ಟೆಂಪ್ಲೇಟು ಚರ್ಚೆಪುಟ:Infobox ಚಲನಚಿತ್ರ
ಈ Infoboxಇನಿಂದ "ಹಿನ್ನೆಲೆ ಗಾಯನ, ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ" Fieldಗಳನ್ನು ತೆಗೆದು, ಈ ಚಿತ್ರದ ಚಿತ್ರಗೀತೆಗಳೆಗೆ ಹೊಸ Infobox ಆಲ್ಬಂ (ಅಥವಾ ಅಚ್ಚ ಕನ್ನಡದ ಯಾವುದಾದರು ಒಂದು ಪದ) ಮಾಡಬಹುದಲ್ಲವೆ. ಆಗ ಚಿತ್ರ ಗೀತೆಗಳನ್ನು ಪಟ್ಟಿ ಮಾಡಿ, ಪ್ರತಿ ಹಾಡಿಗೆ ಗಾಯಕರು, ಸಾಹಿತಿಯ ಹೆಸರನ್ನು ಬರೆಯಬಹುದು. ಸಾಮಾನ್ಯವಾಗಿ ಒಂದು ಚಿತ್ರದ ಎಲ್ಲಾ ಹಾಡುಗಳಿಗೆ ಒಬ್ಬರೇ (ಅಥವಾ ಒಂದು ಜೋಡಿ) ಸಂಗೀತ ನಿರ್ದೇಶಕರು, ಆದರೆ ಹಾಡುಗಳನ್ನು ಅನೇಕ ಗಾಯಕರು ಹಾಡಿರುತ್ತಾರೆ. ೨೦೦೦ದ ದಶಕದ ಚಿತ್ರಗೀತೆಗಳಲ್ಲಿ ಹಾಗು ಭಾವಗೀತೆ ಆಲ್ಬಂಗಳಲ್ಲಂತೂ ಅನೇಕ ಸಾಹಿತಿಗಳ ಗೀತೆಗಳು ಒಂದೇ ಆಲ್ಬಂನಲ್ಲಿರುತ್ತದೆ. -ಹಂಸವಾಣಿದಾಸ 02:29, ೧ April ೨೦೦೬ (UTC)
- ಹಾಗೆಯೇ ಮಾಡೋಣ. ಈಗಿರುವ Infoboxನಿಂದ ಏನನ್ನೂ ತೆಗೆಯುವುದು ಬೇಡ. ಒಂದು ಚಿತ್ರತಂಡವೆಂದ ಮೇಲೆ, ಗಾಯಕರು, ಸಂಗೀತ ನಿರ್ದೇಶಕರು, ಚಿತ್ರಸಾಹಿತಿಗಳೆಲ್ಲರೂ ಸೇರಿಕೊಳ್ಳುತ್ತಾರೆ.
- ಹೊಸ Infobox ಟೆಂಪ್ಲೇಟೊಂದನ್ನು, ಕೆಳಗಿನಂತೆ ಮಾಡೋಣವೇ?
ಹಾಡು ಸಾಹಿತ್ಯ ಹಿನ್ನೆಲೆಗಾಯನ ಹಾಡು#೧ ಸಾಹಿತಿ #೧ ಹಿನ್ನೆಲೆ ಗಾಯಕ#೧, ಹಿನ್ನೆಲೆ ಗಾಯಕಿ#೧ ಹಾಡು#೨ ಸಾಹಿತಿ #೨ ಹಿನ್ನೆಲೆ ಗಾಯಕ#೨, ಹಿನ್ನೆಲೆ ಗಾಯಕಿ#೨
- ಒಂದು ಚಿತ್ರಕ್ಕೆ ಸಂಗೀತ ನಿರ್ದೇಶಕರು ಒಬ್ಬರೇ (ಅಥವಾ ಒಂದು ಜೋಡಿ) ಇರುವುದರಿಂದ, ಈ ಟೆಂಪ್ಲೇಟಿನಲ್ಲಿ ಅದನ್ನು ಹಾಕುವ ಅವಶ್ಯಕತೆಯಿಲ್ಲ ಎನಿಸುತ್ತದೆ.
- 'Infobox ಚಿತ್ರಗೀತೆಮಾಲಿಕೆ' ಎಂದು ಹೆಸರಿಸಬಹುದೇ ಇದನ್ನು?
- ಈಗ ಹೊಸ ಟೆಂಪ್ಲೇಟ್ ರಚನೆಯ ಬಗ್ಗೆ: ಮುಖ್ಯವಾದ ತೊಡಕು, ಚಲನಚಿತ್ರಗಳಲ್ಲಿ ನಿರ್ದಿಷ್ಟವಾದ ಸಂಖ್ಯೆಯಲ್ಲಿ ಗೀತೆಗಳಿಲ್ಲದಿರವುದು. ೨, ೩, ೪, ೫, ೬,೭,೮,೯,೧೦ ಹೀಗೆ ವಿವಿಧ ಸಂಖ್ಯೆಯ ಹಾಡುಗಳು ವಿವಿಧ ಚಿತ್ರಗಳಲ್ಲಿವೆ. ಉದಾ: ಶ್!! ಚಿತ್ರದಲ್ಲಿ ಎರಡು ಹಾಡಿದ್ದರೆ, ಪ್ರೇಮಲೋಕ ಚಿತ್ರದಲ್ಲಿ ೧೦ ಹಾಡುಗಳಿವೆ. Dynamic ಆಗಿ number of rows ಬದಲಾವಣೆಯಾಗುವ ಹಾಗೆ ಟೆಂಪ್ಲೇಟ್ ರಚಿಸಬೇಕಿದೆ. --ಮನ 01:49, ೨ April ೨೦೦೬ (UTC)
ಚಿತ್ರಗಳು
ಬದಲಾಯಿಸಿಚಲನಚಿತ್ರಗಳ ಟೆಂಪ್ಲೇಟು ಹಾಕಿರುವ ಸುಮಾರು ಲೇಖನಗಳಲ್ಲಿ ಚಿತ್ರವಿಲ್ಲ. ಬರೆ Image ಟ್ಯಾಗ್ ಕಾಣಿಸಿಕೊಳ್ಳತ್ತೆ. ಸದ್ಯಕ್ಕೆ ಇದನ್ನು ತೆಗೆದಿದ್ದರೆ ಉತ್ತಮ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೫೩, ೮ May ೨೦೦೬ (UTC)
- ಹೌದು. ಹಾಗೆಯೇ ಮಾಡೋಣ. Image ಹಾಕಿದರೆ ಮಾತ್ರ ಅದು ಕಾಣುವಂತೆ, Image ಇಲ್ಲದಿದ್ದಲ್ಲಿ, Image ಟ್ಯಾಗ್ ಕೂಡ ಇಲ್ಲದಂತೆ ಮಾಡಬಹುದು (ie, "hide if not available" feature). ಆ ರೀತಿ ಈ Infobox ಟೆಂಪ್ಲೇಟನ್ನು ಇದೀಗ ಬದಲಾಯಿಸುವೆ. ಧನ್ಯವಾದಗಳು. - ಮನ ೧೫:೨೯, ೮ May ೨೦೦೬ (UTC)
ಹಿನ್ನೆಲೆ ಗಾಯನ
ಬದಲಾಯಿಸಿಈ Infoboxನಲ್ಲಿ "ಹಿನ್ನೆಲೆ ಗಾಯನ"ವನ್ನು ತೆಗೆಯಬಹುದೆಂದು ನನ್ನ ಅಭಿಪ್ರಾಯ. ಹೇಗಿದ್ದರೂ ಚಿತ್ರಗೀತೆಗೆ ಅದರದ್ದೇ ಒಂದು Infobox ಇದೆ. ಹಾಗೆಯೇ ಒಂದು ಚಿತ್ರದಲ್ಲಿ ಬಹಳಷ್ಟು ಹಿನ್ನೆಲೆ ಗಾಯಕರು ಇರುವ ಸಾಧ್ಯತೆಯೂ ಇರುವುದರಿಂದ (ಅದರಲ್ಲೂ ಇತ್ತೀಚಿನ ಹಾಗು ಅತಿ ಹಳೆಯ ಚಿತ್ರಗಳಲ್ಲಿ), ಆಯಾ ಹಾಡುಗಳ ಜೊತೆ ಅವರ ಹೆಸರುಗಳು "ಚಿತ್ರಗೀತೆ" Infoboxನಲ್ಲಿಯೇ ಇರಲಿ. -ಹಂಸವಾಣಿದಾಸ ೦೩:೨೬, ೬ June ೨೦೦೬ (UTC)
- "ಚಿತ್ರಗೀತೆ" Infobox ಒಂದು ಚಿತ್ರದಲ್ಲಿನ ಹಾಡುಗಳ ವಿವರಗಳನ್ನು ಕೊಡುವಂತಹ ಸೌಲಭ್ಯ.
- "ಚಲನಚಿತ್ರ" Infobox ಒಂದು ಚಲನಚಿತ್ರದ ಸಂಪೂರ್ಣ ವಿವರವನ್ನು (ಎಷ್ಟು ವಿವರಗಳು ಸಾಧ್ಯವೋ ಅಷ್ಟೂ) ಕೊಡುವಂತಹ ಸೌಲಭ್ಯ. ಚಲನಚಿತ್ರದ ಪ್ರಾರಂಭದಲ್ಲಿ ತೋರಿಸುವ ಟೈಟಲ್ ಕಾರ್ಡ್ಸ್ ಗೆ ಹೋಲಿಸಲ್ಪಡುವಂತಹುದು.
- ಇದರ ಜೊತೆಗೆ ಇನ್ನೊಂದು ಕಾರಣವಿದೆ. ಒಂದು ಚಿತ್ರ ABC ನಲ್ಲಿ ಹಿನ್ನೆಲೆಗಾಯಕರು P,Q,R,S ಎಂದು ನಮಗೆ ಮಾಹಿತಿಯಿರುತ್ತದೆ. ಆದರೆ ಆ ಚಿತ್ರದಲ್ಲಿ ಯಾವ ಹಾಡುಗಳಿವೆ ಎಂದು ಮಾಹಿತಿಯಿರುವುದಿಲ್ಲ, ಯಾವ ಹಾಡು ಯಾರು ಹಾಡಿದ್ದಾರೆ ಎನ್ನುವ ಮಾತು ದೂರವೇ ಉಳಿಯಿತು. ಹಿನ್ನೆಲೆ ಗಾಯಕರ ಬಗ್ಗೆ ನಮ್ಮ ಬಳಿ ಮಾಹಿತಿ ಇದ್ದರೂ ಆ ಸಂದರ್ಭಗಳಲ್ಲಿ ಚಿತ್ರಗೀತೆ Infobox ನಲ್ಲಿ ಮಾಹಿತಿ ಹಾಕಲು ಸಾಧ್ಯವಿರುವುದಿಲ್ಲ. - ಮನ | Mana ೦೩:೪೧, ೬ June ೨೦೦೬ (UTC)
- ಟೈಟಲ್ ಕಾರ್ಡಿನ ಪ್ರತಿರೂಪವಾಗಿ ಇರಬೇಕಾದಲ್ಲಿ ಹೀಗೇ ಇರಲಿ, ಆದರೆ ಆ ಚಿತ್ರದ ಎಲ್ಲಾ ಹಾಡುಗಳು ತಿಳಿದಿದ್ದರೆ, ಅದೇ ಪುಟದಲ್ಲಿ Infobox ಚಿತ್ರಗೀತೆಯೂ ಇರುವುದರಿಂದ ನೋಡಿಕೊಳ್ಳಬಹುದಲ್ಲವೇ. ಗಾಯಕರು ಮಾತ್ರ ತಿಳಿದಿದ್ದು, ಗೀತೆಗಳು ಗೊತ್ತಿಲ್ಲದಿರುವ ಸಾಧ್ಯತೆ ಕಡಿಮೆಯೆಂದು ನನ್ನ ಅನಿಸಿಕೆ -ಹಂಸವಾಣಿದಾಸ ೦೪:೧೭, ೬ June ೨೦೦೬ (UTC)