ಕಾಸಲೋಮ ಕ್ಯಾಸಲ್, ಟೊರಾಂಟೋ

ಕಾಸಲೋಮ ಕ್ಯಾಸಲ್, ಟೊರಾಂಟೋನಗರದ ಒಂದು ಸುಂದರ ಪರಿಸರ. ಈ ರಾಜವಾಡಿಯ ಅಂದ-ಚೆಂದ ಗಮನಾರ್ಹವಾದುದು. 'ಕೆನಡಾ ರಾಷ್ಟ್ರದ ರಾಜಧಾನಿ', ಆಟ್ಟಾವಾ ಆದರೂ ಟೊರಾಂಟೋ ಮಾತ್ರ ತನ್ನ ಭವ್ಯ ಅಸ್ತಿತ್ವದಿಂದ ಬೀಗುತ್ತಿರುವ ಯುವಜನರ ಬೇಡಿಕೆಗಳನ್ನು ದಿವ್ಯವಾಗಿ ಈಡೇರಿಸಿಕೊಡಲು ಮಂಚೂಣಿಯಲ್ಲಿ ಓಡುತ್ತಿರುವ, ಇಂದಿನ ಜಾಗತಿಕ ಇಷ್ಟಾರ್ಥಗಳಿಗೆ ಸ್ಪಷ್ಟವಾಗಿ ಸ್ಪಂದಿಸುತ್ತಿರುವ ಜೀವಂತ ನಗರವಾಗಿದೆ. [] ಹಲವಾರು ಉದ್ಯಮಗಳ ಸ್ಥಾಪಕ ಸಮರ್ಥ ಆಡಳಿತಗಾರ, ಹೆನ್ರಿ ಪೆಲ್ಲಾಟ್, ಟೊರಾಂಟೋ ದ ಅತ್ಯಂತ ದೊಡ್ಡ ಉದ್ಯಮಿ ಮತ್ತು ನಗರ ಪ್ರೇಮಿ, ಹಾಗೂ ಕೆನಡಾ ದೇಶಕ್ಕೆ ಪಾದಾರ್ಪಣೆಮಾಡಿದ ಮೂಲ ಪುರುಷರ ಪರಿವಾರಗಳ ಸಾಲಿನಲ್ಲಿ ಮೊದಲಿಗ, 'ಸರ್ ಹೆನ್ರಿ ಪೆಲ್ಲಾಟ್' ನ ಕನಸಿನ ಅರಮನೆಯಾಗಿ ಕಂಗೊಳಿಸಿದ ಸೊಗಸಿನ ತಾಣ. ನಯಾಗರಾ ಜಲಪಾತದ ದೈತ್ಯ ಶಕ್ತಿಯನ್ನು ಬಳಸಿ ವಿದ್ಯುತ್ಛಕ್ತಿಯನ್ನು ಉತ್ಪಾದಿಸಲು ಪ್ರಯತ್ನಿಸಿ ಸಫಲರಾದ ಮೊದಲಿಗರಲ್ಲಿ ಅಗ್ರಮಾನ್ಯ ವ್ಯಕ್ತಿ.

'ಭವ್ಯ ಮನಮೋಹಕ, ಕಾಸಲೋಮ ಕ್ಯಾಸಲ್'

ಎಡ್ವರ್ಡಿಯನ್ ಕಾಲದ ವಾಸ್ತುಶಿಲ್ಪ

ಬದಲಾಯಿಸಿ
ಚಿತ್ರ:124.JPG
ಕಾಸಲೋಮ ಅರಮನೆಯ ಒಳಗಡೆಯ ಭವ್ಯ ಕೊಠಡಿ'

'ಕಾಸಲೋಮ ಅರಮನೆಯ ಇತಿಹಾಸ' ಬಹಳ ರೋಚಕವಾಗಿದೆ.[] 'ಹೆನ್ರಿ ಮಿಲ್ ಪೆಲ್ಲಾಟ್,' ತನ್ನ ಅತ್ಯಂತ ಪ್ರಿಯ ಗೆಳೆಯ ಕಟ್ಟಡ ನಿರ್ಮಾಪಕ, ಇ.ಜೆ.ಲೆನಾಕ್ಸ್ ರವರ ಸಹಕಾರದಿಂದ ಎಡ್ವರ್ಡಿಯನ್ ಕಾಲದ ಶೈಲಿಯಲ್ಲಿ ಬೆಟ್ಟಕ್ಕೆ ಎದುರಾಗಿ ನಿರ್ಮಿಸಿದ ಈ ಅರಮನೆಯ ಸೌಂದರ್ಯಕ್ಕೆ ಎಣೆಯಿರಲಿಲ್ಲ. ಸನ್ ೧೯೧೧ ರಲ್ಲಿ ೩೦೦ ಜನ ಕುಶಲಕರ್ಮಿಗಳು ೩ ವರ್ಷ ಸತತವಾಗಿ ಹಗಲು-ರಾತ್ರಿ ದುಡಿದು ಈ ರಾಜಭವನವನ್ನು ಕಟ್ಟಿಮುಗಿಸಿದರು. ಇದಕ್ಕೆ ವ್ಯವವಾದ ಹಣ ೩೫ ಲಕ್ಷ ಡಾಲರ್ ಗಳು. ಹಲವಾರು ರೂಂಗಳು ಅತಿ ಹೆಚ್ಚಿನ ಕಲಾವಸ್ತುಗಳಿಂದ ಕಂಗೊಳಿಸುತ್ತಿದ್ದವು. ಈಗಲೂ ಕಂಗೊಳಿಸುತ್ತಿವೆ. ಟವರ್ ಗಳು, ಹಾಗೂ ೮೦೦ ಅಡಿ ಉದ್ದದ ಕಂದಕದ ಸುರಂಗ ಮಾರ್ಗದಿಂದ ಕುದುರೆ ಲಾಯಕ್ಕೆ ನಿರ್ಮಿಸಿದ ಮಾರ್ಗ ಭವ್ಯವಾಗಿದೆ. ಇಂಗ್ಲೆಂಡ್ ರಾಜಪರಿವಾರಕ್ಕೆ ಅತಿ ನಿಕಟವಾಗಿದ್ದ ಹೆನ್ರಿಯವರಿಗೆ ಬ್ರಿಟಿಷ್ ಸರಕಾರ, 'ಸರ್' ಪದವಿಯನ್ನು ಪ್ರದಾನಿಸಿ ಗೌರವಿಸಿತು. ಆದರೆ ತಾವು ಇನ್ನೂ ಪೂರ್ತಿಯಾಗಿ ನಿರ್ಮಿಸದ ಕ್ಯಾಸಲ್ ನಲ್ಲಿ(ವಿಶ್ವ ಯುದ್ಧದಿಂದಾಗಿ ಅರಮನೆ ಕಟ್ಟುವ ಕೆಲಸ ಸ್ಥಗಿತವಾಗಿತ್ತು). ಹೆನ್ರಿ, ತಮ್ಮ ಪ್ರೀತಿಯ ಪತ್ನಿಯಜೊತೆ 'ಕಾಸಲೋಮ ಅರಮನೆ' ಯಲ್ಲಿ ಕಳೆದ ೧೦ ವರ್ಷಗಳ ಬಳಿಕ, ಆ ಖರ್ಚು-ವೆಚ್ಛ ನಿಭಾಯಿಸಲು ಸಾಮರ್ಥ್ಯವಿಲ್ಲದೆ ದಿವಾಳಿಯಾದರು. ಅದೇ ಸಮಯದಲ್ಲಿ ಹೆನ್ರಿಯ ಪ್ರೀತಿಯ ಪತ್ನಿ ಮರಣಿಸಿದರು. ಅರಮನೆಗೆ ತಗುಲಿದ ಖರ್ಚು ಅತಿಯಾಗಿ ಕೊನೆಗೆ ಮಾರುವ ಸ್ಥಿತಿಗೆ ಬಂದಾಗ ಟೊರಾಂಟೋ ನಗರದ ನಗರ ಸಭೆ ಅದನ್ನು ಖರೀದಿಸಿ ಸಾರ್ವಜನಿಕರ ವೀಕ್ಷಣೆಗೆ ಮುಡುಪಾಗಿಟ್ಟಿತು. ರಾಜಭವನವನ್ನು ನಿರ್ಮಿಸುವ ಹುಚ್ಚು ಹೆನ್ರಿಯರಿಗೆ ಬಂತೋ, ಅಂದಿನಿಂದ ಅದು ವಿಪರೀತವಾಗಿ ಪರಿಣಮಿಸಿ ತಮ್ಮ ಆಸ್ತಿಯನ್ನೆಲ್ಲಾ ಕಳೆದುಕೊಂಡು ಕಷ್ಟ, ಹಾಗೂ ಮಾನಸಿಕ ಆಘಾತವನ್ನು ಅವರು ಅನುಭವಿಸಬೇಕಾಯಿತು. ಕೆನಡಾದಲ್ಲೇ ಅತಿ ಹೆಚ್ಚು ಸಾಹುಕಾರರಾಗಿದ್ದ 'ಹೆನ್ರಿ ಪಲ್ಲಾಟ್' ಹಣದ ಅಭಾವದಿಂದ ಚಿಕ್ಕ ಮನೆಯೊಂದರಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾದ ಪ್ರಮೇಯ ಒದಗಿಬಂತು. ಜೀವನ ಸಂಗಾತಿಯೆಂದು ಮತ್ತೊಬ್ಬ ಮಹಿಳೆಯನ್ನು ಅವರು ವಿವಾಹವಾದರು.

'ಸ್ವಯಂ ಸಹಾಯಕ ಯಂತ್ರದ ಬಳಕೆಯ ಟೂರ್ ವ್ಯವಸ್ಥೆ'

ಬದಲಾಯಿಸಿ

ಸ್ವಯಂ ಸಹಾಯಕ ಯಂತ್ರ ಬಳಕೆಯ ಟೂರ್ ವ್ಯವಸ್ಥೆಯಿಂದ ಸುಲಭವಾಗಿ ಕ್ಯಾಸಲ್ ನ ಎಲ್ಲಾ ಕೊಠಡಿಗಳ ಒಳಗೆ ಹೋಗಿ ಸೂಕ್ಷ್ಮಾತಿ ಸೂಕ್ಷ್ಮ ವಿವರಗಳನ್ನು ತೀಳಿಯಲು ಸಾಧ್ಯ. []ಈ ಪೂರ್ವಧ್ವನಿಮುದ್ರಿತ ಉಪಕರಣದಲ್ಲಿ ಅಮೆರಿಕನ್, ಕೊರಿಯನ್, ಮಾಂಡರಿನ್, ಸ್ಯ್ಪಾನಿಷ್, ಡಚ್, ಜರ್ಮನ್, ಫ್ರೆಂಚ್,ಇಂಗ್ಲೀಷ್, ಭಾಷೆಗಳಲ್ಲಿ 'ಕಾಸಲೋಮ ಅರಮನೆಯ ಮಾಹಿತಿ'ಗಳು ಉಪಲಭ್ದವಿವೆ.'ಕಾಸಲೋಮಾ ಭವನ' ವನ್ನು ವೀಕ್ಷಿಸುವ ಪರ್ಯಟಕರಿಗೆ ಕಾರ್ಯಕ್ರಮದ ಕೊನೆಯಲ್ಲಿ ಇವೆಲ್ಲಾ ವಿಷಯಗಳನ್ನು ಸವಿಸ್ತಾರವಾಗಿ ಪರಿಚಯಿಸುವ ವೃತ್ತ ಚಿತ್ರದ ಪ್ರದರ್ಶನ ಮುದಕೊಡುವಂತಹದು. ಕೆಲವರು ಗೈಡ್ ವ್ಯವಸ್ಥೆಯನ್ನು ಮಾಡಿಕೊಂಡೇ ಇಲ್ಲಿಗೆ ಬರುತ್ತಾರೆ. ಇಲ್ಲಿನ ಗೈಡ್ ಗಳು ವಿವರಿಸುವುದು ಚೆನ್ನಾಗಿ ಕಂಡರೂ, ಅವರಿಗೆ ಟಿಪ್ಸ್ ಸಹಿತ ಹೆಚ್ಛಿಗೆ ಹಣಕೊಡಬೇಕು ಬದಿಯಲ್ಲಿರುವ ಉದ್ಯಾನವನದ ಸುಮರಾಶಿಯನ್ನು ನೋಡಲು ಕಣ್ಣುಸಾಲದು. ವಿಂಟರ್ ಬರುವ ಮೊದಲು, ಅಂದರೆ, ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಈ ಸೌಲಭ್ಯ ವೀಕ್ಷಕರಿಗೆ ಲಭ್ಯ.

ಇಂದು ಕಾಸಲೋಮ ಕೋಟೆ

ಬದಲಾಯಿಸಿ

'ಕೆನಡಾ ರಾಷ್ಟ್ರ'ದ 'ಟೊರಾಂಟೋ'ನಗರದ ಅತಿ ಪ್ರೇಕ್ಷಣೀಯ ಹಾಗೂ ಪರ್ಯಟಕರ ಪೀತಿಯ ೧೦ ತಾಣಗಳಲ್ಲಿ 'ಕಾಸಲೋಮ'ಕ್ಕೆ ಮಹತ್ವದ ಸ್ಥಾನವಿದೆ. ೨೦೧೧ ರಲ್ಲಿ 300,000 ಪರ್ಯಟಕರು ಕಾಸಲೋಮ ಅರಮನೆ ಹಾಗೂ ಅದರ ಉದ್ಯಾನವನ್ನು ವೀಕ್ಷಿಸಿದ್ದಾರೆ. ಇದುವರೆಗೆ ಕಾಸಲೋಮ ಪರಿಸರ, ೨೦೦ ಕ್ಕೂ ಹೆಚ್ಚು ಮದುವೆ, ಮೊದಲಾದ ಸಮಾರಂಭಗಳಿಗೆ ಸ್ಥಳವಾಗಿ ಹೆಸರುಮಾಡಿದೆ. ಅರಮನೆಯ ಭವ್ಯ ಪರಿಸರ, ಹಾಗೂ ಅದರ ವಾಸ್ತುಶಿಲ್ಪಕ್ಕೆ ಮಾರುಹೋದ ಚಲನಚಿತ್ರ ನಿರ್ಮಾಪಕರು, ಟೆಲಿವಿಶನ್ ಚಿತ್ರ ನಿರ್ಮಾಪಕರು, ಹಾಗೂ ಫೋಟೋಗ್ರಫಿಯ ಆಸಕ್ತರು, ಈ ಅರಮನೆಗೆ ಹೆಚ್ಚು ಹೆಚ್ಚು ಭೇಟಿಕೊಡಲು ಆರಂಭಿಸಿದ್ದಾರೆ.

ಕಾಸಲೋಮಕ್ಕೆ ಹೋಗಲು

ಬದಲಾಯಿಸಿ

ಸ್ಪಡೈನಾ ಅವೆನ್ಯೂ ಮತ್ತು ಡೇವನ್ಪೋರ್ಟ್ ರೋಡ್ ಗೆ ಸಮೀಪದಲ್ಲೇ ಒಂದು 'ಆಸ್ಟಿನ್ ಟೆರೇಸ್,' ಎಂಬ ಮನೆಯ ಪಕ್ಕದಲ್ಲೇ ಇದೆ.

ಉಲ್ಲೇಖಗಳು

ಬದಲಾಯಿಸಿ
  1. Casa Loma
  2. "HISTORY OF CASA LOMA". Archived from the original on 2017-03-31. Retrieved 2014-06-22.
  3. "Toronto's Dream Castle". Archived from the original on 2020-03-21. Retrieved 2014-06-22.