‘’’ಟಿ. ಜಿ. ರಾಘವ’’’ (ಮಾರ್ಚ್ ೨೮, ೧೯೩೫) ಅವರು ಕನ್ನಡದ ಮಹತ್ವದ ಕಥೆಗಾರರಾಗಿದ್ದಾರೆ.

ಟಿ. ಜಿ. ರಾಘವ
ಜನನಮಾರ್ಚ್ ೨೮, ೧೯೩೫
ಬೆಂಗಳೂರು
ವೃತ್ತಿಅಧ್ಯಾಪಕರು, ಕಥೆಗಾರರು
ವಿಷಯಕನ್ನಡ ಸಾಹಿತ್ಯ

ಜೀವನ ಬದಲಾಯಿಸಿ

ಅವರು ಮಾರ್ಚ್ 28, 1935ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಟಿ.ಜಿ. ರಾಘವರ ತಂದೆ ಗೋವಿಂದಾಚಾರ್ಯರು. ತಾಯಿ ತಂಗಮ್ಮನವರು. ಸಾಂಪ್ರದಾಯಿಕವಾಗಿ ಅವರ ಮನೆಯ ಮಾತು ತಮಿಳಾದರೂ, ರಾಘವರು ಕಲಿತದ್ದು ಕನ್ನಡದಲ್ಲಿ. ಅವರ ಕೃಷಿಯೂ ಕನ್ನಡದಲ್ಲೇ ಅರಳಿದೆ. ರಾಘವರ ಶಾಲಾ ವಿದ್ಯಾಭ್ಯಾಸ ಗುಬ್ಬಿ, ಶ್ರೀನಿವಾಸಪುರ, ಕೋಲಾರ ಮುಂತಾದೆಡೆಗಳಲ್ಲಿ ನೆರವೇರಿತು. ತಾವು ಚಿಕ್ಕವರಿದ್ದಾಗ ತಮ್ಮ ಅಜ್ಜಿ ಹೇಳುತ್ತಿದ್ದ ಕಥೆಗಳು ಮತ್ತು ತಾಯಿ ಗುನುಗುತ್ತಿದ್ದ ಹಾಡುಗಳೆಂದರೆ ಅವರಿಗೆ ಅಪಾರ ಆಸಕ್ತಿ. ಹೀಗೆ ಬಾಲ್ಯದಲ್ಲೇ ಸಾಹಿತ್ಯದ ಸೂಕ್ಷ್ಮ ಎಳೆ ಅವರನ್ನಾವರಿಸಿತ್ತು.

ಶ್ರೇಷ್ಠ ಗುರುವಿನ ನೆಚ್ಚಿನ ಶಿಷ್ಯ ಬದಲಾಯಿಸಿ

ರಾಘವರ ಮೊದಲ ಕಥೆ ‘ಟಿಕ್, ಟಿಕ್…’, ಅಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ ಮೂಡಿಬಂದಾಗ, ಹಲವಾರು ಪ್ರಬುದ್ಧ ಓದುಗರ ಗಮನ ಸೆಳೆಯಿತು. ಮುಂದೆ ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿದಾಗ ಅಲ್ಲೇ ಪ್ರಾಧ್ಯಾಪಕರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ ಗಮನಕ್ಕೆ ಬಂದು, ಅವರ ನೆಚ್ಚಿನ ಶಿಷ್ಯರಾದರು.

ಅಧ್ಯಾಪನ ಬದಲಾಯಿಸಿ

ಬಿ.ಎಸ್ಸಿ ಪದವಿ ಪಡೆದ ನಂತರ ಕೆಲಕಾಲ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದ ರಾಘವರು, ಅಡಿಗರ ಆಹ್ವಾನದ ಮೇರೆಗೆ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಶಿಕ್ಷಕರಾದರು. ಮತ್ತಷ್ಟು ವಿದ್ಯಾಕಾಂಕ್ಷೆಯಿಂದ ಧಾರವಾಡಕ್ಕೆ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಕೆಲಕಾಲ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿದ ನಂತರದಲ್ಲಿ ಮುಂದೆ ಬೆಂಗಳೂರಿನ ಎಂ.ಇ.ಎಸ್. ಕಾಲೇಜು ಸೇರಿ, ನಿವೃತ್ತಿಯವರೆವಿಗೂ ಅಲ್ಲಿಯೇ ಪ್ರಾಧ್ಯಾಪನ ನಡೆಸಿದರು.

ಅಧ್ಯಾಪಕರಿಗಾಗಿ ಹೋರಾಟ ಬದಲಾಯಿಸಿ

ಅಂದಿನ ಕಾಲದಲ್ಲಿ ಶಿಕ್ಷಕರು ಅನುಭವಿಸುತ್ತಿದ್ದ ಬವಣೆಗಳನ್ನು ನೀಗಿಸಲು ನಿರಂತರವಾಗಿ ಶ್ರಮಿಸಿದ ಟಿ. ಜಿ. ರಾಘವರು ಕೋರ್ಟು, ಕಚೇರಿಗಳಿಗೆ ಲೆಖ್ಖವಿಲ್ಲದಷ್ಟು ಅಲೆದಾಡಬೇಕಾಗಿ ಬರುತ್ತಿತ್ತು. ಹೀಗಾಗಿ ಉದ್ಯೋಗದ ಜೊತೆ ಜೊತೆಗೆ ಈ ಕಾಯಕವೂ ಸೇರಿ ಅವರಿಗೆ ಬರೆಯಲು ಸಿಗುತ್ತಿದ್ದ ಬಿಡುವು ಕಡಿಮೆಯಾಗಿತ್ತು. ಹೀಗಿದ್ದರೂ ಅವರು ಮೂಡಿಸಿದ ಬರಹಗಳು ಸತ್ವಯುತವೆನಿಸಿವೆ.

ಸಾಹಿತ್ಯ ಬದಲಾಯಿಸಿ

ಕಥೆಗಳು ಬದಲಾಯಿಸಿ

  1. ಜ್ವಾಲೆ ಆರಿತು.
  2. ಸಂಬಂಧಗಳು .
  3. ಶ್ರಾದ್ಧ.
  4. ಮತ್ತೊಂದು ಕಥೆ. #ಹಾವು ಹೆಡೆಯಾಡಿತು. #ಟಿಕ್ ಟಿಕ್.

ಕಾದಂಬರಿ ಬದಲಾಯಿಸಿ

  • ಮನೆ . * ವಿಕೃತಿ .

ನಾಟಕ ಬದಲಾಯಿಸಿ

  • ಪ್ರೇತಗಳು

ಚಲನಚಿತ್ರದಲ್ಲಿ ಬದಲಾಯಿಸಿ

‘ಮನೆ’ ಕಾದಂಬರಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಕನ್ನಡ-ಹಿಂದಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.

ಇತರ ಭಾಷೆಗಳಲ್ಲಿ ಬದಲಾಯಿಸಿ

'ಮನೆ' ಕಾದಂಬರಿ ಹಾಗೂ 'ಶ್ರಾದ್ಧ' ಕಥೆ ಮರಾಠಿ ಭಾಷೆಗೂ, ‘ಪ್ರೇತಗಳು’ ಮಲೆಯಾಳಂ ಭಾಷೆಗೂ ಅನುವಾದಗೊಂಡಿವೆ. ಅವರ ಕೆಲವೊಂದು ಕಥೆ ಉರ್ದುವಿಗೂ ಭಾಷಾಂತರಗೊಂಡು ಭಾರತದಲ್ಲಷ್ಟೇ ಅಲ್ಲದೆ ಪಾಕಿಸ್ತಾನದ ಪತ್ರಿಕೆಗಳಲ್ಲೂ ಪ್ರಕಟಗೊಂಡು ಮೆಚ್ಚುಗೆ ಗಳಿಸಿವೆ.

ಮಾಹಿತಿ ಕೃಪೆ ಬದಲಾಯಿಸಿ

ಕಣಜ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ.