&=1&akamai-rum=off&usqp=mq331AQECAFYAQ%3D%3D#referrer=https%3A%2F%2Fwww.google.com&_tf=From%20%251%24s&share=https%3A%2F%2Fwww.ndtv.com%2Findia-news%2Findias-key-spy-satellite-maker-sacked-made-advisor-to-isro-chairman-1886609
- ↑ https://m-economictimes-com.cdn.ampproject.org/v/s/m.economictimes.com/topic/Tapan-Misra/amp?amp_js_v=a2&_gsa=1&usqp=mq331AQECAFYAQ%3D%3D#referrer=https://www.google.com&_tf=From%20%251%24s