ಪುರುಷೋತ್ತಮ ಬಿಳಿಮಲೆ

ತುಳು ಜಾನಪದ ವಿದ್ವಾಂಸೆರು
(ಡಾ. ಪುರುಷೋತ್ತಮ ಬಿಳಿಮಲೆ ಇಂದ ಪುನರ್ನಿರ್ದೇಶಿತ)

ಡಾ. ಪುರುಷೋತ್ತಮ ಬಿಳಿಮಲೆ ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ವಿದ್ವಾಂಸರು. ಇವರು ಪ್ರಸ್ತುತ ಕರ್ನಾಟಕ ಸರ್ಕಾರಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಪುರುಷೋತ್ತಮ ಬಿಳಿಮಲೆ
ಜನನ೨೧ನೇ ಆಗಸ್ಟ್ ೧೯೫೫
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದ ಬಿಳಿಮಲೆ.
ವೃತ್ತಿಜಾನಪದ ವಿದ್ವಾಂಸ, ಲೇಖಕ, ಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿವಿಮರ್ಶೆ, ಕಥೆ, ಸಂಶೋಧನೆ,
ವಿಷಯಯಕ್ಷಗಾನ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯೋತ್ಸವ ಪ್ರಶಸ್ತಿ, ಆರ‍್ಯಭಟ ಪ್ರಶಸ್ತಿ

ಪುರುಷೋತ್ತಮ ಬಿಳಿಮಲೆಯವರು ೨೧-೮-೧೯೫೫ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದರು. ಇವರ ತಂದೆ ಬಿ.ಶೇಷಪ್ಪಗೌಡ, ತಾಯಿ ಗೌರಮ್ಮ.

ವಿದ್ಯಾಭ್ಯಾಸ

ಬದಲಾಯಿಸಿ

ಪ್ರಾಥಮಿಕ ಶಿಕ್ಷಣ ಪಂಜದ ಬಳಿಯ ಕೂತ್ಕುಂಜ ಶಾಲೆ. ಪ್ರೌಢಶಾಲೆಗೆ ಸೇರಿದ್ದು ಪಂಜದಲ್ಲಿ. ಕಾಲೇಜು ವಿದ್ಯಾಭ್ಯಾಸ ಸುಬ್ರಹ್ಮಣ್ಯೇಶ್ವರ ಜ್ಯೂನಿಯರ್ ಕಾಲೇಜ್, ವಿವೇಕಾನಂದ ಕಾಲೇಜು ಪುತ್ತೂರು. ಮದರಾಸು ವಿಶ್ವವಿದ್ಯಾಲಯದಿಂದ ೧೯೭೯ರಲ್ಲಿ ಮೊದಲ ರ‍್ಯಾಂಕ್ ಪಡೆದು ಎಂ.ಎ. ಪದವಿ. ಮಂಗಳೂರು ವಿಶ್ವವಿದ್ಯಾಲಯದಿಂದ “ಸುಳ್ಯ ಪರಿಸರದ ಗೌಡಜನಾಂಗ : ಒಂದು ಸಾಂಸ್ಕೃತಿಕ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ತುಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ.

೧೯೭೯ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಸುಳ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ. ೧೯೯೨ರಿಂದ ೯೮ರವರೆಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆ. ೧೯೯೮ರಿಂದ ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಜನಾಂಗಿಯ ಸಂಗೀತ ಪತ್ರಗಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಪನಿರ್ದೇಶಕರಾಗಿ, ನಿರ್ದೇಶಕರಾಗಿ ಹೊತ್ತ ಜವಾಬ್ದಾರಿ. ಹಂಪಿ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಜಾನಪದ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯರಾಗಿ. ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ. ಎಂ.ಫಿಲ್ ೮ ವಿದ್ಯಾರ್ಥಿಗಳಿಗೆ, ೭ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ. ಟೋಕಿಯೋ, ಜೆರೂಸಲೇಮ್‌ಗೆ ಹಲವಾರು ಬಾರಿ ಭೇಟಿ, ಪಡೆದ ಅನುಭವ.ಪ್ರಸ್ತುತ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ

 
RRC ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ

ಹಲವಾರು ಕೃತಿಗಳ ಪ್ರಕಟಣೆ. ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂ ನಾಮ, ಕಂಬುಳ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ, ಕೋಮುವಾದ ಮತ್ತು ಜನ ಸಂಸ್ಕೃತಿ, ಹಂಪಿ ಜಾನಪದ, ಕೂಡುಕಟ್ಟು, ಹುಲಿಗೆಮ್ಮ, ಕುಮಾರರಾಮ. ಸಂಪಾದಿತ-ಕನ್ನಡ ಭಾಷಾ ಪಠ್ಯ ಪುಸ್ತಕಗಳು, ಲೋಹಿಯಾವಾದ ಕೆಲವು ಟಿಪ್ಪಣಿಗಳು, ದೇವರು ದೆವ್ವ ವಿಜ್ಞಾನ, ಯಕ್ಷಗಾನ ಪ್ರಸಂಗಗಳು, ಅಕ್ಷರ ವಿಮೋಚನೆ, ವಿಚಾರ ಸಾಹಿತ್ಯ, ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ, ಸಿರಿ ಮುಂತಾದುವು. ಹಲವಾರು ಸಂಶೋಧನೆ[] ನಡೆಸಿ ಕೃತಿ ಪ್ರಕಟಿತ. ಹಲವಾರು ನಿಯತ ಕಾಲಿಕೆಗಳ ಸಂಪಾದಕತ್ವ.[]

ಬಿಳಿಮಲೆಯವರ ಪುಸ್ತಕಗಳು

ಬದಲಾಯಿಸಿ
  1. ಮೆಕೆಂಜಿಯ ಕೈಫಿಯತ್ತುಗಳು
  2. ಲಿಂಗರಾಜ ಹುಕುಂನಾಮೆ
  3. ಕಂಬುಳ
  4. ದಲಿತ ಜಗತ್ತು
  5. ಬಂಡಾಯ ದಲಿತ ಸಾಹಿತ್ಯ
  6. ಕರಾವಳಿ ಜಾನಪದ
  7. ಶಿಷ್ಟ-ಪರಿಶಿಷ್ಟ
  8. ಕೊರಗರು
  9. ಜಾನಪದ ಕ್ಷೇತ್ರಕಾರ್ಯ
  10. ಕೋಮುವಾದ ಮತ್ತು ಜನ ಸಂಸ್ಕೃತಿ
  11. ಹಂಪಿ ಜಾನಪದ
  12. ಕೂಡುಕಟ್ಟು
  13. ಹುಲಿಗೆಮ್ಮ
  14. ಕುಮಾರರಾಮ
  15. ಕನ್ನಡ ಭಾಷಾ ಪಠ್ಯ ಪುಸ್ತಕಗಳು(ಸಂ)
  16. ಲೋಹಿಯಾವಾದ ಕೆಲವು ಟಿಪ್ಪಣಿಗಳು(ಸಂ)
  17. ದೇವರು ದೆವ್ವ ವಿಜ್ಞಾನ(ಸಂ)
  18. ಯಕ್ಷಗಾನ ಪ್ರಸಂಗಗಳು(ಸಂ)
  19. ಅಕ್ಷರ ವಿಮೋಚನೆ(ಸಂ)
  20. ವಿಚಾರ ಸಾಹಿತ್ಯ(ಸಂ)
  21. ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ(ಸಂ)
  22. ಸಿರಿ(ಸಂ)
  23. ಬಹುರೂಪ( ೨೦೧೩)
  24. ಮೆಲುದನಿ ( ೨೦೧೪)
 
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ 2013

ಸಾಧನೆ/ಪ್ರಶಸ್ತಿಗಳು

ಬದಲಾಯಿಸಿ
  1. ಕರಾವಳಿ ಜಾನಪದ ಬೂಕುಗು ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ
  2. ಶಿಷ್ಟ-ಪರಿಶಿಷ್ಟ ಬೂಕುಗು ಬಿ.ಎಚ್. ಶ್ರೀಧರ ಪ್ರಶಸ್ತಿ
  3. ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ
  4. ಆರ‍್ಯಭಟ ಪ್ರಶಸ್ತಿ
  5. ಕೂಡುಕಟ್ಟು ಕೃತಿಗೆ ಸಾರಂಗ ಮಠ ಪ್ರಶಸ್ತಿ
  6. ಕು.ಶಿ. ಜಾನಪದ ಪ್ರಶಸ್ತಿ
  7. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  8. ಅಕ್ಷರ ಸಿರಿ ಪ್ರಶಸ್ತಿ೨೦೧೪[]
  9. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ []ಆಕಾಡೆಮಿಯ ಗೌರವ ಪುರಸ್ಕಾರ.೨೦೧೭.
 
ಪ್ರೊ.ಬಿಳಿಮಲೆಯವರಿಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೧೭
  1. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು.

ಸಂಘಟನೆ

ಬದಲಾಯಿಸಿ
  1. ದೆಹಲಿ ಕನ್ನಡ ಸಂಘ ಎರಡು ಅವಧಿಗೆ ಅಧ್ಯಕ್ಷರಾಗಿ ದುಡಿದಿದ್ದಾರೆ.
  2. ಪ್ರಸ್ತುತ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜೂನ್ ೨೦೨೪ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಲ್ಲೇಖ

ಬದಲಾಯಿಸಿ
  1. . http://epaper.andolana.in/fullpage.php?edn=Main&artid=ANDOLANABC_MAI_20190918_8_1[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2014-06-09. Retrieved 2014-12-04.
  3. "ಆರ್ಕೈವ್ ನಕಲು". Archived from the original on 2014-01-17. Retrieved 2014-12-04.
  4. "ಆರ್ಕೈವ್ ನಕಲು". Archived from the original on 2017-08-19. Retrieved 2017-08-11.