ಡಾಲಿ ವೈಲ್ಡ್ (೧೧ ಜುಲೈ ೧೮೯೫- ೧೦ ಏಪ್ರಿಲ್ ೧೯೪೧) ಅವರು ಒಬ್ಬ ಇಂಗ್ಲಿಷ್ ಸಮಾಜವಾದಿ. ಇವರನ್ನು ಡೊರೊಥಿ ಐರ್ನೆ ವೈಲ್ಡ್ ಎಂದು ಸಹ ಕರೆಯುತ್ತಾರೆ.

ಡಾಲಿ ವೈಲ್ಡ್
ಜನನ
ಡೊರೊಥಿ ಐರ್ನೆ ವೈಲ್ಡ್

೧೧ ಜುಲೈ ೧೮೯೫
ಮರಣ10 April 1941(1941-04-10) (aged 45)
ರಾಷ್ಟ್ರೀಯತೆಬ್ರಿಟಿಷ್
ವೃತ್ತಿಸಮಾಜವಾದಿ
Partnerನಟಾಲಿ ಕ್ಲಿಫರ್ಡ್ ಬಾರ್ನೆ
ಪೋಷಕ
  • ವಿಲ್ಲಿ ವೈಲ್ಡ್ (father)

ಆರಂಭಿಕ ಜೀವನ

ಬದಲಾಯಿಸಿ

ಡಾಲಿ ವೈಲ್ಡ್ ಅವರು ಲಂಡನ್‌ನಲ್ಲಿ ಜನಿಸಿದರು. ವೈಲ್ಡ್ ಅವರು ಆಸ್ಕರ್ ಅವರ ಹಿರಿಯ ಸಹೋದರ ವಿಲ್ಲಿ ಅವರ ಏಕೈಕ ಮಗು. ವೈಲ್ಡ್ ಅವರ ತಂದೆ ವಿಲ್ಲಿ. ಅವರ ತಾಯಿ ಸೋಫಿ ಲಿಲಿ ಲೀಸ್‌. ಸೋಫಿ ಲಿಲಿ ಲೀಸ್‌ ಅವರು ವಿಲ್ಲೀ ಅವರ ಎರಡನೇ ಹೆಂಡತಿ. ವೈಲ್ಡ್ ಅವರು ತನ್ನ ಚಿಕ್ಕಪ್ಪನನ್ನು ಎಂದಿಗೂ ಭೇಟಿಯಾಗಲಿಲ್ಲ. ಅವರು ತನ್ನ ಸ್ವಂತ ತಂದೆಗಿಂತ ಹೆಚ್ಚು ಅವರನ್ನು ಆರಾಧಿಸುತ್ತಿದ್ದಳು. ವೈಲ್ಡ್ ಅವರ ಚಿಕ್ಕಪ್ಪ ಮದ್ಯಪಾನ ಮಾಡುತ್ತಿದ್ದರು. ವೈಲ್ಡ್ ಅವರು ಜನಿಸಿದ ಕೆಲವೇ ವರ್ಷಗಳ ನಂತರ ಅಂದರೆ ೧೮೯೯ ಅವರು ನಿಧನರಾದರು.[೧]

ವಿಶ್ವ ಸಮರ I

ಬದಲಾಯಿಸಿ

೧೯೧೪ ರಲ್ಲಿ ವೈಲ್ಡ್ ಅವರು ವಿಶ್ವ ಸಮರ I ರಲ್ಲಿ ಆಂಬ್ಯುಲೆನ್ಸ್ ಅನ್ನು ಓಡಿಸಲು ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದರು. ೧೯೧೭ ಅಥವಾ ೧೯೧೮ ರಲ್ಲಿ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಸಹ ಆಂಬ್ಯುಲೆನ್ಸ್ ಡ್ರೈವರ್‌ಗಳಲ್ಲಿ ಒಬ್ಬರಾದ ಸ್ಟ್ಯಾಂಡರ್ಡ್ ಆಯಿಲ್ ಉತ್ತರಾಧಿಕಾರಿ ಮರಿಯನ್ "ಜೋ" ಕಾರ್ಸ್ಟೈರ್ಸ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು.

ವ್ಯಸನಗಳು ಮತ್ತು ನಂತರದ ಜೀವನ

ಬದಲಾಯಿಸಿ

ವೈಲ್ಡ್ ಅವರು ಅತಿಯಾಗಿ ಕುಡಿಯುತ್ತಿದ್ದರು ಮತ್ತು ಹೆರಾಯಿನ್ ವ್ಯಸನಿಯಾಗಿದ್ದರು.[೨]

೧೯೩೯ ರಲ್ಲಿ ವೈಲ್ಡ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದರು ಮತ್ತು ಪರ್ಯಾಯ ಚಿಕಿತ್ಸೆಗಳನ್ನು ಹುಡುಕಿದರು.[೩] ಅವರು ೧೯೪೧ ರಲ್ಲಿ ೪೫ ನೇ ವಯಸ್ಸಿನಲ್ಲಿ ನಿಧನರಾದರು.[೪]

ನಟಾಲಿ ಬಾರ್ನೆ ಜೊತೆಗಿನ ಸಂಬಂಧ

ಬದಲಾಯಿಸಿ

೧೯೨೭ ರಿಂದ ವೈಲ್ಡ್ ಅವರ ಮರಣದವರೆಗೂ ಬಹಿರಂಗವಾಗಿ ಲೆಸ್ಬಿಯನ್ ಅಮೇರಿಕನ್ ಲೇಖಕಿ ನಟಾಲಿ ಕ್ಲಿಫರ್ಡ್ ಬಾರ್ನೆಯೊಂದಿಗೆ ವೈಲ್ಡ್ ಅವರ ಸಂಬಂಧ ಇತ್ತು. ನಟಾಲಿ ಕ್ಲಿಫರ್ಡ್ ಬಾರ್ನೆ ಅವರು ೨೦ ನೇ ಶತಮಾನದ ಅತ್ಯುತ್ತಮ ಪ್ಯಾರಿಸ್ ಸಾಹಿತ್ಯ ಸಲೂನ್‌ಗಳಲ್ಲಿ ಒಂದಾದ ಆತಿಥೇಯರಾಗಿದ್ದರು.[೫]

ಬರವಣಿಗೆ

ಬದಲಾಯಿಸಿ

ಡಾಲಿ ವೈಲ್ಡ್ ಅವರು ಪ್ರತಿಭಾನ್ವಿತ ಕಥೆಗಾರ ಮತ್ತು ಬರಹಗಾರ. ಟ್ರೂಲಿ ವೈಲ್ಡ್ ಇದು ವೈಲ್ಡ್ ಅವರ ಜೀವನಚರಿತ್ರೆ.[೬]

ಉಲ್ಲೇಖಗಳು

ಬದಲಾಯಿಸಿ
  1. "Dolly Wilde, a Ghost in Paris | Culture&Stuff". cultureandstuff.com. Retrieved 1 ಡಿಸೆಂಬರ್ 2019.
  2. Schenkar, 280-293.
  3. Schenkar, 269.
  4. Schenkar, 37-48.
  5. Rodriguez, Suzanne (2002). Wild Heart: A Life: Natalie Clifford Barney and the Decadence of Literary Paris. New York: HarperCollins. ISBN 0-06-093780-7.
  6. https://archive.nytimes.com/www.nytimes.com/books/first/s/schenkar-wilde.html?scp=7&sq=bettina%2520s&st=cse

ಬಾಹ್ಯ ಕೊಂಡಿಗಳು

ಬದಲಾಯಿಸಿ