ಡ್ಯೂಟೀರಿಯಮ್ ಭಾರಜಲಜನಕವೆಂದು ಕರೆಯಲ್ಪಡುವ ಡ್ಯೂಟೀರಿಯಮ್ ಜಲಜನಕದ ಒಂದು ಸ್ಥಿರ ಸಮಸ್ಥಾನಿ.ಇದು ಜಲಜನಕ ಬಾಂಬ್‌ನ ಮುಖ್ಯ ಕಚ್ಛಾವಸ್ತು.ಪ್ರಪಂಚದಲ್ಲಿರುವ ಜಲಜನಕದಲ್ಲಿ ೬೭೦೦ ಭಾಗಕ್ಕೆ ಒಂದು ಭಾಗದಂತೆ ಭಾರಜಲಜನಕದ ಪರಮಾಣುಗಳಿವೆ.

ಡಿಟಿರಿಯಮ್

ಗುಣಲಕ್ಷಣಗಳುಸಂಪಾದಿಸಿ

ಡ್ಯೂಟೀರಿಯಮ್‌ನ ಒಂದು ಪರಮಾಣುವಿನ ದ್ರವ್ಯರಾಶಿಯು ಸಾಮಾನ್ಯ ಜಲಜನಕದ ಎರಡರಷ್ಟಿರುತ್ತದೆ.ಜಲಜನಕದ ಪರಮಾಣುವಿನಲ್ಲಿ ನ್ಯೂಟ್ರಾನ್ಗಳಿರುವುದಿಲ್ಲವಾದರೆ ಡ್ಯೂಟೀರಿಯಮ್‍ನ ಪರಮಾಣುವಿನಲ್ಲಿ ಒಂದು ನ್ಯೂಟ್ರಾನ್‍ ಪ್ರೋಟಾನ್ ಜತೆಗೂಡಿ ಇರುತ್ತದೆ.ಅದುದರಿಂದ ಡ್ಯೂಟೀರಿಯಮ್‌ನ ಪರಮಾಣು ದ್ರವ್ಯರಾಶಿಜಲಜನಕದ ಎರಡರಷ್ಟು ಅಂದರೆ ೨.೦೧೪೧೦ ಆಗಿರುತ್ತದೆ.ಸಾಮಾನ್ಯವಾಗಿ ಡ್ಯೂಟೀರಿಯಮ್ ಜಲಜನಕದಂತೆಯೇ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಂಡರೂ ಜಲಜನಕಕ್ಕಿಂತ ನಿಧಾನವಾಗಿ ಹಾಗೂ ಅಸಂಪೂರ್ಣವಾಗಿರುತ್ತದೆ.

ಉಪಯೋಗಗಳುಸಂಪಾದಿಸಿ

ಡ್ಯೂಟೀರಿಯಮ್ ಆಮ್ಲಜನಕದೊಡನೆ ವರ್ತಿಸಿ ಭಾರಜಲ (ಡ್ಯೂಟೀರಿಯಮ್ ಆಕ್ಸೈಡ್}ನ್ನು ಕೊಡುತ್ತದೆ. ಇದು ಭಾರಜಲ ಬೈಜಿಕ ಕ್ರಿಯಾಕಾರಿ (Heavy water nuclear reactor)ಗಳಲ್ಲಿ ಉಪಯೋಗಿಸಲ್ಪಡುತ್ತದೆ.ವಿಜ್ಞಾನಿಗಳು ಡ್ಯೂಟೀರಿಯಮ್ ಜೈವಿಕ ಹಾಗೂ ಜೀವರಸಾಯನಶಾಸ್ತ್ರೀಯ ಕ್ರಿಯೆಗಳ ಅಧ್ಯಯನದಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ. ಕಣ ಉತ್ಕರ್ಷಕ (particle accelarator)ಗಳಲ್ಲಿಯೂ ಡ್ಯೂಟೀರಿಯಮ್‍ನ ಉಪಯೋಗವಿದೆ.ಮುಖ್ಯವಾಗಿ ಸೈಕ್ಲೋಟ್ರಾನ್ ಎಂಬ ಕಣ ಉತ್ಕರ್ಷಕದಲ್ಲಿ ಹೆಚ್ಚಿನ ಉಪಯೋಗದಲ್ಲಿದೆ.

ಭಾಹ್ಯಸಂಪರ್ಕಗಳುಸಂಪಾದಿಸಿ