ಟೆಂಪ್ಲೇಟು ಚರ್ಚೆಪುಟ:ಕನ್ನಡ ಸಿನೆಮಾ
ಗಜಗಾತ್ರದ Templateನ ಅಗತವನ್ನು ಕೇಳಿದ್ದೆ, Template: ಕನ್ನಡ ಸಾಹಿತ್ಯ ಲೋಕದಲ್ಲಿ. ಬಹುಷಃ ಇನ್ನು ಯಾರೂ ನೋಡಿಲ್ಲವೆಂದೆನಿಸುತ್ತದೆ. ಈಗ ಎಸ್.ಪಿ.ಬಿ. ಪುಟ ಪರಿಷ್ಕರಿಸುತ್ತಿರಬೇಕಾದರೆ ಇದು ಅನಗತ್ಯವೆನಿಸಿತು. ಹೇಗಿದ್ದರೂ Category: ಹಿನ್ನೆಲೆ ಗಾಯಕರು ಗೆ ಸಂಪರ್ಕವಿದೆ. ಅದೊಂದೇ ಸಾಕಲ್ಲವೇ ! ಹೇಗಿದ್ದರೂ "ಹಿನ್ನೆಲೆ ಗಾಯಕರು" ಈಗಾಗಲೇ ಕನ್ನಡ ಸಿನೆಮಾ Categoryನಲ್ಲಿ ಒಂದು ಉಪವಿಭಾಗವಾಗಿದೆ.
ಮತ್ತೆ, ಈ Template, Category ಗಳು ಹೇಗಿರಬೇಕು ಎಂಬ ನಿರ್ಣಯ ಕೇವಲ ನಿರ್ವಾಹಕರದ್ದೋ ಅಥವಾ ಸಂಪಾದಕರು ಇವುಗಳನ್ನು ನಿರ್ಮಿಸಬಹುದೋ ? ಸಹಾಯಕ ಪುಟದಲ್ಲೀ ನೋಡುತ್ತೇನೆ, ಆದರೂ ಹೆಚ್ಚಿನ ಮಾಹಿತಿ ಇದ್ದರೆ ಹೇಳುವುದು. ಹಾಗೇನಾದರೂ ಯಾವ ನಿರ್ಬಂಧವಿಲ್ಲದಿದ್ದ ಪಕ್ಷದಲ್ಲಿ ಈ Templateಅನ್ನು ತೆಗೆಯಬೇಕೆಂದಿದ್ದೇನೆ. ಯಾರಿಗಾದರೂ ಅಭ್ಯಂತರವಿದ್ದಲ್ಲಿ ತಿಳಿಸುವುದು.
ಉದಾಹರಣೆಗೆ ಎಸ್.ಪಿ.ಬಿ ಯ ಆಂಗ್ಲ ವಿಕಿಪುಟ ನೋಡಿ en:SP_Balasubramanyam
ಸಹಿ ಮರೆತಿದ್ದೆ -ಹಂಸವಾಣಿದಾಸ 05:12, ೨೭ March ೨೦೦೬ (UTC)
- hmm... ಚರ್ಚೆಗೆ ಹಾಕಿದ ಮೇಲೆ ಚರ್ಚೆ ನಡೆಯುವ ತನಕ ಕಾದು ಚರ್ಚೆಯಿಂದ ಅಳಿಸುವಿಕೆಯೆಂದು ನಿರ್ಣಯವಾದರೆ ಅಳಿಸುವಿಕೆಗೆ ಲಗತ್ತಿಸಬೇಕು. ತಕ್ಷಣ ಹೀಗೆ ಟೆಂಪ್ಲೇಟೊಂದನ್ನು ತೆಗೆದುಹಾಕಬಾರದು. ಟೆಂಪ್ಲೇಟು ಇದಕ್ಕೆ ಬೇಕಿಲ್ಲ, ನಿಜ. ಆದರೆ ಮೊದಲು ಸಿನೆಮಾ ಬಗ್ಗೆ ಇಷ್ಟೊಂದು ಲೇಖನಗಳಿಲ್ಲದ್ದರಿಂದ ಆಸಕ್ತರಿಗೆ ಹೆಚ್ಚು ಸುಲಭವಾಗಿ ಸದ್ಯದ ಪುಟಗಳು ಲಭ್ಯವಾಗಲಿ ಎಂದು ಈ ವರ್ಗ (ಹಾಗೂ ಸಾಕಷ್ಟು ಇನ್ನಿತರ ವರ್ಗಗಳಲ್ಲಿ) ಹೀಗೆ ಲೇಖನಗಳ ಪಟ್ಟಿಯ ಟೆಂಪ್ಲೇಟುಗಳನ್ನು ಮಾಡಲಾಗಿದೆ.
- ಟೆಂಪ್ಲೇಟುಗಳು ಆಂಗ್ಲ ವಿಕಿ ಸಂದರ್ಭದ ಬಳಕೆಯ ರೂಪದಲ್ಲಿ ಇಲ್ಲಿ ಬಳಸುವಾಗ ಒಂದಷ್ಟು ಬದಲಾವಣೆಗಳಾಗಿವೆ, ಹಾಗೂ ಆಗುವುದು ಸಹಜ - ಈ ವಿಕಿ ಇನ್ನೂ ಬೆಳೆಯುತ್ತಿದೆ.
- ಮತ್ತೊಂದು ವಿಷಯ "ಅಭ್ಯಂತರವಿಲ್ಲದಿದ್ದರೆ ತಿಳಿಸಿ" ಎಂದುಕೊಂಡು ಯಾವುದೇ ಲೇಖನವನ್ನಾಗಲಿ, ವರ್ಗವನ್ನಾಗಲಿ ಖಾಲಿ ಮಾಡುವುದು ಸರಿಯಲ್ಲ. ನಿಮ್ಮೊಂದಿಗೆ ಮಾತಿನ ವರಸೆಗೆ ಇಳಿಯಲು ಇಷ್ಟವಿಲ್ಲದೆ ಯಾರಾದರೂ ಉಳಿದ ವಿಕಿ ಸದಸ್ಯರಿಗೆ ಉತ್ತರಿಸಲು ಬಿಟ್ಟಿದ್ದೆನಾದರೂ ಇಂತಹ ಬದಲಾವಣೆಗಳನ್ನು ಈಗಲೇ clarify ಮಾಡಿದರೆ ಒಳ್ಳೆಯದು ಎಂದು ಬರೆಯುತ್ತಿದ್ದೇನೆ. ಮತ್ತೊಂದು ವಾಕ್ಯುದ್ಧ ಪ್ರಾರಂಭಿಸದಿರಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:08, ೩೧ March ೨೦೦೬ (UTC)
- ಸದ್ಯಕ್ಕೆ ಬ್ಲಾಂಕ್ ಮಾಡಿದ ಮಾಹಿತಿಯನ್ನು ವಾಪಸ್ ಹಾಕಲಾಗಿದೆ. ಟೆಂಪ್ಲೇಟು ದೊಡ್ಡದು. ಇದರ ಅಳಿಸುವಿಕೆ ಬಹುಶಃ ಸರಿಯಾದರೂ ಇದರ ಬಗ್ಗೆ ಚರ್ಚೆ ನಡೆದ ಮೇಲೆ (ಈ ಟೆಂಪ್ಲೇಟನ್ನು ಭಾಗ ಮಾಡುವುದೋ, ಅಥವ ಅಳಿಸುವಿಕೆಗೆ ಸೇರಿಸುವುದೊ, ಅಥವ ಬೇರೊಂದು ರೀತಿಯಲ್ಲಿ ಲೇಖನಗಳಲ್ಲಿ ಹೆಚ್ಚು ಸೂಕ್ತವಾಗಿ ಕೂಡುವಂತೆ ಹಾಕಬಹುದೋ - ಈ ಬಗ್ಗೆ ವಿಸ್ತೃತ ಚರ್ಚೆ ನಡೆದ ಮೇಲೆ) ಮುಂದುವರೆಯೋಣ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:13, ೩೧ March ೨೦೦೬ (UTC)
ಟೆಂಪ್ಲೇಟ್‍ಗಳ ಬಳಕೆಯನ್ನು Mis-interpret ಮಾಡಿಕೊಂಡಿದಂತಿದೆಯಲ್ಲಾ. ಎಲ್ಲಾ ಸಂಪಾದಕರಲ್ಲಿ ಕಳಕಳಿಯ ಮನವಿ, ದಯವಿಟ್ಟು ಮತ್ತೊಮ್ಮೆ Template FAQ ನೋಡುವುದು. ಅದರ ಪ್ರಕಾರ ಟೆಂಪ್ಲೇಟ್ ಗಳಿರುವುದು "ಮರು ಬಳಕೆ"ಗೆ (Reusability) ಸಹಾಯವಾಗಲೆಂದು, ಒಂದಿಷ್ಟು ಸಾಲುಗಳನ್ನು ಒಂದು ಟೆಂಪ್ಲೇಟ್ನಲ್ಲಿ ಹಾಕಿ, ಅದನ್ನ ಲೇಖನಗಳಲ್ಲಿ ಬಳಸಿಕೊಳ್ಳುವುದು. ಗಣಕಯಂತ್ರದಲ್ಲಿರುವ ಕ್ರಮವಿಧಿ ಭಾಷೆಗಳಲ್ಲಿರುವ "Reusable code snippets"ನಂತೆ. ಆದ್ದರಿಂದ ಈಗ ಸದ್ಯದಲ್ಲಿರುವ ಚುಟುಕು ನಂತಹ ಟೆಂಪ್ಲೇಟ್‍ಗಳು ಸರಿಯಾಗಿವೆ, ಆದರೆ Template:ಸಿನೆಮಾ, Template:ಸಾಹಿತಿಗಳು were just not meant to be Templates. ಇದನ್ನು ಬೇರೆಲ್ಲಾದರೂ ಚರ್ಚಿಸಬೇಕೆಂದಿದ್ದರೆ ಅಲ್ಲಿಗೆ ವರ್ಗಾಯಿಸಿ -ಹಂಸವಾಣಿದಾಸ 21:46, ೨೭ March ೨೦೦೬ (UTC)
- ಮೇಲಿನ ಕಾಮೆಂಟ್ ಓದಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:08, ೩೧ March ೨೦೦೬ (UTC)
ಟೆಂಪ್ಲೇಟ್ ಚರ್ಚೆ
ಬದಲಾಯಿಸಿಈ ಟೆಂಪ್ಲೇಟು ಸಾಕಷ್ಟು ದೊಡ್ಡದಾಗಿ ಬಿಟ್ಟಿದೆ. ಸಣ್ಣ ಲೇಖನಗಳಲ್ಲಿ ಇದೇ ದೊಡ್ಡದಾಗಿ ಕಾಣುತ್ತದಾದ್ದರಿಂದ ಚೆಂದವಿರುವುದಿಲ್ಲವೆಂದು ಹಲವರಿಗೆ ಈಗಾಗಲೇ ಅನ್ನಿಸಿರಬಹುದು. ಈ ಟೆಂಪ್ಲೇಟು ಪ್ರಾರಂಭಿಸಿದ್ದು ಕನ್ನಡ ಚಿತ್ರರಂಗ/ಸಿನೆಮಾ ಬಗ್ಗೆ ಆಸಕ್ತರಿಗೆ ವಿಷಯದ ಬಗ್ಗೆ ಈಗಿರುವ ಲೇಖನಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ (ಈ ಉದ್ದೇಶ ವರ್ಗ ಪುಟವೂ ನೆರವೇರಿಸುತ್ತದಾದರೂ ಕೆಲವು ಸಂಪರ್ಕಗಳ ಪಟ್ಟಿ ಇದ್ದಾಗ ಟೆಂಪ್ಲೇಟು ಬಳಸಿ navigate ಮಾಡುವ ಸೌಲಭ್ಯ ಒದಗಿಸುವುದು ಈಗಾಗಲೇ ಹೆಚ್ಚು ಬೆಳೆದಿರದ ವಿಭಾಗಗಳಿಗೆ ಅತ್ಯಂತ ಸೂಕ್ತವಾದುದು - ಬೆಳೆಯುತ್ತಿರುವ ವಿಭಾಗಗಳಲ್ಲೂ ಲೇಖನಗಳ ಪಟ್ಟಿ ಒದಗಿಸಿ ಒಂದೇ ವರ್ಗದ ಲೇಖಗಳನ್ನು ತಲುಪುವುದಕ್ಕೆ ಹೊಸಬರಿಗೆ ಸುಲಭ ದಾರಿ ಒದಗಿಸುತ್ತದೆ) ಆದರೆ ದೊಡ್ಡದಾದ ಈ ಟೆಂಪ್ಲೇಟನ್ನು ಮೇಲಿನ ಉದ್ದೇಶ ನೆರವೇರುವಂತೆಯೂ, ಅದೇ ಸಮಯ ಅತಿ ದೊಡ್ಡದಾಗಿರದಂತೆಯೂ ಒಂದು ಕ್ರಮ ಕೈಗೊಂಡು ಮುಂದುವರೆಯಬೇಕಿದೆ. ನಿಮ್ಮೆಲ್ಲರ ಅಭಿಪ್ರಾಯಗಳನ್ನೂ, ನಿಮ್ಮ ಅಭಿಪ್ರಾಯಗಳಂತೆ (ಮೇಲಿನಂತೆ ಮುಂದುವರೆಯುವುದಕ್ಕೆ ಹೊಸ ಐಡಿಯಗಳು ಇದ್ದಲ್ಲಿ) ಹೇಗೆ ಕಾರ್ಯಗತಗೊಳಿಸುತ್ತೀರೆಂಬುದನ್ನೂ ತಿಳಿಸಿ ಚರ್ಚೆ ಮುಂದುವರೆಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:24, ೩೧ March ೨೦೦೬ (UTC)
- ಪ್ರತಿ ಉಪವಿಭಾಗಕ್ಕೂ 'ಮನ' ಈಗಾಗಲೇ Templateಗಳನ್ನು ಮಾಡುತ್ತಿರುವುದರಿಂದ, ಅವುಗಳಿಗೆ ಕೊಂಡಿಗಳನ್ನು ಮಾತ್ರ ಈ ಟೆಂಪ್ಲೇಟಿನಲ್ಲಿ ಹಾಕಿ ಮುಂದುವರೆಯಬಹುದಲ್ಲವೇ ? ಈ ಕೊಂಡಿಗಳು ವಿಸ್ತೃತ (expand) ಆಗದಂತೆ ಏನಾದರೂ ಮಾಡಬಹುದೇ ? - ಹಂಸವಾಣಿದಾಸ 20:55, ೩೧ March ೨೦೦೬ (UTC)
- ಹೌದು, ಹೀಗೆ ಮಾಡಬಹುದು. ಚೆನ್ನಾಗಿರುತ್ತದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:17, ೮ April ೨೦೦೬ (UTC)