ಡ್ಯಾನಿ ಬೋಯ್ಲೆ (20 ಅಕ್ಟೋಬರ್ 1956 ರಲ್ಲಿ ಹುಟ್ಟಿದ್ದು) ಅವರು ಬ್ರಿಟೀಷ್ {1)ಚಲನಚಿತ್ರ ತಯಾರಕರು{/1} ಮತ್ತು ನಿರ್ಮಾಪಕರು. ಇವರು ತಮ್ಮ ಹಲವಾರು ಚಲನಚಿತ್ರಗಳಾದ ಶ್ಯಾಲೋ ಗ್ರೇವ್ , ಟ್ರೇನ್ ಸ್ಪಾಟ್ಟಿಂಗ್ , 28 ಡೇಸ್ ಲೇಟರ್ ಮತ್ತು ಸ್ಲಮ್‌ಡಾಗ್ ಮಿಲಿಯನೇರ್ ಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸದಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. 2009ರಲ್ಲಿ ಬೋಯ್ಲೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ,ಅತ್ಯುತ್ತಮ ನಿರ್ದೇಶನಕ್ಕಾಗಿ ಅಕಾಡೆಮಿ ಪ್ರಶಸ್ತಿಯು ಸಹ ಇದರಲ್ಲಿ ಒಳಗೊಂಡಿದೆ.

Danny Boyle

Boyle in November 2008
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Daniel Boyle
(1956-10-20) ೨೦ ಅಕ್ಟೋಬರ್ ೧೯೫೬ (ವಯಸ್ಸು ೬೮)
Radcliffe, Lancashire, ಇಂಗ್ಲೆಂಡ್, UK
ವೃತ್ತಿ Director/Producer
ವರ್ಷಗಳು ಸಕ್ರಿಯ 1980–present

ಆರಂಭಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ
1956 ರ ಅಕ್ಟೋಬರ್ 20 ರಂದು Radcliffe[] (ಐತಿಹಾಸಿಕ ಲ್ಯಾಂಕ್ ಶೈರ್‌‌ನ ಒಂದು ಭಾಗ)ಯ ಕಾರ್ಮಿಕವರ್ಗಐರಿಶ್ ಕ್ಯಾಥೊಲಿಕ್ ಕುಟುಂಬದಲ್ಲಿ ಬೋಯ್ಲೆ ಜನಿಸಿದರು. 

ಅವರ ತಾಯಿ ಕೌಂಟಿ ಗಾಲ್ವೆಬಲ್ಲಿನಸ್ಲೊ ಪ್ರದೇಶದವರು, ಹಾಗೂ ಅವರ ತಂದೆ ಇಂಗ್ಲೆಂಡ್‌ನಲ್ಲಿರುವ ಒಂದು ಐರಿಶ್ ಕುಟುಂಬದಲ್ಲಿ ಜನಿಸಿದವರು.[]

ಇದೊಂದು ತುಂಬಾ ಕಟ್ಟುನಿಟ್ಟಿನ, ಕ್ಯಾಥೊಲಿಕ್ ಕುಟುಂಬವಾಗಿತ್ತು. ಎಂಟು ವರ್ಷಗಳವರೆಗೆ ನಾನು ತುಂಬಾ ಪವಿತ್ರವಾದ ಹುಡುಗನಾಗಿದ್ದೆ, ನಾನೊಬ್ಬ ಪಾದ್ರಿಯಾಗಬಹುದಿತ್ತು ಮತ್ತು ನಿಜವಾಗಲೂ, ನನ್ನ ತಾಯಿಯ ಆಸೆ ಕೂಡ ನಾನು ಪಾದ್ರಿಯಾಗಬೇಕು ಎಂಬುದಾಗಿತ್ತು .[]

ಅವರು 14 ನೇ ವಯಸ್ಸಿನಲ್ಲಿದ್ದಾಗ, ಬೋಯ್ಲೆ ತನ್ನ ಸ್ಥಳಿಯ ಶಾಲೆಯಿಂದ ಸೆಮಿನರೀಹತ್ತಿರದ ವೀಗಾನ್‌ಗೆ ವರ್ಗಾವಣೆ ಪಡೆಯಲು ಅರ್ಜಿ ಹಾಕಿದರು , ಆದರೆ ಒಬ್ಬ ಪಾದ್ರಿಯು ಅದನ್ನು ಯಾವ ರೀತಿಯಾಗಿ ತಡೆದರು ಎಂಬುದನ್ನು ದಿ ಟೈಮ್ಸ್ ಜೊತೆಗಿನ ತನ್ನ ಚಲನಚಿತ್ರ ಮಿಲಿಯನ್ಸ್‌ ನ ಸಂದರ್ಶನದ ವೇಳೆಯಲ್ಲಿ ಹೀಗೆ ಹೇಳಿದ್ದಾರೆ:

ನಾನು 14 ವರ್ಷದವನಾಗುವವರೆಗೆ ನಾನು ಒಬ್ಬ ಪಾದ್ರಿಯಾಗಬೇಕೆಂದುಕೊಂಡಿದ್ದೆ, ನಾನು ವೀಗಾನ್ ಹತ್ತಿರದ ಸೆಮಿನರೀಗೆ ವರ್ಗವಣೆಯಾಗುತ್ತಿದ್ದೆ. ಆದರೆ ಪಾದ್ರಿ ಫಾದರ್ ಕಾನ್‌ವೇ ಅವರು ನನ್ನನ್ನು ಪಕ್ಕಕ್ಕೆ ಕರೆದು ಹೇಳಿದರು, ’ನೀನು ಹೋಗಲೇಬೇಕೆಂದು ನಾನು ಅಂದುಕೊಂಡಿಲ್ಲ’. ಅವರು ನನ್ನನ್ನು ಪಾದ್ರಿಯಾಗುವುದರಿಂದ ಕಾಪಾಡುತ್ತಿದ್ದಾರೆಯೋ ಅಥವಾ ನನ್ನಿಂದ ಪಾದ್ರಿವೃತ್ತಿಯನ್ನು ಕಾಪಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಇದಾದ ತಕ್ಷಣವೇ, ನಾನು ನಾಟಕವನ್ನು ಮಾಡಲು ಪ್ರಾರಂಭಿಸಿದೆ. ಮತ್ತು ಅಲ್ಲಿಯೇ ಒಂದು ನಿಜವಾದ ಸಂಪರ್ಕ ಇತ್ತು, ಎನ್ನಿಸುತ್ತದೆ. ಈ ಎಲ್ಲಾ ನಿರ್ದೇಶಕರುಗಳು — ಮಾರ್ಟಿನ್ ಸ್ಕಾರ್ಸೆಸ್, ಜಾನ್ ವೂ, ಎಮ್. ನೈಟ್ ಶ್ಯಾಮಲಾನ್ — ಇವರೆಲ್ಲಾ ಪಾದ್ರಿಗಳಾಗಬೇಕೆಂದುಕೊಂಡಿದ್ದರು. ಅಲ್ಲಿ ಏನೋ ಅದರ ಬಗ್ಗೆ ಹೆಚ್ಚು ನಾಟಕೀಯತೆ ಇತ್ತು.

ಇದು ಮೂಲತಃ ಅದೇ ತರಹ ಕೆಲಸವಾಗಿತ್ತು, ಜನರಿಗೆ ಏನನ್ನು ಯೋಚಿಸಬೇಕು ಎಂದು ಹೇಳಬೇಕಾಗಿತ್ತು.[][]

ಇವರು ಓದಿದ್ದು ಬೋಲ್ಟನ್‌ಬ್ಯಾಂಗೋರ್ ವಿಶ್ವವಿದ್ಯಾಲಯಥಾರ್ನ್‌ಲೀಘ್ ಸೆಲೆಸಿಯನ್ ಕಾಲೇಜ್‌ನಲ್ಲಿ.[] ವಿಶ್ವವಿದ್ಯಾಲಯದಲ್ಲಿದ್ದ ವೇಳೆಯಲ್ಲಿ ಬೋಯ್ಲೆ ಅವರು ನಟಿ ಫ್ರಾನ್ಸೆಸ್ ಬಾರ್ಬರ್‌ರೊಂದಿಗೆ ಡೇಟಿಂಗ್ ಮಾಡಿದ್ದರು.[]

ವೃತ್ತಿಜೀವನ

ಬದಲಾಯಿಸಿ

ನಾಟಕ ಸಾಹಿತ್ಯ

ಬದಲಾಯಿಸಿ
1982 ರಲ್ಲಿ ರಾಯಲ್ ಕೋರ್ಟ್ ಥಿಯೇಟರ್‌ಗೆ ಸೇರುವ ಮುಂಚೆ ಇವರು ಜಾಯಿಂಟ್ ಸ್ಟಾಕ್ ಥಿಯೇಟರ್ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಶಾಲೆಯನ್ನು ಬಿಡುವಾಗಲೇ ಆರಂಭಿಸಿದ್ದರು.  ಇವರು ಹೋವಾರ್ಡ್ ಬ್ರೆಂಟನ್‌ನವರ ಜೀನಿಯಸ್  ಅನ್ನು ಮತ್ತು ಎಡ್ವರ್ಡ್ ಬಾಂಡ್ ಅವರ ಸೇವ್ಡ್  ಅನ್ನು ನಿರ್ದೇಶಿಸಿದರು. 

ರಾಯಲ್ ಶೇಕ್ಸ್ ಪಿಯರ್ ಕಂಪನಿಗಾಗಿ ಇವರು ಐದು ಪ್ರೊಡಕ್ಷನ್‌ಗಳನ್ನು ನಿರ್ದೇಶಿಸಿದ್ದಾರೆ.[] 2010 ರಲ್ಲಿ ನ್ಯಾಶನಲ್ ಥಿಯೇಟರ್‌ಗಾಗಿ ಫ್ರಾಂಕೆನ್ ಸ್ಟೀನ್ ನಿರ್ದೇಶಿಸಿದ್ದಾರೆ.[]

ದೂರದರ್ಶನ

ಬದಲಾಯಿಸಿ

BBC ನಾರ್ಥರನ್ ಐರ್‌ಲ್ಯಾಂಡ್ಗೋಸ್ಕರ 1980 ರಲ್ಲಿ ಬೋಯ್ಲೆ ನಿರ್ಮಾಪಕರಾಗಿ ದೂರದರ್ಶನದಲ್ಲಿ ಕೆಲಸ ಮಾಡಲು ಆರಂಭಿಸಿದರು, ಇಲ್ಲಿ ಅವರು ನಿರ್ಮಿಸಿದ ಟಿವಿ ಚಲನಚಿತ್ರಗಳಲ್ಲಿ , ಅಲಾನ್ ಕ್ಲಾರ್ಕೆಯ ವಿವಾದಾತ್ಮಕ ಎಲಿಫೆಂಟ್ ಅಲ್ಲದೆ Arise And Go Now , Not Even God Is Wise Enough , For The Greater Good , Scout ಮತ್ತು [] Inspector Morse ನ ಎರಡು ಎಪಿಸೋಡ್‍ಗಳು. ಇವರು BBC2 ಸರಣಿಯ Mr. Wroe's Virgins ನ ಜವಾಬ್ದಾರಿಯನ್ನು ಹೊತ್ತಿದ್ದಾರೆ.[]

ದಿ ಬೀಚ್ ಮತ್ತು 28 ಡೇಸ್ ಲೇಟರ್ ಚಲನಚಿತ್ರಗಳ ಮಧ್ಯದಲ್ಲಿ ಬೋಯ್ಲೆ ಅವರು 2001 ರಲ್ಲಿ BBC ಗೆ ಎರಡು ಟಿವಿ ಚಿತ್ರಗಳನ್ನು ನಿರ್ದೇಶಿಸಿದರು - ವ್ಯಾಕ್ಯೂಮಿಂಗ್ ಕಂಪ್ಲೀಟ್ ಲೀ ನ್ಯೂಡ್ ಇನ್ ಪ್ಯಾರಡೈಸ್ ಮತ್ತು ಸ್ಟ್ರಂಪೆಟ್ .[ಸೂಕ್ತ ಉಲ್ಲೇಖನ ಬೇಕು]

ಚಲನಚಿತ್ರಗಳು

ಬದಲಾಯಿಸಿ

ಬೋಯ್ಲೆ ನಿರ್ದೇಶಿಸಿದ ಮೊಟ್ಟ ಮೊದಲ ಚಲನಚಿತ್ರ ಶ್ಯಾಲೋ ಗ್ರೇವ್ .[]


ಈ ಚಲನಚಿತ್ರವು ವ್ಯಾಪಾರದಿಂದ 1995ರ ಬ್ರಿಟಿಷ್ ಚಲನಚಿತ್ರವೆಂದು ಬಹಳ ಯಶಸ್ವಿಯಾಯಿತು ಮತ್ತು ಇರ್ವಿನ್ ವೆಲ್ಶ್‌ನ ಕಾದಂಬರಿಯಾಧಾರಿತ ಟ್ರೇನ್ ಸ್ಪಾಟ್ಟಿಂಗ್‌ ನ ನಿರ್ಮಾಣಕ್ಕೆ ಕಾರಣವಾಯಿತು.[] ಬರಹಗಾರ ಜಾನ್ ಹಡ್ಜ್ ಮತ್ತು ಶ್ಯಾಲೋ ಗ್ರೇವ್‌ ನ ನಿರ್ಮಾಪಕ ಆಂಡ್ರೀವ್ ಮೆಕ್ ಡೊನಾಲ್ಡ್, ಜೊತೆಗೆ ಕೆಲಸ ನಿರ್ವಹಿಸುತ್ತಿರುವಾಗ ಬೋಯ್ಲೆ 1996 ರ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ನಿಂದ ಬೆಸ್ಟ್ ನ್ಯೂಕಮ್ಮರ್ ಅವಾರ್ಡ್‌ ಅನ್ನು ಗಳಿಸಿದರು.[೧೦] ಶ್ಯಾಲೋ ಗ್ರೇವ್ ಮತ್ತು ಟ್ರೇನ್ ಸ್ಪಾಟ್ಟಿಂಗ್ ಈ ಎರಡು ಚಿತ್ರಗಳ್ನ್ನು ಬ್ರಿಟಿಷ್ ಚಲನಚಿತ್ರರಂಗವನ್ನೇ ಮತ್ತೊಮ್ಮೆ ಶಕ್ತಿಯುತಗೊಳಿಸಿತು.[]

ನಂತರ ಅವನು ಹಾಲಿವುಡ್‌ನೆಡೆಗೆ ವಲಸೆ ಹೋದನು ಮತ್ತು ಯು ಎಸ್ ಸ್ಟುಡಿಯೋದ ಜೊತೆಗೆ ದೊಡ್ಡದಾದ ಪ್ರೊಡಕ್ಷನ್ ಒಪ್ಪಂದವನ್ನು ಮಾಡಿಕೊಂಡನು.

ಏಲಿಯನ್  ನಾಲ್ಕನೇ ಚಿತ್ರವನ್ನು ನಿರ್ದೇಶಿಸುವ ಅವಕಾಶವನ್ನು ನಿರಾಕರಿಸಿದರು, ಬದಲಾಗಿ ಎ ಲೈಫ್ ಲೆಸ್ ಆರ್ಡಿನರಿ  ಬ್ರಿಟಿಷ್ ಫೈನಾನ್ಸ್‌ಅನ್ನು ಉಪಯೋಗಿಸಿಕೊಂಡು ಮಾಡಿದನು.[ಸೂಕ್ತ ಉಲ್ಲೇಖನ ಬೇಕು]

ಬೋಯ್ಲೆಯ ಮುಂದಿನ ಯೋಜನೆಯು ಕಲ್ಟ್ ಕಾದಂಬರಿಯ ಆಧಾರಿತ ದಿ ಬೀಚ್ ಆಗಿತ್ತು .

ಲಿಯೋನಾರ್ಡ್ ಡಿಕಾಪ್ರಿಯೋನ ಮುಖ್ಯಪಾತ್ರದಲ್ಲಿ ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಯಿತು, ಇದು ಬೋಯ್ಲೆಯ ಮೊದಲ ಮೂರು ಚಿತ್ರಗಳಲ್ಲಿ ನಟಿಸಿದ್ದ ಇವಾನ್ ಮೆಕ್ ಗ್ರೈಗೊರ್ ವೈಷಮ್ಯ ಉಂಟಾಗಲು ದಾರಿಮಾಡಿಕೊಟ್ಟಿತು.[] ನಂತರ ಇವರು ಅಲೆಕ್ಸ್ ಗಾರ್ ಲ್ಯಾಂಡ್ ಎಂಬ ಲೇಖಕರೊಂದಿಗೆ ಸೇರಿ ನಂತರದ-ಅಪೊಕಾಲಿಪ್ಟಿಕ್ ಭಯಾನಕ ಚಿತ್ರ 28 ಡೇಸ್ ಲೇಟರ್ ಅನ್ನು ಮಾಡಿದನು .[೧೧]

ಇವರು ಎಲಿಯನ್ ಲವ್ ಟ್ರಯಾಂಗಲ್ ಎಂಬ ಕಿರುಚಿತ್ರವನ್ನು (ಕೆನ್ನೆತ್ ಬ್ರನಾಘ್ ನಟಿಸಿರುವ) ನಿರ್ದೇಶಿಸಿದ್ದಾರೆ, ಮತ್ತು ಒಂದರೊಳಗೆ ಮೂರು ಚಿಕ್ಕದಾದ ಕಥೆಗಳನ್ನು ಮಾಡಲು ಉದ್ದೇಶಿಸಿದ್ದರು. ಆದಾಗ್ಯೂ ಆ ಯೋಜನೆಯು ರದ್ದಾಯಿತು ನಂತರ ಬೇರೆ ಎರಡು ಕಿರು ಚಲನಚಿತ್ರಗಳನ್ನು ಮಾಡಿದರು: ಮಿರಾ ಸೂರ್ವಿನೋ ನಟಿಸಿರುವ ಮಿಮಿಕ್ ಮತ್ತು ಗ್ಯಾರಿ ಸಿನಿಸ್ ನಟಿಸಿರುವ ಇಂಪೋಸ್ಟರ್ .[೧೨]

2004 ರಲ್ಲಿ ಫ್ರಾಂಕ್ ಕಾಟ್‌ರೆಲ್ ಬೊಯ್ಸೆಯವರು ಬರೆದ ಮಿಲಿಯನ್ಸ್‌ ಅನ್ನು,[] ನಿರ್ದೇಶಿಸಿದರು.[ಸೂಕ್ತ ಉಲ್ಲೇಖನ ಬೇಕು] ಅಲೆಕ್ಸ್ ಗಾರ್‌ಲ್ಯಾಂಡ್ ಜೊತೆಗೆ ಸಹಗೂಡಿ ಇವನ ಮುಂದಿನ [] ವೈಜ್ಞಾನಿಕ-ಕಲ್ಪನೆಯ ಚಿತ್ರ , 28 ಡೇಸ್ ಲೇಟರ್ ನಲ್ಲಿ ನಟಿಸಿರುವ ತಾರೆ ಸಿಲ್ಲಿಯನ್ ಮುರ್ಫಿ ಅಭಿನಯದ ಸನ್ ಶೈನ್ 2007 ರಲ್ಲಿ ಬಿಡುಗಡೆಗೊಂಡಿತು.[ಸೂಕ್ತ ಉಲ್ಲೇಖನ ಬೇಕು]

 
2008ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೊಯ್ಲೆ

2008 ರಲ್ಲಿ ಸ್ಲಂ ಡಾಗ್ ಮಿಲಿಯನೇರ್‌ ಚಿತ್ರವನ್ನು ನಿರ್ದೇಶಿಸಿದನು, ಈ ಕಥೆಯಲ್ಲಿ ಒಬ್ಬ ಬಡವನಾಗಿದ್ದ ಹುಡುಗನ ಕಥೆ, ಮುಂಬೈನ ಬೀದಿಗಳ ಮೇಲೆ ಅಲೆಯುವ ಹುಡುಗ (ದೇವ್ ಪಟೇಲ್), ಇಂಡಿಯಾದ ರಿಯಾಲಿಟಿ ಶೋ Who Wants to Be a Millionaire? ನಲ್ಲಿ ಸ್ಪರ್ಧಿಸುತ್ತಾನೆ, ಇದಕ್ಕಾಗಿ ಬೋಯ್ಲೆ ಅಕಾಡೆಮಿ ಅವಾರ್ಡನ್ನು ಗಳಿಸಿದರು.

ಒಟ್ಟಾರೆಯಾಗಿ ಈ ಚಲನಚಿತ್ರವು ಎಂಟು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತು.[೧೩]

"ಒಬ್ಬ ಚಲನಚಿತ್ರ-ತಯಾರಕರಾಗಿರಲು ... ನೀವು ಮುಂದಾಳಾಗಿರಬೇಕಾಗುತ್ತದೆ,  

ನೀವು ಏನಾದರೂ ಸಾಧಿಸಬೇಕೆಂದಿದ್ದಲ್ಲಿ ಆ ವಿಷಯವಾಗಿ ನೀವು ಹುಚ್ಚರಾಗಬೇಕಾಗುತ್ತದೆ.

  ಜನರು ಯಾವಾಗಲು ಸುಲಭದ ದಾರಿಯನ್ನೆ ಇಷ್ಟಪಡುತ್ತಾರೆ.  

ನೀನು ಏನಾದರೂ ಅಸಾಮಾನ್ಯ, ಏನಾದರೂ ಭಿನ್ನವಾದುದನ್ನು ಸಾಧಿಸಲು ಹೆಚ್ಚು ಶ್ರಮ ಪಡಬೇಕು." [] ಟ್ರೇನ್ ಸ್ಪಾಟ್ಟಿಂಗ್‌ ನ ನಿರ್ಮಾಪಕ ಆಂಡ್ರಿವ್ ಮೆಕ್ ಡೊನಾಲ್ಡ್, ಹೇಳುವಂತೆ ಬೋಯ್ಲೆ ಒಂದು ವಿಷಯವನ್ನು ತೆಗೆದುಕೊಂಡರೆ ಅದನ್ನು ನೀವು ಆಗಾಗ್ಗೆ ವಾಸ್ತವಿಕವಾಗಿ ಚಿತ್ರಣದಂತೆ ಸರಿಯಾದ ದಾರಿಯಲ್ಲಿ ನೋಡಬಹುದು. ಒಂದು ಪ್ರಯೋಜನವಿಲ್ಲದವರಾಗಿರಬಹುದು ಅಥವಾ ಸ್ಲಂ ಅನಾಥರಾಗಿರಬಹುದು, ಮತ್ತು ವಾಸ್ತವಿಕವಾಗಿ ಕಾರ್ಯರೂಪಕ್ಕೆ ತರಲು ಬಹಳಷ್ಟು ಶ್ರಮ ಪಟ್ಟರು ಹಾಗೂ ನಂಬಿಕೆಗೆ ಮೀರಿದ ಕಾರ್ಯನಿರ್ವಹಿಸಿ ಆನಂದಿಸಿದರು ."[]

ಬೋಯ್ಲೆ ನಿರ್ದೇಶಿಸಬೇಕಿರುವುದು ಪಾಂಟ್ ಟವರ್ , ಇದು ದಕ್ಷಿಣ ಆಫ್ರಿಕಾಗೆ ಹೋಗುವ ಹೆಸರುವಾಸಿಯಾದ ಐವತ್ತನಾಲ್ಕು ಕಥೆಗಳನ್ನೊಳಗೊಂಡಿಡ ಸ್ಕೈಸ್ಕಾಪರ್ ಹತ್ತಿರದ ಅಪಾಥೀಡ್ ಎಂಬುದೊಂದು ಯುಗದ ಕೊನೆಯಲ್ಲಿ ಮಾದಕದ್ರವ್ಯದ ಜಮೀದಾರನ ಪ್ರಭಾವಕ್ಕೊಳಗಾಗಿ ಬೀಳುವ ಒಂದು ಹುಡುಗಿಯ ಕುರಿತದ್ದು ಅದೇ ತರಹ ಸೋಲೋಮನ್ ಗ್ರಂಡಿ , ಸಂಪೂರ್ಣ ಜೀವನವನ್ನು ಕೇವಲ 6 ದಿನಗಳಲ್ಲಿ ಅನುಭವವಿಸುವ ಒಂದು ಮಗುವಿನ ಕುರಿತ ಚಿತ್ರವಾಗಿದೆ.[೧೪] "ಒಮ್ಮೆ ನೀವು ಏನಾದರೂ ಚಲನಚಿತ್ರ ವ್ಯಾಪಾರದಲ್ಲಿ ಪ್ರಸಿದ್ಧಿಗಳಿಸಿದಲ್ಲಿ, ಅಮೇಲೆ ಸುಲಭವಾಗಿ ಅದರಲ್ಲಿ ಕಳೆದುಹೋಗಬಹುದು . ಈ ಎಲ್ಲಾ ಜನರು ವಿಷಯಗಳನ್ನು ನಿಮಗೆ ತಿಳಿಸಲು ಕಾತರಿಸುತ್ತಿರುತ್ತಾರೆ , ವಿಷಯಗಳಿಗೆ ಸಲಹೆಕೊಡಲು ಅಥವಾ ಒಪ್ಪಂದಗಳನ್ನು ಪ್ರಸ್ತಾಪಿಸುತ್ತಿರುತ್ತಾರೆ. ಮುಂದೇನು ಮಾಡಬೇಕು ಎಂಬ ಒತ್ತಡವು ಭಯಂಕರವಾಗಿರುತ್ತದೆ."[ಸೂಕ್ತ ಉಲ್ಲೇಖನ ಬೇಕು]

ಪ್ರಶಸ್ತಿಗಳು

ಬದಲಾಯಿಸಿ
 
ಕೆನಡಾದ ರೇರ್ಸನ್‌ನಲ್ಲಿ ಬೋಯ್ಲೆ

ಶಾಲೋ ಗ್ರೇವ್

ಬದಲಾಯಿಸಿ
  • 1995 Angers ಯೂರೋಪ್‌ನ ಮೊದಲ ಪಿಲ್ಮ್ ಫೆಸ್ಟಿವಲ್
    • ಪ್ರೇಕ್ಷಕ ಪ್ರಶಸ್ತಿ, ಫೀಚರ್ ಫಿಲ್ಮ್.
    • ಉತ್ತಮ ಸ್ಕ್ರೀನ್ ಪ್ಲೇ, ಫೀಚರ್ ಫಿಲ್ಮ್.
    • ಲಿಬರೇಶನ್ ಜಾಹೂರಾತು ಪ್ರಶಸ್ತಿ.
  • 1995 BAFTA - ಅತ್ಯುತ್ತಮ ಬ್ರಿಟಿಷ್ ಫಿಲ್ಮ್ ಎಂದು ಅಲೆಕ್ಸಾಂಡರ್ ಕೊರ್ಡಾ ಪ್ರಶಸ್ತಿ (ಆಂಡ್ರೋ ಮೆಕ್‌ಡೊನಾಲ್ಡ್‌ನೊಂದಿಗೆ ಹಂಚಿಕೊಂಡಿರುವುದು).[೧೦]
  • 1995 Cognac Festival du Film Policier
    • ಪ್ರೇಕ್ಷಕ ಪ್ರಶಸ್ತಿ.
    • ಗ್ರ್ಯಾಂಡ್ ಪ್ರಿಕ್ಸ್.
  • 1994 ದಿನಾರ್ಡ್ ಬ್ರಿಟಿಷ್ ಫಿಲ್ಮ್ ಫೆಸ್ಟಿವಲ್
    • ಗೋಲ್ಡನ್ ಹಿಚ್‌ಕಾಕ್
  • 1996 ಎಂಪೈರ್ ಅವಾರ್ಡ್
    • ಅತ್ಯುತ್ತಮ ನಿರ್ದೇಶಕ
  • 1996 ಈವಿನಿಂಗ್ ಸ್ಟ್ಯಾಂಡರ್ಡ್ ಬ್ರಿಟಿಷ್ ಫಿಲ್ಮ್ ಅವಾರ್ಡ್
    • ಅತ್ಯಂತ ಭರವಸೆಯ ಹೊಸಬ.
  • 1995 Fantasporto (ಪೋರ್ಚುಗಲ್)
    • ಅಂತರರಾಷ್ಟ್ರೀಯ ಫ್ಯಾಂಟಸಿ ಫಿಲ್ಮ್ ಅವಾರ್ಡ್, ಅತ್ಯುತ್ತಮ ಚಿತ್ರ
  • 1994 ಸ್ಯಾನ್ ಸೆಬಾಸ್ಟಿಯನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಸಿಲ್ವರ್ ಸೀಶೆಲ್, ಉತ್ತಮ ನಿರ್ದೇಶಕ.
  • 1997 BAFTA ಸ್ಕಾಟ್‌ಲ್ಯಾಂಡ್ ಅವಾರ್ಡ್ಸ್
    • ಉತ್ತಮ ಫೀಚರ್ ಫಿಲ್ಮ್
  • 1997 ಬೋಡಿಲ್ ಅವಾರ್ಡ್ (ಡೆನ್ಮಾರ್ಕ್)
    • ಉತ್ತಮ ನಾನ್-ಅಮೆರಿಕನ್ ಚಲನಚಿತ್ರ (Bedste ikke-amerikanske film)
  • 1997 Czech Lions
    • ಉತ್ತಮ ಫಾರಿನ್ ಭಾಷೆಯ ಚಲನಚಿತ್ರ (Nejlepsí zahranicní film)
  • 1997 ಎಂಪೈರ್ ಅವಾರ್ಡ್
    • ಅತ್ಯುತ್ತಮ ನಿರ್ದೇಶಕ
  • 1996 Seattle ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಗೋಲ್ಡನ್ ಸ್ಪೇಸ್ ನೀಡಲ್ ಅವಾರ್ಡ್, ಅತ್ಯುತ್ತಮ ನಿರ್ದೇಶಕ
  • 1996 Warsaw ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಪ್ರೇಕ್ಷಕರ ಅವಾರ್ಡ್.
  • 2003 Fantasporto (ಪೋರ್ಚುಗಲ್)
    • Grand Prize of European Fantasy Film in Silver.
    • ಅಂತರರಾಷ್ಟ್ರೀಯ ಫ್ಯಾಂಟಸಿ ಫಿಲ್ಮ್ ಅವಾರ್ಡ್, ಅತ್ಯುತ್ತಮ ನಿರ್ದೇಶಕ.
  • 2003 Neuchâtel ಅಂತರರಾಷ್ಟ್ರೀಯ ಫ್ಯಾಂಟಸಿ ಚಲನಚಿತ್ರೋತ್ಸವ
    • ಉತ್ತಮ ಅಂತರರಾಷ್ಟ್ರೀಯ ಚಲನಚಿತ್ರ.

ಸ್ಲಂಡಾಗ್ ಮಿಲಿಯನೇರ್

ಬದಲಾಯಿಸಿ
  • 72ನೇ ಅಕಾಡೆಮಿ ಪ್ರಶಸ್ತಿಗಳು
    • ಅತ್ಯುತ್ತಮ ನಿರ್ದೇಶಕ
  • 2008 ಆಸ್ಟಿನ್ ಚಲನಚಿತ್ರೋತ್ಸವ
    • ಪ್ರೇಕ್ಷಕರ ಅವಾರ್ಡ್, out of competition feature.
  • 2009 BAFTA
    • ಅತ್ಯುತ್ತಮ ನಿರ್ದೇಶಕ
  • 2008 ಬ್ರಿಟಿಷ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2009 ಬ್ರಾಡ್‌ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2008 ಚಿಕಾಗೊ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2008 ಚಿಕಾಗೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಪ್ರೇಕ್ಷಕರ ಆಯ್ಕೆ ಅವಾರ್ಡ್
  • 2009 ಗೋಲ್ಡನ್ ಗ್ಲೋಬ್ಸ್
    • ಉತ್ತಮ ನಿರ್ದೇಶನ - Motion Picture
  • 2008 Los Angeles Film Critics ಅಸೋಸಿಯೇಷನ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2008 ಸೆಟಲೈಟ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2008 Southeastern Film Critics ಅಸೋಸಿಯೇಷನ್ ಅವಾರ್ಡ್ಸ್
    • ಅತ್ಯುತ್ತಮ ನಿರ್ದೇಶಕ
  • 2008 St. Louis ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಪ್ರೇಕ್ಷಕರ ಆಯ್ಕೆ ಅವಾರ್ಡ್ - ಉತ್ತಮ ಅಂತರರಾಷ್ಟ್ರೀಯ ಫೀಚರ್
  • 2007 ಟೊರಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
    • ಪ್ರೇಕ್ಷಕರ ಆಯ್ಕೆ ಅವಾರ್ಡ್

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
ಬಿಡುಗಡೆಯಾದ ಚಲನಚಿತ್ರಗಳು
ಯೋಜನೆಯಲ್ಲಿರುವ ಚಲನಚಿತ್ರಗಳು

ಆಕರಗಳು

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ Danny Boyle, New York Times, retrieved 2008-10-29 {{citation}}: Italic or bold markup not allowed in: |publisher= (help)
  2. ೨.೦ ೨.೧ Caden, Sarah (2005-05-22), The man who could have been pope, Sunday Independent, archived from the original on 2015-09-04, retrieved 2009-02-23 {{citation}}: Italic or bold markup not allowed in: |publisher= (help)
  3. ೩.೦ ೩.೧ ೩.೨ Moggach, Lottie (2005-05-26), Danny Boyle, London: entertainment.timesonline.co.uk, archived from the original on 2011-06-15, retrieved 2009-03-11
  4. Leach, Ben (2009-01-14), Slumdog Millionaire director Danny Boyle almost became a priest, telegraph.co.uk, retrieved 2009-02-23
  5. Lewis, Tim (2009-02-21), Bangor professor remembers ex-student Danny Boyle, walesonline.co.uk, retrieved 2009-02-23
  6. ೬.೦ ೬.೧ ೬.೨ ೬.೩ ೬.೪ ೬.೫ ೬.೬ Grice, Elizabeth (2009-02-24), From fleapit to the red carpet, Telegraph.co.uk, retrieved 2009-03-11
  7. Danny Boyle to Direct Frankenstein for UK's National Theatre
  8. "Danny Boyle Biography (1956-)". Film Reference.com. Retrieved 5 November 2009.
  9. BFI Top 100 British films, BFI, 2006-09-06, retrieved 2009-02-23
  10. ೧೦.೦ ೧೦.೧ ಉಲ್ಲೇಖ ದೋಷ: Invalid <ref> tag; no text was provided for refs named Mayer
  11. Hiscock, John (2007-04-03), Another bright idea from Mr Sunshine, telegraph.co.uk, retrieved 2009-02-26
  12. "Aliens come to Wales". Guardian.co.uk. Retrieved 1 March 2008. {{cite web}}: Unknown parameter |dateformat= ignored (help)
  13. Singh, Anita (2009-02-23), Oscar winners: Slumdog Millionaire and Kate Winslet lead British film sweep, telegraph.co.uk, retrieved 2009-02-23 {{citation}}: Italic or bold markup not allowed in: |publisher= (help)
  14. http://www.hsx.com/security/view/GRUND
  15. Brooks, Xan (5 November 2009). "Danny Boyle climbs on mountaineer epic 127 Hours". The Guardian. Manchester, England: Guardian News and Media Limited. Retrieved 5 November 2009.
  16. "Danny Boyle On '28 Months Later': It's Not Called '28 Months Later'!". MTV Movies Blog. Archived from the original on 2010-03-03. Retrieved 2009-12-21.
  17. Mitchell, Wendy (28 February 2007). "Danny Boyle plans thriller set at South Africa's Ponte City". Screen Daily.com. EMAP Media. Retrieved 5 November 2009.
  18. "ಆರ್ಕೈವ್ ನಕಲು". Archived from the original on 2010-06-14. Retrieved 2010-02-09.

ಗ್ರಂಥಸೂಚಿ

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ