ಸುನಿತಾ ಶೆಟ್ಟಿ

(ಡಾ. ಸುನಿತಾ ಶೆಟ್ಟಿ ಇಂದ ಪುನರ್ನಿರ್ದೇಶಿತ)

ಡಾ. ಸುನಿತಾ ಶೆಟ್ಟಿ, ಮುಂಬಯಿ ಮಹಾನಗರದ ಸಂಸ್ಕೃತಿ ವಲಯದ ಅಭಿವ್ಯಕ್ತಿಗಳಾದ, ಭಾಷೆ, ಸಂಗೀತ,ನಾಟಕ,ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವುದಲ್ಲದೆ ಪ್ರೋತ್ಸಾಹಕೊಡಲು ಸದಾ ನಿರತರಾಗಿರುವ ವ್ಯಕ್ತಿಗಳಲ್ಲೊಬ್ಬರು. ಅವರು ಕನ್ನಡ, ತುಳು ಕನ್ನಡಿಗರಿಗೆ ಪರಿಚಿತರು.[]

ಡಾ.ಸುನಿತಾ ಶೆಟ್ಟಿ
ಜನನ
ಸುನಿತಾ

(೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ತಂದೆ, ಕೂಕ್ರ ಡಿ.ಶೆಟ್ಟಿ,ಹಾಗೂ ತಾಯಿ ಸುಂದರಿ ಶೆಟ್ಟಿಯವರು.
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ; ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.
ವೃತ್ತಿ(ಗಳು)ನಿವೃತ್ತ ಪ್ರಾಧ್ಯಾಪಕಿ,ಮತ್ತು ಸಮಾಜಸೇವಕಿ,
ಗಮನಾರ್ಹ ಕೆಲಸಗಳುಸೃಜನ ಮಹಿಳಾ ಬರಹಗಾರ್ತಿಯರ ಬಳಗಕ್ಕೆ ಮಾರ್ಗದರ್ಶಿ ಹಾಗೂ ಸಂಚಾಲಕಿ

ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ

ಬದಲಾಯಿಸಿ

ಸುನಿತಾ ಶೆಟ್ಟಿಯವರು, (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಾಯಿಗಳು, ಕೂಕ್ರ ಡಿ.ಶೆಟ್ಟಿ,ಹಾಗೂ ಸುಂದರಿ ಶೆಟ್ಟಿಯವರು. ಪ್ರಾಥಮಿಕ ಶಿಕ್ಷಣ ಕಳವಾರಿನಲ್ಲಿ, ಮನೆಹತ್ತಿರದ ಶಾಲೆಯಲ್ಲಿ, (೧ರಿಂದ ೫ ನೆಯ ಇಯತ್ತೆವರೆಗೆ) ನಡೆಯಿತು. ಮಾಧ್ಯಮಿಕ ಶಾಲೆ. ಕಳವಾರಿನ ಚರ್ಚ್ ಶಾಲೆಯಲ್ಲಿ (೬ರಿಂದ ೮ನೆಯ ಇಯತ್ತೆ) ಪ್ರೌಢಶಾಲೆ ವಿದ್ಯಾದಾಯಿನಿ ಹೈಸ್ಕೂಲ್ ಸೂರಾತ್ಕಲ್, (೯ ರಿಂದ ೧೧ ನೇ ಇಯತ್ತೆವರೆಗೆ) ಇಂಟರ್ ಮೀಡಿಯೆಟ್ ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ. ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.

ಸುನಿತಾರವರು, ಮಹಾಬಲಶೆಟ್ಟಿಯವರ ಜೊತೆ ವಿವಾಹವಾದರು. ಅಧ್ಯಾಪತಕಿಯಾಗಿ, ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲ್,ದಲ್ಲಿ ಕೆಲವು ತಿಂಗಳೂ,ಮುಂಬಯಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ, ೧೯೬೬ ರ ವರೆಗೆ, ಕನ್ನಡ ಪ್ರಾಧ್ಯಾಪಕಿ, ಖಲ್ಸಾ ಕಾಲೇಜ್, ಮುಂಬಯಿ. ೧೯೬೬ರ ರಿಂದ [] ಕಾಲೇಜಿನಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲೇ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಕನ್ನಡ ಹಾಗು ತುಳು ಭಾಷೆಯಲ್ಲಿ ಒಳ್ಳೆಯ ಲೇಖಕಿಯಾಗಿ ಜನಪ್ರಿಯತೆಗಳಿಸಿದ್ದರು. ಆವರು ಪ್ರಕಟಿಸಿದ ಕವನ ಸಂಕಲನಗಳು :

  1. ಪಿಂಗಾರ,
  2. ಸಂಕ್ರಾಂತಿ,
  3. ನಾಗಸಂಪಿಗೆ,

ಕವನ ಸಂಕಲನಗಳು ತುಳು ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ತುಳುನಾಡಿನ ಮಹಿಳೆಯರ ಭಾವನೆಗಳಿಗೆ ನೇರವಾಗಿ ಸ್ಪಂದಿಸಿವೆ. ಸುನಿತಾರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಡಾಕ್ಟರೇಟ್ ಪದವಿ' ಗಳಿಸಿದರು. ಅವರು ತೆಗೆದುಕೊಂಡ ವಿಷಯ, 'ವಿಮೆನ್ ಇನ್ ದ ನಾವೆಲ್ಸ್ ಆಫ್ ಡಾ ಶಿವರಾಮ ಕಾರಂತ'[]

ಸೃಜನಾ ಬರಹಗಾರ್ತಿಯರ ಬಳಗದಲ್ಲಿ

ಬದಲಾಯಿಸಿ

ಡಾ.ಸುನಿತಾ ಶೆಟ್ಟಿಯವರು, ಮುಂಬಯಿನಗರದ ಬರಹಗಾರ್ತಿಯರ ಬಳಗದ ಮಾರ್ಗದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. []

ಪ್ರಶಸ್ತಿಗಳು

ಬದಲಾಯಿಸಿ
  1. ೧೯೯೬-೯೭ ರ ಸಾಲಿನ, ಕರ್ನಾಟಕ ತುಳು ಅಕ್ಯಾಡೆಮಿ ಪ್ರಶಸ್ತಿ.
  2. ೨೦೧೮ ರ ಸಾಲಿನ 'ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು. []
  3. ಡಾ. ಸುನೀತಾ ಎಂ.ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. []

ಉಲ್ಲೇಖಗಳು

ಬದಲಾಯಿಸಿ
  1. http://www.daijiworld.com/news/news_disp.asp?n_id=114590[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2014-04-08. Retrieved 2014-04-01.
  3. ಡಾ.ಸುನೀತಾ ಶೆಟ್ಟಿ ಅನುವಾದಿತ 'ಪೊಣ್ಣ ಉಡಲ್ ಬೆಂಗ್ ದ ಕಡಲ್',ಕೃತಿಬಿಡುಗಡೆ,ಕಡಿವಾಣವಿಲ್ಲದ ಸ್ವಾತಂತ್ರ್ಯ ಸರ್ವರಿಗೂ ಸರಿಸಮಾನವಾಗಿರಬೇಕು ಶ್ರೇಣಿಶ್ಯಾಮ ಭಟ್ (ಚಿತ್ರವರದಿ : ರೋನ್ಸ್ ಬಂಟ್ವಾಳ್)
  4. ೧೫, ಮೇ, ೨೦೧೬, ಪುಟ.೧೩, ಕರ್ನಾಟಕ ಮಲ್ಲ, ದಿನಪತ್ರಿಕೆಯಲ್ಲಿ ಸೃಜನಾದ ಚೈತ್ರಯಾತ್ರೆ 'ಕವಿ ಶೈಲ'ಕ್ಕೆ, ಎಂಬ ಶೀರ್ಷಿಕೆಯ ಬರಹದಲ್ಲಿ ಸೃಜನಾ ಮಹಿಳೆಯರ ಗುಂಪು, ರಾಷ್ಟ್ರಕವಿ ಕುವೆಂಪುರವರ ಕವಿಶೈಲಕ್ಕೆ ಭೇಟಿನೀಡಿದ ವಿವರಗಳನ್ನು ತಮ್ಮ ಬರಹದಲ್ಲಿ ಸುದೀರ್ಘವಾಗಿ ದಾಖಲಿಸಿದ್ದಾರೆ[ಶಾಶ್ವತವಾಗಿ ಮಡಿದ ಕೊಂಡಿ]
  5. ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನಮಾಡಲಾಯಿತು
  6. "ಚಂದ್ರಶೇಖರ ಪಾಲೆತ್ತಾಡಿ, ಡಾ.ಸುನೀತಾ ಎಮ್.ಶೆಟ್ಟಿ, ಡಾ.ಸುರೇಶ್ ರಾವ್, ಸಹಿತ ೬೬ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ, ಕರ್ನಾಟಕ ಮಲ್ಲ, ೦೨,೧೧,೨೦೨೧". Archived from the original on 2021-11-14. Retrieved 2021-11-14.

ಬಾಹ್ಯಸಂಪರ್ಕಗಳು

ಬದಲಾಯಿಸಿ