ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್

ಡಿ,ಎಚ್‌.ಲಾರೆನ್ಸ್‌
ಜನನಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್
೧೧ ಸೆಪ್ಟೆಂಬರ್ ೧೮೮೫
ಇಂಗ್ಲೆಂಡ್
ಮರಣ೨ ಮಾರ್ಚ್ ೧೯೩೦
ಫ್ರಾನ್ಸ್‌
ವೃತ್ತಿಕವನಗಾರ.ನಾಟಕಗಾರ ಮತ್ತು ಕಾದಂಬರಿಗಾರ
ರಾಷ್ಟ್ರೀಯತೆಇಂಗ್ಲೀಷ್‌
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆನಾಟಿಂಗ್ಯ್ಹಾಮ್‌ ವಿಶ್ವವಿದ್ಯಾಲಯ
ಕಾಲ೧೯೦೭-೧೯೩೦

ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್[] ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ. ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಇಂಗ್ಲೆಂಡ್ನಲ್ಲಿ ೧೧ ಸೆಪ್ಟೆಂಬರ್ ೧೮೮೫ ರಂದು ಜನಿಸಿದರು. ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ತಾಯಿ ಲಿಡಿಯ ಲಾರೆನ್ಸ್. ತಾಯಿ ಲಿಡಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದು, ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಇದು ಬಾಲಕ ಲಾರೆನ್ಸ್‌ನ ಮೇಲೆ ಪ್ರಭಾವವನ್ನು ಬೀರಿತು. ಇದರಿಂದ ಸಾಹಿತ್ಯದ ಬಗ್ಗೆ ಒಲವು ಮೂಡಲು ಕಾರಣವಾಯಿತು.

ಚಿಕ್ಕ ವಯಸ್ಸಿನಲ್ಲಿ ಲಾರೆನ್ಸ್‌ನ ಅರೋಗ್ಯದ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಏಕೆಂದರೆ ಆತ ವಾಸಿಸುತ್ತಿದ್ದ ನಗರದಲ್ಲಿ ಗಣಿಗಾರಿಕೆ ನಡೆಯುತ್ತಿದ್ದರಿಂದ ಅದು ಅರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತಿತ್ತು. ಆಲ್ಲಿನ ಧೂಳು ಆಗಾಗ ಬಾಲಕ ಲಾರೆನ್ಸ್‌ನನ್ನು ಹಾಸಿಗೆ ಹಿಡಿಯುವಂತೆ ಮಾಡುತ್ತಿತ್ತು. ದೈಹಿಕವಾಗಿ ದುರ್ಬಲನಾಗಿದ್ದ ಲಾರೆ‌ನ್ಸ್‌ಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ಯಾರೊಂದಿಗೂ ಬೆರೆಯುತ್ತಿರಲ್ಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದ. ಶಾಲೆಯಲ್ಲಿ ಜಾಣ ವಿದ್ಯಾರ್ಥಿ ಎಂದು ಗುರುತಿಸಿಕೊಂಡು ಸ್ಕಾಲರ್ಷಿಪ್ಗಳನ್ನು ಪಡೆದುಕೊಂಡಿದ್ದ. ಮುಂದೆ ಪದವಿ ಪಡೆದ ನಂತರ ಲಾರೆನ್ಸ್ ಶಾಲೆಯ ಕಡೆಗೆ ತಿರುಗಿ ನೋಡಲಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದನು. ಅನಂತರ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಜೆಸ್ಸಿ ಚೇಂಬರ್ಸ್ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಯಿತು. ಆಕೆ ವಿಚಾರವಂತ ಮಹಿಳೆಯಾಗಿದ್ದು ಲಾರೆನ್ಸ್‌ನ ಮೇಲೆ ಪ್ರಭಾವ ಬೀರಿದಳು.ದಿ ವೈಟ್ ಪೀ ಕಾಕ್ ಎಂಬ ಕಾದಂಬರಿ ಬರೆಯಲು ಅವಳೇ ಕಾರಣವಾದಳು .

ದಿ ವೈಟ್ ಪೀ ಕಾಕ್ ಕಾದಂಬರಿಯೊಂದಿಗೆ ಆರಂಭವಾದ ಲಾರೆನ್ಸ್‌ನ ಸಾಹಿತ್ಯ ಪಯಣ, ಮತ್ತು ಮದುವೆ ಯಾವುದೇ ಅಡೆತಡೆಗಳಿಲ್ಲದೆ ನಡೆಯಿತು. ಈ ನಡುವೆ ಅನೇಕ ಕಥೆಗಳು, ಸಣ್ಣ ಕಥೆಗಳು ಪ್ರಕಟವಾದವು. ಒಂದು ವರುಷದ ತರುವಾಯ ದಿ ತ್ರೆಸ್ಪಸ್ಸೇರ್ ಎಂಬ ಎರಡನೇ ಕಾದಂಬರಿಯು ಪ್ರಕಟವಾಯಿತು. ಇದು ಶಾಲಾ ಶಿಕ್ಷಕನಾಗಿದ್ದಾಗ ತನ್ನ ಸಹೋದ್ಯೋಗಿಯ ಒಬ್ಬಳ ದುರಂತ ಕಥೆಯನ್ನು ಹೊಂದಿತ್ತು

೧೯೧೩ ರಲ್ಲಿ ಲಾರೆನ್ಸ್‌ನ ಮೂರನೆ ಕಾದಂಬರಿ ಸನ್ಸ್ ಅಂಡ್ ಲವರ್ಸ್ ಪ್ರಕಟವಾಯಿತು. ಈ ಕಾದಂಬರಿ ಲಾರೆನ್ಸ್‌ನ ಅತ್ಯುತ್ತಮ ಕಾದಂಬರಿ ಎಂದು ಹೆಸರಾಯಿತು. `ಇಪ್ಪತ್ತನೆಯ ಶತಮಾನದಲ್ಲಿ ಇಂಗ್ಲೀಷ್‌ನ ಅತ್ಯುತ್ತಮ ಕಾದಂಬರಿ ಎಂದು ಜನಪ್ರಿಯವಾಯಿತು. ಈ ನಡುವೆ ಅನೇಕ ಕಾವ್ಯಾ, ಕಥೆ, ಅತ್ಯುತ್ತಮ ಕಾದಂಬರಿಗಳನ್ನು, ಲೇಖನಗಳನ್ನು ರಚಿಸಿದ ಲಾರೆನ್ಸ್‌ನ ಜೀವನದಲ್ಲಿ ಅನೇಕ ಏರುಪೇರುಗಳಾಗಿ ೧೯೨೭ ರ ಹೊತ್ತಿಗೆ ಅವನ ಅರೋಗ್ಯ ಹದಗೆಟ್ಟಿತು. ಈ ಸ್ಥಿತಿಯಲ್ಲಿಯೇ ಅವನು ಲೇಡಿ ಚತ್ತೆರ್ಲೆಯ್ಸ್ ಲವರ್ ಎಂಬ ಕಾದಂಬರಿ ಬರೆದ. ಇದು ಅನೇಕ ವಿವಾದಗಳಿಗೆ ಕಾರಣವಾಯಿತು. ಇಂಗ್ಲಾಂಡ್‌ರವರು ೧೯೬೦ರಂದು ನಿಷೇಧಿಸಿದರು. ಲೈಂಗಿಕತೆಯನ್ನು ಬಹಳ ಮುಕ್ತವಾಗಿ ಚರ್ಚೆಗೆ ಒಳಪಡಿಸಿದ ಕೃತಿಯೆಂದು ೧೯೫೯ರಂದು ನಿಷೇದ ಮಾಡಿದರು. ಮುಂದೆ ಅರೋಗ್ಯ ಕೆಟ್ಟಿದ್ದರಿಂದ ಹೆಚ್ಚು ಸಾಹಿತ್ಯ ಮೂಡಿ ಬರಲಿಲ್ಲ. ಕೊನೆಗೆ ೨ ಮಾರ್ಚ್ ೧೯೩೦ರಲ್ಲಿ ಲಾರೆನ್ಸ್ ಫ್ರಾನ್ಸ್‌ನಲ್ಲಿ ತನ್ನ ಕೊನೆ ಉಸಿರನ್ನೆಳೆದ. ಲಾರೆನ್ಸ್ ಸತ್ತಾಗ ಅವನ ವಯಸ್ಸು ೪೪. ತನ್ನ ಮಧ್ಯ ವಯಸ್ಸಿನಲ್ಲೆ ಅಸು ನೀಗಿದ ಲಾರೆನ್ಸ್ ಇಂಗ್ಲೀಷ್ಸಾ ಸಾಹಿತ್ಯ ಪ್ರಪಂಚದಲ್ಲಿ ಮಾತ್ರ ಅಮರನಾಗಿ ಉಳಿದಿದ್ದಾನೆ.

ವೃತ್ತಿ

ಬದಲಾಯಿಸಿ

೧೯೦೮ ಶರತ್ಕಾಲದಲ್ಲಿ ಲಾರೆನ್ಸ್‌ ತನ್ನ ಬಾಲ್ಯದ ಮನೆ ಬಿಟ್ಟು, ಲಂಡನ್‌ಗೆ ಹೋದರು. ಮತ್ತು ಇವರು ಡೇವಿಡ್‌ಸನ್‌ ಶಾಲೆಯಲ್ಲಿ ಭೋದಿಸುವಾಗ ಅವರು ಬರವಣಿಗಯನ್ನು ಮುಂದುವರಿಸಿದರು, ಜಿಸ್ಸಿ ಜೇಂಬರ್ಸ್‌ ಸಲ್ಲಿಸಿದ ಆರಂಭಿಕ ಕಾವ್ಯಗಳು ಮತ್ತು ಫೋರ್ಡ್‌ ಹೆರ್ಮನ್ ಹುಪ್ಫರ್‌‌ರವರು ದಿ ಇಂಗ್ಲೀಷ್‌ ರಿವ್ಯೋನ ಸಂಪಾದಕರಾಗಿದ್ದರು. ಇವರಿಬ್ಬರು ಲಾರೆನ್ಸ್‌ನ ಬರವಣಿಗೆಯನ್ನು ಮುಂದುವರಿಸಲು ಸಹಾಯವಾದರು. ಮಾರ್ಚ್‌ ೧೯೧೨ ಲಾರೆನ್ಸ್‌ ಫ್ರೀಡಿಯಾ ವೀಕ್ಲಿ ಎಂಬುವರನ್ನು ಬೇಟಿ ಮಾಡಿದರು. ಲಾರೆನ್ಸ್ ತನ್ನ ಎಲ್ಲಾ ವಿಷಯಗಳನ್ನು ಅವಳ ಹತ್ತಿರ ಹಂಚಿಕೊಳ್ಳುತ್ತಿದ್ದನು. ಫ್ರೀಡಿಯಾ ವೀಕ್ಲಿಯೂ, ಎರ್ನೆಸ್ಟ್‌ ವೀಕ್ಲಿ, ನಾಟಿಂಗ್ಯ್ಹಾಮ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರನ್ನು ಮದುವೆಯಾಗಿದ್ದಳು. ಅವಳಿಗೆ ಮೂರು ಮಕ್ಕಳಿದರು. ಆದರೆ ಲಾರೆನ್ಸ್‌ ಜೂತೆ ಇವಳು ತನ್ನ ಪೋಷಕರ ಮನೆಗೆ ಕರೆದುಕೊಂಡು ಹೋದಳು. ನಂತರ ಜರ್ಮನಿ ಮತ್ತು ಫ್ರಾನ್ಸ್‌ ನಡುವೆಯ ಆತಂಕಗಳಿಂದ ಲಾರೆನ್ಸ್‌ ಎನ್‌ಕೌಂಟರ್‌ಗೆ ಒಳಗೊಂಡನು. ಮುಂದೆ ಮ್ಯೂನಿಚ್‌ ಎನ್ನುವ ಜಾಗಕ್ಕೆ ಹನಿಮೂನ್‌ಗಾಗಿ ಪ್ರೀಡಾ ಜೂತೆ ಹೋದನು. ಅಲ್ಲಿ 'ಲೂಕ್‌ ವಿ ಯಾವ್‌ ಥ್ರು'.(೧೯೧೭), ಎನ್ನುವ ಪ್ರೇಮದ ಕವನವನ್ನು ಬರೆದನು. 'ನಾಟಿಂಗ್ಯ್ಹಾಮ್‌' ಎಂಬ ನಾಟಕವು, ಅವರ ಕೊನೆ ಹುಸಿರಿರುವರೆಗೂ ಬಿಡುಗಡೆಯಾಗಲ್ಲಿಲ್ಲ.


ಕಾದಂಬರಿಗಳು

ಬದಲಾಯಿಸಿ

[]

  • ದಿ ವೈಟ್ ಪೀಕಾಕ್ (೧೯೧೧)
  • ದಿ ತ್ರೆಸ್ಪಸ್ಸೇರ್ (೧೯೧೨)
  • ಸನ್ಸ್ ಅಂಡ್ ಲವರ್ಸ್ (೧೯೧೩)
  • ದಿ ರೇನ್ಬೋ (೧೯೧೫)
  • ವಿಮೆನ್ ಇನ್ ಲವ್ (೧೯೨೦)
  • ದಿ ಲಾಸ್ಟ್ ಗರ್ಲ್ (೧೯೨೦)
  • ಆರನ್’ಸ್ ರಾಡ್ (೧೯೨೨)
  • ಕಾಂಗರೂ (೧೯೨೩)
  • ದಿ ಬಾಯ್ ಇನ್ ದಿ ಬುಶ್ (೧೯೨೪)
  • ದಿ ಪ್ಲುಮ್ಬೇದ್ ಸರ್ಪೆಂಟ್ (೧೯೨೬)

ಲೇಡಿ ಚತ್ತೆರ್ಲೆಯ್’ಸ್ ಲವರ್ (೧೯೨೮) ದಿ ಎಸ್ಕಾಪೆದ್ ಕಾಚ್ಕ್ (೧೯೨೯)

ಸಣ್ಣ ಕಥೆಗಳ ಸಂಗ್ರಹಣೆ

ಬದಲಾಯಿಸಿ
  • ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪)
  • ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨)
  • ದಿ ಹಾರ್ಸ್ ಡೀಲರ್’ಸ್ ಡಾಟರ್ (೧೯೨೨)
  • ದಿ ಫಾಕ್ಸ್, ದಿ ಕ್ಯಾಪ್ಟನ್’ಸ್ ಡಾಲ್ , ದಿ ಲದ್ಯ್ಬಿರ್ದ್ (೧೯೨೩)
  • ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೫)
  • ದಿ ವಿಮೆನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮)
  • ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬)
  • ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦)
  • ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦)
  • ಕಲೆಕ್ಟೆಡ್ ಸ್ಟೋರೀಸ್ (೧೯೯೪)

ಕವನ ಸಂಗ್ರಹಗಳು

ಬದಲಾಯಿಸಿ
  • ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩)
  • ಅಮೊರೆಸ್ (೧೯೧೬)
  • ಲೂಕ್! ವೀ ಹವೆ ಕಂ ಥ್ರೂ! (೧೯೧೭)
  • ನ್ಯೂ ಪೊಯೆಮ್ಸ್ (೧೯೧೮)
  • ಬೇ; ಅ ಬುಕ್ ಆಫ್ ಪೊಯೆಮ್ಸ್ (೧೯೧೯)
  • ತೊರ್ತೊಇಸೆಸ್ (೧೯೨೧)
  • ಬರ್ಡ್ಸ್, ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩)
  • ಪನ್ಸಿಎಸ್ (೧೯೨೯)
  • ನೆತ್ತ್ಲೆಸ್ (೧೯೩೦)
  • ಲಸ್ತ್ಸ್ ಪೊಯೆಮ್ಸ್ (೧೯೩೨)
  • ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦)
  • ದಿ ವೈಟ್ ಹಾರ್ಸ್ (೧೯೬೪)

ನಾಟಕಗಳು

ಬದಲಾಯಿಸಿ
  • ದಿ ಡಾಟರ್-ಇನ್-ಲಾ (೧೯೧೨)
  • ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪)
  • ಟಚ್ ಅಂಡ್ ಗೋ (೧೯೨೦)
  • ಡೇವಿಡ್ (೧೯೨೬)
  • ದಿ ಫೈಟ್ ಫಾರ್ ಬಾರ್ಬರಾ (೧೯೩೩)
  • ಅ ಕೊಲಿಯರ್’ಸ್ ಫ್ರೈಡೆ ನೈಟ್ (೧೯೩೨)
  • ದಿ ಮ್ಯಾರೀಡ್ ಮ್ಯಾನ್ (೧೯೪೦)
  • ದಿ ಮೆರ್ರಿ-ಗೋ-ರೌಂಡ್ (೧೯೪೧)
  • ಲಾರೆನ್ಸ್ ಅನುವಾದಿತ ಕೃತಿಗಳಲ್ಲಿ
  • ಆಲ್ ಥಿಂಗ್ಸ್ ಅರೆ ಪಾಸಿಬಲ್ (೧೯೨೦)
  • ದಿ ಜಂಟಲ್ಮನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ (೧೯೨೨)
  • ಮಸ್ತ್ರೋ-ಡಾನ್ ಗೆಸುಅಲ್ದೋ (೧೯೨೩)
  • ಲಿಟಲ್ ನೋವಲ್ಸ್ ಆಫ್ ಸಿಸಿಲಿ (೧೯೨೫)
  • ಕಾವಲ್ಲೆರಿಯ ರುಸ್ತಿಕಾನ ಅಂಡ್ ಒಥೆರ್ ಸ್ಟೋರೀಸ್ (೧೯೨೮)
  • ದಿ ಸ್ಟೋರಿ ಆಫ್ ಡಾಕ್ಟರ ಮನೆನ್ತೆ (೧೯೨೯)


ಹೂರಗಿನ ಕೂಂಡಿಗಳು

ಬದಲಾಯಿಸಿ

ಉಲೇಖನಗಳು

ಬದಲಾಯಿಸಿ
  1. https://en.wikipedia.org/wiki/D._H._Lawrence
  2. http://www.online-literature.com/dh_lawrence/