ಡೋರಿಸ್ ಲೆಸ್ಸಿಂಗ್, CH OBE (née Tayler; ಜನನ ೨೨, ಅಕ್ಟೋಬರ್, ೧೯೧೯, ಮರಣ : ೧೭, ನವೆಂಬರ್, ೨೦೧೩) ಸನ್. ೨೦೦೭ ರ, "ನೋಬೆಲ್ ಸಾಹಿತ್ಯ ಪ್ರಶಸ್ತಿ"ಯನ್ನು, ಬ್ರಿಟನ್ ನ ೮೮ ವರ್ಷ ಪ್ರಾಯದ, ಸುಪ್ರಸಿದ್ಧ ಲೇಖಕಿ, ಡೋರಿಸ್ ಲೆಸ್ಸಿಂಗ್, ಪಡೆದುಕೊಂಡಿದ್ದಾರೆ. ಸಮಾಜವಾದ, ಮತ್ತು ಸ್ತ್ರೀಯರ ಪಾತ್ರಗಳ ಬಗ್ಗೆ, ಅತಿಯಾಗಿ ಹಚ್ಚಿಕೊಂಡಿದ್ದರು. ಪುಡಿ-ಪುಡಿಯಾದ ನಾಗರೀಕತೆಯನ್ನು ಸೂಕ್ಷ್ಮ ಪರಿಶೋಧನೆಗೆ ಒಳಪಡಿಸಿ , ದಾರ್ಶನಿಕ ಶಕ್ತಿಯನ್ನು ಪ್ರದರ್ಶಿಸಿದ, 'ಸ್ತ್ರೀ ಅನುಭವದ ಮಹಾ-ಕಾವ್ಯಗಾರ್ತಿ'ಯೆಂದು, ಸ್ಟಾಕ್ ಹೋಮ್ ನ ಸ್ವೀಡಿಶ್ ನೊಬೆಲ್ ಅಕ್ಯಾಡಮಿ ಘೋಷಿಸಿದೆ. ಹಲವು ವರ್ಷಗಳಿಂದ ಸಾಹಿತ್ಯಸೇವೆಯಲ್ಲಿ ತಮ್ಮನ್ನು ತಾವು, ತೊಡಗಿಸಿಕೊಂಡಿದ್ದರು. ಪ್ರಶಸ್ತಿ ಬರುವ ಸಾಧ್ಯತೆಗಳನ್ನೂ ಅವರು ಗ್ರಹಿಸಿದ್ದೂ, ಅದರಬಗ್ಗೆ ತಲೆಗೆ ಹೆಚ್ಚು ಹಚ್ಚಿಕೊಳ್ಳುತ್ತಿರಲಿಲ್ಲ.

Doris Lessing
Lessing at the Lit Cologne literary festival in 2006
ಜನನDoris May Tayler
22 ಅಕ್ಟೋಬರ್ 1919
Kermanshah, Persia
ಮರಣ17 ನವೆಂಬರ್ 2013(2013-11-17) (ವಯಸ್ಸು 94)
London, England
ಕಾವ್ಯನಾಮJane Somers
ವೃತ್ತಿWriter
ರಾಷ್ಟ್ರೀಯತೆBritish
ಪೌರತ್ವUnited Kingdom
ಕಾಲ1950–2013
ಪ್ರಕಾರ/ಶೈಲಿNovel, short story, biography, drama, libretto, poetry
ಸಾಹಿತ್ಯ ಚಳುವಳಿModernism, postmodernism, Sufism, socialism, feminism, science fiction
ಪ್ರಮುಖ ಕೆಲಸ(ಗಳು)
ಪ್ರಮುಖ ಪ್ರಶಸ್ತಿ(ಗಳು)
ಬಾಳ ಸಂಗಾತಿ

[<span%20class="url">.dorislessing.org www.dorislessing.org/%20www<wbr/>.dorislessing<wbr/>.org]</span>]
'ಡೋರಿಸ್ ಲೆಸ್ಸಿಂಗ್'

'ಡೋರಿಸ್ ಲೆಸ್ಸಿಂಗ್' ಸಾಹಿತ್ಯ ಪ್ರಿಯೆಸಂಪಾದಿಸಿ

ಈ ಬ್ರಿಟಿಷ್ ಲೇಖಕಿಯ ಹೆಸರನ್ನು, ಬಹಳವರ್ಷಗಳಿಂದ ಪ್ರಷಸ್ತಿವಿಜೇತರ ಆಯ್ಕೆಯ ಪಟ್ಟಿಯಲ್ಲಿ ಇಟ್ಟಿದ್ದರು. ಆದರೆ, ಅದು ಕೈಗೆ ಇದುವರೆವಿಗೂ ದಕ್ಕಿರಲಿಲ್ಲ. ಸ್ವೀಡಿಷ್ ಅಕ್ಯಾಡಮಿ ಸಾಹಿತ್ಯಕ್ಕಾಗಿ ಮೀಸಲಾಗಿಟ್ಟ ಸುಮಾರು ೬ ಕೋಟಿ ೧೬ ಲಕ್ಷದಷ್ಟು ರೂಪಾಯಿನ ಮೊತ್ತದ ಈ ನೋಬೆಲ್ ಸಾಹಿತ್ಯ ಪುರುಸ್ಕಾರವನ್ನು ಕಡೆಗೂ ಈ ಬಾರಿ, ಡೋರಿಸ್ ಲೆಸ್ಸಿಂಗ್, ದಕ್ಕಿಸಿಕೊಂಡಿದ್ದಾರೆ. "The Grass is Singing", ಹಾಗೂ "The Golden Note book," ನಂತಹ ಪರಿಣಾಮಕಾರಿ ಪುಸ್ತಕರಚನೆಗಾಗಿ, ನೊಬೆಲ್ ಪ್ರಶಸ್ತಿ, ಕೊಟ್ಟಿರಬಹುದು.

ವೈಯಕ್ತಿಕ ಜೀವನಸಂಪಾದಿಸಿ

ಇದು ವರೆವಿಗೂ ಪಡೆದ ವಿಜೇತರಲ್ಲಿ ಅತ್ಯಂತ ಹೆಚ್ಚು ವಯಸ್ಸಾದ ಮಹಿಳೆ. ಜನಿಸಿದ್ದು, ೨೨, ಅಕ್ಟೋಬರ್, ೧೯೧೭, ಕೆರ್ಮನ್ ಶ , ಎಂಬ ಪರ್ಶಿಯ ದೇಶದ ಹಳ್ಳಿಯಲ್ಲಿ. (ಈಗ ಅದು ಇರಾನ್ ನಲ್ಲಿದೆ.) ಈ ವಾರ ತಾನೇ, ಆಕೆ, ೮೮ ವರ್ಷಕ್ಕೆ ಕಾಲಿಟ್ಟಳು. ಎಡಪಂಥೀಯಳೆಂಬ ಕಾರಣಕ್ಕಾಗಿ ತಡವಾಗಿರಬಹುದೆಂದು ಕೆಲವರ ಅಭಿಪ್ರಾಯ.

ಸಾಹಿತ್ಯ ಪ್ರಶಸ್ತಿ ೧೯೦೧ ರ ನಂತರಸಂಪಾದಿಸಿ

೧೯೦೧ ರಿಂದ, 'ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಹೀಗೆ ಪ್ರಶಸ್ತಿಯನ್ನು ಪಡೆದ ಮಹಿಳೆಯರಲ್ಲಿ ಈಕೆ, ೩೪ ನೆಯವರು. 'ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ' ಪಡೆದ ೧೧ ನೆಯ ಮಹಿಳೆ'. 'ಲೆಸ್ಸಿಂಗ್ ಕೃತಿ', The Golden Note book, ಮೂರು ಬಾರಿ, ಬೂಕರ್ ಪ್ರಶಸ್ತಿ,ಗೆ ನಾಮಕರಣಗೊಂಡಿದ್ದರೂ, ಪ್ರಶಸ್ತಿ ಸಿಕ್ಕಿರಲಿಲ್ಲ. 'ಲೆಸ್ಸಿಂಗ್ ಹೈಸ್ಕೂಲಿನ ಮೆಟ್ಟಲನ್ನೂ ಹತ್ತಿಲ್ಲ'. ತನ್ನ ೧೪ ನೆ ವಯಸ್ಸಿನಲ್ಲಿಯೇ ಶಾಲೆ ಬಿಟ್ಟರು. ತಮ್ಮ ಸ್ವಂತ ಓದು, ಕಲಿಕೆ, ಜ್ಞಾನಾರ್ಜನೆಗಳಿಂದ, ಕೃತಿ-ರಚನೆಯನ್ನು ಪ್ರಾರಂಭಿಸಿದಳು. ೧೫ ನೆಯ ವಯಸ್ಸಿನಲ್ಲಿ, ಮನೆಬಿಟ್ಟು ಓಡಿಹೋದರು. ೧೯೩೭ ರಲ್ಲಿ, ರೊಢೀಷಿಯಕ್ಕೆ ಹೋದ ಅವರು, ಜೀವನ ನಿರ್ವಹಣೆಗೆ, ಸ್ಟೆನೋ, ಟೈಪಿಸ್ಟ್, ಟೆಲಿಫೋನಿಸ್ಟ್, ಪತ್ರಕರ್ತೆಯಾಗಿ ದುಡಿದು, ಕೊನೆಗೆ, ಪೂರ್ತಿಲೇಖಕಿಯಾದರು. ೧೯೩೯ ರಲ್ಲಿ, ಫ್ರಾಂಕ್ ಚಾರ್ಲ್ಸ್ ವಿಸ್ಡಮ್, ಎಂಬಾತನೊಂದಿಗೆ ವಿವಾಹವಾದರು. ಜಾನ್,[ಮಗ] ಮತ್ತು ಜೀನ್ [ಮಗಳು] ಎಂಬ ಎರಡು ಮಕ್ಕಳಾದರು. ೧೯೪೩ ರಲ್ಲಿ ಡೈವರ್ಸ್ ನಿಂದ ಸಂಬಂಧ ಕಡಿಯಿತು.

ಎರಡನೆಯ ವಿವಾಹಸಂಪಾದಿಸಿ

'ಲೆಸ್ಸಿಂಗ್' ೧೯೪೫ ರಲ್ಲಿ, ಮರು-ಮದುವೆಯಾದರು. ಈ ಬಾರಿ ಆಕೆಯಪತಿ, ಗಾಟ್ ಫ್ರಾಯ್ಡ್ ಲೆಸ್ಸಿಂಗ್, 'ಎಡಪಂಥೀಯ'ನಾಗಿದ್ದ. ಆತನಿಂದ ಒಬ್ಬ ಮಗ, ಪೀಟರ್ ನ ಜನನವಾಯಿತು. ೧೯೪೯ ರಲ್ಲಿ ಪುನಃ 'ಡೈವರ್ಸ್' ನಿಂದ ಈ ಸಂಬಂಧವೂ ಕಡಿಯಿತು.

'ಡೋರಿಸ್ ಲೆಸ್ಸಿಂಗ್' ಕೃತಿಗಳ, ೩ ಕಾಲಮಾನದ ಹಂತಗಳುಸಂಪಾದಿಸಿ

  • ಕಮ್ಯುನಿಸಂ ತತ್ವಗಳನ್ನು ವಸ್ತುವನ್ನಾಗಿ ಇಟ್ಟುಕೊಂಡು ಮಾಡಿದ ರಚನೆಗಳು. ( ೧೯೪೪-೧೯೫೬) ರವರೆಗೆ. ಸಾಮಾಜಿಕ ವಿಚಾರಗಳನ್ನು ಕುರಿತಂತೆ ತೀವ್ರವಾಗಿ ಬರೆಯುತ್ತಿದ್ದಂತಹ ಕಾಲ. ೧೯೮೫ ರಲ್ಲಿ " The good terrorism," ಕೃತಿಯಲ್ಲೂ ಇದು ಮರುಕಳಿಸುತ್ತದೆ.
  • 'ಮನಶ್ಯಾಸ್ತ್ರೀಯ ವಸ್ತುಗಳನ್ನು ಆಧರಿಸಿ ರಚಿಸಿದ ಕೃತಿಗಳು' (೧೯೫೬-೧೯೬೯)
  • 'ವಿಜ್ಞಾನ ಕಥಾನಕ'ಗಳಲ್ಲಿ ಅನ್ವೇಷಿಸಲಾದ, 'ಸೂಫಿ ಕಥಾವಸ್ತು'. ಆದರೆ ಇವು ವಿಮರ್ಶಕರ ಗಮನವನ್ನು ಅಷ್ಟಾಗಿ ಸೆಳೆಯಲಿಲ್ಲ.

೧೯೫೦ ರಲ್ಲಿ 'ಡೋರಿಸ್' ರವರು, 'ಬ್ರಿಟಿಷ್ ಕಮ್ಯುನಿಷ್ಟ್ ಪಾರ್ಟಿಯ ಸದಸ್ಯೆ'ಯಾಗಿದ್ದರು. ೧೯೫೦ ರಿಂದ ೧೯೯೫ 'ರ ವರೆಗೆ, ಬ್ರಿಟನ್ ನಲ್ಲಿ ಆಕೆಯ ಆಗಮನವನ್ನು ನಿಶೇಧಿಸಲಾಗಿತ್ತು. ದಕ್ಷಿಣ ಆಫ್ರಿಕದ ಹಿಂದಿನ ಮತಭೇದವನ್ನು ಖಂಡಿಸಿ ಬರೆದಿದ್ದ ಟೀಕಾ-ಟಿಪ್ಪಣಿಗಳಿಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಅವರ ಬಗ್ಗೆ ಮಾಧ್ಯಮಗಳು, " ಕರ್ಕಷ ", " ಎಕ್ಸೆಂಟ್ರಿಕ್ " ಎಂಬ ಹಣೆಪಟ್ಟಿಕೊಟ್ಟಿದ್ದರು. ನಂತರ, 'ಎಡಪಂಥೀಯ ಸಿದ್ಧಾಂತ'ವನ್ನು ತೊರೆದು, 'ಅಣ್ವಸ್ತ್ರಗಳ ವಿರುದ್ಧ ಆಂದೋಲನ'ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಪುಸ್ತಕ, 'The Golden Note book', ನಂತರವೇ ಅವರು ಹೆಚ್ಚು ಪ್ರಖ್ಯಾತರಾಗಿದ್ದು.

ಪ್ರಕಟಿಸಿದ ಪುಸ್ತಕಗಳುಸಂಪಾದಿಸಿ

೧೯೫೦ -1950 "The Grass is Singing". ಇದು ಅವರ ಮೊಟ್ಟಮೊದಲನೆಯ ಕಾದಂಬರಿ. ಈ ಕೄತಿ, ಪ್ರೀತಿ, ದ್ವೇಷಗಳ ಆಧಾರಿತ, ದುರಂತ ಹಾಗೂ ಒಂದುಗೂಡಿಸಲಾಗದ ಜನಾಂಗೀಯ ಸಂಘರ್ಷಗಳ ಅಧ್ಯಾಯವೆಂದು ನೋಬೆಲ್ ಕಮಿಟಿ ಬಣ್ಣಿಸಿದೆ. ಒಬ್ಬ ಬಿಳಿ ರೈತನ ಪತ್ನಿ, ಮತ್ತು ಆಕೆಯ ಪ್ರಿಯಸೇವಕಿಯ, ಸಂಬಂಧಕ್ಕೆ ಒಳಪಟ್ಟಿದ್ದು.

  • "The Summer before the Dark".(೧೯೭೩)
  • "The Fifth Child"
  • "Memories of a Survivor".
  • "The Cleft", the latest novel by Doris lessing.

ಡೋರಿಸ್ ಲೆಸ್ಸಿಂಗ್ ಒಟ್ಟು, ೨೦ ಕಾದಂಬರಿಗಳು, ಅನೇಕ ಕಥೆಗಳು, ಕವನಗಳು , ನಾಟಕಗಳು, 'ಎರಡು ಸಂಪುಟಗಳಲ್ಲಿ ಆತ್ಮ ಕಥನ'ವನ್ನು ಬರೆದಿದ್ದಾರೆ. 'Under my Skin'. ಸಾಕುಪ್ರಾಣಿ ಬೆಕ್ಕುಗಳ ಬಗ್ಗೆ, ಬರೆದಿದ್ದಾರೆ. ಅನೇಕ ಕಥೆಗಳನ್ನು . "ಜೇಮ್ ಸೋಮರ್ಸ್," ಎಂಬ ಕಾವ್ಯ-ನಾಮದಿಂದ ಅನೇಕ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಕಮ್ಯುನಿಸಂ ನಲ್ಲಿ ತೀವ್ರ ಆಸಕ್ತಿಯಿದ್ದಿದ್ದರಿಂದ ಆಧುನಿಕ ಜಗತ್ತು, ಸಮಾಜವಾದ, ಸ್ತ್ರೀಯರ ಮಾನಸಿಕತೆ, ಮೊದಲಾದ ವಿಷಯಗಳಲ್ಲಿ, ಆಳವಾದ ಅಸ್ಥೆ, ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಅವರ ಕಾದಂಬರಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ನಿಧನಸಂಪಾದಿಸಿ

೯೪ ವರ್ಷ ಪ್ರಾಯದ, ಡೋರಿಸ್ ಲೆಸ್ಸಿಂಗ್, ತಮ್ಮ ಲಂಡನ್ ನ ಮನೆಯಲ್ಲಿ, ೨೦೧೩ ರ, ನವೆಂಬರ್, ೧೭ ರಂದು ನಿಧನರಾದರು.

ಪ್ರಶಸ್ತಿಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ