ಡಿ. ರಾಜೇಂದ್ರ ಬಾಬು

(ಡಿ. ರಾಜೇಂದ್ರ ಸಿಂಗ್ ಇಂದ ಪುನರ್ನಿರ್ದೇಶಿತ)

ರಾಜೇಂದ್ರ ಬಾಬು (೩೦ ಮಾರ್ಚ್ ೧೯೫೧ - ೩ ನವೆಂಬರ್ ೨೦೧೩) ಅವರು ಕನ್ನಡ ಸಿನೆಮಾ ನಿರ್ದೇಶಕರು ಮತ್ತು ಚಿತ್ರಕಥಾ ಲೇಖಕ, ಕತೆಗಾರ. ೧೯೮೦ರಲ್ಲಿ ಸಿನಿಮಾರಂಗಕ್ಕೆ ಓರ್ವ ನಟನಾಗಿ ಪಾದಾರ್ಪಣೆ ಮಾಡಿ ಅನಂತರ ನಿರ್ದೇಶಕರಾದರು. ಅವರು ಒಟ್ಟಾರೆ ೫೦ ಚಿತ್ರಗಳನ್ನು ನಿರ್ದೆಶಿಸಿದ್ದಾರೆ. ಕನ್ನಡ ಸಿನೆಮಾಗಳಲ್ಲದೇ ಕೆಲವು ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನೆಮಾಗಳನ್ನೂ ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಅನೇಕ ಚಿತ್ರಗಳು ಸಿನೆಮಾ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಗಳಿಸುವುದರ ಮೂಲಕ ಕನ್ನಡ ಸಿನಿರಂಗದಲ್ಲಿ ಒಬ್ಬ ಗಣ್ಯ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ.

ಡಿ.ರಾಜೇಂದ್ರ ಬಾಬು
ಚಿತ್ರ:RSingh.jpg
ಡಿ.ರಾಜೇಂದ್ರ ಬಾಬು
Born(೧೯೫೧-೦೩-೩೦)೩೦ ಮಾರ್ಚ್ ೧೯೫೧
Died3 November 2013(2013-11-03) (aged 62)
ಬೆಂಗಳೂರು, ಕರ್ನಾಟಕ,ಭಾರತ
Other namesಬಾಬು
Occupationಸಿನೆಮಾ ನಿರ್ದೇಶಕ ಮತ್ತು ಚಿತ್ರಕತೆ ರಚನೆಗಾರ
Years active1984–2013
SpouseSumithra
ChildrenNakshatra
Umashankari

ಜನನ ಮತ್ತು ಕುಟುಂಬ

ಬದಲಾಯಿಸಿ

ಚಿಕ್ಕಮಗಳೂರಿನ ರಾಜೇಂದ್ರ ಬಾಬು ೧೯೫೧ ರ ಮಾರ್ಚ್ ೩೦ ರಂದು ಜನಿಸಿದರು. ತಂದೆ ಅನಂತ ತೀರ್ಥಾಚಾರ್, ವೃತ್ತಿಯಲ್ಲಿ ವಕೀಲರು. ರಾಜೇಂದ್ರ ಬಾಬು ಎಂಟು ಮಕ್ಕಳ ಕುಟುಂಬದಲ್ಲಿ ಕೊನೆಯವರು. ೩ ಸೋದರಿಯರು, ೪ ಜನ ಅಣ್ಣಂದಿರು. ರಾಜೇಂದ್ರ ಬಾಬು ಅವರ ಪತ್ನಿ ಬಹುಭಾಷಾ ನಟಿ ಸುಮಿತ್ರಾ, ಈ ದಂಪತಿಗಳಿಗೆ ಇಬ್ಬರು ಮಕ್ಕಳು: ಉಮಾಶಂಕರಿ ಮತ್ತು ನಕ್ಷತ್ರ. ಮಕ್ಕಳಿಬ್ಬರೂ ಕೂಡ ನಟಿಯರು.

ಸಿನೆಮಾ ಜೀವನ

ಬದಲಾಯಿಸಿ

ಕಾಲೇಜು ದಿನಗಳಿಂದಲೇ ಸಿನಿಮಾ ಗೀಳಿತ್ತು. ೧೯೭೨ರಲ್ಲಿ 'ಆದರ್ಶ ಫಿಲ್ಮ್ ಇನ್ಸ್ ಸ್ಟಿಟ್ಯೂಟ್ ನಿಂದ ಪ್ರಥಮ ದರ್ಜೆಯಲ್ಲಿ ಡಿಪ್ಲೊಮಾ ಪದವಿಗಳಿಸಿದರು. 'ನಾಂದಿ' ಎಂಬ ಚಿತ್ರದ ಸಣ್ಣ ಪಾತ್ರ ಅವರ ಪಾಲಿಗೆ ಬಂದಾಗ ಬಣ್ಣ ಹಚ್ಚಿಕೊಂಡು ಸಿದ್ಧರಾದರು. ಹಿರಿಯ ಛಾಯಾಗ್ರಾಹಕ ಭವಾನಿ ಲಕ್ಷ್ಮೀ ನಾರಾಯಣ್ ನಿರ್ದೇಶಕ ಲಕ್ಷ್ಮೀನಾರಾಯಣ್ ರಿಗೆ ಹೇಳಿ ಆ ಪಾತ್ರದ ಅವಕಾಶ ಕೊಡಿಸಿದ್ದರು. ನಂತರ 'ಕುರುಬರ ಲಕ್ಕ' ಎಂಬ ಚಿತ್ರದಲ್ಲಿ ನಾಯಕರಾಗಿ ಆಯ್ಕೆಯಾದರು. ಇದನ್ನು ನಿರ್ದೇಶಿಸಿದವರು ಎಚ್. ಎಮ್. ಕೃಷ್ಣಮೂರ್ತಿಯವರು. ಇದರ ಬಳಿಕ ಬಾಬು ಅವರಿಗೆ ನಿರ್ದೇಶನದ ಬಗ್ಗೆ ಗಮನ ಹರಿಯಿತು. ರಾಜೇಂದ್ರ ಸಿಂಗ್ ಬಾಬು, ಎಸ್. ಆರ್. ದಾಸ್, ಹಾಗೂ ವಿ. ಸೋಮಶೇಖರ್ ರಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು. ಟೈಗರ್ ಪ್ರಭಾಕರ್ ಹಾಗೂ ಜಯಮಾಲ ಅಭಿನಯಿಸಿದ್ದ 'ಜಿದ್ದು' ಚಿತ್ರದ ಮುಖಾಂತರ ತಾವೊಬ್ಬ ಸ್ವತಂತ್ರ ನಿರ್ದೇಶಕರಾಗಿ ರೂಪುಗೊಂಡರು. ಮೊದಲನೆಯ ಚಿತ್ರ 'ಜಿದ್ದು'. ತೆಲುಗು ಚಿತ್ರಗಳಲ್ಲೂ ಪ್ರಯತ್ನಿಸಿದ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸ್ಥಿರವಾಗಿ ಉಳಿದುಕೊಂಡರು. ಪತ್ನಿ ಸುಮಿತ್ರ ಹಾಗೂ ಮಕ್ಕಳೂ ಸಹ ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಿಸಿದ ಚಿತ್ರಗಳು

ಬದಲಾಯಿಸಿ
  • ಜಿದ್ದು
  • ಕಾಳಿಂಗಸರ್ಪ
  • ಹೊಸ ಇತಿಹಾಸ
  • ಸ್ವಾಭಿಮಾನ
  • ನಾನು ನನ್ನ ಹೆಂಡ್ತಿ
  • ಅಸಂಭವ
  • ಒಲವಿನ ಉಡುಗೊರೆ
  • ತಾಳಿಯ ಆಣೆ
  • ಪ್ರಜಾಪ್ರಭುತ್ವ
  • ಯುಗಪುರುಷ
  • ಸಂಸಾರ ನೌಕೆ
  • ರಾಮರಾಜ್ಯದ ರಾಕ್ಷಸರು
  • ಚಕ್ರವರ್ತಿ
  • ಕಾಲಚರ್ಕ
  • ರಾಮಾಚಾರಿ
  • ಎಂಟೆದೆಬಂಟ
  • ಶ್ರೀರಾಮಚಂದ್ರ
  • ಅಣ್ಣಯ್ಯ
  • ಕರುಳಿನಕೂಗು
  • ಹಾಲುಂಡ ತವರು
  • ಪ್ರಜಾಶಕ್ತಿ
  • ದೀರ್ಘಸುಮಂಗಲಿ
  • ಅಪ್ಪಾಜಿ
  • ಜೀವನದಿ
  • ಜೋಡಿಹಕ್ಕಿ
  • ಕುರುಬನರಾಣಿ
  • ಯಾರೇ ನೀನು ಚೆಲುವೆ
  • ಹಬ್ಬ
  • ಯಾರೇ ನೀ ಅಭಿಮಾನಿ
  • ಪ್ರೀತ್ಸೆ
  • ಕೃಷ್ಣಲೀಲೆ
  • ದೇವರಮಗ
  • ದಿಗ್ಗಜರು
  • ಅಮ್ಮ
  • ನಾನು ನಾನೇ
  • ನಂದಿ
  • ಸ್ವಾತಿಮುತ್ತು
  • ಎನ್ಕೌಂಟರ್ ದಯಾನಾಯಕ್
  • ಉಪ್ಪಿದಾದಾ ಎಂಬಿಬಿಎಸ್
  • ಬೊಂಬಾಟ್
  • ಬಿಂದಾಸ್
  • ಆರ್ಯನ್
  • ೧೯೮೭ ರಲ್ಲಿ ಹಿಂದಿಯಲ್ಲಿ ತಯಾರಾದ ಗೋವಿಂದ-ಮಂದಾಕಿನಿ ಜೋಡಿಯ 'ಪ್ಯಾರ್ ಕರ್ಕೆ ದೇಖೋ'
  • ಮಲಯಾಳಂನಲ್ಲಿ 'ರಕ್ತಾಭಿಷೇಕಂ ಚಿತ್ರ'ವನ್ನೂ ನಿರ್ದೇಶಿಸಿದ್ದರು.

ರಿಮೇಕ್ ವಿವರಗಳು

ಬದಲಾಯಿಸಿ
  • ಹಿಂದಿ ಚಿತ್ರದ 'ಕರ್ಜ್' ಎಂಬ ಚಿತ್ರದ ಆಧಾರದ ಮೇಲೆ 'ಯುಗಪುರುಷ'
  • ಹಿಂದಿಯ 'ಡರ್' ಎನ್ನುವ ಚಿತ್ರದ ರೀಮೇಕ್ 'ಪ್ರೀತ್ಸೆ',
  • ತಮಿಳಿನ ಚಿನ್ನ ತಂಬಿ ರೀಮೇಕ್ 'ರಾಮಾಚಾರಿ'
  • ತಮಿಳಿನ 'ಕಾದಲ್ ಕೋಟ್ಟೈ'ನ ರೀಮೇಕ್, 'ಯಾರೇ ನೀನು ಚೆಲುವೆ'
  • ತಮಿಳಿನ 'ಸ್ವಾತಿ ಮುತ್ಯಂ' ನ ರೀಮೇಕ್ 'ಸ್ವಾತಿ ಮುತ್ತು'

ಪ್ರಶಸ್ತಿಗಳು

ಬದಲಾಯಿಸಿ
  • ೨೦೧೧-ಕನ್ನಡ ಚಿತ್ರರಂಗದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯಪ್ರಶಸ್ತಿ. []
  • 'ಹಬ್ಬ' ಚಿತ್ರದ ಶ್ರೇಷ್ಠ ಚಿತ್ರಕತೆಗಾಗಿ ಪ್ರಶಸ್ತಿ.
  • ೨೦೧೨-ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರಶಸ್ತಿ.

ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿ ನರಳುತ್ತಿದ್ದ ೬೨ ವರ್ಷದ ರಾಜೇಂದ್ರ ಬಾಬು, ೨೦೧೩ರ ನವೆಂಬರ್ ತಿಂಗಳ ೩ನೆಯ ತಾರೀಖು ಭಾನುವಾರ ಬೆಳಿಗ್ಗೆ ಎಮ್. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.[] ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಗಳನ್ನು ಬೆಂಗಳೂರಿನ 'ಚಾಮರಾಜ ಪೇಟೆಯ ಚಿತಾಗಾರ'ದಲ್ಲಿ ನೆರವೇರಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. 'ದಿ ಹಿಂದೂ' ಪತ್ರಿಕೆ ಸುದ್ದಿ ,March 15, 2013
  2. ನಿರ್ದೇಶಕ ಡಿ. ರಾಜೇಂದ್ರ ಬಾಬು ವಿಧಿವಶ -ಫಿಲ್ಮಿ ಬೀಟ್ ಕನ್ನಡ

ಹೊರ ಸಂಪರ್ಕಗಳು

ಬದಲಾಯಿಸಿ
  • IMDBಯಲ್ಲಿ ರಾಜೇಂದ್ರಬಾಬು