ಆಸ್ಕರ್ ವೈಲ್ಡ್
ಆಸ್ಕರ್ ವೈಲ್ಡ್ (೧೮೫೪-೧೯೦೦) ಒಬ್ಬ ಐರಿಷ್ ಕವಿ, ಉತ್ತಮ ವಾಗ್ಮಿ ಹಾಗೂ ನಾಟಕಕಾರ. ಐರ್ಲೆಂಡಿನ ಡಬ್ಲಿನ್‍ನಲ್ಲಿ ೧೮೫೪ರಲ್ಲಿ ಜನಿಸಿದ. ಆಸ್ಕರ್ ಫಿಂಗಲ್ ಓ ಫ್ಲಾಹರ್ಟಿ ವಿಲ್ಸ್‌ವೈಲ್ಡ್ ಎಂಬುದು ಇವನ ಪೂರ್ಣ ಹೆಸರು. ವಾಗ್ಮಿತೆ ಹಾಗೂ ಪಾಂಡಿತ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಂಬಲದಿಂದ ಐರ್ಲೆಂಡನ್ನು ಬಿಟ್ಟು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸೇರಿದ. ಜೀವನ ಹಾಗೂ ಕಲೆಗಳ ವಿಚಾರದಲ್ಲಿ ಇವನ ಪಾಂಡಿತ್ಯ ಅಗಾಧವಾಗಿದ್ದ ಕಾರಣ ಬಹಳ ಬೇಗ ಪ್ರಸಿದ್ಧಿಗೆ ಬಂದ. ದ ಹ್ಯಾಪಿ ಪ್ರಿನ್ಸ್ ಅಂಡ್ ಅದರ್ ಟೇಲ್ಸ್ (೧೮೮೮) ಕೃತಿಯಲ್ಲಿ ಇವನ ನಿಜವಾದ ಸೃಜನಾತ್ಮಕ ಪ್ರತಿಭೆ ದರ್ಶನವಾಗುತ್ತದೆ.
ಪಿಕ್ಚರ್ ಆಫ್ ಡೋರಿಯನ್ ಗ್ರೇ (೧೮೯೦) ಇವನ ಏಕಮಾತ್ರ ಕಾದಂಬರಿ. ನೀತಿ ಪ್ರಧಾನವಾದ್ದು. ಒಂದು ದೈವಿಕ ವ್ಯಕ್ತಿತ್ವದ ವಿನಾಶಕಾರಿ ಪ್ರವೃತ್ತಿಯನ್ನು ಇಲ್ಲಿ ಚಿತ್ರಿಸಿದ್ದಾನೆ. ಲೇಡಿ ವಿಂಡರ್ಮರ್ಸ್ ಫ್ಯಾನ್ (೧೮೯೨), ಎ ವುಮೆನ್ ಆಫ್ ನೋ ಇಂಪಾರ್ಟೆನ್ಸ್ (೧೮೯೩), ಎನ್ ಐಡಿಯಲ್ ಹಸ್ಬೆಂಡ್ (೧೮೯೫) ಇವನ ಇತರ ಕೃತಿಗಳು. ದಿ ಇಂಪಾರ್ಟೆನ್ಸ್ ಆಫ಼್ ಬೀಯಿಂಗ್ ಅರ್ನೆಸ್ಟ್ (೧೮೯೫) ಇವನ ಅತ್ಯಂತ ಮಹತ್ತ್ವದ ಕೃತಿ. ಇವನ ನಾಟಕಗಳು ಮುಖ್ಯವಾಗಿ ಸಾಮಾಜಿಕ ವಿಡಂಬನೆಗಳಾಗಿವೆ. ದ ಇಂಪಾರ್ಟೆನ್ಸ್ ಆಫ಼್ ಬೀಯಿಂಗ್ ಅರ್ನೆಸ್ಟ್ ಕೃತಿಯಲ್ಲಿ ಬ್ರಿಟಿಷ್ ಸಾಮಾಜಿಕ ಬದುಕಿನ ಪೊಳ್ಳುತನವನ್ನು ಬಯಲಿಗೆಳೆಯುವ ಪ್ರಯತ್ನವಿದೆ. ಸಾಲೊಮೆ ಇವನ ಫ್ರೆಂಚ್ ಏಕಾಂಕ. ಇದು ಪ್ಯಾರಿಸ್‍ನಲ್ಲಿ ಪ್ರದರ್ಶನಗೊಂಡಿತು. ಈಸ್ತೆಟಿಕ್ ಫಿಲಾಸಫಿ ಎಂಬುದು ೧೮೮೨ರಲ್ಲಿ ಅಮೆರಿಕದಲ್ಲಿ ಸೌಂದರ್ಯ ಮೀಮಾಂಸೆಗೆ ಸಂಬಂಧಿಸಿದಂತೆ ಇವನು ನೀಡಿದ ಭಾಷಣ. ಕಲೆಕ್ಟೆಡ್ ಪೊಯಮ್ಸ್ ಇವನ ಕವನ ಸಂಕಲನ. ಸಲಿಂಗ ರತಿಯ ಸಾಮಾಜಿಕ ಆಪಾದನೆ ಮೇರೆಗೆ ಇವನು ಬಂಧನಕ್ಕೊಳಗಾಗಬೇಕಾಯಿತು. ಆ ಸಂದರ್ಭದಲ್ಲಿ ದ ಬ್ಯಾಲೆಡ್ ಆಫ್ ರೀಡಿಂಗ್ ಗೋಲ್ ಎಂಬ ಕವಿತೆಯನ್ನೂ ಡಿ ಪ್ರೊಫೆಂಡಿಸ್ ಎಂಬ ಆತ್ಮಚರಿತ್ರೆಯನ್ನೂ ಬರೆದ. ಬಂಧನದಿಂದ ಬಿಡುಗಡೆಗೊಂಡ ಅನಂತರ ಇಂಗ್ಲೆಂಡ್ ಬಿಟ್ಟು ಫ್ರಾನ್ಸ್‌ಗೆ ತೆರಳಿದ. ಈತ ೧೯೦೦ರಲ್ಲಿ ನಿಧನನಾದ.
ಹೊರಗಿನ ಕೊಂಡಿಗಳು
ಬದಲಾಯಿಸಿHistorical societies
ಬದಲಾಯಿಸಿHistorical notes
ಬದಲಾಯಿಸಿ- Record of Wilde's indictment and conviction – official Old Bailey website.
- Details including court transcriptions of the trials of Wilde
- Oscar Wilde in America including The American Lecture Tour 1882
- References to Oscar Wilde in historic European newspapers Archived 2017-10-12 ವೇಬ್ಯಾಕ್ ಮೆಷಿನ್ ನಲ್ಲಿ.
- "Archival material relating to Oscar_Wilde". UK National Archives.
- Archival material at Leeds University Library
- Newspaper clippings about ಆಸ್ಕರ್ ವೈಲ್ಡ್ in the 20th Century Press Archives of the ZBW
Radio programmes
ಬದಲಾಯಿಸಿ- Oscar Wilde on In Our Time at the BBC. (listen now)
Online texts by Wilde
ಬದಲಾಯಿಸಿ- Wilde texts from University College Cork, electronic texts, including a selection of his journalism
- Works by ಆಸ್ಕರ್ ವೈಲ್ಡ್ at Project Gutenberg
- Works by or about ಆಸ್ಕರ್ ವೈಲ್ಡ್ at Internet Archive
- Works by ಆಸ್ಕರ್ ವೈಲ್ಡ್ at LibriVox (public domain audiobooks)
- Works by Oscar Wilde at The Online Books Page
- Works by ಆಸ್ಕರ್ ವೈಲ್ಡ್ at Open Library
- Works by Oscar Wilde at One More Library
- Oscar Wilde Papers and Research Guide at the Harry Ransom Center
- "Impressions of America"
- Oscar Wilde Archived 2020-10-07 ವೇಬ್ಯಾಕ್ ಮೆಷಿನ್ ನಲ್ಲಿ. at the British Library
Images
ಬದಲಾಯಿಸಿ- Historical Image of Ruskin Street; Oscar Wilde was encouraged to carry out road improvements in this Oxfordshire village by the art critic John Ruskin
- The photographs of Oscar Wilde taken by Napoleon Sarony in New York, 1882 (complete).
- Portraits of Oscar Wilde at the National Portrait Gallery, London