ವಿಶ್ವನಾಥ ಕಾರ್ನಾಡ್
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಡಾ.ವಿಶ್ವನಾಥ ಕಾರ್ನಾಡ್,ಅವರು ಒಬ್ಬ ಹೆಸರಾಂತ ಸಾಹಿತಿ, ಸಂಶೋಧಕ, ಅನುವಾದಕ, ಸಂಘಟಕ, ಶಿಕ್ಷಕ, ನಾಟಕಕಾರ, ಸಮಾಜ ಸೇವಕ, ಪತ್ರಿಕೋದ್ಯಮಿಯಾಗಿ ಮುಂಬಯಿನ ನಾಗರಿಕರಿಗೆ ಪರಿಚಿತರಾಗಿದ್ದಾರೆ. ಮಹರ್ಷಿ ದಯಾನಂದ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಸುಮಾರು ೫ ದಶಕಗಳಿಂದ ಕನ್ನಡಮ್ಮನ ಪರಿಚಾರಕರಾಗಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಮುಂಬಯಿ [೧] ಕನ್ನಡಿಗರಲ್ಲೊಬ್ಬರು.
ವಿಶ್ವನಾಥ ಕಾರ್ನಾಡ್ | |
---|---|
ಚಿತ್ರ:Vishvanath k.jpg | |
ಜನನ | ವಿಶ್ವನಾಥ ೧೯೪೦, ಮಾರ್ಚ್, ೩, ಕಡಂದಲೆಯ ಸುಣ್ಣದಕಲ್ ಮನೆ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಎಮ್.ಎ.(ಕನ್ನಡ), ಎಮ್.ಎ (ಇತಿಹಾಸ) |
ಶಿಕ್ಷಣ ಸಂಸ್ಥೆ | ಜೈಹಿಂದ್ ಕಾಲೇಜ್ ಮುಂಬಯಿ |
ವೃತ್ತಿ | ಮುಂಬಯಿಯ ಮಹರ್ಶಿ ದಯಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕ, |
ಗಮನಾರ್ಹ ಕೆಲಸಗಳು | ಕಥೆ,ಕಾದಂಬರಿ,ಸಣ್ಣಕಥೆಗಳು,ಕವಿತೆ, ವಿಮರ್ಶೆ,ನಾಟಕ ನಿರ್ದೇಶನ, ಪ್ರಬಂಧ, ಅನುವಾದ,ಪತ್ರಿಕೋದ್ಯಮ, |
ಪ್ರಶಸ್ತಿಗಳು |
|
ಜನನ, ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ
ಬದಲಾಯಿಸಿಕಡಂದಲೆಯ 'ಸಿಂಧು ಕೋಟ್ಯಾನ್' ಮತ್ತು ಮುಜಿಕ್ರ ಬಂಗೇರ ಮಾನಂ ಪಾಡಿ ಮುಲ್ಕಿ ದಂಪತಿಗಳ ೫ ಮಕ್ಕಳಲ್ಲಿ ಇವರು ಮೂರನೆಯವರು. 'ಸುಣ್ಣದ ಕಲಮನೆ'ಯಲ್ಲಿ ೧೯೪೦ ರ ಮಾರ್ಚ್ ೩ ರಂದು ಜನಿಸಿದರು. ಮುಲ್ಕಿಯ ಕೂಬೇವುರಿನ ಪ್ರಾಥಮಿಕ ಶಾಲೆಯಲ್ಲಿ ೪ ನೆಯ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ತಮ್ಮ ಅಣ್ಣ , ರಮೇಶ್ ಜೊತೆ ಮುಂಬಯಿ ಮಹಾನಗರಕ್ಕೆ ಪಾದಾರ್ಪಣೆ ಮಾಡಿದರು. ಮುಂಬಯಿನ ಉಪನಗರ ವಿಲೇಪಾರ್ಲೆ(ಪೂ) ದಲ್ಲಿನ ಸುಂದರ್ ಹೋಟೆಲ್ ನಲ್ಲಿ ಕೆಲಸ ಮಾಡಿದರು. ಮುಂದೆ ಕೋಟೆಯ ಅಜ್ಗಾಂಕರ್ ಡಿಸ್ಪೆನ್ಸರಿಯಲ್ಲಿ ಕಾಂಪೌಂಡರ್ ಆಗಿ ಕೆಲಸಮಾಡಿದರು. ವಿಶ್ವನಾಥರಿಗೆ ಫುಟ್ಬಾಲ್ ಆಟದಲ್ಲಿ ಅತೀವ ಆಸಕ್ತಿ ಇತ್ತು. ಹತ್ತಿರದ ಕೋಟೆಯ ಕೊಪರೇಜ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಅವರು ವೀಕ್ಷಿಸುತ್ತಿದ್ದರು. ಆ ಮೈದಾನಕ್ಕೆ ಬರುತ್ತಿದ್ದ ಮದರ್ ಇಂಡಿಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಜೆರೋಮ್ ಲಿವಿಸ್ ರವರ ಪರಿಚಯವಾಯಿತು. ಲಿವಿಸ್ ರವರು ಕಾರ್ನಾಡರನ್ನು ತಮ್ಮ ಮದರ್ ಇಂಡಿಯ ಸ್ಕೂಲಿನ ರಾತ್ರಿಶಾಲೆಗೆ ದಾಖಲಿಸಿದರು. ಹೀಗೆಯೇ ಮುಂದುವರೆದು ಗೆಳೆಯರ ಸಹಾಯದಿಂದ 'ಆಗ್ಫಾ ಕಂಪೆನಿ'ಯಲ್ಲಿ ನೌಕರಿ ಗಳಿಸಿದರು. ಎಸ್. ಎಸ್. ಸಿಯ ನಂತರ, ಎಲ್. ಐ. ಸಿ. ಕಂಪೆನಿಯಲ್ಲಿ ಕ್ಲರ್ಕ್ ಆಗಿ ನಿಯುಕ್ತರಾಗಿ ಸುಮಾರು ೬ ವರ್ಷ ಕೆಲಸಮಾಡಿದರು. ವಿದ್ಯಾಭ್ಯಾಸದಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ಮುಂದೆ ಜೈಹಿಂದ್ ಕಾಲೇಜ್ ನಲ್ಲಿ ಅಧ್ಯಯನ ಮುಂದುವರೆಸಿ, ಬಿ.ಎ ಪದವಿಯನ್ನು ಗಳಿಸಿದರು. ಇದಾದ ಬಳಿಕ ಮುಂದೆ ಮಾಟುಂಗಾ ಜಿಲ್ಲೆಯಲ್ಲಿದ್ದ ರೂಪಾರೆಲ್ ಕಾಲೇಜ್ ನಲ್ಲಿ ಎಮ್.ಎ.(ಕನ್ನಡ) ಮತ್ತು ಇಂಗ್ಲೀಷಿನಲ್ಲಿ ಇತಿಹಾಸದಲ್ಲಿ ಎಮ್.ಎ.ಪದವಿ ಗಳಿಸಿದರು. ೧೯೯೬ ರಲ್ಲಿ ಪರೇಲ್ ನ ಎಮ್.ಡಿ. ಕಾಲೇಜ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇರಿದರು. ೧೯೬೭ ರ ಡಿಸೆಂಬರ್ ೨೪ ರಂದು, ನಳಿನಿಯವರ ಜೊತೆ ವಿವಾಹಮಾಡಿಕೊಂಡರು. ಮದುವೆಯ ನಂತರ, ಕೆ.ಸಿ.ಕಾಲೇಜ್ ನಿಂದ ಎಲ್.ಎಲ್.ಬಿ ಪದವಿ ಗಳಿಸಿದರು. ಗವರ್ನಮೆಂಟ್ ಎಸ್.ಟಿ. ಕಾಲೇಜಿನಿಂದ ಬಿ.ಎಡ್.ಪದವಿಯನ್ನೂ ಮತ್ತು ಹಿಂದಿ ಭಾಷೆಯಲ್ಲಿ "ಭಾಷಾ ರತ್ನ ಪದವಿ" ಯನ್ನೂ ಪಡೆದುಕೊಂಡರು. ಹೀಗೆ ಪ್ರಾಧ್ಯಾಪಕರಾಗಿರುವಾಗಲೇ ೨೮ ದಿನ ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದರು.
ಸಾಹಿತ್ಯ ಕೃಷಿ
ಬದಲಾಯಿಸಿವಿಶ್ವನಾಥರು, ಕನ್ನಡ ಭಾಷೆಯಲ್ಲಿ ಕತೆ, ಕಾದಂಬರಿ, ಸಣ್ಣ ಕತೆ, ಕವಿತೆ, ವಿಮರ್ಶೆ, ನಾಟಕ, ಪ್ರಬಂಧಗಳಲ್ಲಿ ಕೃಷಿಮಾಡಿದ್ದಾರೆ. 'ಪ್ರಯೋಗ ಎಂಬ ಪ್ರಯೋಗಾತ್ಮಕ ಕತೆಗಳ ವಾರ್ಷಿಕ ಸಂಚಿಕೆ'ಯನ್ನು ಮುಂಬಯಿನ ಕನ್ನಡಿಗರಿಗೆ ಸಂಪಾದಿಸಿಕೊಟ್ಟು ಸಹಕರಿಸಿದರು. ವಿಶ್ವನಾಥರು ಒಬ್ಬ ಸಮರ್ಥ ಅನುವಾದಕ, ಸಂಶೋಧಕ,ಸಂಘಟಕ, ನಾಟಕಕಾರ, ಸಮಾಜ ಸೇವಕ, ಪತ್ರಿಕೋದ್ಯಮಿ, ಎಮ್.ಡಿ. ಕಾಲೇಜ್ ನಲ್ಲಿ ೩೦ ವರ್ಷ ಶಿಕ್ಷಕರಾಗಿದ್ದರು. ವಿದ್ಯಾವಿಹಾರ್ ನ ಸೋಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಬಹುಕಾಲ ಕೆಲಸಮಾಡುತ್ತಿದ್ದ ಅವರ ಪ್ರೀತಿಯ ಪತ್ನಿ, ನಳಿನ ಕಾರ್ನಾಡ್, ೨೦೧೦ ರ ಆಗಸ್ಟ್ ೨೯ ರಂದು ಹೃದಯಾಘಾತದಿಂದ ಮರಣಿಸಿದರು. ಈ ದಂಪತಿಗಳಿಗೆ, ಡಾ ಪಲ್ಲವಿ,ಸತೀಶ್, ಸನಿಲ್, ಶರತ್, ರೋಹಿತ್ ಮಕ್ಕಳು.
ಪಿ.ಎಚ್.ಡಿ. ಪ್ರಬಂಧ
ಬದಲಾಯಿಸಿ- 'ತುಳುವರ ಮುಂಬಯಿ ವಲಸೆ -ಸಾಂಸ್ಕೃತಿಕ ಅಧ್ಯಯನ ಪಿ.ಎಚ್.ಡಿ.ಪ್ರಬಂಧ ಪ್ರಗತಿಪರ ಧೋರಣೆಯ ಮನಸ್ಸಿನ ಮುಕ್ತ ಚಿಂತನ ಮಂಥನ ಮನೋಧಾರಣೆಯಾಗಿದೆ.
ಹಲವು ಮಂಡಲಿಗಳ ಪದಾಧಿಕಾರಿಯಾಗಿ
ಬದಲಾಯಿಸಿ- ಕನ್ನಡ ಪಠ್ಯ ಪುಸ್ತಕಗಳ ಮಂಡಳಿಯ ಸದಸ್ಯ
- ಪದವಿಯೇತರ ವಿದ್ಯಾರ್ಥಿಗಳ ಶಿಕ್ಷಕ
- ವಿವಿಧ ವಿಶ್ವ ವಿದ್ಯಾಲಯಗಳ ಪರೀಕ್ಷಕ
- ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಸದಸ್ಯತ್ವ
- ಕರ್ನಾಟಕ ಜಾನಪದ ಯಕ್ಷಗಾನ ಅಕ್ಯಾಡೆಮಿ ಸದಸ್ಯತ್ವ
- ಕರ್ನಾಟಕ ಸಾಹಿತ್ಯ ಪರಿಷತ್ತು ಸದಸ್ಯತ್ವ
- ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಸದಸ್ಯತ್ವ
- ಸಾಹಿತ್ಯ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು.
- ಮೈಸೂರು ದಸರಾ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ.
ಅನುವಾದ
ಬದಲಾಯಿಸಿ- 'ನರ್ತಕಿ ನಾಟಕ' ವನ್ನು ಕನ್ನಡಕ್ಕೆ ಅನುವಾದಿಸಿದರು.
- ಚೋಮನ ದುಡಿ, ಸತ್ಯವತಿ, ಅಪರಾಧಿ ಯಾರು, ಮೊದಲಾದ ನಾಟಕಗಳನ್ನೂ ನಿರ್ದೇಶಿಸಿ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- 'ಗುರುನಾರಾಯಣ ಪ್ರಶಸ್ತಿ ವಿಜೇತರು'.[೨]
- ’ಯಾಜ್ಞ ಸೇನಿ’ (ಕಾದಂಬರಿ ವಿಭಾಗ) ಕೃತಿ,'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದೆ.[೩]
- 'ಸಾಧನ ಶಿಖರ ಪ್ರಶಸ್ತಿ'(೨೦೧೪)
'ಡಾ.ವಿಶ್ವನಾಥ್ ಕಾರ್ನಾಡರ, ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭ'
ಬದಲಾಯಿಸಿ೭೪ ವರ್ಷದ ವಿಶ್ವನಾಥರ ಅಭಿಮಾನಿಗಳು, ಸ್ನೇಹಿತರು, ಮತ್ತು ವಿದ್ಯಾರ್ಥಿಗಳು 'ಅವರ ಅಬಿನಂದನಾ ಗ್ರಂಥ, 'ಸಮಾಲೋಕ ಗ್ರಂಥ' ದ ಬಿಡುಗಡೆ ಸಮಾರಂಭ' ನಂತರ ಸಾಹಿತ್ಯ ಗೋಷ್ಟಿ ಕಾರ್ಯಕ್ರಮವನ್ನು ೨೦೧೩ ರ, ಸೆಪ್ಟೆಂಬರ್ ೨೨ ರ ರವಿವಾರದ ಸಂಜೆ, ಮುಂಬಯಿನ ಡಾ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದರು.
೨೦೧೭
ಬದಲಾಯಿಸಿಡಾ.ವಿಶ್ವನಾಥ ಕಾರ್ನಾಡರ ಬಗ್ಗೆ, [೪] ಡಾ.ಭರತ್ ಕುಮಾರ್ ಪೊಲಿಪು ರವರು ಬರೆದ ಪುಸ್ತಕವನ್ನು, ೨೮,ಜನವರಿ, ೨೦೧೭ ರಂದು, ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಸಭಾಗೃಹದಲ್ಲಿ ಬಿಡುಗಡೆಮಾಡಲಾಯಿತು. [೫]
೨೦೧೯
ಬದಲಾಯಿಸಿ- ಡಾ. ವಿಶ್ವನಾಥ ಕಾರ್ನಾಡರು ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಸಾಂತಾಕ್ರುಝ್ ನ ಜೆ.ಪಿ.ನಾಯಕ್ ಹಾಲ್ ನಲ್ಲಿ ಉಪನ್ಯಾಸವನ್ನು ನೀಡಿದರು. ಆ ಸಮಯದಲ್ಲಿ ಅವರ ೪ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮವಿತ್ತು. [೬]
ಡಾ.ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಸ್ಥಾಪನೆ
ಬದಲಾಯಿಸಿವರ್ಷ ೨೦೨೨ ರ ಡಿಸೆಂಬರ್, ೨೪ ರಂದು ಮುಂಬಯಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಡಾ.ಕಾಳೇಗೌಡ ನಾಗವಾರರವರಿಂದ ಉದ್ಘಾಟನೆ ಮಾಡಲಾಯಿತು. [೭], [೮]
ಉಲ್ಲೇಖಗಳು
ಬದಲಾಯಿಸಿ- ↑ ವಿಶ್ವನಾಥ ಕಾರ್ನಾಡ್
- ↑ "ಆರ್ಕೈವ್ ನಕಲು". Archived from the original on 2014-08-05. Retrieved 2014-03-22.
- ↑ "Mumbai: Book on literary work of Dr Vishwanath Karnad released,Tue, Sep 24 2013". Archived from the original on 2013-09-26. Retrieved 2013-09-26.
- ↑ ಕರ್ನಾಟಕ ಮಲ್ಲ, ೨೭, ಫೆಬ್ರವರಿ, ೨೦೧೭,ವರದಿ : ರೋನ್ಸ್ ಬಂಟ್ವಾಳ್, ಡಾ.ಭರತ್ ಕುಮಾರ ಪೊಲಿಪು,ರಚಿತ ಸಾಹಿತಿ,ಚಿಂತಕ ಡಾ.ವಿಶ್ವನಾಥ ಕಾರ್ನಾಡ್ ರ ಕೃತಿ ಮೈಸುರು ಅಸೋಸಿಯೇಷನ್ ಕಿರು ಸಭಾಗೃಹದಲ್ಲಿ ಬಿಡುಗಡೆಯಾಯಿತು
- ↑ www.daijiworld.com, 30, Jan, 2017, Mumbai: Book on author, thinker Vishwanath Karnad inaugurated
- ↑ Mumbai University holds lecture at J.P.Naik Auditorium, Santacruz, Mumbai, on Kuvempu, releases four books by Dr. Vishvanath karnad, Rons bantwal, Daijiworld.com, March,18, 2019
- ↑ Mumbai: Dr Vishwanath Karnad Prathistana inaugurated, Rons Bantwal, daijiworld Media Network – Mumbai (EP)
- ↑ ಕರ್ನಾಟಕ ಮಲ್ಲ, ೨೭, ಡಿಸೆಂಬರ್,೨೦೨೨,ನಗರದ ಹಿರಿಯ ಸಾಹಿತಿ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಕೃತಿಬಿಡುಗಡೆ.'ನಗರದ ತುಳುವರು ಕನ್ನಡವನ್ನು ಬೆಳೆಸಿದ್ದಾರೆ'-ಡಾ.ಕಾಳೆಗೌಡ ನಾಗವಾರ