ಡಿಜಿಟಲ್ ಕ್ಯಾಮೆರಾ
ಡಿಜಿಟಲ್ ಕ್ಯಾಮೆರಾ ಅಥವಾ ಡಿಜಿ ಕ್ಯಾಮ್ ಎಂದರೆ ವಿಡಿಯೋ ಅಥವಾ ಸ್ಥಿರಚಿತ್ರಅಥವಾ ಎರಡನ್ನೂ ವಿದ್ಯುನ್ಮಾನ ಚಿತ್ರಗ್ರಾಹಕದಿಂದ ತೆಗೆಯುವಂತಹ ಒಂದು ಕ್ಯಾಮರಾ.
ಬಹಳಷ್ಟು ಸ್ಥಿರ ಡಿಜಿಟಲ್ ಕ್ಯಾಮರಾಗಳು ಶಬ್ದ ಮತ್ತು ವಿಡಿಯೋ ಜೊತೆಗೆ ಸ್ಥಿರ ಚಿತ್ರಗಳನ್ನು ಕೂಡ ಸೆರೆ ಹಿಡಿಯಬಲ್ಲವು. ಪಾಶ್ಚಾತ್ಯ ಮಾರುಕಟ್ಟೆಯಲ್ಲಿ 35 ಎಂಎಂ ರೀಲುಗಳಿಗಿಂತ ಹೆಚ್ಚು ಈ ಡಿಜಿಟಲ್ ಕ್ಯಾಮೆರಾಗಳೇ ಹೆಚ್ಚು ಬಿಕರಿಯಾಗುತ್ತವೆ.[೧]
ಡಿಜಿಟಲ್ ಕ್ಯಾಮರಾಗಳು ರೀಲ್ ಕ್ಯಾಮರಾಗಳು ಮಾಡಲಾಗದ ಕೆಲಸಗಳನ್ನು ಮಾಡಬಲ್ಲವು. ಚಿತ್ರಗಳನ್ನು ತೆಗೆದ ತಕ್ಷಣ ಪರದೆಯ ಮೇಲೆ ಪ್ರದರ್ಶಿಸುವುದು, ಸಾವಿರಾರು ಚಿತ್ರಗಳನ್ನು ಒಂದು ಸಣ್ಣ ಮೆಮೊರಿ ಸಾಧನದಲ್ಲಿ ಸ್ಟೋರ್ ಮಾಡುವುದು. ಶಬ್ದಸಹಿತವಿಡಿಯೋವನ್ನು ತೆಗೆಯುವುದು ಮತ್ತು ಅನಗತ್ಯ ಚಿತ್ರಗಳನ್ನು ಅಳಿಸುವ ಮೂಲಕ ಸಂಗ್ರಹ ಜಾಗವನ್ನು ಖಾಲಿ ಮಾಡುವುದು. ಇವುಗಳಲ್ಲಿ ಕೆಲವು ಕ್ಯಾಮರಾಗಳು, ಚಿತ್ರಗಳನ್ನು ಕತ್ತರಿಸುವುದು ಮತ್ತು ಇತರೆ ಪ್ರಾಥಮಿಕ ಸಂಕಲನಗಳನ್ನು ಮಾಡಬಲ್ಲವು. ಮೂಲಭೂತವಾಗಿ ಇವು ರೀಲ್ ಕ್ಯಾಮರಾಗಳಂತೆಯೇ ಕೆಲಸ ಮಾಡುತ್ತವೆ. ಇದಕ್ಕಾಗಿ ಚಿತ್ರವನ್ನು ಸೆರೆಹಿಡಿಯುವ ಸಾಧನದ ಮೇಲೆ ಬೆಳಕು ಚೆಲ್ಲಲು ಒಂದು ಅಸ್ಥಿರ ವಪೆ(ವೇರಿಯೆಬಲ್ ಡಯಾಫ್ರಾಮ್)ಯನ್ನು ಬಳಸುತ್ತವೆ. ಸರಿಯಾದ ಪ್ರಮಾಣದ ಬೆಳಕನ್ನು ಸಾಧನದ ಒಳಗೆ ಬಿಡಲು ರೀಲಿನಂತೆ ಇಲ್ಲಿಯೂ ವಪೆ(ಡಯಾಫ್ರಾಮ್) ಮತ್ತು ಷಟರ್‌ಗಳ ಜೋಡಿಯನ್ನೇ ಬಳಸಲಾಗುತ್ತದೆ. ಚಿತ್ರವನ್ನು ಸೆರೆಹಿಡಿಯುವ ಸಾಧನವು ಇಲ್ಲಿ ರಾಸಾಯನಿಕವಾಗಿರದೆ ವಿದ್ಯುನ್ಮಾನದ್ದಾಗಿದೆ ಎಂಬುದೊಂದೇ ವ್ಯತ್ಯಾಸ. ಡಿಜಿಟಲ್ ಕ್ಯಾಮೆರಾಗಳನ್ನು ಪಿಡಿಎ ಮತ್ತು ಮೊಬೈಲ್ ಫೋನ್ (ಕ್ಯಾಮರಾ ಫೋನ್ ಎಂದು ಕರೆಯುತ್ತಾರೆ) ಮೊದಲ್ಗೊಂಡು ವಾಹನಗಳವರೆಗೆ ಹಲವಾರು ಸಾಧನಗಳಿಗೆ ಅಳವಡಿಸಲಾಗಿದೆ. ದಿ ಹಬಲ್ ಸ್ಪೇಸ್ ದೂರದರ್ಶಕ ಮತ್ತು ಇನ್ನಿತರೆ ಖಗೋಳ ಸಾಧನಗಳು ಮೂಲತಃ ವಿಶೇಷ ಡಿಜಿಟಲ್ ಕ್ಯಾಮರಾಗಳೇ ಆಗಿವೆ.
ಕಾಂಪ್ಯಾಕ್ಟ್ ಡಿಜಿಟಲ್ ಕ್ಯಾಮೆರಾಗಳು
ಬದಲಾಯಿಸಿಕಾಂಪ್ಯಾಕ್ಟ್ ಕ್ಯಾಮೆರಾಗಳನ್ನು ಚಿಕ್ಕದಾಗಿರಲು ಮತ್ತು ಪೋರ್ಟಬಲ್‌ಆಗಿರಲು ವಿನ್ಯಾಸಗೊಳಿಸಲಾಗಿದೆ. ವಿಶೇಷತಃ ಸಾಮಾನ್ಯ ಬಳಕೆಗೆ ಮತ್ತು ’ತತ್‌ಕ್ಷಣದ ಫೋಟೋ’ಗಳಿಗೆ ತಕ್ಕುದಾದ್ದರಿಂದ ’ಪಾಯಿಂಟ್ ಅಂಡ್ ಶೂಟ್ ಕ್ಯಾಮರಾ’ಎಂದೇ ಇವುಗಳನ್ನು ಕರೆಯುತ್ತಾರೆ. ಅತ್ಯಂತ ಚಿಕ್ಕದಾದ, ಅಂದರೆ ಸಾಮಾನ್ಯವಾಗಿ 20 ಎಂಎಂ ದಪ್ಪವಿರುವ ಕ್ಯಾಮರಾಗಳನ್ನು ಸಬ್‌ಕಾಂಪ್ಯಾಕ್ಟ್ ಅಥವಾ "ಅಲ್ಟ್ರಾ-ಕಾಂಪ್ಯಾಕ್ಟ್" ಎಂದೇ ವರ್ಣಿಸಲಾಗಿದೆ. ಕಾಂಪ್ಯಾಕ್ಟ್ ಕ್ಯಾಮೆರಾಗಳನ್ನು ಸಾಮಾನ್ಯವಾಗಿ, ಬಳಸಲು ಸುಲಭವಾಗಿರುವಂತೆ ಮತ್ತು ಸರಳವಾಗಿಯೂ, ಅಡಕವಾಗಿಯೂ ಇರುವಂತೆ, ಹೊಸ ಸುಧಾರಿತ ವೈಶಿಷ್ಟ್ಯಗಳನ್ನು ಕೈಬಿಟ್ಟು ವಿನ್ಯಾಸಗೊಳಿಸಲಾಗಿರುತ್ತದೆ; ಚಿತ್ರಗಳನ್ನು ಕೇವಲ ಲಾಸಿ ಕಂಪ್ರೆಶನ್(JPEG) ಮೂಲಕ ಸ್ಟೋರ್ ಮಾಡಬಹುದು. ಬಹಳಷ್ಟು ಕ್ಯಾಮರಾಗಳಲ್ಲಿ ಹತ್ತಿರದ ವಸ್ತುಗಳಿಗೆ ಸಾಕಾಗುವಷ್ಟು ಮಾತ್ರ ಬೆಳಕಿನ ಫ್ಲಾಶ್ ಇರುತ್ತದೆ. ಫೋಟೋವನ್ನು ಫ್ರೇಮ್ ಮಾಡಲು ’ನೇರ ಪೂರ್ವವೀಕ್ಷಣೆಯನ್ನು ಸಾಮಾನ್ಯವಾಗಿ ಯಾವಾಗಲೂ ಬಳಸಲಾಗುತ್ತದೆ. ಇವುಗಳಿಗೆ ಚಲನಚಿತ್ರ-ಸಾಮರ್ಥ್ಯ ಸೀಮಿತವಾಗಿರುತ್ತದೆ. ಕಾಂಪ್ಯಾಕ್ಟ್‌ಗಳು ಸಾಧಾರಣ ಮ್ಯಾಕ್ರೋ ಸಾಮಾರ್ಥ್ಯವುಳ್ಳವಾಗಿರುತ್ತದೆ, ಆದರೆ ಜೂಮ್ ಸಾಮರ್ಥ್ಯ ಇದ್ದಲ್ಲಿ, ಪರಿಮಿತಿಯು ಬ್ರಿಜ್ ಮತ್ತು ಡಿ ಎಸ್ ಎಲ್ ಆರ್ ಕ್ಯಾಮೆರಾಗಳಿಗಿಂತ ಕಡಿಮೆಯಿರುತ್ತದೆ. ಸಾಮಾನ್ಯವಾಗಿ, ಒಂದು ವೈದೃಶ್ಯ-ಶೋಧಕ, ಸ್ವಯಂಕೇಂದ್ರೀಕರಿಸುವ ವ್ಯವಸ್ಥೆಯು , 'ನೇರ ಪೂರ್ವವೀಕ್ಷಣೆ’ಯಿಂದ ಚಿತ್ರದ ಡಾಟಾ ಬಳಸಿಕೊಂಡು, ಮಸೂರವನ್ನು ಕೇಂದ್ರೀಕರಿಸುತ್ತವೆ.
ಸಾಮಾನ್ಯವಾಗಿ, ಈ ಕ್ಯಾಮೆರಾಗಳು ತಮ್ಮ ಮಸೂರಕ್ಕೆ ಅತ್ಯಂತ ಕಡಿಮೆ ಶಬ್ದ ಮಾಡುವ ಲೀಫ್ ಷಟರ್ಅನ್ನು ಅಳವಡಿಸಿಕೊಂಡಿರುತ್ತವೆ. ಈ ಕ್ಯಾಮೆರಾಗಳು ಕಡಿಮೆ ಬೆಲೆ ಮತ್ತು ಸಣ್ಣ ಗಾತ್ರವನ್ನು ಸಾಧಿಸುವುದಕ್ಕೋಸ್ಕರ, ಕ್ರಾಪ್ ಫ್ಯಾಕ್ಟರ್ (ಸುಮಾರು) ಆರಕ್ಕೆ ಸಂವಾದಿಯಾಗಿ, ಸಾಮಾನ್ಯವಾಗಿ 6 ಎಂ ಎಂ ಚಿತ್ರಗ್ರಾಹಕವನ್ನು ಬಳಸುತ್ತವೆ. ಇದರಿಂದಾಗಿ ಈ ಕ್ಯಾಮರಾಗಳಿಗೆ, ದುರ್ಬಲವಾದ ಕಡಿಮೆ-ಬೆಳಕಿನ ಕಾರ್ಯಕ್ಷಮತೆ, ಉನ್ನತವಾದ ದೃಶ್ಯಗಹನತೆ, ಸಾಮಾನ್ಯವಾಗಿ ಹತ್ತಿರಕ್ಕೆ ಕೇಂದ್ರಿಕರಿಸುವ ಸಾಮರ್ಥ್ಯ ಮತ್ತು ದೊಡ್ಡ ಮಸೂರಗಳನ್ನು ಬಳಸುವ ಕ್ಯಾಮರಾಗಳಿಗಿಂತ ಸಣ್ಣ ಅಂಗಗಳು ದೊರಕಿವೆ.
ಬ್ರಿಜ್ ಕ್ಯಾಮೆರಾಗಳು
ಬದಲಾಯಿಸಿಬ್ರಿಜ್ ಅಥವಾ ಎಸ್‌ಎಲ್‌ಆರ್-ಹೋಲಿಕೆಯ ಕ್ಯಾಮೆರಾಗಳು, ಭೌತಿಕ ದೃಷ್ಟಿಯಿಂದ ಮತ್ತು ಮಾನವ-ವಿಜ್ಞಾನದ ದೃಷ್ಟಿಯಿಂದ ಡಿಎಸ್‌ಎಲ್‌ಆರ್ಗಳನ್ನು ಹೋಲುವ ಮೇಲ್ವರ್ಗದ ಡಿಜಿಟಲ್ ಕ್ಯಾಮರಾಗಳು. ಡಿಎಸ್‌ಎಲ್‌ಆರ‍್‌ಗಳಲ್ಲಿರುವ ಹೊಸ ಸುಧಾರಿತ ವೈಶಿಷ್ಟ್ಯಗಳು ಇವುಗಳಲ್ಲಿರುತ್ತವೆ ಆದರೆ ಇಲ್ಲಿ ಕಾಂಪ್ಯಾಕ್ಟ್‌ಗಳಲ್ಲಿರುವ ಸ್ಥಿರ ಮಸೂರ ಮತ್ತು ಸಣ್ಣ ಗ್ರಾಹಕಗಳಿರುತ್ತವೆ. ಕಾಂಪ್ಯಾಕ್ಟ್‌ಗಳಂತೆಯೇ, ಚಿತ್ರವನ್ನು ಫ್ರೇಮ್ ಮಾಡಲು ಬಹುತೇಕ ನೇರ ಪೂರ್ವವೀಕ್ಷಣೆ ಗಳನ್ನು ಬಳಸುತ್ತವೆ. ವೈದೃಶ್ಯ-ಶೋಧಕ ತಂತ್ರವನ್ನೇ ಇಲ್ಲಿಯೂ ಬಳಸಿಕೊಂಡುಸ್ವಯಂಕೇಂದ್ರೀಕರಣವನ್ನು ಸಾಧಿಸಲಾಗುತ್ತದೆ. ಆದರೆ, ಹಲವು ಬ್ರಿಜ್ ಕ್ಯಾಮೆರಾಗಳು ಹೆಚ್ಚಿನ ಹಿಡಿತ ಸಾಧಿಸುವುದಕ್ಕೋಸ್ಕರ ಮಾನವ-ಚಾಲಿತ ಕೇಂದ್ರಿಕರಣವನ್ನೂ ಹೊಂದಿರುತ್ತವೆ.
ದೊಡ್ಡ ಗಾತ್ರ ಮತ್ತು ಸಣ್ಣ ಗ್ರಾಹಕ, ಇವುಗಳ ಜೋಡಿಯಿಂದಾಗಿ, ಈ ಕ್ಯಾಮರಾಗಳು ಅಧಿಕ ಜೂಮ್ ಮತ್ತು ವೇಗದ ಅಪರ್ಚರ್ ಅನ್ನು ಹೊಂದಿರುತ್ತವೆ. ಇದರಿಂದಾಗಿ, ಮಸೂರಗಳನ್ನು ಬದಲಿಸಲಾಗದು ಎನ್ನುವ ತೊಂದರೆಯನ್ನು ಭಾಗಶಃ ಕಡಿಮೆಮಾಡಿದಂತಾಗುತ್ತದೆ. ಇದಕ್ಕೆ ಒಂದು ಸಾಮಾನ್ಯವಾದ ಉದಾಹರಣೆಯೆಂದರೆ ೩೫-೪೨೦ ಎಂಎಂ ಸಮಾನ ಮಸೂರ ಮತ್ತು 1:2.8-3.7. ಅಪರ್ಚರ್ ಇರುವ ಪ್ಯಾನಾಸೋನಿಕ್ ಎಫ್‌ಝೆಡ್50 ಕ್ಯಾಮರಾ. ಇಂತಹ ಮಹತ್ತ್ವಾಕಾಂಕ್ಷೆಯ ವೈಶಿಷ್ಟ್ಯಗಳನ್ನುಳ್ಳ ಮಸೂರವು ದಾರಿತಪ್ಪುವುದನ್ನು ಕಡಿಮೆ ಮಾಡವುದಕ್ಕಾಗಿ ಅನೇಕ ಸಂಕೀರ್ಣ ವಿನ್ಯಾಸಗಳನ್ನು ಕೊಡಲಾಗಿದೆ. ಒಂದಕ್ಕಿಂತ ಹೆಚ್ಚು ಅಗೋಳ ವಸ್ತುಗಳನ್ನು ಮತ್ತು ಅನಿಯಮಿತ-ವಿಕೀರ್ಣದ ಗಾಜನ್ನು ಬಳಸಲಾಗಿರುತ್ತದೆ. ಇವುಗಳಲ್ಲಿನ ಸಣ್ಣ ಮಸೂರಗಳು ಸೂಕ್ಷ್ಮಗ್ರಾಹಿಯಾಗಿರುವುದಿಲ್ಲ, ಅದನ್ನು ಸರಿದೂಗಿಸಲು ಬಹುತೇಕ ಕ್ಯಾಮರಾಗಳು ಒಂದು ರೀತಿಯ ಚಿತ್ರ-ಸ್ಥಿರೀಕರಣವ್ಯವಸ್ಥೆಯನ್ನು ಬಳಸುತ್ತವೆ. ಇದು ಒಂದು ರೀತಿಯಲ್ಲಿ ಕೈಬಳಕೆಯ ’ಗ್ರಹಿಕೆ’ಯನ್ನು ಹೆಚ್ಚು ಕಾಲಕ್ಕೆ ವಿಸ್ತರಿಸುವ ವ್ಯವಸ್ಥೆ.
ಈ ಕ್ಯಾಮೆರಾಗಳು ಮೇಲ್ನೋಟಕ್ಕೆ ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಹೋಲುವುದರಿಂದ, ಕೆಲವು ಬಾರಿ ಅವೇ ಎಂದು ಭ್ರಮಿಸಲಾಗುತ್ತದೆ ಮತ್ತು ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮರಾಗಳೆಂದೇ ಮಾರಾಟ ಮಾಡಲಾಗುತ್ತದೆ. ಬ್ರಿಜ್ ಕ್ಯಾಮೆರಾಗಳಲ್ಲಿ ಡಿಎಸ್‌ಎಲ್‌ಆರ್‌ಗಳಲ್ಲಿರುವ, ’ಪ್ರತಿಫಲಿತ ನೋಟ’ದ ವ್ಯವಸ್ಥೆ ಇರುವುದಿಲ್ಲ. ಈವರೆಗೆ ಇವುಗಳಿಗೆ ಅದಲುಬದಲು ಮಾಡಲಾಗದ ಸ್ಥಿರ-ಮಸೂರಗಳನ್ನೇ ಅಳವಡಿಸಲಾಗಿದೆ (ಆದರೂ ಕೆಲವು ಕ್ಯಾಮರಾಗಳಲ್ಲಿ ವಿಸ್ತಾರ-ಕೋನ ಅಥವಾ ಟೆಲಿಪೋಟೋ-ಕನ್ವರ್ಟರ್‌ಗಳನ್ನು ಮಸೂರಕ್ಕೆ ಜೋಡಿಸಬಹುದು). ಇವು ಸಾಮಾನ್ಯವಾಗಿ ಶಬ್ದಸಹಿತ ವಿಡಿಯೋವನ್ನು ತೆಗೆಯಬಲ್ಲವು. ದೃಶ್ಯವನ್ನು ಲಿಕ್ವಿಡ್-ಕ್ರಿಸ್ಟಲ್ ಡಿಸ್‍ಪ್ಲೇ ಮೂಲಕ ಅಥವಾ ವಿದ್ಯುನ್ಮಾನ ವ್ಯೂಫೈಂಡರ್ದ ಮೂಲಕ (EVF) ಜೋಡಿಸಬಹುದು. ಇವುಗಳು ಕೆಲಸ ಮಾಡುವುದು ನಿಜವಾದ ಡಿಜಿಟಲ್ ಎಸ್‌ಎಲ್‌ಆರ್‌ಗಳಿಗಿಂತ ನಿಧಾನ, ಆದರೆ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ನೀಡಬಲ್ಲವು (ಸರಿಯಾದ ಬೆಳಕು ಇದ್ದಲ್ಲಿ). ಇವು ಡಿಎಸ್‌ಎಲ್‌ಆರ್‌ಗಳಿಗಿಂತ ಕಾಂಪಾಕ್ಟ್‌ಆಗಿಯೂ ಲಘುವಾಗಿಯೂ ಇರುತ್ತವೆ. ಇಲ್ಲಿಯ ಮೇಲ್ವರ್ಗದ ಕ್ಯಾಮೆರಾಗಳನ್ನು ಡಿಎಸ್‍ಎಲ್‍ಆರ‍್ನ ಕೆಳವರ್ಗ ಮತ್ತು ಮಧ್ಯಮ ವರ್ಗದ ಕ್ಯಾಮರಾಗಳಿಗೆ ಹೋಲಿಸಬಹುದು. ಇಲ್ಲಿಯ ಬಹುತೇಕ ಕ್ಯಾಮೆರಾಗಳು ಚಿತ್ರಗಳನ್ನು ಅಪಕ್ವ ಸ್ಥಿತಿಯಲ್ಲಿ, ಅಥವಾ ಪರಿಷ್ಕೃತ ಮತ್ತು JPEGಸ್ಥಿತಿಯಲ್ಲಿ, ಅಡಕವಾಗಿ ಅಥವಾ ಎರಡು ರೀತಿಯಲ್ಲೂ ಸ್ಟೋರ್ ಮಾಡಬಲ್ಲುದು. ಬಹುತೇಕ ಕ್ಯಾಮರಾಗಳಲ್ಲಿ ಡಿಎಸ್‌ಎಲ್‌ಆರ್‌ಗಳಲ್ಲಿ ಇರುವಂತೆಯೇ ಫ್ಲಾಶ್ ಇರುತ್ತದೆ.
ಡಿಎಸ್‌ಎಲ್‌ಆರ್ (ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್) ಕ್ಯಾಮೆರಾಗಳು
ಬದಲಾಯಿಸಿಡಿಜಿಟಲ್ ಸಿಂಗಲ್ ಲೆನ್ಸ್ ರೆಫ್ಲೆಕ್ಸ್ ಕ್ಯಾಮೆರಾಗಳು (DSLR) ರೀಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾವನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾದ ಒಂದು ಬಗೆಯ ಡಿಜಿಟಲ್ ಕ್ಯಾಮೆರಾ. ಚಿತ್ರಗಳನ್ನು ನೋಡಲು ವಿಶೇಷವಾದ ವ್ಯವಸ್ಥೆಯಿರುವುದರಿಂದ ಇದಕ್ಕೆ ಆ ಹೆಸರು ಬಂದಿದೆ. ಕನ್ನಡಿಯು ಮಸೂರದಿಂದ ’ಆಪ್ಟಿಕಲ್ ವ್ಯೂ ಫೈಂಡರ್’ ಮೂಲಕ ಬೆಳಕನ್ನು ಪ್ರತಿಫಲಿಸುತ್ತದೆ. ಕನ್ನಡಿಯು ಪಕ್ಕಕ್ಕೆ ಸರಿಯುವುದರಿಂದ ಬೆಳಕು ಇಮೆಜರ್ ಮೇಲೆ ಬೀಳುತ್ತದೆ, ಆಗ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಫ್ರೇಮ್ ಆಗುವಾಗ ಯಾವುದೇ ಬೆಳಕು ಇಮೆಜರ್ ಮೇಲೆ ಬೀಳುವುದಿಲ್ಲ, ಆದ್ದರಿಂದ ವಿಶೇಷ ಗ್ರಾಹಕಗಳನ್ನು ಬಳಸಿಕೊಂಡು ಮಿರರ್‌ಬಾಕ್ಸ್‌ನಲ್ಲಿಯೇ ಸ್ವಯಂ-ಕೇಂದ್ರೀಕರಣವನ್ನು ಸಾಧಿಸಬಹುದು. ೨೧ನೇ ಶತಮಾನದ ಬಹುತೇಕ ಡಿಎಸ್‌ಎಲ್‌ಆರ್‌ಗಳು ಲೈವ್ ವ್ಯೂ ವ್ಯವಸ್ಥೆಯನ್ನು ಒಳಗೊಂಡಿದೆ. ಇವು ಕಾಂಪ್ಪಾಕ್ಟ್ ಕ್ಯಾಮೆರಾದ ಲೈವ್ ಪೂರ್ವವೀಕ್ಷಣೆವ್ ಗುಣಮಟ್ಟಕ್ಕೆ ಪ್ರತಿಸ್ಫರ್ಧಿಯಾಗಿ ನಿಲ್ಲುತ್ತದೆ. ಈ ಕ್ಯಾಮೆರಾಗಳಲ್ಲಿ ಬೇರೆ ವಿಧಗಳಿಗಿಂತ ದೊಡ್ಡದಾದ ಗ್ರಾಹಕಗಳು ಇರುತ್ತವೆ. ಸಾಮಾನ್ಯವಾಗಿ 18 ಎಂಎಂ ಇಂದ 36 ಎಂಎಂ (ಕ್ರಾಪ್ ಅಂಶ 2, 1.6, or 1)ವನ್ನು ಹೊಂದಿವೆ. ಇದರಿಂದಾಗಿ ಇವುಗಳಿಗೆ ಕಡಿಮೆ ಬೆಳಕಿನಲ್ಲಿಯೂ ಉತ್ಕೃಷ್ಟ ಮಟ್ಟದ ಕಾರ್ಯಕ್ಷಮತೆ, ಒಂದು ನಿರ್ದಿಷ್ಟ ಅಪರ್ಚರ್‌ಗೆ ಕಡಿಮೆ ದೃಶ್ಯಗಹನತೆ, ಮತ್ತು ದೊಡ್ಡ ಗಾತ್ರವು ಸಿಕ್ಕಿದೆ.
ಈ ಕ್ಯಾಮೆರಾಗಳು ಬದಲಿಸಬಹುದಾದ ಮಸೂರಗಳನ್ನು ಬಳಸುತ್ತವೆ; ಪ್ರತಿಯೊಬ್ಬ ಪ್ರಮುಖ ಡಿಎಸ್‌ಎಲ್‌ಆರ್‌ಗಳ ತಯಾರಕರೂ, ತಮ್ಮ ಕ್ಯಾಮೆರಾಗಳಲ್ಲಿ ಬಳಸುವುದಕ್ಕಾಗೆಂದೇ, ಹಲವು ಮಸೂರಗಳ ಪಟ್ಟಿಯನ್ನು ಮಾರಾಟಮಾಡುತ್ತಾರೆ. ಇದು, ಬಳಕೆದಾರನು ತನ್ನಲ್ಲಿರುವ ಅನ್ವಯಿಕೆಗೆ(ಅಪ್ಲಿಕೇಷನ್) ತಕ್ಕುದಾದ ಮಸೂರವನ್ನು ಬಳಸಲು ಅವಕಾಶ ಕೊಡುತ್ತದೆ: ವಿಸ್ತಾರ-ಕೋನ, ಟೆಲಿಫೋಟೋ, ಲೋಲೈಟ್ ಇತ್ಯಾದಿ. ಆದ್ದರಿಂದ ಪ್ರತಿಯೊಂದು ಮಸೂರಕ್ಕೂ ಒಂದೊಂದು ಷಟರ್ ಬೇಕಾಗುವುದಿಲ್ಲ. ಡಿಎಸ್‌ಎಲ್‌ಆರ್‌ಗಳು ಚಿತ್ರದ ಮುಂದಕ್ಕೆ ಆದರೆ ಕನ್ನಡಿಯ ಹಿಂದಕ್ಕೆ ಫೋಕಲ್ ಪ್ಲೇನ್ ಷಟರ್‌ಅನ್ನು ಹೊಂದಿರುತ್ತವೆ ಚಿತ್ರಗಳನ್ನು ಕ್ಲಿಕ್ಕಿಸುವಾಗ ಕನ್ನಡಿಯು ಪಕ್ಕಕ್ಕೆ ಸರಿಯುವುದರಿಂದ ವಿಶಿಷ್ಟವಾದ ’ಕ್ಲ್ಯಾಕ್’ ಎನ್ನುವ ಶಬ್ದ ಬರುತ್ತದೆ.
ಎಲೆಕ್ಟ್ರಾನಿಕ್ ವ್ಯೂಫೈಂಡರ್, ಬದಲಾಯಿಸಬಹುದಾದ ಲೆನ್ಸ್ ಕ್ಯಾಮೆರಾಗಳು
ಬದಲಾಯಿಸಿ2008ರ ಅಂತ್ಯದ ವೇಳೆಗೆ ಹೊಸ ಮಾದರಿಯ ಕ್ಯಾಮೆರಾಗಳು ಬಂದವು. ಡಿಎಸ್‌ಎಲ್‌ಆರ್‌ಗಳ ದೊಡ್ಡ ಸೆನ್ಸರ್ ಹಾಗೂ ಬದಲಿಸಬಹುದಾದ ಮಸೂರಗಳ ಜೊತೆಗೆ ಕಾಂಪ್ಯಾಕ್ಟ್ ಕ್ಯಾಮೆರಾಗಳಲ್ಲಿರುವ ಎಲೆಕ್ಟ್ರಾನಿಕ್ ವ್ಯೂ ಫೈಂಡರ್ ಅಥವಾ ಎಲ್ ಸಿಡಿಯಿಂದ ಲೈವ್ ಪೂರ್ವವೀಕ್ಷಣೆ ನೋಡುವ ವ್ಯವಸ್ಥೆಯೂ ಇದರಲ್ಲಿತ್ತು. ಇದರಲ್ಲಿ ಮಿರರ್ ಬಾಕ್ಸ್‌ಅನ್ನು ತೆಗೆದಿರುವ ಕಾರಣ ಇದು ಬಹಳ ಸರಳ ಮತ್ತು ಕಾಂಪ್ಯಾಕ್ಟ್ ಆಗಿದೆ. ಆದ್ದರಿಂದ ಸಾಮಾನ್ಯವಾಗಿ ಡಿಎಸ್‌ಎಲ್‌ಆರ್‌ಗಳ ಅಥವಾ ಕಾಂಪ್ಯಾಕ್ಟ್‌ಗಳ ಮಾನವ-ವಿಜ್ಞಾನ ಮತ್ತು ನಿರ್ವಹಣೆಯನ್ನು ಮೀರಿಸುತ್ತದೆ. 2009ರ ವೇಳೆಗೆ ಬಂದ ಇಂತಹ ಒಂದೇ ಒಂದು ವ್ಯವಸ್ಥೆ ಎಂದರೆ ಫೋರ್ ಥರ್ಡ್ಸ್‌ನಿಂದ ಬಿಡಿ ಅಂಗಗಳನ್ನು ಪಡೆದುಕೊಂಡ ಮೈಕ್ರೋ ಫೋರ್ ಥರ್ಡ್ಸ್ ಎಂಬ ಡಿಎಸ್‌ಎಲ್‌ಆರ್ ವ್ಯವಸ್ಥೆ.
ಡಿಜಿಟಲ್ ರೇಂಜ್‌ಫೈಂಡರ್ಸ್
ಬದಲಾಯಿಸಿರೇಂಜ್ಫೈಂಡರ್ ಎನ್ನುವುದು ಒಂದು ಕಾಲದಲ್ಲಿ ರೀಲ್ ಕ್ಯಾಮರಾಗಳಲ್ಲಿ ಬಹಳವಾಗಿ ಉಪಯೋಗಿಸುತ್ತಿದ್ದ, ಒಂದು ವಸ್ತುವಿನ ದೂರವನ್ನು ಅಳತೆ ಮಾಡುವ ವ್ಯವಸ್ಥೆ. ಬಹುತೇಕ ಡಿಜಿಟಲ್ ಕ್ಯಾಮೆರಾಗಳು ವಸ್ತುವಿನ ದೂರವನ್ನು ಧ್ವನಿ-ವಿಜ್ಞಾನ ಅಥವಾ ಎಲೆಕ್ಟ್ರಾನಿಕ್ ತಂತ್ರದಿಂದ ಸ್ವಯಂಚಾಲಿತವಾಗಿ ಅಳೆಯಬಲ್ಲ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಅವುಗಳಲ್ಲಿ ರೇಂಜ್‌ಫೈಂಡರ್ ಇರುತ್ತದೆಂದು ಹೇಳಲಾಗುವುದಿಲ್ಲ. ರೇಂಜ್‌ಫೈಂಡರ್ ಎನ್ನುವ ಶಬ್ದವನ್ನೇ ಕೆಲವೊಮ್ಮೆ ’ರೇಂಜ್‌ಫೈಂಡರ್ ಕ್ಯಾಮೆರಾ’ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ ಅಂದರೆ ರೇಂಜ್‌ಫೈಂಡರ್ ವ್ಯವಸ್ಥೆಯುಳ್ಳ ರೀಲ್ ಕ್ಯಾಮರಾ. ಹಾಗಾಗಿ ಈ ಕ್ಯಾಮರಾಗಳು ಎಸ್‌ಎಲ್‌ಆರ್ ಅಥವಾ ದೂರವನ್ನು ಯಾವ ರೀತಿಯಲ್ಲೂ ಅಳೆಯಲಾಗದ ಸಾಮಾನ್ಯ ಕ್ಯಾಮೆರಾಗಳಿಗಿಂತ ವಿಶಿಷ್ಟವೆನಿಸಿಕೊಳ್ಳುತ್ತದೆ.
ಲೈನ್-ಸ್ಕ್ಯಾನ್ ಕ್ಯಾಮೆರಾ ಸಿಸ್ಟಮ್ಸ್
ಬದಲಾಯಿಸಿಲೈನ್ ಸ್ಕ್ಯಾನ್ ಕ್ಯಾಮೆರಾ ಎನ್ನುವುದು ಲೈನ್ ಸ್ಕ್ಯಾನ್, ಇಮೇಜ್ ಸೆನ್ಸರ್ ಚಿಪ್ ಹಾಗೂ ಕೇಂದ್ರೀಕರಣ ವ್ಯವಸ್ಥೆ ಇರುವ ಒಂದು ಕ್ಯಾಮರಾ. ಲೈನ್ ಸ್ಕ್ಯಾನ್ ಕ್ಯಾಮೆರಾಗಳು ಬಹುತೇಕ ಕೈಗಾರಿಕಾ ಕ್ಷೇತ್ರದಲ್ಲಿ ಮಾತ್ರ ಬಳಕೆಯಾಗುತ್ತವೆ. ಕೈಗಾರಿಕೆಗಳಿಗೆ ಸಾಗಣೆಯಾಗುವ ವಸ್ತುಗಳ ಚಿತ್ರವನ್ನು ಇವು ತೆಗೆಯುತ್ತವೆ. ವಿಡಿಯೋ ಕ್ಯಾಮರಾಗಳಂತಲ್ಲದೇ, ಲೈನ್-ಸ್ಕ್ಯಾನ್ ಕ್ಯಾಮೆರಾಗಳು ಪಿಕ್ಸೆಲ್ ಗ್ರಾಹಕಗಳ, ಒಂದು ವ್ಯೂಹವನ್ನು ಮಾತ್ರ ಬಳಸುತ್ತವೆ. ಇವು ಮ್ಯಾಟ್ರಿಕ್ಸ್‌ಗಳನ್ನು ಬಳಸುವುದಿಲ್ಲ. ಲೈನ್ ಸ್ಕ್ಯಾನ್ ಕ್ಯಾಮೆರಾದಿಂದ ಹೊರಹೊಮ್ಮುವ ಡಾಟಾಗಳಿಗೆ ಒಂದು ಕಂಪನಾಂಕವಿದೆ. ಇದು ಒಂದು ಸರಣಿಯನ್ನು ಸ್ಕ್ಯಾನ್ ಮಾಡುತ್ತದೆ, ಕಾಯುತ್ತದೆ ಮತ್ತು ಪುನರಾವರ್ತಿಸುತ್ತದೆ. ಲೈನ್-ಸ್ಕ್ಯಾನ್ ಕ್ಯಾಮೆರಾಗಳಲ್ಲಿನ ಡಾಟಾವನ್ನು, ಏಕಮುಖ ಸರಣಿ ಡಾಟಾವನ್ನು ಪಡೆಯಲು ಮತ್ತು ದ್ವಿಮುಖ ಸರಣಿ ಡಾಟಾವನ್ನು ಮಾಡಲು, ಕಂಪ್ಯೂಟರ್ ಮುಖೇನ ಸಂಸ್ಕರಿಸಲಾಗುತ್ತದೆ. ಹಾಗೆ ಪಡೆಯಲಾದ ದ್ವಿ-ಮುಖ ಚಿತ್ರಗಳ ಡಾಟಾವನ್ನು ಕೈಗಾರಿಕೆಯ ಉದ್ದೇಶಗಳಿಗಾಗಿ ಪರಿಷ್ಕರಿಸಲಾಗುತ್ತದೆ.
ಲೈನ್-ಸ್ಕ್ಯಾನ್ ಕ್ಯಾಮೆರಾದ ತಂತ್ರಜ್ಞಾನವು ಡಾಟಾವನ್ನು ಅತಿವೇಗವಾಗಿ ದಾಖಲಿಸಿಕೊಳ್ಳಲು ಹಾಗೂ ಚಿತ್ರದ ಸ್ಪಷ್ಟತೆಯನ್ನು ಉಳಿಸಿಟ್ಟುಕೊಳ್ಳಲು ಶಕ್ತವಾಗಿದೆ. ಸಹಜವಾಗಿ ಈ ಪರಿಸ್ಥಿತಿಯಲ್ಲಿ ಪಡೆಯುವ ಡಾಟಾ, ಕ್ಷಣಾರ್ಧದಲ್ಲಿ 100 ಎಂಬಿಯನ್ನೂ ದಾಟಿಬಿಡುತ್ತದೆ. ಹಾಗಾಗಿ, ಲೈನ್-ಸ್ಕ್ಯಾನ್ ಕ್ಯಾಮೆರಾ ಆಧಾರಿತ ಸಂಯೋಜಿತ ವ್ಯವಸ್ಥೆಗಳನ್ನು ಕ್ಯಾಮರಾದ ಉತ್ಪತ್ತಿಯನ್ನು ಮಾರ್ಪಾಡು ಮಾಡುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದರಿಂದ ಕ್ಯಾಮರಾದ ವ್ಯವಸ್ಥೆಯ ಉದ್ದೇಶಗಳನ್ನು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ಪೂರೈಸುವುದು ಸಾಧ್ಯ. ಸಾಗಣಿಕೆಯನ್ನು ನಿರ್ವಹಿಸುವ ಕೈಗಾರಿಕೆಗಳಿಗಾಗಿ ವಿನ್ಯಾಸಗೊಳಿಸಿರುವ ಲೈನ್-ಸ್ಕ್ಯಾನ್ ಕ್ಯಾಮೆರಾಗಳು ಮಾರ್ಪಾಟಾಗುವ-ಕೇಂದ್ರೀಕರಣ ವ್ಯವಸ್ಥೆಯನ್ನು ಸಂಯೋಜಿತಗೊಳಿಸುವ ಮೂಲಕ ಯಾವುದೇ ಚತುಷ್ಕೋನದ ಆರೂ ಮುಖಗಳನ್ನು, ಯಾವುದೇ ಕೋನ ಅಥವಾ ಗಾತ್ರವಿರಲಿ, ಕೇಂದ್ರೀಕರಿಸುತ್ತದೆ. ಹೀಗೆ ದ್ವಿಮುಖದಲ್ಲಿ ಲಭ್ಯವಾಗುವ ಚಿತ್ರಗಳು ಏಕಮುಖ ಮತ್ತು ದ್ವಿಮುಖ ಬಾರ್‌ಕೋಡ್‌ಗಳನ್ನು, ವಿಳಾಸದ ಮಾಹಿತಿಯನ್ನು ಮತ್ತು ಚಿತ್ರ-ಪರಿಷ್ಕರಣ ತಂತ್ರವನ್ನು ಬಳಸಿ ಪರಿಷ್ಕರಿಸಬಹುದಾದ ಇನ್ಯಾವುದೇ ಬಗೆಯ ಮಾಹಿತಿಯನ್ನೂ ಒಳಗೊಂಡಿರುತ್ತದೆ. ಆದರೆ ಈ ಪಟ್ಟಿಯು ಇಷ್ಟಕ್ಕೆ ಸೀಮಿತವಲ್ಲ. ಇವು ದ್ವಿಮುಖ ಚಿತ್ರಗಳಾದ್ದರಿಂದ ಸುಲಭವಾಗಿ ಓದಬಹುದು ಮತ್ತು ಅವುಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದು. ಅತ್ಯಾಧುನಿಕ ಸಂಯೋಜಿತ ವ್ಯವಸ್ಥೆಯು ವಿಡಿಯೋ ಕೋಡಿಂಗ್ ಹಾಗೂ ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಷನ್ (ಓಸಿಆರ್)ಅನ್ನು ಒಳಗೊಂಡಿರುತ್ತದೆ.
ಏಕೀಕರಣ
ಬದಲಾಯಿಸಿಬಹುತೇಕ ಉಪಕರಣಗಳು ಡಿಜಿಟಲ್ ಕ್ಯಾಮೆರಾಗಳನ್ನು ಒಳಗೊಂಡಿರುತ್ತವೆ ಅಥವಾ ಸಂಯೋಜಿತಗೊಂಡಿರುತ್ತವೆ. ಉದಾಹರಣೆಗೆ, ಮೊಬೈಲ್ ಫೋನ್‌ಗಳು ಸಾಮಾನ್ಯವಾಗಿ ಡಿಜಿಟೆಲ್ ಕ್ಯಾಮೆರಾ ಹೊಂದಿರುತ್ತವೆ; ಅವನ್ನು ಕ್ಯಾಮೆರಾ ಫೋನ್‌ಗಳೆಂದು ಎಂದು ಕರೆಯಲಾಗುತ್ತದೆ. ಪಿಡಿಎ,ಲ್ಯಾಪ್ ಟಾಪ್,ಹಾಗೂಬ್ಲ್ಯಾಕ್ ಬೆರ್ರಿ ಮುಂತಾದ ಸಣ್ಣ ಎಲೆಕ್ಟ್ರಾನಿಕ್ ಉಪಕರಣಗಳು (ವಿಶೇಷವಾಗಿ ಸಂವಹನಕ್ಕಾಗಿ ಬಳಕೆಯಾಗುವಂತವು) ಹಾಗೆಯೇ ಕ್ಯಾಮ್‌ಕೋಡರ್ ಗಳು ಸಾಮಾನ್ಯವಾಗಿ ಡಿಜಿಟಲ್ ಕ್ಯಾಮೆರಾ ಹೊಂದಿರುತ್ತವೆ. ಕಡಿಮೆ ಸ್ಟೋರೇಜ್ ಸಾಮರ್ಥ್ಯದಿಂದ ಹಾಗೂ ಗುಣಮಟ್ಟಕ್ಕಿಂತ ಅನುಕೂಲಕ್ಕೆ ಹೆಚ್ಚು ಒತ್ತುಕೊಡುವುದರಿಂದ, ಬಹುತೇಕ ಸಂಯೋಜಿತ ಕ್ಯಾಮರಾಗಳು ಲಾಸಿಯಲ್ಲಿ ಆದರೆ ಜೆಪಿಇಜಿ ರೂಪದಲ್ಲಿ ಚಿತ್ರಗಳನ್ನು ಸ್ಟೋರ್ ಮಾಡುತ್ತವೆ.
ಡಿಜಿಟೆಲ್ ಕ್ಯಾಮೆರಾಗಳನ್ನು ಒಳಗೊಂಡ ಮೊಬೈಲ್ ಫೋನುಗಳನ್ನು 2001ರಲ್ಲಿ ಜಪಾನಿನಲ್ಲಿ ಜೆ-ಫೋನ್ ಕಂಪನಿಯು ಬಿಡುಗಡೆ ಮಾಡಿತು. 2003ರಲ್ಲಿ ಡಿಜಿಟೆಲ್ ಕ್ಯಾಮೆರಾಗಳಿಗಿಂತ ಹೆಚ್ಚು ಕ್ಯಾಮೆರಾ ಫೋನ್‌ಗಳೇ ಮಾರಾಟವಾದವು. 2006ರಲ್ಲಿ ರೀಲ್ ಕ್ಯಾಮರಾ ಮತ್ತು ಡಿಜಿಟಲ್ ಕ್ಯಾಮರಾ ಎರಡನ್ನೂ ಕ್ಯಾಮರಾ ಫೋನ್‌ಗಳು ಹಿಂದಿಕ್ಕಿದವು. ಕ್ಯಾಮೆರಾ ಫೋನ್‌ಗಳು ಕೇವಲ 5 ವರ್ಷದಲ್ಲಿ 1 ಬಿಲಿಯನ್ ಸಂಖ್ಯೆಯಲ್ಲಿ ಮಾರಾಟವಾದವು. 2007ರ ಹೊತ್ತಿಗೆ ಅರ್ಧಕಿಂತ ಹೆಚ್ಚು ಮೊಬೈಲ್ ಫೋನುಗಳು ಕ್ಯಾಮೆರಾ ಫೋನುಗಳೇ ಆಗಿಬಿಟ್ಟಿದ್ದವು.
ಡಿಜಿಟಲ್ ಕ್ಯಾಮೆರಾಗಳ ಶ್ರೇಣಿಯಲ್ಲಿ ಸಂಯೋಜಿತ ಕ್ಯಾಮೆರಾಗಳು, ರೆಸಲ್ಯೂಷನ್, ಆಪ್ಟಿಕಲ್ ಗುಣಮಟ್ಟ, ಪರಿಕರಗಳನ್ನು ಉಪಯೋಗಿಸುವ ಸಾಮರ್ಥ್ಯ ಮುಂತಾದ ತಾಂತ್ರಿಕ ವಿಷಯಗಳ ದೃಷ್ಟಿಯಿಂದ, ಅತ್ಯಂತ ಕಡೆಯ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಕ್ಷಿಪ್ರ ಬೆಳವಣಿಗೆಯಿಂದ ಡಿಜಿಟೆಲ್ ಕ್ಯಾಮೆರಾ ಹಾಗೂ ಕ್ಯಾಮೆರಾ ಫೋನ್‌ಗಳ ನಡುವಣ ಅಂತರ ಕೊನೆಯಾಗುತ್ತಿದೆ ಮತ್ತು ಮೇಲ್ವರ್ಗದ ಕ್ಯಾಮೆರಾ ಫೋನುಗಳು ಅದೇ ಪೀಳಿಗೆಯ ಕೆಳವರ್ಗದ ಡಿಜಿಟಲ್ ಕ್ಯಾಮರಾಗಳೊಂದಿಗೆ ಸ್ಪರ್ಧಿಸುತ್ತಿವೆ.
ರೀಲ್ ಕ್ಯಾಮರಾದಿಂದ ಡಿಜಿಟಲ್ ಕ್ಯಾಮೆರಾಗಳಾಗಿ ರೂಪಾಂತರ
ಬದಲಾಯಿಸಿಯಾವಾಗ ಡಿಜಿಟಲ್ ಕ್ಯಾಮೆರಾಗಳ ಬಳಕೆ ಸಾಮಾನ್ಯವಾಯಿತೋ ಆಗ ಫೋಟೋಗ್ರಾಫರ್ಗಳಲ್ಲಿ ಸಾಮಾನ್ಯವಾಗಿ ಉದ್ಭವವಾದ ಪ್ರಶ್ನೆಯೇ ಫಿಲ್ಮ್ ಕ್ಯಾಮೆರಾಗಳನ್ನು ಡಿಜಿಟಲ್ ಕ್ಯಾಮೆರಾಗಳನ್ನಾಗಿ ಪರಿವರ್ತಿಸಲು ಸಾಧ್ಯವೇ? ಎನ್ನುವುದು. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ ಎರಡೂ ಆಗಿತ್ತು. ಬಹುತೇಕ 35 ಎಂಎಂ ರೀಲ್ ಕ್ಯಾಮೆರಾಗಳ ವಿಷಯದಲ್ಲಿ ಇದಕ್ಕೆ ಉತ್ತರ ಇಲ್ಲ ಎಂದು. ಇವಕ್ಕೆ ಮತ್ತೆ ಮೊದಲಿಂದ ಮಾಡಬೇಕಾದ ಕೆಲಸ ಹಾಗೂ ತಗುಲುವ ಹಣ ಅತಿ ಹೆಚ್ಚು. ವಿಶೇಷವಾಗಿ ಇದರ ಮಸೂರಗಳು ಮತ್ತು ಆ ಮೂಲಕ ಕ್ಯಾಮೆರಾಗಳು ತಮ್ಮದೇ ರೀತಿಯಲ್ಲಿ ರೂಪುಗೊಳ್ಳುತ್ತಿತ್ತು. ಇವನ್ನು ಡಿಜಿಟಲ್‌ಗೆ ರೂಪಾಂತರಿಸಬೇಕಾದರೆ, ವಿದ್ಯುನ್ಮಾನ ಸಲಕರಣೆಗಳಿಗೆ ಜಾಗವನ್ನೂ, ಪೂರ್ವವೀಕ್ಷಣೆಗೆ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇಯನ್ನೂ ಅಳವಡಿಸಲು, ಕ್ಯಾಮರಾದ ಹಿಂಭಾಗವನ್ನು ಪೂರ್ತಿಯಾಗಿ ತೆಗೆದು ಅದಕ್ಕಾಗಿಯೇ ಒಂದು ಡಿಜಿಟಲ್ ಅಂಗವನ್ನು ತಯಾರು ಮಾಡಿ ಜೋಡಿಸಬೇಕಾಗುತ್ತದೆ.
ಮೊದಮೊದಲ ವೃತ್ತಿಪರ ಎಸ್ಎಲ್ಆರ್ ಕ್ಯಾಮರಾಗಳಾದ, NC2000 ಹಾಗೂ ಕೋಡಕ್ ಡಿಸಿಎಸ್ ಸರಣಿಯ ಕ್ಯಾಮೆರಾಗಳು 35 ಎಂಎಂ ರೀಲ್ ಕ್ಯಾಮೆರಾಗಳಿಂದಲೇ ರೂಪುಗೊಂಡಿದ್ದವು. ಆ ಕಾಲದ ತಂತ್ರಜ್ಞಾನಕ್ಕೆ ತಕ್ಕಂತೆ ಈ ಕ್ಯಾಮರಾಗಳನ್ನು ದೊಡ್ಡ, ಭಾರವಾದ ಡಿಜಿಟಲ್ ಘಟಕದ ಮೇಲೆ ಪೇರಿಸಲಾಗುತ್ತಿತ್ತು, ಈ ಘಟಕಗಳು ಇಡೀ ಕ್ಯಾಮರಾಗಿಂತ ದೊಡ್ಡದಾಗಿರುತ್ತಿದ್ದವು. ಆದರೆ, ಕ್ಯಾಮರಾಗಳಿಗೆ ’ಡಿಜಿಟಲ್ ಹಿಂಭಾಗ’ವನ್ನು ಹಾಕುವ ವ್ಯವಸ್ಥೆ ಇರಲಿಲ್ಲ. ಇವೆಲ್ಲಾ ಕೈಗಾರಿಕೆಯಲ್ಲಿ ನಿರ್ಮಾಣಗೊಂಡ ಕ್ಯಾಮರಾಗಳೇ ಆಗಿದ್ದವೇ ಹೊರತೂ ಮಾರುಕಟ್ಟೆಗೆ ಬಂದ ಮೇಲೆ ಆದ ಮಾರ್ಪಾಡುಗಳಲ್ಲ.
ಇದಕ್ಕೆ ಒಂದು ಗಮನಾರ್ಹ ಅಪವಾದವೆಂದರೆ, ನಿಕಾನ್ E2, ಮತ್ತು ಅದರ ಹಿಂದೆಯೇ ಬಂದ ನಿಕಾನ್ E3. ಇವುಗಳಲ್ಲಿ 35ಎಂಎಂ ರೂಪವನ್ನು 2/3 ಸಿಸಿಡಿ-ಸೆನ್ಸಾರ್ ಆಗಿ ಪರಿವರ್ತಿಸಲು ಹೆಚ್ಚುವರಿ ಆಪ್ಟಿಕಲ್‌ಗಳನ್ನು ಬಳಸಲಾಗಿತ್ತು. ಕೆಲವು 35 ಎಂಎಂ ಕ್ಯಾಮೆರಾಗಳಿಗೆ ’ಡಿಜಿಟಲ್ ಹಿಂಭಾಗವನ್ನು’ ಅವುಗಳ ಉತ್ಪಾದಕರಿಂದ ಕೊಡಲಾಗಿತ್ತು. ’ಲೈಕಾ’ (Leica) ಇದಕ್ಕೆ ಹೆಸರಿಸಬೇಕಾದ ಉದಾಹರಣೆ. ಮಧ್ಯಮ ಫಾರ್ಮ್ಯಾಟ್ ಮತ್ತು ದೊಡ್ಡ ಫಾರ್ಮ್ಯಾಟ್ ಕ್ಯಾಮೆರಾಗಳು (35 ಎಂಎಂಗಿಂತ ದೊಡ್ಡ ರೀಲನ್ನು ಉಪಯೋಗಿಸುವಂಥವು) ಕಡಿಮೆ ಉತ್ಪಾದನೆಯನ್ನು ಹೊಂದಿದ್ದು, ಇದಕ್ಕೆ ಒಂದು ಸಾಮಾನ್ಯ ’ಡಿಜಿಟಲ್ ಹಿಂಭಾಗ’ ಜೋಡಿಸಲು $10,000ಕ್ಕಿಂತ ಹೆಚ್ಚಿಗೆ ಹಣ ಬೇಕಾಗುತ್ತದೆ. ರೀಲುಗಳು, ವೈಂಡರ್‌ಗಳು, ಹ್ಯಾಂಡ್‌ಗ್ರಿಪ್, ಮತ್ತು ಬೇರೆ ಬೇರೆ ಆವಶ್ಯಕಗಳಿಗೆ ತಕ್ಕಂತೆ ವಿವಿಧ ಮಸೂರಗಳು -ಇವುಗಳನ್ನೆಲ್ಲಾ ಒಳಗೊಂಡ ಇವು ಮಾಡ್ಯುಲಾರ್ ಕ್ಯಾಮೆರಾಗಳು.
ಇವುಗಳು ಬಳಸುವ ಬಹು ದೊಡ್ಡ ಗ್ರಾಹಕಗಳಿಂದಾಗಿ ಅತ್ಯಂತ ದೊಡ್ಡ ದೊಡ್ಡ ಚಿತ್ರಗಳನ್ನು ತೆಗೆಯಬಹುದು. 2006ರ ಮೊದಲಲ್ಲಿ ಬಂದ ಅತಿದೊಡ್ಡ ಚಿತ್ರವೆಂದರೆ ಫೇಸ್ ಒನ್‌ನ P45 39 MP ಚಿತ್ರ. ಇದು 224.6 MBಯಷ್ಟು ಗಾತ್ರದ ಒಂದೇ ಚಿತ್ರವನ್ನು ತೆಗೆದಿತ್ತು. ಚಿಕ್ಕ ಡಿಎಸ್‌ಎಲ್‌ಆರ್ ಕ್ಯಾಮರಾಗಳಂತಲ್ಲದೆ ಮಧ್ಯಮ ಫಾರ್ಮ್ಯಾಟ್‌ನ ಡಿಜಿಟಲ್‌ಗಳನ್ನು ಮುಖ್ಯವಾಗಿ ಸ್ಟುಡಿಯೋ ಮತ್ತು ಪೋರ್ಟ್ರೇಟ್ ಫೋಟೋಗ್ರಫಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ; ಕೆಲವು ಡಿಎಸ್‌ಎಲ್‌ಆರ್‌ಗಳಲ್ಲಿ ಐಎಸ್‌ಓ ವೇಗವು ಗರಿಷ್ಠ 6400 ಇದ್ದರೆ ಈ ಕ್ಯಾಮರಾಗಳಲ್ಲಿ ಗರಿಷ್ಠ 400 ಇರುತ್ತದೆ.
ಇತಿಹಾಸ
ಬದಲಾಯಿಸಿಪ್ರಾರಂಭಿಕ ಬೆಳವಣಿಗೆ
ಬದಲಾಯಿಸಿಹಲವು ಗ್ರಾಹಕಗಳನ್ನು ಬಳಸಿ ಸಿಗ್ನಲ್‌ಗಳನ್ನು ಡಿಜಿಟಲ್‌ಗೊಳಿಸಿ ಸ್ಥಿರ ಚಿತ್ರಗಳನ್ನು ತೆಗೆಯುವ ಪರಿಕಲ್ಪನೆಗಿಂತ ಮೊದಲೇ ಸ್ಕ್ಯಾನರ್‌ಗಳಲ್ಲಿನ ಚಿತ್ರಗಳನ್ನು ಡಿಜಿಟಲ್‌ಗೊಳಿಸುವ ಮತ್ತು ವಿಡಿಯೋ ಸಿಗ್ನಲ್‌ಗಳನ್ನು ಡಿಜಿಟಲ್‌ಗೊಳಿಸುವ ಪರಿಕಲ್ಪನೆಯು ಹುಟ್ಟಿತ್ತು. ಜೆಟ್ ಪ್ರೊಪಲ್‌ಷನ್ ಪ್ರಯೋಗಾಲಯದ ಯೂಗೀನ್ ಎಫ್. ಲ್ಯಾಲಿರವರು, 1961 ರಲ್ಲಿ ನಡೆದ ಅಂತರಿಕ್ಷ ಸಮ್ಮೇಳನದಲ್ಲಿ, ಅಂತರಿಕ್ಷನೌಕೆಯ ಎತ್ತರವನ್ನು ಅಳೆಯುವ ನಕ್ಷತ್ರ ಗ್ರಾಹಕವನ್ನಾಗಿ ಉಪಯೋಗಿಸಲು ಮೊಸಾಯ್ಕ್ ಚಿತ್ರಗ್ರಾಹಕ ವೊಂದನ್ನು ವಿವರಿಸಿದರು.[೨] ನ್ಯೂಯಾರ್ಕ್‌ನ ಪಿಲಿಫ್ಸ್ ಪ್ರಯೋಗಾಲಯದಲ್ಲಿ ಎಡ್ವರ್ಡ್ ಸ್ಟೂಪ್, ಪೀಟರ್ ಕ್ಯಾತ್ ಮತ್ತು ಜೋಲ್ಟ್ ಜಿಲಾಗ್ಯಿ ಇವರುಗಳು, ಸೆಪ್ಟೆಂಬರ್ 6, 1968 ರಲ್ಲಿ "ಆಲ್ ಸಾಲಿಡ್ ಸ್ಟೇಟ್ ರೇಡಿಯೇಷನ್ ಇಮೆಜರ್ಸ್" (ಎಲ್ಲಾ ಘನ ಸ್ಥಿತಿ ವಿಕಿರಣ ಚಿತ್ರಗಳು)ನ ಮೇಲೆ ಪೇಟೆಂಟ್‌ಗಾಗಿ ಅರ್ಜಿ ಹಾಕಿದರು ಮತ್ತು ಕೆಪ್ಯಾಸಿಟರ್‌ಗೆ ಜೋಡಿಸಲಾದ, ಹಲವು ಫೋಟೋ ಡಯೋಡ್‌ಗಳನ್ನೊಳಗೊಂಡ ಮಾಟ್ರಿಕ್ಸ್‌ನ ಮೇಲೆ ಆಪ್ಟಿಕಲ್ ಚಿತ್ರವನ್ನು ಪಡೆದುಕೊಳ್ಳಲು ಮತ್ತು ಸ್ಟೋರ್ ಮಾಡಿಕೊಳ್ಳಲು ಒಂದು ಫ್ಲಾಟ್ ತೆರೆಯನ್ನು ನಿಮಿಸಿದರು. ಅವರಿಗೆ ನವೆಂಬರ್ 10, 1970ರಲ್ಲಿ ಯುಎಸ್ ಪೇಟೇಂಟ್ ದೊರಕಿತು.[೩] ಟೆಕ್ಸಾಸ್‌ನ ಇನ್‌ಸ್ಟ್ರುಮೆಂಟ್ಸ್ ಇಂಜಿನಿಯರ್ ಆಗಿದ್ದ ವಿಲ್ಲೀಸ್ ಆಡ್‌ಕಾಕ್ ರವರು ರೀಲ್‌ರಹಿತ ಕ್ಯಾಮೆರಾವೊಂದನ್ನು ವಿನ್ಯಾಸಗೊಳಿಸಿ 1972ರಲ್ಲಿ ಪೇಟೇಂಟ್‌ಗಾಗಿ ಅರ್ಜಿ ಹಾಕಿದರು. ಈ ಕ್ಯಾಮರಾವನ್ನು ನಿರ್ಮಾಣ ಮಾಡಲಾಯಿತೆ ಎಂಬುದು ತಿಳಿದಿಲ್ಲ. ದಾಖಲೆಗಳ ಪ್ರಕಾರ,ಡಿಜಿಟಲ್ ಕ್ಯಾಮೆರಾವನ್ನು ಮೊದಲು ನಿರ್ಮಿಸಲು ಮುಂದಾದವರು, ಈಸ್ಟ್‌ಮನ್ ಕೊಡ್ಯಾಕ್‌ನಲ್ಲಿ ಇಂಜಿನಿಯರ್ ಆಗಿದ್ದ ಸ್ಟೀವನ್ ಸಾಸನ್, ಮತ್ತು 1975ರಲ್ಲಿ ಅವರು ಈ ಕೆಲಸ ಮಾಡಿದರು.[೪] 1973ರಲ್ಲಿ ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ನಿರ್ಮಿಸಿದ, ಆಗ್ಗೆ ಹೊಸದಾದ ಘನಸ್ಥಿತಿಯ ಸಿಸಿಡಿ ಚಿತ್ರಗ್ರಾಹಕಚಿಪ್‌ಗಳನ್ನು ಅದು ಬಳಸಿಕೊಂಡಿತ್ತು. ಆ ಕ್ಯಾಮೆರಾ 8 ಪೌಂಡ್ (3.6 ಕೆಜಿ)ತೂಕವಿದ್ದು, ಕಪ್ಪು ಬಿಳುಪು ಚಿತ್ರಗಳನ್ನು ಒಂದು ಕ್ಯಾಸೆಟ್ ಟೇಪ್‌ನಲ್ಲಿ ಮುದ್ರಿಸುತ್ತಿತ್ತು. 0.01 (10,000 ಪಿಕ್ಸೆಲ್) ಮೆಗಾಪಿಕ್ಸೆಲ್ ಗಾತ್ರವಿದ್ದು , ತನ್ನ ಮೊದಲ್ ಚಿತ್ರವನ್ನು ತೆಗೆಯಲಿ 23 ಸೆಕೆಂಡ್‌ಗಳು ಬೇಕಾಯಿತು. ಈ ಮೊದಲ ಮಾದರಿ ಕೇವಲ ಒಂದು ತಾಂತ್ರಿಕ ಅಭ್ಯಾಸವಾಯಿತೆ ಹೊರತು ನಿರ್ಮಾಣಕ್ಕಾಗಿ ಮಾಡಿದ್ದಾಗಿರಲಿಲ್ಲ.
ಅನಲಾಗ್ ವಿದ್ಯುನ್ಮಾನ ಕ್ಯಾಮೆರಾಗಳು
ಬದಲಾಯಿಸಿಕೈಬಳಕೆಯ ವಿದ್ಯುನ್ಮಾನ ಕ್ಯಾಮೆರಾಗಳು, ಅಂದರೆ ರೀಲ್ ಕ್ಯಾಮೆರಾಗಳ ಹಾಗೆ ಒತ್ತೊಯ್ಯಬಹುದಾದ ಮತ್ತು ಬಳಸಬಹುದಾದ ಕ್ಯಾಮರಾಗಳು ಸುಮಾರು 1981ರಲ್ಲಿ ಸೋನಿ ಮ್ಯಾವಿಕಾ ರೂಪಿಸಿದ (ಒಂದು ಅಯಸ್ಕಾಂತೀಯ ವಿಡಿಯೋ ಕ್ಯಾಮರಾ)ಪ್ರಾತ್ಯಕ್ಷಿಕೆಯೊಂದಿಗೆ ಬೆಳಕಿಗೆ ಬಂತು. ಇದನ್ನು ಆ ನಂತರ ಸೋನಿಯವರು ಬಿಡುಗಡೆ ಮಾಡಿದ ’ಮ್ಯಾವಿಕ’ ಎಂಬ ಹೆಸರನ್ನು ಹೊಂದಿದ ಕ್ಯಾಮರಾಗಳೊಂದಿಗೆ ಕನ್‌ಫ್ಯೂಸ್ ಮಾಡಿಕೊಳ್ಳುವಂತಿಲ್ಲ. ಇದು ಒಂದು ಅನಲಾಗ್ ಕ್ಯಾಮೆರಾ ಆಗಿತ್ತು, ವಿಡಿಯೋ ಟೇಪ್‌ಗಳು ಮುದ್ರಿಸುವಂತೆ ಇವು ಪಿಕ್ಸೆಲ್‌ತರಂಗಗಳಲ್ಲಿ ನಿರಂತರವಾಗಿ ದಾಖಲಿಸಿಕೊಳ್ಳುತ್ತಿದ್ದವು, ಆದರೆ, ಅವುಗಳನ್ನು ಬೇರೆ ಬೇರೆ ಹಂತಗಳಿಗೆ ಪರಿವರ್ತಿಸದೆ; ದೂರದರ್ಶನದಂತಹ 2×2 ಇಂಚಿನ "ವಿಡಿಯೋ ಫ್ಲಾಪಿಗಳನ್ನು" ದಾಖಲಿಸಿಕೊಳ್ಳುತ್ತಿತ್ತು.[೫] ಮೂಲದಲ್ಲಿ ಅದು ಸಿಂಗಲ್ ಫ್ರೇಮ್‌ಗಳನ್ನು ದಾಖಲಿಸುವ ವಿಡಿಯೋ ಚಲನಚಿತ್ರ ಕ್ಯಾಮೆರಾ ಆಗಿತ್ತು. ಫೀಲ್ಡ್ ಮೋಡ್‌ನಲ್ಲಿ ಒಂದು ಡಿಸ್ಕಿಗೆ 50 ಫ್ರೇಮ್‌ಗಳು ಮತ್ತು ಫ್ರೇಮ್‌ಮೋಡ್‌ನಲ್ಲಿ ಒಂದು ಡಿಸ್ಕಿಗೆ 25 ಫ್ರೇಮ್‌ಗಳನ್ನು ದಾಖಲಿಸುತ್ತಿತ್ತು. ಆಗಿನ ದೂರದರ್ಶನದ ಗುಣಮಟ್ಟವನ್ನೇ ಈ ಚಿತ್ರಗಳೂ ಹೊಂದಿವೆ ಎಂದು ಹೇಳಲಾಗುತ್ತಿತ್ತು. ಅನಲಾಗ್ ವಿದ್ಯುನ್ಮಾನ ಕ್ಯಾಮೆರಾಗಳು, 1986ರಲ್ಲಿ ಕ್ಯಾನನ್ ಆರ್‌ಸಿ-701 ಬರುವವರೆಗೆ ಮಾರುಕಟ್ಟೆಗೆ ಬಂದಿರಲಿಲ್ಲವೆನಿಸುತ್ತದೆ. ಕ್ಯಾನನ್ 1984ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಯೋಮ್ಯುರಿ ಶಿಂಬುನ್ ಎಂಬ ಜಪಾನ್ ಪತ್ರಿಕೆಯಲ್ಲಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ಇದರ ಮೊದಲ ಮಾದರಿಯ ಪ್ರಾತ್ಯಕ್ಷಿಕೆ ನೀಡಿದ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಈ ಕ್ಯಾಮೆರಾಗಳನ್ನು ಸುದ್ದಿಗಾಗಿ ಮೊದಲು ಬಳಸಿದವರು ಈಗಿನ ಯುಎಸ್‌ಎ. ಅದು ತನ್ನ ಬೇಸ್‌ಬಾಲ್ ವಿಶ್ವಸರಣಿಯಲ್ಲಿ ಇದನ್ನು ಬಳಸಿತ್ತು. ಹಲವಾರು ಕಾರಣಗಳಿಂದಾಗಿ ಅನಲಾಗ್ ಕ್ಯಾಮೆರಾಗಳನ್ನು ಎಲ್ಲರೂ ಬಳಸುವಂತೆ ಮಾಡಲಾಗಲಿಲ್ಲ. ಬೆಲೆ ($20,000ಕ್ಕೆ ಮೇಲ್ಪಟ್ಟು), ರೀಲ್‌ಗೆ ಹೋಲಿಸಿದಾಗ ಕಡಿಮೆ ಗುಣಮಟ್ಟದ ಚಿತ್ರ, ಮತ್ತು ಗುಣಮಟ್ಟದ ಮುದ್ರಣಯಂತ್ರಗಳು ಇಲ್ಲದಿರುವುದು - ಇವು ಕೆಲವು ಕಾರಣಗಳು. ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಮುದ್ರಿಸಲು ಫ್ರೇಮ್ ಗ್ರ್ಯಾಬರ್‌ನಂತಹ ಸಲಕರಣೆಗಳು ಬೇಕಾಗುತ್ತಿದ್ದವು, ಇದು ಒಬ್ಬ ಸಾಮಾನ್ಯ ಗ್ರಾಹಕನ ಕೈಅಳತೆಯಲ್ಲಿರಲಿಲ್ಲ. ಆನಂತರದಲ್ಲಿ, ತೆರೆಯ ಮೇಲೆ ನೋಡುವುದಕ್ಕೋಸ್ಕರ "ವಿಡಿಯೋ ಫ್ಲಾಪಿ" ಡಿಸ್ಕ್‌ಗಳಿಗೆ ಹಲವಾರು ರೀಡರ್ ಸಲಕರಣೆಗಳಿದ್ದವು, ಆದರೆ ಅವ್ಯಾವುವೂ ಕಂಪ್ಯೂಟರ್ ಡ್ರೈವ್ ಆಗಲು ಸಾಧ್ಯವಾಗಲಿಲ್ಲ.
ಪ್ರಾರಂಭಿಕ ಅಡಾಪ್ಟರ್‌ಗಳು, ತಮ್ಮ ಉಪಯುಕ್ತತೆ ಮತ್ತು ದೂರವಾಣಿ ತಂತಿಗಳ ಮೂಲಕ ಚಿತ್ರಗಳನ್ನು ರವಾನಿಸುವ ಸಾಮರ್ಥ್ಯವನ್ನು ಮುಂದಿಟ್ಟುಕೊಂಡು ಸದಾ ಸುದ್ದಿಯಲ್ಲಿದ್ದವು, ಮತ್ತು ಹಾಗೆಯೇ ಬೆಲೆಯನ್ನು ಗೌಣಗೊಳಿಸುತ್ತಿದ್ದವು. ವಾರ್ತಾ ಪತ್ರಿಕೆಯ ಕಡಿಮೆ ಗಾತ್ರದ ಗ್ರಾಫಿಕ್ಸ್‌ಗಳು, ಚಿತ್ರಗಳ ಕಳಪೆ ಗುಣಮಟ್ಟವನ್ನು ತಡೆಹಿಡಿಯಲು ಪ್ರಯತ್ನಿಸಿದವು. ಸ್ಯಾಟಲೈಟ್ ಇಲ್ಲದೆ ಚಿತ್ರಗಳನ್ನು ರವಾನಿಸುವ ಈ ಸಾಮರ್ಥ್ಯವು, 1989ರ ಟೈನನ್‌ಮೆನ್ ಚೌಕದಲ್ಲಿ ನಡೆದ ಪ್ರತಿಭಟನೆ ಮತ್ತು 1991ರಲ್ಲಿ ನಡೆದ ಮೊದಲ ಗಲ್ಫ್ ಯುದ್ಧದಲ್ಲಿ ಉಪಯೋಗಕ್ಕೆ ಬಂದ್ದವು. ಯುಎಸ್ ಸರ್ಕಾರವು ಸ್ಥಿರ ವಿಡಿಯೋ ಪರಿಕಲ್ಪನೆಯಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿತು, ಮುಖ್ಯವಾಗಿ ಯುಎಸ್ ಸೇನಾಪಡೆಯ ನೇರ ಏರ್-ಟು-ಸೀ ಕಣ್ಗಾವಲು ವ್ಯವಸ್ಥೆಗಾಗಿ. 1988ರಲ್ಲಿ ಬಂದ ಕ್ಯಾನನ್ RC-250 ಕ್ಸಾಪ್‌ಷಾಟ್ ಕ್ಯಾಮೆರವೇ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ದೊರಕಿದ ಮೊದಲ ಅನಲಾಗ್ ಕ್ಯಾಮರಾ ಆಗಿರಬೇಕು. ಅದೇ ವರ್ಷದಲ್ಲಿ ನಿರ್ಮಾಣವಾದ ಮತ್ತೊಂದು ಪ್ರಮುಖ ಕ್ಯಾಮರಾ ಎಂದರೆ ನೈಕೋನ್ ಕ್ಯುವಿ-1000C Archived 2010-12-30 ವೇಬ್ಯಾಕ್ ಮೆಷಿನ್ ನಲ್ಲಿ.. ಇದು ಸಾಮಾನ್ಯ ಬಳಕೆದಾರರಿಗೆ ಕೈಗೆಟುಕದೇ ಪತ್ರಕರ್ತರಿಗೆಂದೇ ನಿರ್ಮಿಸಿದ ಕ್ಯಾಮರಾ ಆಗಿದ್ದು, ಕೆಲವು ನೂರು ಕ್ಯಾಮರಾಗಳು ಮಾತ್ರ ಬಿಕರಿಯಾದವು. ಇದು ಗ್ರೇಸ್ಕೇಲ್‌ನಲ್ಲಿ ಚಿತ್ರಗಳನ್ನು ಮುದ್ರಿಸಿತು ಮತ್ತು ವಾರ್ತಾಪತ್ರಿಕೆಯ ರೀಲ್ ಕ್ಯಾಮರಾಗಳ ಗುಣಮಟ್ಟವನ್ನೇ ಹೊಂದಿತ್ತು. ಅವು ನೋಡಲು ಸಹ ಆಧುನಿಕ ಏಕ-ಮಸೂರದ ರೆಫ್ಲೆಕ್ಸ್ ಡಿಜಿಟಲ್ ಕ್ಯಾಮರಾವನ್ನೇ ಹೋಲುತ್ತಿತ್ತು. ಚಿತ್ರಗಳನ್ನು ವಿಡಿಯೋ ಫ್ಲಾಪಿ ಡಿಸ್ಕ್‌ನಲ್ಲಿ ಸ್ಟೋರ್ ಮಾಡಲಾಗುತ್ತಿತ್ತು.
ಸಂಪೂರ್ಣ ಡಿಜಿಟಲ್ ಕ್ಯಾಮೆರಾಗಳ ಕಾಲ
ಬದಲಾಯಿಸಿಮೊಟ್ಟ ಮೊದಲು ಕಂಪ್ಯೂಟರೀಕೃತ ಚಿತ್ರವನ್ನು ದಾಖಲಿಸಿಕೊಂಡ ಸಂಪೂರ್ಣ ಡಿಜಿಟಲ್ ಕ್ಯಾಮೆರಾ ಎಂದರೆ 1980ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಫ್ಯೂಜಿ ಡಿಎಸ್ 1P ಆಗಿದೆ. ಇದು 16ಎಂಬಿ ಅಂತರ್ಗತವಾದ ಮೆಮೊರಿ ಕಾರ್ಡ್ ಅನ್ನು ಬಳಸಿ ಬ್ಯಾಟರಿಯ ಮೂಲಕ ಡಾಟಾವನ್ನು ಮೆಮೊರಿಯಲ್ಲಿ ದಾಖಲಾಗಿರುವಂತೆ ನೊಡಿಕೊಳ್ಳಲಾಗಿತ್ತು.
ಈ ಕ್ಯಾಮೆರಾವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರುಕಟ್ಟೆಗೆ ಬಿಡಲಿಲ್ಲ ಮತ್ತು ಜಪಾನ್‌ನಲ್ಲೂ ಕೂಡ ಇದನ್ನು ಆಮದು ಮಾಡಿಕೊಂಡ ಬಗ್ಗೆ ಯಾವುದೇ ಪುರಾವೆಗಳಿಲ್ಲ. ವಾಣಿಜ್ಯಿಕ ದೃಷ್ಟಿಯಿಂದ ಮಾರುಕಟ್ಟೆಗೆ ಬಂದ ಮೊಟ್ಟಮೊದಲ ಡಿಜಿಟಲ್ ಕ್ಯಾಮೆರಾ 1990ರಲ್ಲಿ ಬಿಡುಗಡೆಯಾದ ಡೈಕ್ಯಾಮ್ ಮಾಡೆಲ್ 1; ಇದನ್ನು ಕೂಡ ಲಾಗಿಟೆಕ್ ಫೋಟೊಮನ್ ಎಂದೇ ಮಾರಲಾಯಿತು. ಇದು ಸಿಸಿಡಿ ಇಮೇಜ್ ಸೆನ್ಸರ್ ಅನ್ನು ಬಳಸುವ ಮೂಲಕ ಚಿತ್ರಗಳನ್ನು ಡಿಜಿಟಲ್ ರೀತಿಯಲ್ಲಿ ಸಂಗ್ರಹಿಸುತ್ತಿತ್ತು ಮತ್ತು ನೇರವಾಗಿ ಕಂಪ್ಯೂಟರ್‌ಗೆ ಜೋಡಿಸುವ ಮೂಲಕ ಡೌನ್‌ಲೋಡ್ ಮಾಡಬಹುದಾಗಿತ್ತು.[೬][೭][೮]
1991ರಲ್ಲಿ ಕೊಡಾಕ್ ಕಂಪೆನಿಯು ಮಾರುಕಟ್ಟೆಗೆ ಕೊಡಾಕ್ ಡಿಸಿಎಸ್-100 ಬಿಡುಗಡೆ ಮಾಡಿತು. ನಂತರದಲ್ಲಿ ಸಾಲು ಸಾಲು ಕೊಡಾಕ್ ಡಿಸಿಎಸ್ ಎಸ್‌ಎಲ್‌ಆರ್ ಕ್ಯಾಮೆರಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು ಅವೆಲ್ಲವೂ ಫಿಲ್ಮ್ ಕ್ಯಾಮೆರಾಗಳಂತ ಹಾಗೂ ನಿಕಾನ್ ಕ್ಯಾಮೆರಾಗಳಂತಹ ಹೊರಮೈ ವಿನ್ಯಾಸವನ್ನು ಹೊಂದಿದ್ದವು. ಇದು 1.3ಮೆಗಾ ಫಿಕ್ಸೆಲ್ ಸೆನ್ಸರ್ ಬಳಸಿಕೊಂಡಿದ್ದವು ಮತ್ತು ಇವುಗಳಿಗೆ $13,000 ಬೆಲೆಯನ್ನು ನಿಗದಿಗೊಳಿಸಲಾಗಿತ್ತು.
1988ರಲ್ಲಿ ಕಂಡುಕೊಂಡ JPEG ಮತ್ತು MPEG ಸ್ಟಾಂಡರ್ಡ್ಸ್‌ಗಳಿಂದಾಗಿ ಚಿತ್ರ ಮತ್ತು ವಿಡಿಯೋ ಫೈಲ್‌ಗಳನ್ನು ಕುಗ್ಗಿಸಿ ಸಂಗ್ರಹಿಸಬಹುದಾದ ಅವಕಾಶ ಒದಗಿದ್ದರಿಂದ ಡಿಜಿಟಲ್ ಫಾರ್ಮ್ಯಾಟ್‌ಗಳಿಗೆ ಬೇಗನೆ ಬದಲಾಯಿಸಿಕೊಳ್ಳುವುದು ಸಾಧ್ಯವಾಯಿತು. ಮೊಟ್ಟಮೊದಲ ಕ್ಯಾಮೆರಾದ ಹಿಂದೆ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ ಇದ್ದಂತಹ ಬಳಕೆದಾರರ ಕ್ಯಾಮೆರಾ 1995ರಲ್ಲಿ ಬಂದ ಕ್ಯಾಸಿಯೋ QV-10 ಆಗಿದೆ. ಮತ್ತು ಮೊಟ್ಟಮೊದಲು ಕಾಂಪ್ಯಾಕ್ಟ್ ಫ್ಲಾಶ್ ಬಳಸಿದ್ದು 1996ರಲ್ಲಿ ಹೊರಬಂದ ಕೊಡಾಕ್ DC-25 ಆಗಿದೆ. ಕಡಿಮೆ ರೆಸೊಲ್ಯೂಷನ್‌ನ (ಅನಲಾಗ್ ಅಥವಾ ಡಿಜಿಟಲ್) ಕ್ಯಾಮೆರಾಗಳು ಸಾಮಾನ್ಯ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದವುಗಳಾಗಿವೆ. 1997ರಲ್ಲಿ ಸಾಮಾನ್ಯ ಬಳಕೆದಾರರಿಗಾಗಿ ಮೊದಲ ಮೆಗಾಫಿಕ್ಸಲ್ ಕ್ಯಾಮೆರಾಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. 1995ರಲ್ಲಿ ಮಾರುಕಟ್ಟೆಗೆ ಬಂದ ರಿಕೊ RDC-1 ಕ್ಯಾಮೆರಾವು ಮೊಟ್ಟಮೊದಲುವಿಡಿಯೋ ಚಿತ್ರಗಳನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿತ್ತು. 1999ರಲ್ಲಿ ನಿಕಾನ್ D1, 2.74 ಮೆಗಾಫಿಕ್ಸಲ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದು ಮೊಟ್ಟಮೊದಲು ಒಂದು ಮುಖ್ಯ ಕಂಪೆನಿಯಿಂದ ತಯಾರಿಸಲ್ಪಟ್ಟ ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮೆರಾ ಆಗಿತ್ತು. ಇದರ ಬೆಲೆ $6,000 ಆಗಿದ್ದು ಛಾಯಾಗ್ರಹಣ ವೃತ್ತಿಪರರಿಂದ ಹಾಗೂ ಶ್ರೀಮಂತ ಬಳಕೆದಾರರಿಂದ ಖರೀದಿಸಬಹುದಾದ ಬೆಲೆಯನ್ನು ಹೊಂದಿತ್ತು. ಈ ಕ್ಯಾಮೆರಾ ಕೂಡ ನಿಕಾನ್ F-ಮೌಂಟ್ ಲೆನ್ಸ್‌ಗಳನ್ನು ಬಳಸಿಕೊಂಡಿತ್ತು, ಅಂದರೆ ಫಿಲ್ಮ್‌ರೋಲ್ ಬಳಸಿ ಛಾಯಾಗ್ರಹಣ ಮಾಡುವವರು ತಮ್ಮಲ್ಲಿ ಇರುವ ಲೆನ್ಸ್‌ಗಳನ್ನು ಇದಕ್ಕೆ ಬಳಸಬಹುದಾಗಿತ್ತು.
ದೃಶ್ಯ ಸಾಂದ್ರತೆ
ಬದಲಾಯಿಸಿಡಿಜಿಟಲ್ ಕ್ಯಾಮೆರಾದ ದೃಶ್ಯ ಸಾಂದ್ರತೆಯು ಫಿಲ್ಮ್ ಬಳಸಿ ಮಾಡುವ ಸಾಂಪ್ರದಾಯಿಕ ಛಾಯಾಗ್ರಹಣದ ರೀತಿಯಲ್ಲಿಯೇ ಕ್ಯಾಮೆರಾ ಸೆನ್ಸರ್(ಸಾಮಾನ್ಯವಾಗಿ ಸಿಸಿಡಿ ಅಥವಾ ಸಿಎಮ್‌ಒಎಸ್ ಸೆನ್ಸರ್ ಚಿಪ್) ಬೆಳಕಿನ ಸಂಕೇತಗಳನ್ನು ಬದಲಿಸುವ ಫಿಲ್ಮ್‌ನಂತೆ ಕೆಲಸ ಮಾಡುತ್ತದೆ. ಈ ಸೆನ್ಸರ್‌ಗಳು ಸಾಮಾನ್ಯವಾಗಿ ಮಿಲಿಯನ್‌ಗಟ್ಟಲೆ ’ಬಕೆಟ್’ಗಳಿಂದ ಉಂಟಾಗಿರುತ್ತದೆ. ಇದು ಮುಖ್ಯವಾಗಿ ಸೆನ್ಸರ್‌ಗಳನ್ನು ಅಪ್ಪಳಿಸುವ ಫೋಟಾನ್‌ಗಳ ಸಂಖ್ಯೆಯನ್ನು ಅದು ಲೆಕ್ಕಹಾಕಿದಂತಿರುತ್ತದೆ. ಇದರರ್ಥ ಚಿತ್ರವು ಸೆನ್ಸರ್‌ನ ಯಾವ ಪ್ರದೇಶದಲ್ಲಿ ಚಿತ್ರವು ಹೆಚ್ಚು ಪ್ರಕಾಶಮಾನವಾಗಿರುತ್ತದೆಯೋ, ಆ ಪ್ರದೇಶಕ್ಕೆ ಹೆಚ್ಚೆಚ್ಚು ಪಿಕ್ಸೆಲ್‌ನ ಮೌಲ್ಯವನ್ನು ನೀಡಲಾಗುತ್ತದೆ. ಸೆನ್ಸರ್‌ನ ಭೌತಿಕ ಗುಣವನ್ನು ಆಧರಿಸಿ, ಕಲರ್ ಫಿಲ್ಟರ್ ಗುಂಪು ಪ್ರತಿಕ್ರಿಯಿಸುತ್ತದೆ ಹೆಚ್ಚಾಗಿ ಇಲ್ಲಿ ಡೇಮೊಸೈಸಿಂಗ್ ಇಂಟರ್‌ಪೊಲೇಷನ್ ಅಲ್ಗಾರಿದಮ್ ಅನ್ನು ಬಳಸಲಾಗುತ್ತದೆ. ಚಿತ್ರದಲ್ಲಿ ಫಲಿತಾಂಶ ನೀಡುವ ಫಿಕ್ಸೆಲ್‌ಗಳು ಚಿತ್ರದ "ಫಿಕ್ಸೆಲ್ ಪ್ರಮಾಣ"ವನ್ನು ನಿರ್ಧರಿಸುತ್ತವೆ. ಉದಾಹರಣೆಗೆ,640x480 ಗಾತ್ರದ ಚಿತ್ರವು 307,200 ಫಿಕ್ಸೆಲ್‌ಗಳನ್ನು ಅಥವಾ ಒಂದು ಅಂದಾಜಿನ ಪ್ರಕಾ 307 ಕಿಲೋಫಿಕ್ಸೆಲ್ಸ್‌ಗಳನ್ನು ಹೊಂದಿರುತ್ತದೆ; 3872x2592 ಗಾತ್ರದ ಚಿತ್ರವು ಸುಮಾರು 10,036,224 ಫಿಕ್ಸೆಲ್‌ಗಳನ್ನು ಹೊಂದಿರುತ್ತದೆ, ಅಥವಾ ಸರಿಸುಮಾರು 10 ಮೆಗಾಫಿಕ್ಸೆಲ್ ಹೊಂದಿರುತ್ತದೆ.
ಈ ಫಿಕ್ಸೆಲ್ ಸಂಖ್ಯೆ ಮಾತ್ರವೇ ಕ್ಯಾಮೆರಾದ ದೃಶ್ಯ ಸಾಂದ್ರತೆಯ ಸಾಮರ್ಥ್ಯವನ್ನು ತಿಳಿಸುತ್ತದೆ ಎಂದು ತಿಳಿಯಲಾಗಿದೆ ಆದರೆ ಅದು ತಪ್ಪುಗ್ರಹಿಕೆಯಾಗಿದೆ. ಬೇರೆ ಕೆಲವು ಅಂಶಗಳು ಸೆನ್ಸರ್‌ನ ಸಾಂದ್ರತೆ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಇವುಗಳಲ್ಲಿ ಕೆಲವು ಅಂಶಗಳು ಸೆನ್ಸರ್‌ನ ಗಾತ್ರ, ಮಸೂರದ ಗುಣಮಟ್ಟ ಮತ್ತು ಫಿಕ್ಸೆಲ್‌ನ ಕೂಟ (ಉದಾಹರಣೆಗೆ, ಬೆಯರ್ ಫಿಲ್ಟರ್ ಮೊಸಾಯಿಕ್ ಇಲ್ಲದ ಮೊನೊಕ್ರೋಮ್ ಕ್ಯಾಮೆರಾವು ಸಾಂಪ್ರದಾಯಿಕ ಕಲರ್ ಕ್ಯಾಮೆರಾಗಿಂತ ಹೆಚ್ಚಿನ ಸಾಂದ್ರತೆ ಹೊಂದಿರುತ್ತದೆ)ಆಗಿದೆ. ಹಲವಾರು ಡಿಜಿಟಲ್ ಕಾಂಪ್ಯಾಕ್ಟ್ ಕ್ಯಾಮೆರಾಗಳು ಹೆಚ್ಚು ಸಾಂದ್ರತೆ ಇರುವ ಕಾರಣದಿಂದಾಗಿ ತಿರಸ್ಕರಿಸಲ್ಪಟ್ಟಿವೆ. ಸೆನ್ಸರ್‌ಗಳು ಕೆಲವೊಮ್ಮೆ ಎಷ್ಟು ಚಿಕ್ಕದಾಗಿರುತ್ತವೆ ಎಂದರೆ ಅವುಗಳ ಬಕೆಟ್‌ಗಳು ಸುಲಭವಾಗಿ ತುಂಬಿಚೆಲ್ಲುವಂತಿರುತ್ತವೆ; ಮತ್ತೆ, ಕೆಲವೊಮ್ಮೆ ಸೆನ್ಸರ್‌ನ ಸಾಂದ್ರತೆಯು ಕ್ಯಾಮೆರಾದ ಮಸೂರವು ಕೊಡಲು ಸಾಧ್ಯವಾಗದ ಸಾಂದ್ರತೆಯನ್ನು ಹೊಂದಿರುತ್ತದೆ.
ತಂತ್ರಜ್ಞಾನವು ಅಭಿವೃದ್ಧಿ ಹೊಂದಿದಂತೆ ಬೆಲೆಯು ನಾಟಕೀಯವಾಗಿ ಇಳಿದಿದೆ. ಒಂದು ಪಿಕ್ಸೆಲ್‌ಗೆ ಒಂದು ಡಾಲರ್‌ನಂತೆ ಅಳೆಯುವ ಮೂಲಕ ಡಿಜಿಟಲ್ ಕ್ಯಾಮೆರಾದ ಬೆಲೆಯನ್ನು ನಿಗದಿಪಡಿಸುವುದು ಮೂಲತತ್ವವಾಗಿತ್ತು, ಫಿಕ್ಸೆಲ್‌ನಲ್ಲಿ ನಿರಂತರವಾದ ಹಾಗೂ ನಿಶ್ಚಲವಾದ ಬೆಳವಣಿಗೆಯಿಂದಾಗಿ ಪ್ರತಿ ಡಾಲರ್‌ಗೆ ಹೊಸ ಕ್ಯಾಮೆರಾದ ಫಿಕ್ಸೆಲ್‌ನ ಗುಣಮಟ್ಟದಲ್ಲಿ ’ಮೊರ್ಸ್ ನಿಯಮದ’ ಪ್ರಕಾರ ಬದಲಾವಣೆ ಕಂಡುಬರುತ್ತಿದೆ. ಕ್ಯಾಮೆರಾದ ಬೆಲೆಗಳ ಕುರಿತಾದ ಈ ಭವಿಷ್ಯವನ್ನು ಮೊದಲು 1998ರಲ್ಲಿ ಆಸ್ಟ್ರೇಲಿಯಾದಲ್ಲಿ PMA DIMA ಸಮ್ಮೇಳನದಲ್ಲಿ ಬ್ಯಾರಿ ಹೆಂಡಿ ಮತ್ತು ಇದನ್ನು "ಹೆಂಡಿಯ ನಿಯಮ" ಎಂದು ಕರೆಯಲಾಗುತ್ತದೆ.[೯]
ಈವರೆಗೆ ಕೆಲವೇ ಕೆಲವು ಆಕಾರಾನುಪಾತವನ್ನು ಬಳಸಲಾಗುತ್ತಿತ್ತು ಅವುಗಳಲ್ಲಿ ಸಾಮಾನ್ಯವಾಗಿ (ವಿಶೇಷವಾಗಿ 4:3 ಮತ್ತು 3:2), ಬಳಕೆಯಾಗುವ ಸೆನ್ಸರ್‌ಗಳ ಗಾತ್ರದ ಸಂಖ್ಯೆಯು ನಿಗದಿತವಾಗಿದ್ದಾಗಿದೆ. ಅಷ್ಟೇ ಅಲ್ಲದೆ, ಸೆನ್ಸರ್ ತಯಾರಿಸುವವರು ಎಲ್ಲ ಸಾಧ್ಯವಿರುವ ಸೆನ್ಸರ್ ಗಾತ್ರಗಳನ್ನು ತಯಾರಿಸುವುದಿಲ್ಲ ಆದರೆ ಹೆಚ್ಚಿನ ಗಾತ್ರಗಳನ್ನು ತಯಾರಿಸುವಲ್ಲಿ ಆಸಕ್ತಿ ತೋರಿಸುತ್ತಾರೆ. ಉದಾಹರಣೆಗೆ, 2007ರಲ್ಲಿ ಕ್ಯಾನನ್ ಬಳಸಿದ ಮೂರು ಬಹುದೊಡ್ಡ ಗಾತ್ರದ ಸೆನ್ಸರ್ (ಫಿಕ್ಸೆಲ್ ಕೌಂಟ್‌ನ ಪ್ರಕಾರ)ಗಳೆಂದರೆ 21.1, 16.6, ಮತ್ತು 12.8 ಮೆಗಾಫಿಕ್ಸೆಲ್ CMOS ಸೆನ್ಸರ್‌ಗಳಾಗಿವೆ. ಈ ಕೆಳಗಿನ ಪಟ್ಟಿಯು ವಾಣಿಜ್ಯಿಕವಾಗಿ ಡಿಜಿಟಲ್ ಕ್ಯಾಮೆರಾಗಳಲ್ಲಿ ಬಳಸುವ ಸೆನ್ಸರ್‌ಗಳ ವಿವರಗಳನ್ನು ನೀಡುತ್ತದೆ.
ಅಗಲ | ಎತ್ತರ | ಆಕಾರ ಅನುಪಾತ | ಆಕ್ಚುವಲ್ ಪಿಕ್ಷೆಲ್ ಕೌಂಟ್ | ಮೆಗಾಪಿಕ್ಷೆಲ್ಸ್ | ಕೆಮೆರಾ ಉದಾಹರಣೆಗಳು |
---|---|---|---|---|---|
320 | 240 | 76,800 | 0.01 | ಸ್ಟೀವನ್ ಸ್ಯಾಸನ್ ಪ್ರೊಟೋಟೈಪ್ (1975) | |
640 | 480 | 307,200 | 0.3 | ಅಯ್‌ಪಲ್ ಕ್ವಿಕ್‌ಟೇಕ್ 100 (1994) | |
832 | 608 | 505,856 | 0.5 | ಕ್ಯಾನನ್ ಪವರ್‌ಶಾಟ್ 600 (1996) | |
1,024 | 768 | 786,432 | 0.8 | ಒಲಿಂಪಸ್ D-300L (1996) | |
1,280 | 960 | 1,228,800 | 1/3) | ಫ್ಯೂಜಿಫಿಲ್ಮ್
DS-300 (1997) | |
1,280 | 1,024 | 5:4 | 1,310,720 | 1/3) | ಫ್ಯೂಜಿಫಿಲ್ಮ್ MX-700 / ಲೈಕಾ ಡಿಜಿಲಕ್ಸ್ (1998), ಫ್ಯೂಜಿಫಿಲ್ಮ್MX-1700 (1999) / ಲೈಕಾ ಡಿಜಿಲಕ್ಸ್ ಜೂಮ್(2000) |
1,600 | 1,200 | 1,920,000 | 2 | ನಿಕಾನ್ ಕೂಲ್‌ಪಿಕ್ಸ್950 | |
2,012 | 1,324 | 2,663,888 | 2.74 | ನಿಕಾನ್ D1 | |
2,048 | 1,536 | 3,145,728 | 3 | ಕ್ಯಾನನ್ ಪವರ್‌ಶಾಟ್ A75, ನಿಕನ್ ಕೂಲ್‌ಪಿಕ್ಸ್ 995 | |
2,272 | 1,704 | 3,871,488 | [4]; | ಒಲಿಂಪಸ್ ಸ್ಟೈಲಸ್ 410, ಕಾಂಟ್ಯಾಕ್ಸ್ i4R (CCD ನಿಜವಾಗಿ ಚೌಕವಾಗಿದ್ದರೂ 2,272x2,272) | |
2,464 | 1,648 | 4,060,672 | 4.1 | ಕ್ಯಾನನ್ 1D | |
2,640 | 1,760 | 4,646,400 × 3 | 4.7 × 3 (14.1 MP) | ಸಿಗ್ಮಾ SD14, ಸಿಗ್ಮಾDP1 (3 ಲೇಯರ್ಸ್ ಆಪ್ ಪಿಕ್ಸೆಲ್ಸ್, 4.7 MP ಪರ್ ಲೇಯರ್, ಇನ್ ಫೊವೆಯಾನ್ X3ಸೆನ್ಸರ್) | |
2,560 | 1,920 | 4,915,200 | 5 | ಒಲಿಂಪಸ್ E-1, ಸೋನಿ ಸೈಬರ್-ಶಾಟ್DSC-F707 | |
2,816 | 2,112 | 5,947,392 | 6 | ಒಲಿಂಪಸ್ ಸ್ಟೈಲಸ್ 600 ಡಿಜಿಟಲ್ | |
3,008 | 2,000 | 6,016,000 | 6 | ನಿಕಾನ್ D40, D50, D70, D70s, ಪೆಂಟಾಕ್ಸ್ K100D | |
3,072 | 2,048 | 6,291,456 | 6.3 | ಕ್ಯಾನನ್ 300D, ಕ್ಯಾನನ್ 10D | |
3,072 | 2,304 | 7,077,888 | 7 | ಒಲಿಂಪಸ್ FE-210, ಕ್ಯಾನನ್ ಪವರ್‌ಶಾಟ್ A620 | |
3,456 | 2,304 | 7,962,624 | 8 | ಕ್ಯಾನನ್ 350D | |
3,264 | 2,448 | 7,990,272 | 8 | ಒಲಿಂಪಸ್ E-500, ಒಲಿಂಪಸ್ SP-350, ಕ್ಯಾನನ್ ಪವರ್‌ಶಾಟ್ A720 IS | |
3,504 | 2,336 | 8,185,344 | 8.2 | ಕ್ಯಾನನ್ 30D, ಕ್ಯಾನನ್ 1D II, ಕ್ಯಾನನ್ 1D II N | |
3,520 | 2,344 | 8,250,880 | 8.25 | ಕ್ಯಾನನ್ 20D | |
3,648 | 2,736 | 9,980,928 | 10 | ಒಲಿಂಪಸ್ E-410, ಒಲಿಂಪಸ್ E-510, ಪ್ಯಾನಾಸೊನಿಕ್ | |
3,872 | 2,592 | 10,036,224 | 10 | ನಿಕಾನ್ D40x, ನಿಕಾನ್D60, ನಿಕಾನ್ D3000, ನಿಕಾನ್ D200, ನಿಕಾನ್ D80, ಪೆಂಟಾಕ್ಸ್ K10D, ಸೋನಿ ಆಲ್ಫಾ A100 | |
3,888 | 2,592 | 10,077,696 | 10.1 | ಕ್ಯಾನನ್ 400D, ಕ್ಯಾನನ್ 40D | |
4,064 | 2,704 | 10,989,056 | 11 | ಕ್ಯಾನನ್ 1Ds | |
4,000 | 3,000 | 12,000,000 | 12 | ಕ್ಯಾನನ್ ಪವರ್‌ಶಾಟ್ G9, ಫ್ಯೂಜಿಫಿಲ್ಮ್ ಫೈನ್‌ಪಿಕ್ಸ್ F100fd | |
4,032 | 3,024 | 12,192,768 | 12.3 | ಒಲಿಂಪಸ್ PEN E-P1 | |
4,256 | 2,832 | 12,052,992 | 12.1 | ನಿಕಾನ್ D3, ನಿಕಾನ್ D3S, ನಿಕಾನ್ D700 | |
4,272 | 2,848 | 12,166,656 | 12.2 | ಕ್ಯಾನನ್ 450D | |
4,288 | 2,848 | 12,212,224 | 12.2 | ನಿಕಾನ್ D2Xs/D2X, ನಿಕಾನ್ D300, ನಿಕಾನ್ D90, ನಿಕಾನ್ D5000 | |
4,368 | 2,912 | 12,719,616 | 12.7 | ಕ್ಯಾನನ್ 5D | |
4,672 | 3,104 | 14,501,888 | 14.5 | ಪೆಂಟ್ಯಾಕ್ಸ್ K20D | |
4,992 | 3,328 | 16,613,376 | 16.6 | ಕ್ಯಾನನ್ 1Ds II | |
5,270 | 3,516 | 18,529,320 | 18.5 | ಲೈಕಾ M9 | |
5,616 | 3,744 | 21,026,304 | 21.0 | ಕ್ಯಾನನ್ 1Ds III, ಕ್ಯಾನನ್ 5D ಮಾರ್ಕ್ II | |
6,048 | 4,032 | 24,385,536 | 24.4 | ಸೋನಿ α 850, ಸೋನಿ α 900, ನಿಕಾನ್ D3X | |
7,500 | 5,000 | 37,500,000 | 37.5 | ಲೈಕಾ S2 | |
7,212 | 5,142 | 39,031,344 | 39.0 | ಹಸ್ಸೆಲ್‌ಬ್ಲಾಡ್ H3DII-39 | |
8,176 | 6,132 | 50,135,232 | 50.1 | ಹಸ್ಸೆಲ್‌ಬ್ಲಾಡ್ H3DII-50 | |
8,956 | 6,708 | 60,076,848 | 60.1 | ಹಸ್ಸೆಲ್‌ಬ್ಲಾಡ್ H4D-60 | |
8,984 | 6,732 | 60,480,288 | 60.5 | ಫೇಸ್ ಓನ್ P65+ |
ಆಕೃತಿ ಸೆರೆಹಿಡಿಯುವ ಕ್ರಮಗಳು
ಬದಲಾಯಿಸಿಡಿಜಿಟಲ್ ಬ್ಯಾಕ್ಸ್ ಪರಿಚಯವಾದಾಗಿನಿಂದ, ಆಕೃತಿ ಸೆರೆಹಿಡಿಯಲು ಮೂರು ಮುಖ್ಯ ಕ್ರಮಗಳನ್ನು ಅಳವಡಿಸಲಾಗಿದೆ, ಪ್ರತಿಯೊಂದು ಸೆನ್ಸಾರ್‌ನ ಕಾನ್ಫಿಗರೇಷನ್ ಮತ್ತು ಬಣ್ಣದ ಫಿಲ್ಟರ್‌ಗಳ ಮೇಲೆ ಆಧಾರಿತವಾಗಿರುತ್ತವೆ. ಮೊದಲನೆಯ ಕ್ರಮಕ್ಕೆ ಸಾಮಾನ್ಯವಾಗಿ ಸಿಂಗಲ್-ಶೂಟ್ ಎನ್ನುತ್ತಾರೆ, ಕ್ಯಾಮರಾ ಲೆನ್ಸ್ ಮೂಲಕ ಸಾಗುವ ಬೆಳಕು ಕ್ಯಾಮರಾದ ಸೆನ್ಸಾರ್ ಮೇಲೆ ಎಷ್ಟು ಸಲ ಪ್ರದರ್ಶಿತವಾಗುತ್ತೆಂಬುದರ ಆಧಾರದಿಂದ. ಸಿಂಗಲ್-ಶೂಟ್ ಸೆರೆಹಿಡಿಯುವ ಪದ್ಧತಿ ಒಂದು CCD ಬಾಯರ್ ಫಿಲ್ಟರ್ ಮೊಸಾಯಿಕ್ ಅನ್ನು ಬಳಸುತ್ತದೆ ಅಥವಾ ಮೂರು ಬೇರೆ ಬೇರೆ ಆಕೃತಿ ಸೆನ್ಸಾರ್ ಗಳನ್ನು (ಪ್ರತಿಯೊಂದು ಮೂಲ ಕೂಡುವ ಬಣ್ಣಗಳಾದ ಕೆಂಪು, ಹಸಿರು ಮತ್ತು ನೀಲಿ) ಒಂದೇ ಆಕೃತಿಯ ಮೇಲೆ ಬೀಮ್ ಸ್ಪ್ಲಿಟರ್ ಮೂಲಕ ಛಾಯಾಚಿತ್ರ ಪಟಲವನ್ನು ಬೆಳಕಿಗೆ ಒಡ್ಡಿ ಬಳಸಲಾಗುತ್ತದೆ.
ಎರಡನೆಯ ಕ್ರಮಕ್ಕೆ ಮಲ್ಟಿ-ಶೂಟ್ ಎಂದು ಹೇಳಲಾಗುತ್ತದೆ. ಏಕೆಂದರೆ ಇದರ ಸೆನ್ಸಾರ್ ಆಕೃತಿಯ ಮೇಲೆ ಲೆನ್ಸ್ ಆಪರ್ಚರಿನ ಮೂರು ಅಥವಾ ಹೆಚ್ಚು ರಂಧ್ರಗಳ ಮೂಲಕ ಛಾಯಾಚಿತ್ರ ಪಟಲವನ್ನು ಬೆಳಕಿಗೆ ಒಡ್ಡಲಾಗುತ್ತದೆ. ಮಲ್ಟಿ-ಶೂಟ್ ತಂತ್ರಜ್ಞಾನವನ್ನು ಬಳಸಲು ಹಲವು ಕ್ರಮಗಳಿವೆ. ಸಾಮಾನ್ಯವಾಗಿ ಆರಂಭದಲ್ಲಿ ಹೆಚ್ಚಾಗಿ ಒಂದೇ ಆಕೃತಿ ಸೆನ್ಸಾರ್ ಮೂರು ಫಿಲ್ಟರ್ (ಮತ್ತೆ ಕೆಂಪು, ಹಸಿರು ಮತ್ತು ನೀಲಿ) ಕೂಡಿಸಿ ಪಡೆಯಬೇಕಾದ ಬಣ್ಣದ ಮಾಹಿತಿಯನ್ನು ಪಡೆಯಲು ಸೆನ್ಸಾರ್ ಮುಂದಿನಿಂದ ಕ್ರಮವಾಗಿ ಸಾಗಿಸಲಾಗುತ್ತದೆ. ಇನ್ನೊಂದು ಮಲ್ಟಿಪಲ್ ಶೂಟ್ ಕ್ರಮ ಒಂದು CCDಯನ್ನು ಬಾಯರ್ ಫಿಲ್ಟ್ರರ್ ಜೊತೆ ಬಳಸಿತು. ಆದರೆ ವಾಸ್ತವದಲ್ಲಿ ಸೆನ್ಸಾರ್ ಚಿಪ್‌ನ ಜಾಗವನ್ನು ಲೆನ್ಸನ ಫೋಕಸ್ ಪ್ಲೇನ್‌ಗೆ ಚಲಿಸಿತು. ಇದರ ಉದ್ದೇಶ CCD ಅನುಮತಿಸುವುದಕ್ಕಿಂತ ಹೆಚ್ಚಿನ ರೆಸೊಲ್ಯುಷನ್ ಆಕೃತಿಯನ್ನು ಒಟ್ಟಿಗೆ "ಸ್ಟಿಚ್" ಮಾಡಬೇಕೆಂದು. ಮೂರನೆಯ ಆವೃತ್ತಿಯಲ್ಲಿ ಬಾಯರ್ ಫಿಲ್ಟರ್ ಚಿಪ್ ಮೇಲೆ ಇಡದೇ ಎರಡು ಕ್ರಮಗಳನ್ನು ಸೇರಿಸಲಾಯಿತು.
ಮೂರನೆಯ ಕ್ರಮಕ್ಕೆ ಸ್ಕ್ಯಾನಿಂಗ್ ಎಂದು ಕರೆಯಲಾಗುತ್ತದೆ, ಏಕೆಂದರೆ ಇದರ ಸೆನ್ಸಾರ್ ಫೋಕಲ್ ಪ್ಲೇನ್ ಉದ್ದಕ್ಕೂ ಡೆಸ್ಕ್‌ಟಾಪ್ ಸ್ಕ್ಯಾನರ್‌ನ ಸೆನ್ಸಾರ್ ಹಾಗೆ ಚಲಿಸುತ್ತದೆ. ಇದರ ಲಿನಿಯರ್ ಅಥವಾ ಟ್ರೈ-ಲಿನಿಯರ್ ಸೆನ್ಸಾರ್‌ಗಳು ಬರಿ ಒಂದು ಲೈನಿನ ಫೋಟೊಸೆನ್ಸಾರ್ ಅಥವಾ ಮೂರು ಬಣ್ಣಗಳಿಗೆ ಮೂರು ಲೈನ್‍ಗಳ ಫೋಟೊಸೆನ್ಸಾರ್‌ಗಳನ್ನು ಮಾತ್ರ ಬಳಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇಡಿ ಕ್ಯಾಮೆರಾವನ್ನು ತಿರುಗಿಸಿದರೆ ಸ್ಕ್ಯಾನಿಂಗ್ ಪೂರ್ಣಗೊಳ್ಳುತ್ತದೆ; ಒಂದು ಡಿಜಿಟಲ್ ರೊಟೇಟಿಂಗ್ ಲೈನ್ ಕ್ಯಾಮೆರಾ ಅತಿ ಹೆಚ್ಚು ಒಟ್ಟು ರೆಸೊಲ್ಯೂಷನ್‌ನ ಆಕೃತಿಗಳನ್ನು ನೀಡುತ್ತದೆ. ಸೆರೆಹಿಡಿದ ಆಕೃತಿಗೆ ಯಾವ ಕ್ರಮವನ್ನು ಬಳಸಬೇಕೆಂದು ಆರಿಸುವುದು ಹೆಚ್ಚಾಗಿ ವಸ್ತು ವಿಷಯದ ಮೇಲೆ ಆಧಾರಿತವಿದೆ. ಒಂದು ಸಿಂಗಲ್-ಶೂಟ್ ಪದ್ಧತಿಯಲ್ಲಿ ನಡೆಯುವ ವಿಷಯವನ್ನು ಸೆರೆಹಿಡಿಯಲು ಪ್ರಯತ್ನಿಸುವುದು ಸಾಮಾನ್ಯವಾಗಿ ಸರಿಯಲ್ಲ. ಹೇಗಿದ್ದರೂ, ಹೆಚ್ಚು ಬಣ್ಣದ ಸಾದೃಶ್ಯ ಮತ್ತು ದೊಡ್ಡ ಫೈಲ್ ಗಾತ್ರಗಳು ಹಾಗು ಮಲ್ಟಿ-ಶೂಟ್ ಜೊತೆ ಲಭ್ಯವಿರುವ ರೆಸೊಲ್ಯೂಷನ್‍ಗಳು ಮತ್ತು ಸ್ಕ್ಯಾನಿಂಗ್ ಬ್ಯಾಕ್ಸ್ ಇವೆಲ್ಲವೂ ವ್ಯಾಪಾರೀ ಛಾಯಾಚಿತ್ರಗ್ರಾಹಕರನ್ನು ಆಕರ್ಷಿಸುತ್ತದೆ, ಅವರು ಸ್ಥಾಯಿ ವಿಷಯಗಳ ಮತ್ತು ದೊಡ್ಡ-ವಿನ್ಯಾಸದ ಛಾಯಾಚಿತ್ರಗಳ ಮೇಲೆ ಕೆಲಸ ಮಾಡುತ್ತಾರೆ. ಸಿಂಗಲ್-ಶೂಟ್ ಕ್ಯಾಮರಾಗಳಲ್ಲಿ ನಂಬಲಾರದ ಸುಧಾರಣೆಗಳಾಗಿವೆ ಮತ್ತು ಸಹಜವಾದ ಆಕೃತಿಯ ಫೈಲ್‍ನ ಸಂಸ್ಕರಣೆ 21ನೆಯ ಶತಮಾನದ ಆರಂಭದಲ್ಲಿ ಸಿಂಗಲ್-ಶೂಟ್, CCD-ಆಧಾರಿತ ಕ್ಯಾಮೆರಾಗಳನ್ನು ಪೂರ್ಣವಾಗಿ ಪ್ರಬಲಗೊಳಿಸಿತು, ಹೆಚ್ಚಿನ ವ್ಯಾಪಾರಿ ಛಾಯಾಚಿತ್ರ ಗ್ರಹಣದಲ್ಲಿ ಕೂಡ. CMOS-ಆಧಾರಿತ ಸಿಂಗಲ್ ಶೂಟ್ ಕ್ಯಾಮೆರಾಗಳು ಹಾಗೆಯೆ ಸಾಮಾನ್ಯವಾಗಿಬಿಟ್ಟವು.
ಫಿಲ್ಟರ್ ಮೊಸೆಕ್, ಪ್ರಕ್ಷೇಪಣ, ಮತ್ತು ಚಿತ್ರವಿರೂಪಗೊಳ್ಳುವಿಕೆ
ಬದಲಾಯಿಸಿಪ್ರಸ್ತುತ ಹಲವು ಗ್ರಾಹಕ ಡಿಜಿಟಲ್ ಕ್ಯಾಮೆರಾಗಳಲ್ಲಿ, ಒಂದು ಬಾಯರ್ ಫಿಲ್ಟರ್ ಮೊಸಾಯಿಕ್ ಅನ್ನು ಬಳಸಿರುತ್ತಾರೆ, ಜೊತೆಗೆ ಒಂದು ಆಪ್ಟಿಕಲ್ ಆನ್ಟಿ-ಅಲಿಯಾಸಿಂಗ್ ಫಿಲ್ಟರ್, ಕಡಿಮೆಗೊಂಡ ಮಾದರಿಯ ಬೇರೆ ಬೇರೆ ಮೂಲ-ಬಣ್ಣದ ಆಕೃತಿಗಳಿಂದಾಗುವ ಚಿತ್ರ ವಿರೂಪಗೊಳ್ಳುವಿಕೆಯನ್ನು ತಡೆಯಲು. ಡೊಮೊಸೆಕಿಂಗ್ ಕ್ರಮಾವಳಿ ಬಣ್ಣದ ಮಾಹಿತಿಯ ಸೃಷ್ಟಿಸುವ ಪೂರ್ಣ RGB ಆಕೃತಿಯ ದೇಟಾವನ್ನು ನಡುವೆ ಸೇರಿಸಲು ಬಳಕೆಯಾಗುತ್ತದೆ. ಬೀಮ್-ಸ್ಪ್ಲಿಟ್ಟರ್ ಸಿಂಗಲ್-ಶಾಟ್ 3CCD ವಿಧಾನವನ್ನು, ಥ್ರೀ-ಫಿಲ್ಟರ್ ಮಲ್ಟಿ-ಶಾಟ್ ವಿಧಾನವನ್ನು, ಅಥವಾ ಫೋವಿಯಾನ್ X3 ಸೆನ್ಸಾರ್‌ಗಳನ್ನು ಬಳಸುವ ಕ್ಯಾಮೆರಾಗಳು ಆಯ್‌೦ಟಿ-ಅಲಿಯಾಸಿಂಗ್ ಫಿಲ್ಟರ್‌ಗಳನ್ನು ಅಥವಾ ಡೆಮೊಸೇಕಿಂಗ್ ಅನ್ನು ಬಳಸುವುದಿಲ್ಲ.
ಕ್ಯಾಮೆರಾದಲ್ಲಿರುವ ಫರ್ಮ್‌ವೇರ್, ಅಥವಾ ಅಡೋಬ್ ಕ್ಯಾಮೆರಾ ರಾದಂತಹ ರಾ ಕನ್ವರ್ಟರ್ ಪ್ರೋಗ್ರಾಂನಲ್ಲಿರುವ ಒಂದು ಸಾಫ್ಟ್‌ವೇರ್, ಸೆನ್ಸಾರ್‌ನಲ್ಲಿರುವ ಸಂಸ್ಕರಿಸದ ದತ್ತಾಂಶವನ್ನು ಬಿಡಿಸಿ ಸಂಪೂರ್ಣ ಬಣ್ಣದ ಚಿತ್ರವನ್ನು ನೀಡುತ್ತದೆ, ಏಕೆಂದರೆ RGB ವರ್ಣ ಮಾದರಿಗೆ ಪ್ರತೀ ಪಿಕ್ಸೆಲ್‌ಗೂ ಸಾಂದ್ರತೆ ಮೌಲ್ಯದ ಅಗತ್ಯವಿರುತ್ತದೆ: ಪ್ರತೀ ಕೆಂಪು, ಹಸಿರು ಮತ್ತು ನೀಲಿಗೆ ಒಂದರಂತೆ(ಇತರೆ ವರ್ಣ ಮಾದರಿಗಳನ್ನು ಬಳಸಿದಾಗಲೂ ಅವುಗಳಿಗೆ ಪ್ರತಿ ಪಿಕ್ಸೆಲ್‌ಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಅಗತ್ಯವಿರುತ್ತದೆ). ಒಂದು ಸಿಂಗಲ್ ಸೆನ್ಸರ್ ಘಟಕಕ್ಕೆ ಒಂದೇ ಬಾರಿಗೆ ಈ ಮೂರೂ ಸಾಂದ್ರತೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ಹಾಗಾಗಿ ಪ್ರತೀ ಪಿಕ್ಸೆಲ್‌ಗೂ ನಿರ್ದಿಷ್ಟ ವರ್ಣವನ್ನು ಆಯ್ಕೆಮಾಡಿ ಫಿಲ್ಟರ್ ಮಾಡಲು ಒಂದು ಕಲರ್ ಫಿಲ್ಟರ್ ಆಯ್‌ರ್ರೆ (CFA) ಯನ್ನು ಬಳಸಬೇಕಾಗುತ್ತದೆ.
ಬೇಯರ್ ಫಿಲ್ಟರ್ ಪ್ಯಾಟರ್ನ್ ಒಂದು ಬೆಳಕಿನ ಫಿಲ್ಟರ್‌ಗಳ ಪುನರಾವರ್ತಿಸುವ 2×2 ಮೊಸಾಯಿಕ್ ಪ್ಯಾಟರ್ನ್ ಆಗಿದ್ದು, ಇದರಲ್ಲಿ ಹಸಿರು ವರ್ಣದವು ವಿರುದ್ಧ ಮೂಲೆಗಳಲ್ಲಿರುತ್ತವೆ ಮತ್ತು ಕೆಂಪು ಮತ್ತು ನೀಲಿಗಳು ಇತರ ಎರೆಡು ಸ್ಥಳಗಳಲ್ಲಿರುತ್ತವೆ. ಹೆಚ್ಚಿನ ಅನುಪಾತದ ಹಸಿರು ಬಣ್ಣವು ಮನುಷ್ಯನ ದೃಷ್ಠಿವ್ಯವಸ್ಥೆಯ ಕಾರಣದಿಂದಾಗಿ ಹೆಚ್ಚಿನ ಸೌಲಭ್ಯ ಪಡೆಯುತ್ತದೆ, ಮತ್ತು ಈ ಕಾರಣದಿಂದಾಗಿ ಕಾಂತಿಯು ಹಸಿರು ಬಣ್ಣದ ಮೂಲಕ ನಿರ್ಧರಿತವಾಗುತ್ತದೆ, ಮತ್ತು ಇದು ಹ್ಯೂ ಅಥವಾ ಸ್ಯಾಚುರೇಶನ್‌ಗಿಂತ ಹೆಚ್ಚಾಗಿ ಕಾಂತಿಗೆ ಶೀಘ್ರಗ್ರಾಹಿಯಾಗಿದೆ. ಕೆಲವೊಮ್ಮೆ 4-ವರ್ಣದ ಫಿಲ್ಟರ್ ಪ್ಯಾಟರ್ನ್ ಅನ್ನು, ಹೆಚ್ಚಾಗಿ ಎರಡು ವಿಭಿನ್ನ ಹಸಿರಿನ ವರ್ಣಗಳನ್ನು ಒಳಗೊಂಡಿರುವಂತೆ, ಬಳಸಲಾಗುತ್ತದೆ. ಇದು ಸಮರ್ಥವಾಗಿ ಹೆಚ್ಚು ಸ್ಪಷ್ಟವಾದ ಬಣ್ಣವನ್ನು ನೀಡುತ್ತದೆ, ಆದರೆ ಇದಕ್ಕೆ ತುಸು ಹೆಚ್ಚು ಸಂಕೀರ್ಣವಾದ ಪ್ರಕ್ಷೇಪಣ ಪ್ರಕ್ರಿಯೆಯ ಅಗತ್ಯವಿರುತ್ತದೆ. ಪ್ರತಿಯೊಂದು ಪಿಕ್ಸೆಲ್‌ಗೆ ಸೆರೆ ಹಿಡಿಯಲಾಗದ ವರ್ಣಸಾಂದ್ರತೆ ಮೌಲ್ಯಗಳನ್ನು ಪಾರ್ಶ್ವದಲ್ಲಿರುವ ಪಿಕ್ಸೆಲ್‌ಗಳ ಮೌಲ್ಯಗಳಿಂದ ಪ್ರಕ್ಷಿಪ್ತಗೊಳಿಸಬಹುದಾಗಿದ್ದು (ಅಥವಾ ಊಹಿಸಬಹುದಾಗಿದ್ದು), ಇದು ಬಣ್ಣವನ್ನು ಲೆಕ್ಕಮಾಡಿರುವುದನ್ನು ತೋರಿಸುತ್ತದೆ.
ಸಂಪರ್ಕ ಕಲ್ಪಿಸುವಿಕೆ
ಬದಲಾಯಿಸಿಫೋಟೋಗಳನ್ನು ಉಳಿಸುವಿಕೆ
ಬದಲಾಯಿಸಿಅನೇಕ ಡಿಜಿಟಲ್ ಕ್ಯಾಮೆರಾಗಳನ್ನು ನೇರವಾಗಿ ಕಂಪ್ಯೂಟರ್‌ಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಅದರಲ್ಲಿರುವ ಚಿತ್ರಗಳನ್ನು ರವಾನಿಸಬಹುದಾಗಿದೆ:
- ಪ್ರಾರಂಭದ ಕ್ಯಾಮೆರಾಗಳು PCಯ ಸೀರಿಯಲ್ ಪೋರ್ಟ್ ಅನ್ನು ಬಳಸಿದವು. ಈಗ ಕೆಲವು ಕಂಪ್ಯೂಟರ್‌ಗಳಲ್ಲಿ ಫೈರ್‌ವೈರ್ ಪೋರ್ಟ್ ಇದ್ದರೂ ಕೂಡಾ, USB ಯ ಬಳಕೆಯೇ ಅತ್ಯಂತ ಜನಪ್ರಿಯವಾಗಿದೆ (ಹೆಚ್ಚಿನ ಕ್ಯಾಮೆರಾಗಳನ್ನು USB ಮಾಸ್ ಸ್ಟೋರೇಜ್ ಆಗಿ ವೀಕ್ಷಿಸಬಹುದಾಗಿದೆ). ಕೆಲವು ಕ್ಯಾಮೆರಾಗಳು ಸಂಪರ್ಕ ಸಾಧಿಸಲು USB MSC ನ ಬದಲು USB PTP ಮೋಡ್ ಅನ್ನು ಬಳಸುತ್ತವೆ; ಕೆಲವರಲ್ಲಿ ಈ ಎರೆಡೂ ಮೋಡ್‌ಗಳು ಲಭ್ಯವಿವೆ.
- ಕೊಡಾಕ್ ಈಸಿಶೇರ್ ಒನ್‌ದಂತಹ ಕೆಲವು ಕ್ಯಾಮೆರಾಗಳು ಬ್ಲೂಟೂಥ್ ಅಥವಾ IEEE 802.11 WiFi ಮೂಲಕ ವೈರ್‌ಲೆಸ್ ಸಂಪರ್ಕವನ್ನು ಬಳಸುತ್ತವೆ.
- ಕ್ಯಾಮೆರಾಫೋನ್‌ಗಳು ಮತ್ತು ಕೆಲವು ಉನ್ನತ ಮಟ್ಟದ ಸ್ವಯಂಪೂರ್ಣವಾದ ಡಿಜಿಟಲ್ ಕ್ಯಾಮೆರಾಗಳು ಚಿತ್ರಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಗಾಗಿ ಸಂಪರ್ಕ ಸಾಧಿಸಲು ಸೆಲ್ಯುಲಾರ್ ನೆಟ್‌ವರ್ಕ್‌ಗಳನ್ನು ಸಹಾ ಬಳಸುತ್ತವೆ.
ಸೆಲ್ಯುಲಾರ್ ನೆಟ್‌ವರ್ಕ್‌ಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸಲ್ಪಡುವ ಪ್ರಮಾಣವೆಂದರೆ MMS ಮಲ್ಟಿಮೀಡಿಯಾ ಸೇವೆಯಾಗಿದ್ದು, ಇದನ್ನು "ಪಿಕ್ಚರ್ ಮೆಸೇಜಿಂಗ್" ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಇದನ್ನು 1.3 ಬಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಸೆಲ್ಯುಲಾರ್ ನೆಟ್‌ವರ್ಕ್‌ಗಳಲ್ಲಿ ಬಳಸಲ್ಪಡುವ ಇನ್ನೊಂದು ವಿಧಾನವೆಂದರೆ ಚಿತ್ರಗಳನ್ನು ಇಮೇಲ್ ಲಗತ್ತುಗಳನ್ನಾಗಿ ಕಳುಹಿಸುವುದು. ಶೇಕಡಾವಾರು ತುಂಬ ಕಡಿಮೆ ಕ್ಯಾಮೆರಾಫೋನ್‌ಗಳಲ್ಲಿ ಇಮೇಲ್ ಬೆಂಬಲ ಇರುವುದರಿಂದಾಗಿ ಇದು ಅಷ್ಟೇನೂ ಸಾಮಾನ್ಯವಾಗಿ ಬಳಸಲ್ಪಡುತ್ತಿಲ್ಲ. ಇವುಗಳಿಗೆ ಒಂದು ಸಾಮಾನ್ಯವಾದ ಪರ್ಯಾಯವೆಂದರೆ ಕಾರ್ಡ್ ರೀಡರ್ ಬಳಸುವಿಕೆ. ಇದು ಅನೇಕ ರೀತಿಯ ಸಂಗ್ರಹ ಮಾಧ್ಯಮಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಇದರಿಂದ ಮಾಹಿತಿಯನ್ನು ಕಂಪ್ಯೂಟರ್‌ಗಳಿಗೆ ಅತ್ಯಂತ ವೇಗದಲ್ಲಿ ಸಾಗಿಸಬಹುದಾಗಿದೆ. ಕಾರ್ಡ್ ರೀಡರ್ ಮಾಹಿತಿ ಸಾಗಣೆ ಸಮಯದಲ್ಲಿ USB ಪೋರ್ಟ್‌ನಿಂದ ಶಕ್ತಿಯನ್ನು ಬಳಸುವುದರಿಂದಾಗಿ ಕ್ಯಾಮೆರಾಗಳ ಬ್ಯಾಟರಿ ಶಕ್ತಿ ಮಾಹಿತಿ ಸಾಗಣೆ ಸಮಯದಲ್ಲಿ ಪೋಲಾಗುವುದನ್ನು ತಡೆಯಬಹುದಾಗಿದೆ. ಸಂಗ್ರಹ ಮಾಧ್ಯಮದಲ್ಲಿರುವ ಒಟ್ಟು ಚಿತ್ರ ಸಂಗ್ರಹಗಳನ್ನು ನೇರವಾಗಿ ಪಡೆದುಕೊಳ್ಳುವುದು ಈ ಬಾಹ್ಯ ಕಾರ್ಡ್ ರೀಡರ್ ನ ಸಹಾಯದಿಂದ ಸುಲಭಸಾಧ್ಯವಾಗಿದೆ. ಆದರೆ, ಕೇವಲ ಒಂದೇ ಒಂದು ಸಂಗ್ರಹ ಕಾರ್ಡ್‌ನ್ನು ಬಳಸುತ್ತಿದ್ದರೆ, ಅದನ್ನು ಮತ್ತೆ ಮತ್ತೆ ಕ್ಯಾಮೆರಾದಿಂದ ಕಾರ್ಡ್ ರೀಡರ್ ಗೆ ರೀಡರ್ ದಿಂದ ಕ್ಯಾಮೆರಾಗೆ ಬದಲಿಸುವುದು ಅನಾನುಕೂಲಕರವಾಗುತ್ತದೆ.
ಫೋಟೋಗಳನ್ನು ಮುದ್ರಿಸುವಿಕೆ
ಬದಲಾಯಿಸಿಅನೇಕ ಆಧುನಿಕ ಕ್ಯಾಮೆರಾಗಳು PictBridge ಗುಣಮಟ್ಟವನ್ನು ಬೆಂಬಲಿಸುತ್ತವೆ. ಇದು ಅವುಗಳಿಗೆ ಫೋಟೋಗಳನ್ನು ನೇರವಾಗಿ PictBridge-ಸಕ್ರಿಯಗೊಳಿಸಿದ ಕಂಪ್ಯೂಟರ್ ಮುದ್ರಣಯಂತ್ರಗಳಿಗೆ ಕಂಪ್ಯೂಟರ್ ಸಹಾಯವಿಲ್ಲದೇ ಕಳಿಸುತ್ತದೆ. ಕೇಬಲ್ ಸಂಪರ್ಕವಿಲ್ಲದೇ ವೈರ್‌ಲೆಸ್ ಸಂಪರ್ಕದ ಮೂಲಕ ಸಹಾ ಫೋಟೋಗಳನ್ನು ಮುದ್ರಿಸುವ ಅವಕಾಶವಿದೆ. ಪೋಲಾರಾಯ್ಡ್ ತನ್ನ ಡಿಜಿಟಲ್ ಕ್ಯಾಮೆರಾದೊಂದಿಗೆ ಮುದ್ರಣಯಂತ್ರವನ್ನು ಸಂಯೋಜಿಸಿ ಮಾರುಕಟ್ಟೆಗೆ ಬಿಟ್ಟಿದೆ. ಇದರಿಂದಾಗಿ ಚಿಕ್ಕ ಫೋಟೋಗಳನ್ನು ಮುದ್ರಿಸಬಹುದಾಗಿದೆ. ಇದು 1975 ರಲ್ಲಿ ಪೋಲಾರಾಯ್ಡ್ ತಾನೇ ಪ್ರಸಿದ್ಧಿಗೊಳಿಸಿದ ಮೂಲ ಇನ್‌ಸ್ಟಂಟ್ ಕ್ಯಾಮೆರಾವನ್ನು ನೆನಪಿಸುತ್ತದೆ.[೧೦]
ಫೋಟೋಗಳನ್ನು ಪ್ರದರ್ಶಿಸುವಿಕೆ
ಬದಲಾಯಿಸಿಹೆಚ್ಚಿನ ಡಿಜಿಟಲ್ ಕ್ಯಾಮೆರಾಗಳು ಒಂದು ವಿಡಿಯೋ ಔಟ್‌ಪುಟ್ ಪೋರ್ಟ್‌ನ್ನು ಸಹಾ ಒಳಗೊಂಡಿರುತ್ತವೆ. ಸಾಮಾನ್ಯವಾಗಿ sVideo, ಇದು ದೂರದರ್ಶನಕ್ಕೆ ಪ್ರಮಾಣಿತ-ಸ್ಪಷ್ಟರೂಪತೆಯಿರುವ ವಿಡಿಯೋ ಸಂಕೇತವನ್ನು ಕಳಿಸುತ್ತದೆ, ಬಳಕೆದಾರರಿಗೆ ಒಮ್ಮೆಗೆ ಒಂದು ಚಿತ್ರವನ್ನು ನೋಡುವುದನ್ನು ಸಾಧ್ಯವಾಗಿಸುತ್ತದೆ. ಕ್ಯಾಮೆರಾದ ಮೇಲಿರುವ ಗುಂಡಿಗಳು ಅಥವಾ ಮೆನುಗಳು ಫೋಟೊಗಳನ್ನು ಆಯ್ಕೆಮಾಡಲು, ಒಂದರಿಂದ ಇನ್ನೊಂದಕ್ಕೆ ಮುಂದುವರೆಯಲು, ಅಥವಾ ಸ್ವಯಂಚಾಲಿತವಾಗಿ ಒಂದು "ಸ್ಲೈಡ್ ಶೋ"ವನ್ನು ಟಿವಿಗೆ ಕಳುಹಿಸಲು ಸಹಾಯ ಮಾಡುತ್ತವೆ.
ಉನ್ನತ ದರ್ಜೆಯ ಡಿಜಿಟಲ್ ಕ್ಯಾಮೆರಾ ತಯಾರಕರು ತಮ್ಮ ಉನ್ನತ-ಸಾಂದ್ರತೆಯ ಗುಣಮಟ್ಟದ ಚಿತ್ರಗಳನ್ನು HDTVಯಲ್ಲಿ ತೋರಿಸಲು HDMI ಯನ್ನು ಕ್ಯಾಮೆರಾಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಜನವರಿ 2008 ರಲ್ಲಿ ಸಿಲಿಕಾನ್ ಇಮೇಜ್ ಮೊಬೈಲ್ ಸಾಧನಗಳಿಂದ ದೂರದರ್ಶನಕ್ಕೆ ವಿಡಿಯೋಗಳನ್ನು ಡಿಜಿಟಲ್ ರೂಪದಲ್ಲಿ ಕಳುಹಿಸುವ ಹೊಸ ತಂತ್ರಜ್ಞಾನವನ್ನು ಪ್ರಕಟಿಸಿತು. MHL ವಿಡಿಯೋ ಪ್ರವಾಹವಾಗಿ 1080p ದೃಶ್ಯಸಾಂದ್ರತೆಯ ವರೆಗಿನ ಚಿತ್ರಗಳನ್ನು ಕಳುಹಿಸುತ್ತದೆ ಮತ್ತು HDMI[೧೧] ನೊಂದಿಗೆ ಸಹವರ್ತಿಸುತ್ತದೆ. ಕೆಲವು ಡಿವಿಡಿ ರೆಕಾರ್ಡರ್‌ಗಳು ಮತ್ತು ದೂರದರ್ಶನ ಯಂತ್ರಗಳು ಕ್ಯಾಮೆರಾಗಳಲ್ಲಿ ಬಳಸಲ್ಪಡುವ ಮೆಮರಿ ಕಾರ್ಡ್‌ಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ; ಪ್ರತಿಯಾಗಿ ಅನೇಕ ರೀತಿಯ ಪ್ಲ್ಹ್ಯಾಶ್ ಕಾರ್ಡ್ ರೀಡರ್‌ಗಳು ಟಿವಿ ಔಟ್‌ಪುಟ್ ಸಾಮರ್ಥ್ಯವನ್ನು ಹೊಂದಿವೆ.
ಕ್ರಮಗಳು
ಬದಲಾಯಿಸಿಅನೇಕ ಡಿಜಿಟಲ್ ಕ್ಯಾಮೆರಾಗಳು ವಿವಿಧ ಅಪ್ಲಿಕೇಶನ್‌ಗಳಿಗೆ ಮೊದಲೇ ಹೊಂದಿಸಿದ ಕ್ರಮಗಳನ್ನು ಹೊಂದಿರುತ್ತವೆ. ಕ್ಯಾಮೆರಾದಲ್ಲಿ ಸರಿಯಾದ ದೃಶ್ಯ ಅನಾವರಣದ ನಿರ್ಬಂಧಗಳಲ್ಲಿಯೇ ಅನೇಕ ಮಾನದಂಡಗಳನ್ನು ಬದಲಿಸಬಹುದಾಗಿದೆ. ಅವುಗಳಲ್ಲಿ ದೃಶ್ಯ ಅನಾವರಣ, ಬೆಳಕಿಂಡಿ, ಕೇಂದ್ರೀಕರಿಸುವಿಕೆ, ಬೆಳಕಿನ ಮಾಪನ, ವೈಟ್ ಬ್ಯಾಲೆನ್ಸ್, ಮತ್ತು ಸಮಾನ ಸೂಕ್ಷ್ಮಗ್ರಾಹಿತ್ವ ಮುಂತಾದವುಗಳು ಸೇರಿವೆ. ಉದಾಹರಣೆಗೆ, ಪೋರ್ಟ್ರೇಟ್ ಕ್ರಮವು ಕೇಂದ್ರೀಕರಿಸಲಾಗದ ಹಿನ್ನೆಲೆಯನ್ನು ಪ್ರದರ್ಶಿಸಲು ವಿಶಾಲವಾದ ಬೆಳಕಿಂಡಿಯನ್ನು ಬಳಸಬಹುದು, ಮತ್ತು ಚಿತ್ರದಲ್ಲಿನ ಇತರ ಸಂಗತಿಗಳಿಗಿಂತ ಮನುಷ್ಯನ ಮುಖದ ಮೇಲೆಯೇ ಕೇಂದ್ರೀಕರಿಸಲು ಪ್ರಯತ್ನಿಸಬಹುದು.
ಚಿತ್ರ ದತ್ತಾಂಶ ಸಂಗ್ರಹ
ಬದಲಾಯಿಸಿಹೆಚ್ಚಿನ ಡಿಜಿಟಲ್ ಕ್ಯಾಮೆರಾಗಳು ಚಿತ್ರ ದತ್ತಾಂಶ ಸಂಗ್ರಹಕ್ಕಾಗಿ ಯಾವುದೇ ರೀತಿಯ ತೆಗೆಯಬಹುದಾದ ಸಂಗ್ರಾಹಕವನ್ನು ಬಳಸುತ್ತವೆ. ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಮೀಡಿಯಾ ಪ್ರಕಾರಗಳು ಯಾವುದೋ ರೀತಿಯ ಫ್ಲ್ಯಾಶ್ ಮೆಮರಿ ಬಳಸುವ ಮೆಮರಿ ಕಾರ್ಡ್ ಆಗಿದ್ದು (ಕಾಂಪ್ಯಾಕ್ಟ್‌ಫ್ಲ್ಯಾಶ್, SD ಇತ್ಯಾದಿಗಳು), ಇನ್ನೂ ಬೇರೆಯ ಸಂಗ್ರಹ ಪದ್ಧತಿಗಳಿವೆ. ಅವುಗಳೆಂದರೆ ಮೈಕ್ರೋಡ್ರೈವ್‌ಗಳು (ಅತ್ಯಂತ ಚಿಕ್ಕ ಹಾರ್ಡ್ ಡಿಸ್ಕ್ ಡ್ರೈವ್‌ಗಳು), CD ಸಿಂಗಲ್ (185 MB), ಮತ್ತು 3.5" ಫ್ಲಾಪಿ ಡಿಸ್ಕ್‌ಗಳು.
ತೆಗೆಯಬಲ್ಲ ಸಂಗ್ರಾಹಕ ತಂತ್ರಜ್ಞಾನವು ಈ ಕೆಳಗಿನವುಗಳನ್ನು ಹೊಂದಿದೆ:
-
ಕಾಂಪ್ಯಾಕ್ಟ್‌ಫ್ಲ್ಯಾಶ್ (CF-I)
-
ಮೆಮರಿ ಸ್ಟಿಕ್
-
ಮೈಕ್ರೋಡ್ರೈವ್ (CF-II)
-
ಮಲ್ಟಿಮೀಡಿಯಾಕಾರ್ಡ್ (MMC)
-
ಸೆಕ್ಯೂರ್ ಡಿಜಿಟಲ್ ಕಾಡ್ (SD)
-
MiniSD ಕಾರ್ಡ್
-
ಸ್ಮಾರ್ಟ್ಮೀಡಿಯಾ
-
USB ಫ್ಲ್ಯಾಷ್ ಡ್ರೈವ್
-
xD-ಪಿಕ್ಚರ್ ಕಾರ್ಡ್ (xD)
-
3.5" ಫ್ಲಾಪಿ ಡಿಸ್ಕ್‌ಗಳು
-
ಮಿನಿ CD (ಎಡಕ್ಕೆ)
ಇತರೆ ಫಾರ್ಮ್ಯಾಟ್‌ಗಳು ಇವುಗಳನ್ನು ಹೊಂದಿವೆ:
- ಆನ್‌ಬೋರ್ಡ್ ಫ್ಲ್ಯಾಶ್ ಮೆಮರಿ — ಕಡಿಮೆ ಬೆಲೆಯ ಕ್ಯಾಮೆರಾಗಳು ಮತ್ತು ಸಾಧನದ ಮುಖ್ಯ ಬಳಕೆಯ ಜೊತೆಯಲ್ಲಿ ಬರುವ ಕ್ಯಾಮೆರಾಗಳು (ಉದಾಹರಣೆಗೆ ಕ್ಯಾಮೆರಾ ಫೋನ್)
- PC ಕಾರ್ಡ್ ಹಾರ್ಡ್ ಡ್ರೈವ್‌ಗಳು — ಪ್ರಾರಂಭಿಕ ವೃತ್ತಿಪರ ಕ್ಯಾಮೆರಾಗಳು (ನಿಲ್ಲಿಸಲಾಗಿದೆ)
- ಥರ್ಮಲ್ ಪ್ರಿಂಟರ್ — ಇದು ಒಂದು ಮಾದರಿಯ ಕ್ಯಾಮೆರಾದಲ್ಲಿ ಮಾತ್ರ ಪರಿಚಿತವಾಗಿದ್ದು, ಅದರಲ್ಲಿ ಚಿತ್ರಗಳನ್ನು ಸಂಗ್ರಹಿಸುವ ಬದಲಾಗಿ ತಕ್ಷಣ ಮುದ್ರಿಸಲಾಗುತ್ತದೆ
ಹೆಚ್ಚಿನ ಡಿಜಿಟಲ್ ಕ್ಯಾಮೆರಾ ತಯಾರಕರು ತಮ್ಮ ಕ್ಯಾಮೆರಾಗಳು ಲಿನಕ್ಸ್ ಅಥವಾ ಇತರ ಉಚಿತ ಸಾಫ್ಟ್‌ವೇರ್‌ಗಳಲ್ಲಿ ಕೆಲಸ ಮಾಡಲು ಅಗತ್ಯವಾದ ಡ್ರೈವರ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ನೀಡುವುದಿಲ್ಲ. ಆದರೂ, ಅನೇಕ ಕ್ಯಾಮೆರಾಗಳು ಪ್ರಮಾಣಿತ USB ಸಂಗ್ರಹ ಪ್ರೋಟೊಕಾಲ್ ಬಳಸುತ್ತಿದ್ದು, ಹಾಗಾಗಿ ಅವು ಬಳಸಲು ಸುಲಭವಾಗಿವೆ. ಇತರ ಕ್ಯಾಮೆರಾಗಳು ಜಿಫೋಟೋ ಪ್ರೊಜೆಕ್ಟ್‌ನಿಂದ ಬೆಂಬಲಿಸಲ್ಪಟ್ಟಿವೆ.
ಫ್ಯಾರ್ಮ್ಯಾಟ್‌ಗಳು
ಬದಲಾಯಿಸಿಜಾಯಿಂಟ್ ಫೋಟೋಗ್ರಫಿ ಎಕ್ಸ್‌ಪರ್ಟ್ಸ್ ಗ್ರೂಪ್ (JPEG) ಪ್ರಮಾಣದ ಪ್ರಕಾರವು ಚಿತ್ರಗಳನ್ನು ಉಳಿಸಿಡಲು ಬಳಸುವ ಅತ್ಯಂತ ಸಾಮಾನ್ಯವಾದ ಚಿತ್ರವಿನ್ಯಾಸವಾಗಿದೆ. ಇತರೆ ಚಿತ್ರವಿನ್ಯಾಸ ಪ್ರಕಾರಗಳೆಂದರೆ ಟ್ಯಾಗ್ಡ್ ಇಮೇಜ್ ಫೈಲ್ ಫ್ಯಾರ್ಮ್ಯಾಟ್ (TIFF) ಮತ್ತು ಇನ್ನಿತರ ರಾ ಇಮೇಜ್ ಫಾರ್ಮ್ಯಾಟ್‌ಗಳು. ಅನೇಕ ಕ್ಯಾಮೆರಾಗಳು, ವಿಶೇಷವಾಗಿ ವೃತ್ತಿಪರ ಅಥವಾ DSLR ಕ್ಯಾಮೆರಾಗಳು, ಈ ರಾ ಇಮೇಜ್ ಫಾರ್ಮ್ಯಾಟ್ ಅನ್ನು ಬೆಂಬಲಿಸುತ್ತವೆ. ರಾ ಇಮೇಜ್ ಅಂದರೆ ನೇರವಾಗಿ ಕ್ಯಾಮೆರಾದ ಸಂವೇದಕದಿಂದ ಪಡೆದಿರುವ, ಇನ್ನೂ ಸಂಸ್ಕರಣೆಗೆ ಒಳಪಡದಿರುವ ಪಿಕ್ಸೆಲ್ ದತ್ತಾಂಶದ ರಚನೆಯಾಗಿದೆ. ಅವು ಹೆಚ್ಚಾಗಿ ಪ್ರತೀ ಕ್ಯಾಮೆರಾ ಉತ್ಪಾದಕ ಸಂಸ್ಥೆಯ ಮಾಲಿಕತ್ವಕ್ಕೆ ಒಳಪಟ್ಟಿರುವ ಚಿತ್ರವಿನ್ಯಾಸಗಳಲ್ಲಿಯೇ ಉಳಿಸಲ್ಪಟ್ಟಿರುತ್ತವೆ, ಅಂದರೆ ನಿಕಾನ್ ಕ್ಯಾಮೆರಾಗಳಿಗೆ NEF ಚಿತ್ರವಿನ್ಯಾಸ, ಕ್ಯಾನನ್‌ಗೆ CRW ಅಥವಾ CR2, ಮತ್ತು ಮಿನೋಲ್ಟಾಗೆ MRW ಚಿತ್ರವಿನ್ಯಾಸ. ಅಡೋಬ್ ಸಿಸ್ಟಮ್ಸ್ ಸಂಸ್ಥೆಯು DNG ಎಂಬ ರಾಯಧನರಹಿತವಾದ ರಾ ಇಮೇಜ್ ಫ್ಯಾರ್ಮ್ಯಾಟ್ ಚಿತ್ರವಿನ್ಯಾಸವನ್ನು ಬಿಡುಗಡೆ ಮಾಡಿದ್ದು, ಇದನ್ನು ಕನಿಷ್ಟ 10 ಕ್ಯಾಮರಾ ತಯಾರಕರು ಬಳಸಿಕೊಳ್ಳುತ್ತಿದ್ದಾರೆ.
ಸಂಸ್ಕರಣೆಗೊಳಪಡದಿರುವ ಚಿತ್ರಗಳನ್ನು ಪ್ರಾರಂಭದಲ್ಲಿ ವಿಶೇಷವಾದ ಚಿತ್ರ ಪರಿಷ್ಕರಣೆ ಮಾಡುವ ಪ್ರೋಗ್ರಾಮ್‌ಗಳಲ್ಲಿ ಸಂಸ್ಕರಿಸಬೇಕಾಗುತ್ತಿತ್ತು, ಆದರೆ ಸಮಯ ಕಳೆದಂತೆ Google ನ ಪಿಕಾಸಾದಂತಹ ಅನೇಕ ಮುಖ್ಯವಾಹಿನಿಯಲ್ಲಿರುವ ಚಿತ್ರ ಪರಿಷ್ಕರಣೆ ಪ್ರೋಗ್ರಾಮ್‌ಗಳು ಸಂಸ್ಕರಣೆಗೊಳಪಡದಿರುವ ಚಿತ್ರಗಳನ್ನು ಬೆಂಬಲಿಸಲು ಪ್ರಾರಂಭಿಸಿದವು. ವೈಟ್ ಬ್ಯಾಲೆನ್ಸ್, ಎಕ್ಸ್‌ಪೊಶರ್ ಕಾಂಪನ್ಸೇಶನ್, ಕಲರ್ ಟೆಂಪರೇಚರ್ ಮುಂತಾದ ಸೆಟ್ಟಿಂಗ್ಸ್‌ನಲ್ಲಿನ ಆಯ್ಕೆಗಳು ಸಂಸ್ಕರಣೆಗೊಳಪಡದಿರುವ ಚಿತ್ರಗಳನ್ನು ಪರಿಷ್ಕರಿಸುವುದನ್ನು ಹೆಚ್ಚು ಸುಲಭವಾಗಿಸಿದವು. ಸಾರಾಂಶವೆಂದರೆ, ರಾ ಫಾರ್ಮ್ಯಾಟ್ ಮೂಲಕ ಛಾಯಾಚಿತ್ರಗ್ರಾಹಕರಿಗೆ ಕ್ಯಾಮೆರಾದಲ್ಲಿ ಪ್ರಮುಖ ಹೊಂದಾಣಿಕೆಗಳನ್ನು ಚಿತ್ರದ ಗುಣಮಟ್ಟವನ್ನು ಕಳೆದುಕೊಳ್ಳದೇ ಮಾಡಿಕೊಳ್ಳುವುದು ಸಾಧ್ಯವಾಯಿತು, ಇಲ್ಲದಿದ್ದರೆ ಈ ಚಿತ್ರವನ್ನು ಮತ್ತೆ ತೆಗೆಯಬೇಕಾಗುತ್ತಿತ್ತು.
ಸಿನೆಮಾಗಾಗಿ AVI, DV, MPEG, MOV (ಹೆಚ್ಚಾಗಿ ಮೋಶನ್ JPEG ಯನ್ನೂ ಒಳಗೊಂಡಿರುತ್ತವೆ), WMV, ಮತ್ತು ASF (ಮೂಲತಃ ಇದು WMV ಗೆ ಸಮಾನವಾಗಿದೆ) ಫಾರ್ಮ್ಯಾಟ್‌ಗಳನ್ನು ಬಳಸಲಾಗುತ್ತದೆ. ಇತ್ತೀಚಿನ ಫಾರ್ಮ್ಯಾಟ್‌ಗಳಲ್ಲಿ MP4 ಸಹಾ ಸೇರಿದ್ದು, QuickTime ಫಾರ್ಮ್ಯಾಟ್ ಮೂಲದಿಂದ ರಚಿಸಲ್ಪಟ್ಟಿದೆ ಮತ್ತು ಹೊಸ ರೀತಿಯ ಸಂಕ್ಷೇಪ ಕ್ರಮಾವಳಿಗಳನ್ನು ಬಳಸುವ ಮೂಲಕ ಮೂಲ ಸ್ಥಳದಲ್ಲಿಯೇ ಹೆಚ್ಚಿನ ಸಮಯದ ರೆಕಾರ್ಡಿಂಗ್ ಮಾಡುವಿಕೆಯನ್ನು ಸಾಧ್ಯವಾಗಿಸುತ್ತದೆ. ಇನ್ನಿತರ ಚಿತ್ರವಿನ್ಯಾಸಗಳನ್ನು ಕ್ಯಾಮೆರಾಗಳಲ್ಲಿ ಬಳಸಲಾಗಿದ್ದರೂ ಅವುಗಳನ್ನು ಚಿತ್ರಗಳಿಗಾಗಿ ಅಲ್ಲದೇ ಡಿಸೈನ್ ರೂಲ್ ಫಾರ್ ಕ್ಯಾಮೆರಾ ಫಾರ್ಮ್ಯಾಟ್ (DCF) ಎಂಬ ಕ್ಯಾಮೆರಾದ ಆಂತರಿಕ ಫೈಲ್ ಸ್ವರೂಪ ಮತ್ತು ಹೆಸರಿಸುವಿಕೆ, ಮತ್ತು ಡಿಜಿಟಲ್ ಪ್ರಿಂಟ್ ಆರ್ಡರ್ ಫಾರ್ಮ್ಯಾಟ್ (DPOF), ಇದು ಯಾವ ಪ್ರಕಾರದ ಚಿತ್ರಗಳನ್ನು ಮತ್ತು ಎಷ್ಟು ಪ್ರತಿಗಳನ್ನು ಮುದ್ರಿಸಬಹುದು ಎಂಬುದನ್ನು ನಿರ್ದೇಶಿಸುತ್ತದೆ, ಕುರಿತಾದ ISO ನಿರ್ದೇಶನದ ಕಾರಣ ಬಳಸಲಾಗಿರುತ್ತದೆ. ಹೆಚ್ಚಿನ ಕ್ಯಾಮೆರಾಗಳು ಎಕ್ಸಿಫ್ ದತ್ತಾಂಶವನ್ನು ಒಳಗೊಂಡಿದ್ದು, ಅದು ಚಿತ್ರಗಳ ಕುರಿತಂತೆ ಮೆಟಾಡೇಟಾವನ್ನು ಒದಗಿಸುತ್ತದೆ. ಎಕ್ಸಿಫ್ ದತ್ತಾಂಶವು ಬೆಳಕಿಂಡಿ, ಅನಾವರಣ ಸಮಯ, ಫೋಕಲ್ ಲೆಂಥ್, ದಿನಾಂಕ ಮತ್ತು ತೆಗೆದುಕೊಂಡ ಸಮಯ, ಮತ್ತು ಸ್ಥಳವನ್ನು ಒಳಗೊಂಡಿರುತ್ತದೆ.
ಬ್ಯಾಟರಿಗಳು
ಬದಲಾಯಿಸಿಡಿಜಿಟಲ್ ಕ್ಯಾಮೆರಾಗಳಿಗೆ ಹೆಚ್ಚಿನ ವಿದ್ಯುತ್‌ಶಕ್ತಿಯ ಅಗತ್ಯವಿದ್ದು, ಕ್ಯಾಮೆರಾಗಳು ಕಾಲಕಳೆದಂತೆ ಚಿಕ್ಕದಾಗುತ್ತಾ ಹೋದಂತೆ, ಅದರ ಗಾತ್ರಕ್ಕೆ ಹೊಂದುವಂತಹ ಆದರೆ ಸಾಕಷ್ಟು ವಿದ್ಯುತ್ ಶಕ್ತಿಯನ್ನು ಒದಗಿಸುವಂತಹ ಬ್ಯಾಟರಿಗಳನ್ನೇ ನಿರ್ಮಿಸಬೇಕಾದ ಅಗತ್ಯ ಒದಗಿಬಂತು. ಎರಡು ಪ್ರಮುಖವಾದ ಬ್ಯಾಟರಿ ಪ್ರಕಾರಗಳನ್ನು ಡಿಜಿಟಲ್ ಕ್ಯಾಮೆರಾಗಳಿಗಾಗಿ ಬಳಸಲಾಗುತ್ತದೆ.
ಸಿದ್ಧಮಾದರಿ
ಬದಲಾಯಿಸಿಮೊದಲ ಪ್ರಕಾರದ ಡಿಜಿಟಲ್ ಕ್ಯಾಮೆರಾಗಳ ಬ್ಯಾಟರಿಗಳು ಸ್ಥಾಪಿತವಾದ ಸಿದ್ಧಮಾದರಿ ರೂಪಗಳಿಗೆ ಹೊಂದುತ್ತವೆ, ಅಂದರೆ ಅತ್ಯಂತ ಸಾಮಾನ್ಯವಾಗಿ AA, CR2, ಅಥವಾ CR-V3 ಬ್ಯಾಟರಿಗಳು. AAA ಬ್ಯಾಟರಿಗಳು ಕೆಲವೇ ಕ್ಯಾಮೆರಾಗಳಲ್ಲಿ ಲಭ್ಯವಿವೆ. CR2 ಮತ್ತು CR-V3 ಬ್ಯಾಟರಿಗಳು ಲೀಥಿಯಮ್‌ನಿಂದ ಮಾಡಲ್ಪಟ್ಟವಾಗಿದ್ದು, ಒಂದು ಕ್ಯಾಮೆರಾಗಾಗಿ ಮಾತ್ರ ಬಳಸಬಹುದಾಗಿದೆ. ಅವುಗಳನ್ನು ಸಾಮಾನ್ಯವಾಗಿ ಕ್ಯಾಮ್‌ಕಾರ್ಡರ್‌ಗಳಲ್ಲಿ ಬಳಸಲಾಗಿರುತ್ತದೆ. AA ಬ್ಯಾಟರಿಗಳು ಅತ್ಯಂತ ಸಾಮಾನ್ಯವಾಗಿವೆ; ಆದರೂ, ಕಡಿಮೆ ಬೆಲೆಯ ಕ್ಯಾಮೆರಾಗಳೊಂದಿಗೆ ನೀಡಲ್ಪಟ್ಟ ರೀಚಾರ್ಜ್ ಮಾಡಲಾಗದ ಅಲ್ಕಲೈನ್ ಬ್ಯಾಟರಿಗಳು ಹೆಚ್ಚಿನ ಕ್ಯಾಮೆರಾಗಳಿಗೆ ಸಾಕಷ್ಟು ವಿದ್ಯುತ್ ಅನ್ನು ಸ್ವಲ್ಪ ಕಾಲದವರೆಗೆ ಮಾತ್ರ ನೀಡಲು ಶಕ್ತವಾಗಿವೆ. ಸಾಂದರ್ಭಿಕವಾಗಿ ಬಳಸಲ್ಪಡುವ ಕ್ಯಾಮೆರಾಗಳಿಗೆ ಮಾತ್ರ ಈ ರೀತಿಯ ಬ್ಯಾಟರಿಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ.
ಆದರೆ ಹಾಗೆ ಸಾಂದರ್ಭಿಕವಾಗಿ ಅಲ್ಲದೇ ಹೆಚ್ಚಾಗಿ ಕ್ಯಾಮೆರಾ ಬಳಸುವವರು ಅದರ ಬದಲು AA ನಿಕ್ಕೆಲ್ ಮೆಟಲ್ ಹೈಡ್ರೈಡ್ ಬ್ಯಾಟರಿಗಳನ್ನು(NiMH) ಬಳಸುತ್ತಾರೆ. ಇವು ಸಾಕಷ್ಟು ವಿದ್ಯುತ್ ಶಕ್ತಿಯನ್ನು ನೀಡುವುದಲ್ಲದೇ ಇವುಗಳನ್ನು ರೀಚಾರ್ಜ್ ಮಾಡಲೂ ಸಾಧ್ಯವಿದೆ. NIMH ಬ್ಯಾಟರಿಗಳು ಲೀಥಿಯಮ್ ಅಯಾನ್ ಬ್ಯಾಟರಿಗಳಷ್ಟು[ಸೂಕ್ತ ಉಲ್ಲೇಖನ ಬೇಕು] ವಿದ್ಯುತ್ ಶಕ್ತಿಯನ್ನು ನೀಡುವುದಿಲ್ಲ, ಅಲ್ಲದೇ ಬಳಕೆಯಲ್ಲಿದ್ದಾಗಲೂ ಅವುಗಳು ಶಕ್ತಿಯನ್ನು ಹೊರಬಿಡುತ್ತಿರುತ್ತವೆ. ಅವು ಅನೇಕ ಏಂಪಿಯರ್-ಅವರ್ (Ah) ಅಥವಾ ಮಿಲಿ-ಏಂಪಿಯರ್-ಅವರ್(mAh) ರೇಟಿಂಗ್‌ಗಳಲ್ಲಿ ಲಭ್ಯವಿದ್ದು, ಇದು ಅವು ಎಷ್ಟು ಕಾಲದವರೆಗೆ ಬಳಕೆಗೆ ಬರುತ್ತವೆ ಅನ್ನುವುದರ ಮೇಲೆ ಪರಿಣಾಮ ಬೀರುತ್ತದೆ. ವಿಶಿಷ್ಟವಾದ ಮಧ್ಯಮ-ಶ್ರೇಣಿಯ ಬಳಕೆಯ ಮಾದರಿಗಳು ಮತ್ತು ಕೆಲವು ಕಡಿಮೆ ಬೆಲೆಯ ಕ್ಯಾಮೆರಾಗಳು ಈ ಸಿದ್ಧ ಮಾದರಿಯ ಬ್ಯಾಟರಿಗಳನ್ನು ಬಳಸುತ್ತವೆ; ಸಿಗ್ಮಾ SD10)ದಂತಹ ಕೆಲವು DSLR ಕ್ಯಾಮೆರಾಗಳು ಮಾತ್ರ ಈ ಬ್ಯಾಟರಿಗಳನ್ನು ಬಳಸುತ್ತವೆ. ರೀಚಾರ್ಜ್ ಮಾಡಲಾಗದ CR-V3 ಬ್ಯಾಟರಿಗಳಿಗೆ ಪರ್ಯಾಯವಾಗಿ ರೀಚಾರ್ಜ್ ಮಾಡಬಹುದಾದ RCR-V3 ಲೀಥಿಯಮ್-ಐಯಾನ್ ಬ್ಯಾಟರಿಗಳು ಸಹಾ ಲಭ್ಯವಿವೆ.
ಸ್ವಾಮ್ಯದವು
ಬದಲಾಯಿಸಿಡಿಜಿಟಲ್ ಕ್ಯಾಮೆರಾಗಳ ಎರಡನೇ ಪ್ರಕಾರದ ಬ್ಯಾಟರಿ ಫಾರ್ಮ್ಯಾಟ್‌ಗಳೆಂದರೆ ಸ್ವಾಮ್ಯದ ಬ್ಯಾಟರಿ ಫಾರ್ಮ್ಯಾಟ್‌ಗಳು. ಇವುಗಳನ್ನು ಉತ್ಪಾದಕರ ಅಗತ್ಯಗಳ ನಿರ್ದೇಶನದಂತೆ ತಯಾರಿಸಲಾಗಿರುತ್ತದೆ, ಮತ್ತು ಅವುಗಳು ಬಿಡಿ ಭಾಗಗಳ ಮಾರಾಟಕ್ಕಾಗಿ ಅಥವಾ OEM ಗಾಗಿ ದೊರೆಯುತ್ತವೆ ಸಹಾ. ಹೆಚ್ಚಾಗಿ ಎಲ್ಲಾ ಸ್ವಾಮ್ಯದ ಬ್ಯಾಟರಿಗಳೂ ಲೀಥಿಯಮ್ ಐಯಾನ್‌ಗಳಾಗಿರುತ್ತವೆ. ಇವುಗಳಿಗೆ ಬ್ಯಾಟರಿ ಕಾಲಾವಧಿ ಮುಗಿಯುವ ಮುನ್ನ ಒಂದು ನಿರ್ದಿಷ್ಟ ಸಂಖ್ಯೆಯವರೆಗೆ ಮಾತ್ರ ರೀಚಾರ್ಜ್ ಮಾಡುವಿಕೆ ಸಾಧ್ಯವಿದ್ದು(ವಿಶೇಷವಾಗಿ ಸುಮಾರು 500 ಬಾರಿ), ಅವುಗಳು ತಮ್ಮ ಗಾತ್ರಕ್ಕೆ ತಕ್ಕಂತೆ ಗಮನಾರ್ಹವಾದ ಸಾಮರ್ಥ್ಯದ ಕಾರ್ಯನಿರ್ವಹಣೆ ಮಾಡುತ್ತವೆ. ಇದರ ಪರಿಣಾಮವೆಂದರೆ, ಅತ್ಯಂತ ಉನ್ನತ ಮಟ್ಟದ ವೃತ್ತಿಪರ ಕ್ಯಾಮೆರಾಗಳು ಮತ್ತು ಕಡಿಮೆ ಬೆಲೆಯ ಸಾಧಾರಣ ಕ್ಯಾಮೆರಾಗಳಲ್ಲಿ ಈ ಲೀಥಿಯಮ್ ಐಯಾನ್ ಬ್ಯಾಟರಿಗಳನ್ನು ಬಳಸುವುದನ್ನು ಆಯ್ಕೆಮಾಡಿಕೊಳ್ಳುತ್ತಾರೆ.
ಇದನ್ನೂ ನೋಡಿರಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Nikon Says It's Leaving Film-Camera Business". Washington Post. 2006-01-12. Retrieved 2007-02-23.
- ↑ ಯೂಜಿನ್ ಎಫ್. ಲಾಲಿ, "ಮೊಸಾಯಿಕ್ ಗೈಡನ್ಸ್ ಫಾರ್ ಇಂಟರ್‌ಪ್ಲಾನೆಟರಿ ಟ್ರಾವೆಲ್," ಸ್ಪೇಸ್ ಫ್ಲೈಟ್ ರಿಪೋರ್ಟ್ ಟು ದ ನೇಶನ್ , ಪುಟ. 2249–61, ಅಮೇರಿಕನ್ ರಾಕೇಟ್ ಸೊಸೈಟಿ, ನ್ಯೂ ಯಾರ್ಕ್, ಅಕ್ಟೋಬರ್ 9–15, 1961.
- ↑ US 3540011
- ↑ "Digital Photography Milestones from Kodak". Women in Photography International. Retrieved 2007-09-17.
- ↑ Kenji Toyoda (2006). "Digital Still Cameras at a Glance". In Junichi Nakamura (ed.). Image sensors and signal processing for digital still cameras. CRC Press. p. 5. ISBN 9780849335457.
- ↑ "1990". DigiCam History Dot Com. Retrieved 2007-09-17.
- ↑ "Dycam Model 1: The world's first consumer digital still camera". DigiBarn computer museum.
- ↑ ಕೆರೋಲಿನ್ ಹೇಳಿದರು, "DYCAM ಮಾಡೆಲ್ 1: ಇದು ಮೊದಲ ಪೋರ್ಟಬಲ್ ಡಿಜಿಟಲ್ ಸ್ಟೀಲ್ ಕ್ಯಾಮೆರಾ", ಮ್ಯಾಕ್‌ವೀಕ್ , ಸಂಪುಟ. 4, No. 35, ಅಕ್ಟೋಬರ್. 16, 1990, ಪುಟ. 34.
- ↑ Bogdan Solca (2007-01-08). "More on digital cameras". Softpedia. Archived from the original on 2009-05-19. Retrieved 2009-12-20.
- ↑ "Reinventing Instant Photography for the Digital Age". Polaroid. January 8, 2009. Archived from the original on 2009-01-21. Retrieved 2009-01-15.
- ↑ "Mobile High-Definition Link Technology Gives Consumers the Ability to Link Mobile Devices to HDTVs with Support for Audio and Video". Silicon Image. January 7, 2008. Retrieved 2009-01-15.
ಬಾಹ್ಯ ಲಿಂಕ್‌ಗಳು
ಬದಲಾಯಿಸಿ- ಹೌಸ್ಟಫ್ವರ್ಕ್ಸ್ ಡಿಜಿಟಲ್ ಕ್ಯಾಮೆರಾಗಳು Archived 2010-03-18 ವೇಬ್ಯಾಕ್ ಮೆಷಿನ್ ನಲ್ಲಿ.
- ಕೊಡಾಕ್ ಇಂಜಿನೀಯರ್ ಸ್ಟೀವನ್ ಸ್ಯಾಸನ್ ಕಾರ್ಯನಿರ್ವಹಿಸಿದ ಮೊದಲ ಡಿಜಿಟಲ್ ಕ್ಯಾಮೆರಾ Archived 2007-03-11 ವೇಬ್ಯಾಕ್ ಮೆಷಿನ್ ನಲ್ಲಿ..
- ವರ್ಷದಿಂದ ವರ್ಷಕ್ಕೆ 1998 ರ ವರೆಗೂ ನಡೆದ ಬೆಳವಣಿಗೆ ಮತ್ತು ವಿಭಿನ್ನ ಪ್ರಕಾರದ ಕ್ಯಾಮೆರಾಗಳ ಚಿತ್ರಗಳು
- ಸ್ಟೀಲ್-ಮೋಶನ್-/ಪಿಕ್ಚರ್ ಡಿಜಿಟಲ್ ಕ್ಯಾಮೆರಾದ ವಿನ್ಯಾಸ