ಟೊರಾಂಟೋನಗರದ ಸ್ಟ್ರೀಟ್ ಕಾರ್ ಗಳು
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಪಶ್ಚಿಮ ಭೂವಲಯದ ಉತ್ತರ ಅಮೆರಿಕದ ಉತ್ತರಭಾಗದಲ್ಲಿರುವ ಕೆನಡಾದೇಶದ ಬಿಡುವಿಲ್ಲದ ಉದ್ಯಮಗಳ ಮಹತ್ವದ ನಗರವಾಗಿರುವ ಟೊರಾಂಟೋ ನಗರಕ್ಕೆ ಭೇಟಿನೀಡುವ ಪರ್ಯಟರು ಹೆಚ್ಚು. ಸ್ವಚ್ಛಪರಿಸರದ ಟೊರಂಟೋನಗರದ 'ಸ್ಟ್ರೀಟ್ ಕಾರ್ ವಾಹನ ಸಂಚಾರ ವ್ಯವಸ್ಥೆ' ಈ ನಗರದಲ್ಲಿನ ಜನಪ್ರಿಯ ತಾಣ. ಒಟ್ಟು ೧೧ ರಸ್ತೆ ದಾರಿಯಲ್ಲಿ ಕ್ರಮಿಸುವ ವಾಹನಗಳು ಚಾಲ್ತಿಯಲ್ಲಿವೆ. ಇದರ ಹೆಸರು, 'ಟೊರಾಂಟೋ ಟ್ರಾನ್ಸಿಟ್ ಕಮೀಶನ್'.(TTC) ಎಂದು. [೧]ಉತ್ತರ ಅಮೆರಿಕದ ಅತಿ ದೊಡ್ಡ ಬಸ್ ಸಾರಿಗೆ ಕಂಪೆನಿಯೆಂದು ಪ್ರಸಿದ್ಧಿಪಡೆದ 'ಸ್ಟ್ರೀಟ್ ಕಾರ್ ಸಾರಿಗೆವ್ಯವಸ್ಥೆ' ಯಲ್ಲಿ ತೊಡಗಿರುವ ಗಾಡಿಗಳ ಸಂಖ್ಯೆ, ಮತ್ತು ಪ್ರಯಾಣದ ದೂರ,ಮುಂತಾದ ಸೂಕ್ಷ್ಮವಿವರಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಇವೆಲ್ಲಾ ಹೆಚ್ಚಾಗಿ ಜಲಾಶಯಗಳ, ಅಥವಾ ತೊರೆಗಳ ಹತ್ತಿರದಲ್ಲಿ 'ಡೌನ್ ಟೌನ್' ಗಳ ಸಮೀಪದಲ್ಲಿ ಯಾನಮಾಡುತ್ತವೆ. ೧೯ ನೆಯ ಶತಮಾನದಲ್ಲೇ 'ಟೊರಾಂಟೋ ನಗರ ಪಿತೃಗಳು' ಅತ್ಯಂತ ಸುವ್ಯವಸ್ಥಿತವಾಗಿ 'ಸ್ಟ್ರೀಟ್ ಕಾರ್ ಗಳ ಮಾರ್ಗ'ಗಳ ನೀಲನಕ್ಷೆಯನ್ನು ತಯಾರಿಸಿ, ಉತ್ತಮ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ಇವು ರಸ್ತೆಯಲ್ಲಿ ಓಡುವ 'ಸ್ಟ್ರೀಟ್ ಕಾರ್' ವಾಹನಗಳಲ್ಲದೆ, ನಗರದ ಸೌಂದರ್ಯಕ್ಕೆ, ಹಾಗೂ ಪ್ರಯಾಣಿಕರ ಆದ್ಯತೆಯಂತೆ ತಕ್ಕ ಸ್ಥಳಗಳಲ್ಲಿ ನಿಲ್ಲಿಸುವ, ಇಲ್ಲವೆ ವೇಗ ಕಡಿಮೆಗೊಳಿಸಿ ಸುಲಭವಾಗಿ ಕೆಳಗಿಳಿಯಲು ಅನುಕೂಲಮಾಡಿಕೊಡುವ, ಹಲವು ಮಾದರಿ ವ್ಯವಸ್ಥೆಗಳು 'ಸ್ಟ್ರೀಟ್ ಕಾರ್' ವಾಹನವನ್ನು ಜನಪ್ರಿಯಗೊಳಿಸಿವೆ.
ಟೊರಾಂಟೋ ಸಿಟಿ ಪಾಸ್
ಬದಲಾಯಿಸಿಒಂದು ದಿನದ ಪಾಸ್ ಹಗ್ಗೆ ವಿವರಗಳು ಹೀಗಿವೆ : ರಜದ ದಿನಗಳು ಮತ್ತು ಹಬ್ಬದ ರಜದದಿನವೆಲ್ಲಾ ಸುತ್ತಾಡಬಹುದು ಒಬ್ಬ ವಯಸ್ಕರು, ಇಲ್ಲವೇ ಇಬ್ಬರು ದೊಡ್ಡವರ ಒಟ್ಟಿಗೆ ಇದ್ದು, ಮಕ್ಕಳ ಜೊತೆಗೆ ಸೇರಿಕೊಂಡು, ೧೯ ವರ್ಷಕ್ಕೆ ಮೀರಿರದ ಹುಡುಗರ ಜೊತೆ ಒಟ್ಟಿಗೆ ೬ ಜನಕ್ಕಿಂತಾ ಹೆಚ್ಚಿಗೆ ಇರದ ತರಹ ಮಾಡಿಕೊಂಡರೆ, ೧೦.೫ ಡಾಲರ್ ಕ್ರಯದಲ್ಲಿ ದಿನಪೂರ್ತಿ ನಗರ ಪ್ರದಕ್ಷಿಣೆ ಮಾಡಬಹುದು.
ವಿಹಾರ ಸ್ಥಳಗಳು
ಬದಲಾಯಿಸಿ'ಟೊರಾಂಟೋನಗರ' ದ ಆಜುಬಾಜುಗಳ ಪ್ರೇಕ್ಷಣೀಯ ಸ್ಥಳಗಳಾದ, ಕಾಸಲೋಮ ಕ್ಯಾಸಲ್, ಟೊರಾಂಟೋ, ಸಿ. ಎನ್. ಟವರ್, ರಾಯಲ್ ಆಂಟೇರಿಯೊ ಮ್ಯೂಸಿಯೆಮ್, ಆಂಟೇರಿಯೊ ಸೈನ್ಸ್ ಸೆಂಟರ್, ಮತ್ತು ಟೊರಾಂಟೋ ಝೂ ಗಳಲ್ಲಿ, 'ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ', ಮತ್ತು, 'ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ' ಗಳನ್ನು ಬಿಟ್ಟು ಬೇರೆ ಜಾಗಗಳು ಸುಮಾರಾಗಿ ಪೂರ್ವದಿಕ್ಕಿನಲ್ಲಿವೆ. ಲೇಕ್ ಆಂಟೇರಿಯೋ ನಗರದ ಹತ್ತಿರದಲ್ಲಿದೆ. ಅಟ್ಲಾಂಟ, ಕಾಲ್ಗರಿ, ವಿಕ್ಟೋರಿಯ, ಕ್ವಿಬೆಕ್, ನಯಾಗರ, ಮಾಂಟ್ರಿಯೆಲ್, ವ್ಯಾಂಕೂವರ್ ಮೊದಲಾದ ದೊಡ್ಡನಗರಗಳಿವೆ. ಹೊಸ ಆಧುನಿಕ ಸ್ಟ್ರೀಟ್ ಕಾರ್ ಗಳ ಓಡಾಟದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ೨೦೧೪ ರ ಆಗಸ್ಟ್ ತಿಂಗಳಿನಲ್ಲಿ ಅವು ಪ್ರಯಾಣಕ್ಕೆ ಸಿಗುತ್ತವೆ.[೨]
ವಿಶ್ವದ ಅನೇಕ ನಗರಗಳಲ್ಲಿ ಈ ವ್ಯವಸ್ಥೆಯಿದೆ
ಬದಲಾಯಿಸಿ- ಅಟ್ಲಾಂಟಾ,
- ಬಾಸ್ಟನ್,
- ಚಿಕಾಗೋ,
- ಹೂಸ್ಟನ್,
- ನ್ಯೂಯಾರ್ಕ್,
- ಫಿಲಡೆಲ್ಫಿಯಾ,
- ಸ್ಯಾನ್ ಫ್ರಾನ್ಸಿಸ್ ಕೊ,
- ಸಿಯಾಟಲ್,
- ದ.ಕ್ಯಾಲಿಫೋರ್ನಿಯಾ,
- ಟೊರಾಂಟೋ,
ಉಲ್ಲೇಖಗಳು
ಬದಲಾಯಿಸಿ- ↑ "TTC Street cars". Archived from the original on 2014-06-25. Retrieved 2014-06-22.
- ↑ VIDEO TTC's new streetcars raise concerns with riders CBS News, Jun 11, 2014