ಟಾಟಾ ಇಂಡಿಕಾ

(ಟಾಟಾ ಇ೦ಡಿಕ ಇಂದ ಪುನರ್ನಿರ್ದೇಶಿತ)

ಟಾಟಾ ಇಂಡಿಕಾ ಜಾರು ಬಾಗಿಲುಳ್ಳ ಮೋಟಾರು ಕಾರುಗಳ ಶ್ರೇಣಿಯ ಸರಣಿಯಾಗಿದ್ದು, ಭಾರತಟಾಟಾ ಮೋಟರ್ಸ್ ಇದನ್ನು ಸಿದ್ದಪಡಿಸಿದೆ. ಟಾಟಾ ಮೋಟರ್ಸ್ ತಯಾರಿಸಿದ ಮೊದಲ ಪ್ರಯಾಣಿಕ ಕಾರು ಇದಾಗಿದೆ. ಜೊತೆಗೆ ದೇಶೀಯವಾಗಿ ನಿರ್ಮಿತ ಭಾರತದ ಮೊದಲ ಪ್ರಯಾಣಿಕ ಕಾರ್ ಎನಿಸಿದೆ. As of ಆಗಸ್ಟ್ 2008ರಲ್ಲಿ ೯೧೦,೦೦೦ಕ್ಕೂ ಅಧಿಕ ಇಂಡಿಕಾಗಳನ್ನು ತಯಾರಿಸಲಾಯಿತು. ಆಗ ೨೦೦೬-೦೭ರಲ್ಲಿ ಇಂಡಿಕಾದ ವಾರ್ಷಿಕ ಮಾರಾಟ ೧೪೪,೬೯೦ ಕಾರ್ ಗಳಷ್ಟು ಅಧಿಕವಾಗಿತ್ತು.[]Currentರಲ್ಲಿ ಇಂಡಿಕಾದ ಮಾಸಿಕ ಮಾರಾಟವು ಸುಮಾರು ೮೦೦೦ಗಳಷ್ಟಿದೆ. ಈ ಕಾರು ಮಾದರಿಗಳನ್ನು ಯುರೋಪ್, ಆಫ್ರಿಕಾ ಹಾಗು ಇತರ ರಾಷ್ಟ್ರಗಳಿಗೆ ೨೦೦೪ರ ಉತ್ತರಾರ್ಧದಿಂದಲೂ ರಫ್ತು ಮಾಡಲಾಗುತ್ತಿದೆ.[]

Tata Indica
Tata Indica 2006 version Tata Indica Vista
ManufacturerTata Motors
Production1998–present
AssemblyPune, Maharashtra, India
ClassSupermini car
LayoutFF layout

ಇತಿಹಾಸ

ಬದಲಾಯಿಸಿ

ಆಗ ೩೦ ಡಿಸೆಂಬರ್ ೧೯೯೮ರಲ್ಲಿ, ಟಾಟಾ ಮೋಟರ್ಸ್;(ಮೊದಲು TELCO ಎಂದು ಪರಿಚಿತವಾಗಿತ್ತು) ಈ ಹಿಂದೆ ಭಾರತದ ಯಾವುದೇ ಉತ್ಪಾದನಾ ಸಂಸ್ಥೆಯು ವಿನ್ಯಾಸಗೊಳಿಸದ ಆಧುನಿಕ ಕಾರನ್ನು ಮೊದಲ ಬಾರಿಗೆ,ಸ್ಥಳೀಯವಾಗಿ ಪರಿಚಯಿಸಿತು: ಅದೇ ದಿ ಇಂಡಿಕಾ. ಇಲ್ಲಿ ಒಂದು ಘೋಷಣಾವಾಕ್ಯದೊಂದಿಗೆ ಕಾರು ಮಾರುಕಟ್ಟೆಗೆ ಬಿಡುಗಡೆಯಾಯಿತು "ದಿ ಬಿಗ್... ಸ್ಮಾಲ್ ಕಾರ್" ಹಾಗು "ಮೋರ್ ಕಾರ್ ಪರ್ ಕಾರ್," ಜಾಹಿರಾತು ಪ್ರಚಾರದಲ್ಲಿ ಕಾರಿನಲ್ಲಿರುವ ವಿಶಾಲ ಸ್ಥಳಾವಕಾಶ ಹಾಗು ಅದರ ಕೈಗೆಟುಕುವ ಕಡಿಮೆ ಬೆಲೆಯ ಬಗ್ಗೆ ಹೆಚ್ಚು ಒತ್ತು ನೀಡಿತ್ತು. ಆಗ ೧೯೯೯ರಲ್ಲಿ ಕಾರು ಅನಾವರಣಗೊಂಡ ಒಂದು ವಾರದೊಳಗೆ, ಸಂಸ್ಥೆಗೆ ಮುಂಗಡ ಬುಕಿಂಗ್ ಅದೇಶದ ಮೂಲಕ ೧೧೫,೦೦೦ ಕೋರಿಕೆಗಳು ಬಂದವು.[] ಎರಡು ವರ್ಷಗಳೊಳಗೇ, ಇಂಡಿಕಾ ತನ್ನ ವಲಯದಲ್ಲಿನ ಮಾರಾಟದಲ್ಲಿ ಮೊದಲ ಸ್ಥಾನ ಗಳಿಸಿತು.

ಟಾಟಾ ಮೋಟರ್ಸ್ ನಿಂದ ಭಾಗಶಃ ವಿನ್ಯಾಸಗೊಂಡು ಅಭಿವೃದ್ಧಿ ಹೊಂದಿರುವ ಕಾರಿಗೆ, ಐದು-ಅಚ್ಚುಕಟ್ಟಾದ ಹಿಂಬಾಗಿಲುಗಳಿವೆ. ಜೊತೆಗೆ ೧.೪ ಲೀ ಪೆಟ್ರೋಲ್/ಡೀಸೆಲ್ I೪ ಇಂಜಿನ್ ಆಂತರಿಕವಾಗಿ ೪೭೫DL ಎಂದು ಸೂಚಿತವಾಗಿರುತ್ತದೆ. ಇದೊಂದು ಸ್ಥಳೀಯ ಇಂಜಿನ್ ಆಗಿದ್ದು, ಟಾಟಾ ಸಂಸ್ಥೆಯು ಈ ಹಿಂದೆ ಅಭಿವೃದ್ಧಿಪಡಿಸಿದ್ದ ತೆರೆದ ಮೋಟಾರು ಟ್ರಕ್ಕುಗಳು ಹಾಗು SUVಗಳಿಗೆ ಬಳಸುತ್ತಿದ್ದ ಇಂಜಿನ್ ಗಳು ಇದಕ್ಕೆ ಮೂಲವಾಗಿವೆ. ಆದರೆ ಇವುಗಳು ಕಡಿಮೆ ಸ್ಟ್ರೋಕ್ ಗಳನ್ನು ಹೊಂದಿರುತ್ತವೆ. ಮೂಲ ಇಂಜಿನ್ ೪೮೩DL ಎಂದು ಸೂಚಿತವಾಗಿದ್ದು, ಇದು ೪ ಸಿಲಿಂಡರ್ ಹಾಗು ೮೩ mm ಸ್ಟ್ರೋಕ್ ಗೆ ಅನ್ವಯವಾಗುತ್ತಿತ್ತು.

ಈ ಇಂಡಿಕಾ ಕಾರು, ಏರ್ ಕಂಡೀಷ್ನಿಂಗ್ ಹಾಗು ವಿದ್ಯುತ್ಚಾಲಿತ ಕಿಟಕಿಗಳ ಸೌಲಭ್ಯ ಒದಗಿಸಿತ್ತು, ಈ ಸೌಲಭ್ಯಗಳು ಹಿಂದೆ ಭಾರತಕ್ಕೆ ಆಮದಾಗುತ್ತಿದ್ದ ಕೇವಲ ವಿದೇಶಿ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದ್ದವು. ಮೂರು ವರ್ಷಗಳ ನಂತರ ಇಂಡಿಕಾ ಮೊದಲ ಬಾರಿಗೆ ಯುರೋಪಿಯನ್ ಮಾರುಕಟ್ಟೆಗಳಿಗೆ ರಫ್ತಾಯಿತು. ಜೊತೆಗೆ ೨೦೦೩ರಿಂದ ಇಂಡಿಕಾದ ವ್ಯಾಪಾರಮುದ್ರೆ ಸಹ ಬದಲಾಯಿತು, ಹಾಗು UKಯಲ್ಲಿ ರೋವರ್ ಸಿಟಿರೋವರ್ ಎಂಬ ಹೆಸರಿನಲ್ಲಿ ಮಾರಾಟವಾಯಿತು. ಏಪ್ರಿಲ್ ೨೦೦೫ರಲ್ಲಿ MG ರೋವರ್ ಸಂಸ್ಥೆಯು ದಿವಾಳಿಯಾದಾಗ, ಈ ಕಾರಿನ ತಯಾರಿಕೆ ನಿಲ್ಲಿಸಲಾಯಿತಲ್ಲದೇ ಪುನರಾರಂಭಿಸಲಿಲ್ಲ, ಹೊಸ ಮಾಲೀಕತ್ವದ ನಾನ್ಜಿಂಗ್ ಆಟೋಮೊಬೈಲ್ ತನ್ನದೇ ಆದ MG ರೋವರ್ ಶ್ರೇಣಿಗಳನ್ನು ೨೦೦೭ರಲ್ಲಿ ಹೊರತಂದಿತು.

ಕಾರಿನ ಹೊರಭಾಗದ ವಿನ್ಯಾಸವನ್ನು ಟಾಟಾ ಮೋಟರ್ಸ್ ನೊಂದಿಗಿನ ಒಪ್ಪಂದದ ಮೇರೆಗೆ I.DE.A ಇನ್ಸ್ಟಿಟ್ಯೂಟ್ ಎಂಬ ಇಟಾಲಿಯನ್ ವಿನ್ಯಾಸ ಸಂಸ್ಥೆಯು, ಟಾಟಾ ಸಂಸ್ಥೆಯ ಆಂತರಿಕ ವಿನ್ಯಾಸ ತಂಡದ ಪಾರಸ್ಪರಿಕ ಒಪ್ಪಂದದೊಂದಿಗೆ ವಿನ್ಯಾಸಗೊಳಿಸಿತು. ಆದಾಗ್ಯೂ, ಇಂಜಿನ್, ದೇಶೀಯವಾಗಿತ್ತು.

ಇಂಡಿಕಾ V೧ ಹಾಗು V೨ (೧೯೯೮-ಪ್ರಸಕ್ತದವರೆಗೆ) (ಮೊದಲ ಪೀಳಿಗೆ)

ಬದಲಾಯಿಸಿ
Indica V1 and V2
 
Also calledTata Indicab (panel van)
Tata B-Line[] (ದಕ್ಷಿಣ ಆಫ್ರಿಕಾ)
Production೧೯೯೮-present
AssemblyPune, ಮಹಾರಾಷ್ಟ್ರ, India
Body style೫-door hatchback
೫-door panel van
Engine೧.೨L 65.3 hp (48.7 kW) I4
೧.೪ L 70 hp (52 kW) I4
೧.೪ L 53.5 hp (39.9 kW) diesel I4
೧.೪ L 62 hp (46 kW) turbodiesel I4
೧.೪ L 68 hp (51 kW) Intercooled turbodiesel I4
೧.೪ L 70 hp (52 kW) DiCOR I4
Transmission೫-speed manual
Wheelbase2,400 millimetres (94 in)
Length3,690 millimetres (145 in)
Base: 3,675 millimetres (144.7 in)
Width1,665 millimetres (65.6 in)
Top Version: 1,485 millimetres (58.5 in)
Height1,485 millimetres (58.5 in)
Top Version: 1,500 millimetres (59 in)
RelatedTata Indigo
Rover CityRover
Designer(s)I.DE.A Institute

ಇಂಡಿಕಾ ಮೊದಲು ಬಿಡುಗಡೆಯಾದಾಗ, ಇದನ್ನು ಖರೀದಿಸಿದವರು ಹಲವು ದೂರುಗಳನ್ನು ನೀಡಿದರು. ವಾಹನವು ಭರವಸೆ ನೀಡಿದಂತೆ ಅಶ್ವಶಕ್ತಿ(ಯಂತ್ರವು ಕೆಲಸ ಮಾಡುವ ದರದ ಏಕಮಾನ) ಹಾಗು ಅನಿಲದ ಮೈಲಿ/ ದೂರವನ್ನು ನೀಡುವುದಿಲ್ಲವೆಂದು ವಾದಿಸಿದರು.[ಸೂಕ್ತ ಉಲ್ಲೇಖನ ಬೇಕು] ಗ್ರಾಹಕರ ದೂರಿಗೆ ಸ್ಪಂದಿಸಿದ, ಟಾಟಾ ಮೋಟರ್ಸ್ ಕಾರಿನ ಒಳಭಾಗವನ್ನು ಮರುರಚನೆ ಮಾಡಿತು, ಹಾಗು ಇದನ್ನು ಇಂಡಿಕಾ V೨(ರೂಪಾಂತರ ೨) ಎಂಬ ಹೆಸರಿನಡಿ ಬಿಡುಗಡೆ ಮಾಡಿತು. ದೂರುಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಕಾರುಗಳಲ್ಲಿ ಇದೂ ಒಂದೆನಿಸಿತು. ನಂತರದಲ್ಲಿ, ಇದನ್ನು ಮತ್ತೊಮ್ಮೆ ಪರಿಷ್ಕರಿಸಿ ಹೊಸ ರೂಪ ನೀಡಲಾಯಿತು. ಇದೀಗ ಕಾರನ್ನು "ಉಲ್ಲಾಸಕರವಾದ ಹೊಸ ಇಂಡಿಕಾ V೨" ಎಂಬ ಘೋಷವಾಕ್ಯದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದರ ನಂತರ ಇಂಡಿಕಾದ ಮುಂದಿನ ಮಾದರಿ ಬಿಡುಗಡೆಯಾಯಿತು, ೨೦೦೮ರ ಆರಂಭದಲ್ಲಿ ಇಂಡಿಕಾ V೨ ಜೆಟಾ ಪೆಟ್ರೋಲ್ ಎಂಬ ಕಾರ್ ಬಿಡುಗಡೆಯಾಯಿತು, ಇದು ೧೪ ಕಿಮೀ/ಲೀ ಇಂಧನ ಸಾಮರ್ಥ್ಯದೊಂದಿಗೆ(ಸುಮಾರು ೩೩ mpg U.S., ೭.೧ L/೧೦೦ ಕಿಮೀನಷ್ಟು ಇಂಧನ ಕ್ಷಮತೆ) 70 PS (51 kW; 69 hp)ರಷ್ಟು ಸಾಮರ್ಥ್ಯವನ್ನು ಪರೀಕ್ಷಾ ಮಾನದಂಡದ ಕರಾರಿನಡಿ ನೀಡುತ್ತಿತ್ತು.[] ಭಾರತದ ನಗರ ಪರಿಸ್ಥಿತಿಗಳಲ್ಲಿ, ಇಂಧನ ಮಿತವ್ಯಯವು ಸುಮಾರು ೧೦ ಕಿಮೀ/ಲೀ.ನಷ್ಟು ಇಳಿಕೆಯಾಗಬಹುದು.(ಸುಮಾರು ೨೩.೫ mpg U.S., ೧೦ L/೧೦೦ ಕಿಮೀ)[]

V೧ ಹಾಗು V೨ ನೋಡಲು ಒಂದೇ ರೀತಿ ಕಾಣುತ್ತಿದ್ದುದ್ದರಿಂದ, ಟಾಟಾ ಸಂಸ್ಥೆಯು ೨೦೦೪[] ಹಾಗು ೨೦೦೭ರಲ್ಲಿನ ಇಂಡಿಕಾವನ್ನು ಉತ್ತಮ ಶೈಲಿಯ ಗುಣಲಕ್ಷಣಗಳೊಂದಿಗೆ ಪರಿಷ್ಕರಿಸಿ ಹೊಸ ರೂಪ ನೀಡಿತು.[]

ಭಾರತದಲ್ಲಿ, ಪರಿಷ್ಕರಣೆಯ ವಿವಿಧ ಹಂತಗಳಲ್ಲಿ ಮೂರು ರೂಪಾಂತರಗಳು ಲಭ್ಯವಾಗುತ್ತಿವೆ.

  • ಇಂಡಿಕಾ V೨ — ೧.೪ L ಡೀಸಲ್(DLE and DLSನಲ್ಲಿ ಸ್ವಾಭಾವಿಕವಾಗಿ ಚೋಷಣೆಯಾಗುವ ಇಂಜಿನ್; DLSನಲ್ಲಿ ಟರ್ಬೋಚಾರ್ಜ್ಡ್ ನ ಆಯ್ಕೆ; ಟರ್ಬೋಚಾರ್ಜ್ಡ್ ಹಾಗು ಇಂಟರ್ ಕೂಲ್ಡ್ DLG ಹಾಗು DLX; DLS ಹಾಗು DLGಯಲ್ಲಿ ಒದಗಿಸಲಾಗುವ DiCOR ಇಂಜಿನ್);
  • ಇಂಡಿಕಾ V೨ XETA — ೧.೨ L ಪೆಟ್ರೋಲ್ (GL: AC ರಹಿತ; GLE: AC ಸಹಿತ; GLS: AC & ಪವರ್ ಸ್ಟೀರಿಂಗ್ ನೊಂದಿಗೆ), ೧.೨ L LPG (GLE & GLS ರೂಪಾಂತರಗಳು ಮಾತ್ರ);
  • ಇಂಡಿಕ್ಯಾಬ್ - ೧.೪ L ಸ್ವಾಭಾವಿಕವಾಗಿ ಚೋಷಣೆಯಾಗುವ ಡೀಸಲ್ (DL ಹಾಗು DLE), ಇದೇ ರೀತಿಯ ಲಕ್ಷಣಗಳನ್ನು ಹೊಂದಿರುವ ಒಂದು ಕಡಿಮೆ ಬೆಲೆಯ ಕಾರು; ಆದರೆ ಕೆಲವೇ ಕೆಲವು ವೈಶಿಷ್ಟ್ಯ ಹಾಗು ಸೌಕರ್ಯಗಳನ್ನು ಹೊಂದಿರುತ್ತದೆ. ಇದನ್ನು ಕ್ಯಾಬ್ ಹಾಗು ಒಪ್ಪಂದದ ಮೇರೆಗೆ ಸರಕು-ಸಾಮಾಗ್ರಿ ಸಾಗಾಟದಲ್ಲಿ ತೊಡಗಿರುವ ವ್ಯಾಪಾರಿ ಸಮೂಹಕ್ಕೆ ಉಪಯೋಗವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬಾಡಿಗೆ ವಾಹನ ಸೌಲಭ್ಯ ಒದಗಿಸುವ ವ್ಯಾಪಾರಿ ಸಮೂಹದಲ್ಲಿ ಇದು ಬಹಳ ಜನಪ್ರಿಯವಾಗಿದೆ.[]
 
ಟಾಟಾ ಇಂಡಿಕಾ V2

ಮೂಲತಃ ೧.೪L ಪೆಟ್ರೋಲ್ ಹಾಗು ಡೀಸಲ್ ಇಂಜಿನ್ ಗಳೊಂದಿಗೆ ಬಿಡುಗಡೆಯಾದ ಇದಕ್ಕೆ, ಅಕ್ಟೋಬರ್ ೨೦೦೫ರಲ್ಲಿ ಟರ್ಬೋಚಾರ್ಜ್ಡ್ ಡೀಸಲ್ ಇಂಜಿನ್ ನನ್ನು ಅಳವಡಿಸಲಾಯಿತು; ನವೆಂಬರ್ ೨೦೦೬ರಲ್ಲಿ ೧.೨Lನ ಪೆಟ್ರೋಲ್ ಇಂಜಿನ್ ನನ್ನು ಅಳವಡಿಸಲಾಯಿತು, ಜೊತೆಗೇ ಇಂಡಿಕಾ V೨ನ ಒಂದು DiCOR(ಡೈರೆಕ್ಟ್ ಇಂಜೆಕ್ಷನ್ ಕಾಮನ್ ರೈಲ್) ಡೀಸೆಲ್ ರೂಪಾಂತರವನ್ನು ಜನವರಿ ೨೦೦೮ರಲ್ಲಿ ಬಿಡುಗಡೆಮಾಡಲಾಯಿತು. ಇದು ೧೬ ಕವಾಟಗಳು, ಎರಡು ಮೇಲ್ಭಾಗದ ಕ್ಯಾಮ್ ದಂಡಗಳು, ಬದಲಾಯಿಸಬಹುದಾದ ಒಂದು ಜ್ಯಾಮಿತಿ ಟರ್ಬೋಚಾರ್ಜರ್ ಹಾಗು ಒಂದು ಇಂಟರ್ ಕೂಲರ್ ನಿಂದ ರಚನೆಯಾಗಿರುತ್ತದೆ. ಅಗ್ರ ಗುಣಮಟ್ಟದ GLG, GLX, DLG, DLX ರೂಪಾಂತರಗಳು ಹಾಗು ಟರ್ಬೋ ಹಾಗು DiCOR ಡೀಸಲ್ ಇಂಜಿನ್ ಗಳು, ಜೊತೆಗೆ ೧.೪L ಪೆಟ್ರೋಲ್ ಇಂಜಿನ್ ಗಳನ್ನು, ಮುಂದಿನ ಪೀಳಿಗೆಯ ಇಂಡಿಕಾ ವಿಸ್ಟಾದ ಪರಿಚಯದೊಂದಿಗೆ ಕ್ರಮೇಣ ಬಳಕೆಗೆ ತರಲಾಗುತ್ತಿದೆ. ಟರ್ಬೋಚಾರ್ಜ್ಡ್ ಇಂಜಿನ್ ನನ್ನು ಆಗಸ್ಟ್ ೨೦೧೦ರಲ್ಲಿ, DLE ಹಾಗು DLS ಪರಿಷ್ಕೃತ ಹಂತಗಳಲ್ಲಿ ಟರ್ಬೋಮ್ಯಾಕ್ಸ್ ಎಂದು ಮತ್ತೆ ಪರಿಚಯಿಸಲಾಯಿತು.

೨೦೦೧ರಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG)ನ್ನು ಬಿಡುಗಡೆ ಮಾಡಲಾಯಿತು.[೧೦] ಶ್ರೀಮಂಕರ್ ಗ್ಯಾಸ್ ಸರ್ವೀಸಸ್ ಇಂಡಿಯಾ, ಇಂಡಿಕಾ V೨ XETAಗೆ ಒದಗಿಸುವ OEM ಬೇದಿನಿ ಪೆಟ್ಟಿಗೆಯ ಮೂಲಕ ಈ ಆಯ್ಕೆಯನ್ನು ಒದಗಿಸಲಾಗುತ್ತದೆ.[೧೧]

CNG-ಸಂಬಂಧಿತ ಹಲವಾರು ದೂರುಗಳನ್ನು ಎದುರಿಸಿದಾಗ, ಟಾಟಾ ಸಂಸ್ಥೆಯು ಬೇದಿನಿ ಪರಿಕರಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಹಿಂದಕ್ಕೆ ತರಿಸಿಕೊಳ್ಳುವುದರ ಜೊತೆಗೆ ಮರುಸುಧಾರಣೆ ಮಾಡಿತು. ಇದರಲ್ಲಿ ಒಂದು ಹೊಸ ಸುಧಾರಿತ ಲಾಮ್ಡಾ ಸಂವೇದಕ/ವಿದ್ಯುತ್ಚಾಲಿತ ನಿಯಂತ್ರಣ ಘಟಕದ ಅಳವಡಿಕೆಯಾಗಿತ್ತು.ನಂತರ ೨೮–೩೧ ಮೇ ೨೦೦೭ರಲ್ಲಿ ಟಾಟಾ ಹಾಗು ARAI(ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ)ನಿಂದ ಪರೀಕ್ಷೆಗೊಳಪಟ್ಟು ಅಲ್ಲಿಂದ ಪ್ರಮಾಣಿತಗೊಂಡ ಬೇದಿನಿ ಎಮ್ಯುಲೇಟರ್ ಹಾಗು ಹೊಸ ವೈರಿಂಗ್ ಉಪಕರಣಗಳನ್ನೂ ಸಹ ಅಳವಡಿಸಲಾಗಿತ್ತು. ಈ ಹೊಸ ವಿಧಾನದೊಂದಿಗೆ, ಟಾಟಾ ಸಂಸ್ಥೆಯು ಅನಿಲ ಬಿಡುಗಡೆ ಹಾಗು ನಿರ್ವಹಣೆಯನ್ನು ಸುಧಾರಣೆ ಮಾಡುವ ಉದ್ದೇಶ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]

ಸ್ವದೇಶೀ ಮಾರುಕಟ್ಟೆಯಲ್ಲಿ, ಇಂಡಿಕಾ ಆಂತರಿಕವಾಗಿ ಉತ್ತಮ ಸಾಮರ್ಥ್ಯ ಹೊಂದಿದ್ದು, ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ವ್ಯಾಗನ್-R, ಮಾರುತಿ ಆಲ್ಟೊ, ಹ್ಯುಂಡೈ ಸ್ಯಾಂಟ್ರೋ ಹಾಗು ಫಿಯೆಟ್ ಪ್ಯಾಲಿಯೋನೊಂದಿಗೆ ಪೈಪೋಟಿ ಮಾಡುತ್ತದೆ. ಆದಾಗ್ಯೂ, ಡೀಸಲ್ ಮಾದರಿಗಳು, ಸ್ವಲ್ಪ ಮಟ್ಟಿಗೆ ಅಥವಾ ಯಾವುದೇ ಸ್ಪರ್ಧೆಯನ್ನು ಎದುರಿಸುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಮಾರುಕಟ್ಟೆಯಲ್ಲಿ ಇಂಡಿಕಾದ ದರಕ್ಕೆ ಹೊಂದಿಕೆಯಾಗುವ ಕೆಲವೇ ಕೆಲವು ಡೀಸಲ್ ಕಾರುಗಳು ಅಸ್ತಿತ್ವದಲ್ಲಿವೆ.

ಹಗುರ ಕಾರುಗಳಿಗೆ ಹೋಲಿಸಿದರೆ ಸರಾಸರಿ ನಿವ್ವಳ ತೂಕಕ್ಕಿಂತ ಸ್ವಲ್ಪಮಟ್ಟಿಗೆ ಹೆಚ್ಚಿನ ಭಾರವಿರುವ ಕಾರು ಹೆಚ್ಚು ಆರಾಮದಾಯಕ ಪ್ರಯಾಣ ಒದಗಿಸುತ್ತದೆ. ಫಿಯೆಟ್ ಹಾಗು ಮಾರುತಿ ಕಾರುಗಳು ಒದಗಿಸುವ ಸೌಲಭ್ಯ ಹಾಗು ಪರಿಷ್ಕರಣೆಗೆ ಹೋಲಿಸಿದರೆ ಇದರ ಹೊಂದಾಣಿಕೆ ಹಾಗು ಪರಿಷ್ಕರಣೆಗಳು ಟೀಕೆಗೊಳಗಾಗಿವೆ.[೧೨]

UKಯಲ್ಲಿ ಹೊಸ ಹೆಸರಿನೊಂದಿಗೆ MG ರೋವರ್ ಗ್ರೂಪ್ ಕಾರನ್ನು ಆಮದು ಮಾಡಿಕೊಂಡು ರೋವರ್ ಸಿಟಿರೋವರ್ ಎಂಬ ಬ್ರ್ಯಾಂಡ್ ನಡಿ ಮಾರಾಟಮಾಡಿತು. ಇತರ ಜನಪ್ರಿಯ ವಿದೇಶಿ ಮಾರುಕಟ್ಟೆಗಳಲ್ಲಿ ದಕ್ಷಿಣ ಆಫ್ರಿಕಾವೂ ಸೇರಿದೆ, ಇಲ್ಲಿ ಇಂಡಿಕಾ ಹಾಗು ಇಂಡಿಕ್ಯಾಬ್(B ಲೈನ್ ಎಂದು ಕರೆಯಲ್ಪಡುತ್ತವೆ) ಮಾದರಿಗಳನ್ನು ಮಾರಾಟಮಾಡಲಾಗುತ್ತದೆ.

ಇಂಡಿಕಾ ಮಾದರಿಯು ಹಲವು ಭಿನ್ನತೆಗಳನ್ನು ಹುಟ್ಟುಹಾಕಿದೆ, ಇದರಲ್ಲಿ ಟಾಟಾ ಇಂಡಿಗೋ ಮೂರು-ಪ್ರತ್ಯೇಕ ವಿಭಾಗಗಳನ್ನೂ ಒಳಗೊಂಡಿವೆ, ಇದು ಚಿಕ್ಕದಾದ ಇಂಡಿಗೋ CS, ಉದ್ದದ ಚಕ್ರಾಂತರ XL ಹಾಗು ಇಂಡಿಗೋ ಮರಿನಾ ವರ್ಗಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಯಾರಾಗಿವೆ ಎಂದು ಹೇಳಬಹುದು.

ಭಾರತೀಯ ಮಾರುಕಟ್ಟೆಗೆ ಇಂಡಿಕಾ V೨ನ ವಾಪಸಾತಿ

ಬದಲಾಯಿಸಿ

ಇಂಡಿಕಾ V೨ನ DLS&DLE ಮಾದರಿಗಳು BS-IV ಉತ್ಸರ್ಜನ ಮಾಲಿನ್ಯ ಪರೀಕ್ಷೆಯ ಗುಣಮಟ್ಟದಲ್ಲಿ ವಿಫಲವಾದವು. ಅಲ್ಲದೇ ಭಾರತದ ಮೆಟ್ರೋ ನಗರಗಳಲ್ಲಿ ಇವುಗಳ ಮಾರಾಟವನ್ನು ನಿಲ್ಲಿಸಲಾಯಿತು.ಟಾಟಾ ಇತ್ತೀಚಿಗೆ ಪರಿಚಯಿಸಿದ ಟರ್ಬೋ ಚಾರ್ಜ್ಡ್(ಅನಿಲಚಕ್ರಗಳಿಂದ ಚಲಿಸುವ ಅತಿಪೂರಕ ಪಂಪು) ಇಂಡಿಕಾ V೨ನ ರೂಪಾಂತರ "ಇಂಡಿಕಾ ಟರ್ಬೋಮ್ಯಾಕ್ಸ್" BS-IV ಮಾಲಿನ್ಯ ಪರೀಕ್ಷೆಯ ಉತ್ಸರ್ಜನ ರೂಢಿಯ ಮಟ್ಟಗಳಲ್ಲಿ ತೇರ್ಗಡೆ ಹೊಂದಿತು.

ಪರಿಕರಗಳು ಹಾಗು ಐಚ್ಛಿಕ ಹೆಚ್ಚುವರಿ ವಸ್ತುಗಳು ಈ ಕೆಳಕಂಡ ಪರಿಕರ ಶ್ರೇಣಿಗಳು ಇಂಡಿಕಾ ಕಾರಿನಲ್ಲಿ ಲಭ್ಯವಾಗಿವೆ:

  • ಪವರ್ ಸ್ಟೀರಿಂಗ್(ಚಾಲನ)
  • HVAC - ಹೀಟರು(ತಾಪಕ), ವೆಂಟಿಲೇಶನ್(ಗಾಳಿಬೆಳಕುಗಳ ಸಂಚಾರ), ಹಾಗು ಏರ್ ಕಂಡೀಷನಿಂಗ್
  • ಟರ್ಬೋಚಾರ್ಜರ್ ಹಾಗು ಇಂಟರ್ ಕೂಲರ್
  • ಮಿಶ್ರ ಲೋಹಗಳ ಚಕ್ರಗಳು
  • ಪವರ್ ವಿಂಡೋ(ಕಿಟಕಿ)ಗಳು
  • ಸೆಂಟ್ರಲ್ ಲಾಕಿಂಗ್ ನೊಂದಿಗೆ ರಿಮೋಟ್ ಕೀಲಿ ರಹಿತ ಪ್ರವೇಶ
  • ಗಾಳಿಗೆ ಒಡ್ಡಿಕೊಂಡ ಡಿಸ್ಕ್ ಬ್ರೇಕ್ ಗಳು
  • ೪ ಆರೆಗಳುಳ್ಳ ಸ್ಟೀರಿಂಗ್ ವೀಲ್
  • ಬಣ್ಣಮಿಶ್ರಿತ ವಾಯುರೋಧಕಗಳು
  • ಪ್ರಖರ ಮುಂಭಾಗದ ದೀಪಗಳು
  • ಹಿಂಭಾಗದ ಸ್ಪಾಯ್ಲರ್(ವೇಗ ಹೆಚ್ಚಾದಾಗ ಮೋಟಾರು ವಾಹನಗಳು ರಸ್ತೆಯಿಂದ ಮೇಲಕ್ಕೆ ಜಿಗಿಯದಂತೆ ವೇಗ ಕಡಿಮೆ ಮಾಡುವ ಅಂಥದ್ದೇ ಸಾಧನ) ನೊಂದಿಗೆ ಸಮಗ್ರವಾದ LED ಸಂಚಾರ ನಿಯಂತ್ರಕ ದೀಪ
  • ಆರಾಮದಾಯಕವಾದ ಉಣ್ಣೆಯ/ಚರ್ಮದ ಕಪ್ಪು ಒಳಭಾಗದ ಹೊದಿಕೆಗಳು
  • ರಾತ್ರಿಯ ಸಂಚಾರದಲಿ ಹೊಂದಿಕೆ ಮಾಡಿಕೊಳ್ಳಬಹುದಾದ ಹಿಂಬದಿ ವೀಕ್ಷಿಸಬಹುದಾದ ಕನ್ನಡಿ
  • ಸೈಲೆನ್ಸರ್(ನಿಶಬ್ದಕಾರಕ)ನ ಮೇಲೆ ಕ್ರೋಮ್ ತುದಿ, ಲೋಹದ ಅಡ್ಡಕಂಬಿಗಳು ಹಾಗು ಬಾನೆಟ್ ನ ಮೇಲೆ ಕ್ರೋಮ್ ಒಳಪದರು
  • ಶಬ್ದ ಮೂಲದ ಎಚ್ಚರಿಕೆಗಳು-ಚಾಲಕ/ಪ್ರಯಾಣಿಕರಿಗೆ ಆಸನದಲ್ಲಿ ಕುಳಿತಾಗ ಬೆಲ್ಟ್ ಕಟ್ಟಿಕೊಳ್ಳಲು ಸೂಚನೆ, ಚಾಲನೆಯಲ್ಲಿ ಬಾಗಿಲು ತೆರೆದುಕೊಂಡರೆ ಎಚ್ಚರಿಕೆ
  • ವೇಗಮಾಪಕ (ಆಯ್ದ ಮಾದರಿಗಳಲ್ಲಿ)
  • ಹಿಂಭಾಗದ ಬಾಗಿಲುಗಳಲ್ಲಿ ಚೈಲ್ಡ್ ಲಾಕ್(ಆಯ್ದ ಮಾದರಿಗಳು)
  • ಮಿಶ್ರ ಲೋಹದ ಪೆಡಲ್ ಗಳು

ಇಂಡಿಕಾ ವಿಸ್ಟಾ (೨೦೦೮-ಪ್ರಸಕ್ತದವರೆಗೆ) (ಎರಡನೇ ಪೀಳಿಗೆ)

ಬದಲಾಯಿಸಿ
Indica Vista
The Indica Vista
Also calledTata Indica V3
Tata Vista[೧೩] (Italy)
Tata Vista Ego[೧೪] (ದಕ್ಷಿಣ ಆಫ್ರಿಕಾ)
Production೨೦೦೮-present
AssemblyPune, ಮಹಾರಾಷ್ಟ್ರ, India
Body style೫-door hatchback
Engine೧.೨ L 65 hp (48 kW) Fire I4
೧.೪ L 71 hp (53 kW) turbodiesel I4
೧.೩ L 75 hp (56 kW) Multijet I4
Transmission೫-speed manual
Wheelbase2,470 millimetres (97 in)
Length3,795 millimetres (149.4 in)
Width1,695 millimetres (66.7 in)
Height1,550 millimetres (61 in)
RelatedTata Indigo Manza
Fiat Linea
Fiat Punto (310)
Designer(s)Tata Motors, evolution of V೨

ಇಂಡಿಕಾ ವಿಸ್ಟಾ ನವದೆಹಲಿಯಲ್ಲಿ ನಡೆದ ೯ನೇ ಆಟೋ ಎಕ್ಸ್ಪೋ ನಲ್ಲಿ ಅನಾವರಣಗೊಂಡಿತು. ಇಂಡಿಕಾ ವಿಸ್ಟಾ, ಇಂಡಿಕಾದ ಕೇವಲ ರೂಪವರ್ಧನೆಯಲ್ಲ. ಇದು ಸಂಪೂರ್ಣವಾದ ಒಂದು ಹೊಸ ವಿಧಾನದಲ್ಲಿ ವಿನ್ಯಾಸಗೊಂಡಿದೆ, ಹಾಗು ಅಸ್ತಿತ್ವದಲ್ಲಿರುವ ಇಂಡಿಕಾದೊಂದಿಗೆ ಯಾವುದೇ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಈ ಹೊಸ ಮಾದರಿಯು, ಹಿಂದಿನ ಇಂಡಿಕಾಗಿಂತ ಬಹಳಷ್ಟು ದೊಡ್ಡದಾಗಿದೆ, ಇದು 3,795 mm (149.4 in)ರಷ್ಟು ಉದ್ದವಾಗಿದ್ದು, 2,470 mm (97.2 in)ರ ಚಕ್ರಾಧಾರಿತ ಮೂಲ ಹೊಂದಿದೆ. ಇಂಡಿಕಾ ವಿಸ್ಟಾ ಎರಡು ಹೊಸ ಇಂಜಿನ್ ಗಳನ್ನು ಹೊಂದಿದೆ, ೧.೩ L ಕ್ವಾಡ್ರಾ ಜೆಟ್ ಸಾಧಾರಣ ಅಡ್ಡಕಂಬಿಯಲ್ಲಿ ನೇರ ಒಳನುಗ್ಗುವ ಡೀಸಲ್ ಹಾಗು ೧.೨ L ಸಫೈರ್ MPFI VVT ಪೆಟ್ರೋಲ್ ಇಂಜಿನ್. ಇದು ೧.೪L TDi(ಟರ್ಬೋ ಡೀಸಲ್) ನೊಂದಿಗೂ ಸಹ ಲಭ್ಯವಿದೆ. ಕ್ವಾಡ್ರಾ ಜೆಟ್(ಫಿಯೆಟ್ JTD) ನ್ನು ರಂಜನ್ ಗಾಂವ್ ನಲ್ಲಿ ಟಾಟಾ-ಫಿಯೆಟ್ ಜಂಟಿಯಾಗಿ ಉತ್ಪಾದನೆ ಮಾಡುತ್ತವೆ.[೧೫] ಅಲ್ಲಿಯವರೆಗೆ ಇದನ್ನು ಇಂಡಿಕಾ V೩ ಎಂದು ಕರೆಯಲಾಗುತ್ತಿದ್ದ ಈ ಇಂಡಿಕಾ ವಿಸ್ಟಾವನ್ನು ಆಗಸ್ಟ್ ೨೦೦೮ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು[೧೬]

ಟಾಟಾ ಇಂಡಿಕಾ ವಿಸ್ಟಾನ ನಿರ್ದಿಷ್ಟ ವಿನ್ಯಾಸದ ವೈಶಿಷ್ಟ್ಯಗಳು

ಬದಲಾಯಿಸಿ
೧.೪ TDI ೧.೩ ಕ್ವಾಡ್ರಾಜೆಟ್ ೧.೨ ಸಫೈರ್
ಅಧಿಕ ವೇಗ - - -
೦ to ೧೦೦ km/h (೬೨ mph) - - -
ಇಂಜಿನ್ ಮಾದರಿ ೪೭೫ IDI ಟರ್ಬೋ ೧.೩L SDE ಸಾಧಾರಣ, ಕ್ವಾಡ್ರಾಜೆಟ್ ಡೀಸಲ್ ಇಂಜಿನ್ New ೧.೨L, MPFI, ಸಫೈರ್ ಪೆಟ್ರೋಲ್ ಇಂಜಿನ್
ಸ್ಥಾನಾಕ್ರಮಣ 1,405 cc (85.7 cu in) 1,248 cc (76.2 cu in) 1,172 cc (71.5 cu in)
ಸಾಮರ್ಥ್ಯ 71 PS (52 kW; 70 hp) @ ೪೫೦೦ rpm 75 PS (55 kW; 74 hp) @ ೪೦೦೦ rpm 65 PS (48 kW; 64 hp) @ ೫೫೦೦ rpm
ಭ್ರಾಮಕ 135 N⋅m (100 lbf⋅ft) @೨೫೦೦ rpm 190 N⋅m (140 lbf⋅ft) @೧೭೫೦ rpm 96 N⋅m (71 lbf⋅ft) @೩೦೦೦ rpm
ಕವಾಟದ ಯಂತ್ರ ವಿನ್ಯಾಸ - - -
ಸಿಲಿಂಡರ್ ವಿನ್ಯಾಸ Inline ೪ Inline ೪ Inline ೪
ಇಂಧನ ಮಾದರಿ ಡೀಸಲ್ ಡೀಸಲ್ ಪೆಟ್ರೋಲ್
ಇಂಧನ ವಿಧಾನ ID TC CRDI MPFI
ಮಿನಿಮಮ್ ಟರ್ನಿಂಗ್ ರೇಡಿಯಸ್ - - -
ಚಕ್ರದಗಾತ್ರ 14 in (360 mm) 14 in (360 mm) 13 in (330 mm)
ಟೈರುಗಳು ೧೭೫ / ೬೫ R೧೪ (ಟ್ಯೂಬ್ ರಹಿತ) ೧೭೫ / ೬೫ R೧೪ (ಟ್ಯೂಬ್ ರಹಿತ) ೧೭೫ / ೭೦ R ೧೩ (ಟ್ಯೂಬ್ ರಹಿತ)
ಗ್ರೌಂಡ್ ಕ್ಲಿಯರೆನ್ಸ್ ೧೬೫ mm (೬.೫ in) ೧೬೫ mm (೬.೫ in) ೧೬೫ mm (೬.೫ in)

ಇಂಡಿಕಾ ವಿಸ್ಟಾ EV

ಬದಲಾಯಿಸಿ
 
ಟಾಟಾ ಇಂಡಿಕಾ EV
 
ಟಾಟಾ ಇಂಡಿಕಾ EV ಇಂಜಿನ್ ಅಂಕಣ

ಇಂಡಿಕಾ ವಿಸ್ಟಾ EV(ಎಲೆಕ್ಟ್ರಿಕ್ ವೆಹಿಕಲ್) ಹೆಸರಿನ ಇಂಡಿಕಾ ವಿಸ್ಟಾದ ವಿದ್ಯುತ್ಚಾಲಿತ ಮಾದರಿಗಳು ೨೦೧೧ರಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿವೆ.[೧೭] ವಿದ್ಯುತ್ಚಾಲಿತ ಈ ವಾಹನವು ಇಂಡಿಕಾ ವಿಸ್ಟಾವನ್ನು ಆಧರಿಸಿರುತ್ತದೆ. ಒಂದೊಮ್ಮೆ ಚಾರ್ಜ್ ಮಾಡಿದರೆ, ತನ್ನ ಸಂಪೂರ್ಣ ಸಾಮರ್ಥ್ಯದ ವಿದ್ಯುತ್ ಮೋಟಾರಿನಿಂದ ಕಾರು ೨೦೦ ಕಿಲೋಮೀಟರ್ ಗಳವರೆಗೆ ಚಲಿಸುತ್ತದೆ. ೨೦೦೮ರ ಕಡೆಯ ಭಾಗದಲ್ಲಿ ಕಾರಿನ ಚಲಾವಣೆ ಆರಂಭಗೊಂಡಿತು,[೧೮] ಹಾಗು ಸ್ಪೇನ್ ನಲ್ಲಿ ಇದು ೨೦೧೦-೦೮-೧೫ರಿಂದ ಆರಂಭಗೊಂಡಿತು.[೧೯]

ಸಂಸ್ಥೆಯು, ಕಾರಿನ ಬೆಲೆಯನ್ನು ಬಹಿರಂಗಪಡಿಸದೇ ವಿದ್ಯುತ್ಚಾಲಿತ ಇಂಡಿಕಾ ಕಾರು ಭಾರತದಲ್ಲಿ ಸುಮಾರು ೨೦೧೦ರಲ್ಲಿ ಬಿಡುಗಡೆಯಾಗಲಿದೆಯೆಂದು ಆಗ ಸೂಚಿಸಲಾಯಿತು. ವಾಹನವು ನಾರ್ವೆಯಲ್ಲಿ ೨೦೦೯ರಲ್ಲಿ ಬಿಡುಗಡೆಗೊಂಡು[೨೦] ದುದಲ್ಲದೇ ಯುರೋಪಿನಲ್ಲಿ ಹಾಗು UKಯಲ್ಲಿ ಮಾರಾಟವಾಯಿತು.[೨೧]

ಆಗ ೨೦೦೯ರಲ್ಲಿ, UK ಸರ್ಕಾರದ (ಹಣಕಾಸು ಕಾರ್ಯದರ್ಶಿ ಲಾರ್ಡ್ ಮಂಡೆಲ್ಸನ್)ಅವರು UKಯಲ್ಲಿ ವಿದ್ಯುತ್ಚಾಲಿತ ಕಾರುಗಳ ತಯಾರಿಕೆಗೆ ನೆರವಾಗಲು ಟಾಟಾ ಸಂಸ್ಥೆಗೆ £೧೦ (€೧೧.೦೯) ದಶಲಕ್ಷ ಸಾಲವನ್ನು ಒದಗಿಸುವುದಾಗಿ ಪ್ರಕಟಿಸಿದರು.[೨೨]

UKಯಲ್ಲಿರುವ ಟಾಟಾ ಮೋಟರ್ಸ್ ನ ಅಂಗಸಂಸ್ಥೆ ಟಾಟಾ ಮೋಟರ್ಸ್ ಯುರೋಪಿಯನ್ ಟೆಕ್ನಿಕಲ್ ಸೆಂಟರ್, ನಾರ್ವೆಯ ವಿದ್ಯುತ್ಚಾಲಿತ ವಾಹನ ತಂತ್ರಜ್ಞಾನ ಸಂಸ್ಥೆ ಮಿಲ್ಜೋ ಗ್ರೇನ್ ಲ್ಯಾಂಡ್ ಇನ್ನೋವಾಸ್ಜೊನ್ ನ ೫೦.೩% ರಷ್ಟರ ಪಾಲುದಾರಿಕೆಯನ್ನು US$೧.೯೩ ದಶಲಕ್ಷಕ್ಕೆ ಖರೀದಿಸಿತು. ಈ ಸಂಸ್ಥೆಯು ವಿದ್ಯುತ್ಚಾಲಿತ ವಾಹನಗಳಿಗೆ ಹೊಸ ಫಲಿತಾಂಶಗಳ ಅಭಿವೃದ್ಧಿಯಲ್ಲಿ ವಿಶೇಷತೆ ಹೊಂದಿದೆ. ಅದರೊಂದಿಗಿಯೇ ೨೦೧೦ರಲ್ಲಿ ಯುರೋಪಿನಲ್ಲಿ ವಿದ್ಯುತ್ಚಾಲಿತ ಜಾರುಬಾಗಿಲುಳ್ಳ ಇಂಡಿಕಾವನ್ನು ಬಿಡುಗಡೆಮಾಡುವ ಉದ್ದೇಶ ಹೊಂದಿತ್ತು.[೨೩][೨೪] ಎಲೆಕ್ಟ್ರೋವಾಯ, ಟಾಟಾ ಮೋಟರ್ಸ್ ಹಾಗು ಮಿಲ್ಜೋ/ಗ್ರೇನ್ ಲ್ಯಾಂಡ್/ಇನ್ನೋವಾಸ್ಜೊನ್ ನೊಂದಿಗೆ ಜೊತೆಗೂಡಿ ಬ್ಯಾಟರಿ ಹಾಗು ವಿದ್ಯುತ್ಚಾಲಿತ ಕಾರುಗಳನ್ನು ಎಲೆಕ್ಟ್ರೋವಾಯದ ಲಿಥಿಯಂ ಅಯಾನ್ ಸೂಪರ್ ಪಾಲಿಮರ್ ಬ್ಯಾಟರಿ ತಂತ್ರಜ್ಞಾನ ಬಳಸಿಕೊಂಡು ತಯಾರಿಕೆ ಮಾಡುತ್ತವೆ.[೨೫]

ಇಂಡಿಕಾ ವಿಸ್ಟಾ EV ಸಂಪೂರ್ಣವಾಗಿ ಚಾರ್ಜ್ ಆದಾಗ [೨೧]200 km (120 mi)ರಷ್ಟು ಸಾಮರ್ಥ್ಯದಲ್ಲಿ ಚಲಿಸುವುದರ ಜೊತೆಗೆ 105 kilometres per hour (65 mph)ರಷ್ಟು ಅಧಿಕ ವೇಗವಾಗಿಯೂ ಚಲಿಸುತ್ತದೆ.[೨೨] ಜೊತೆಗೆ ೧೦ ಸೆಕೆಂಡುಗಳಿಗೂ ಕಡಿಮೆ ಅವಧಿಯಲ್ಲಿ ೦ ರಿಂದ ೬೦ ಕಿಮೀ/ಪ್ರತಿ ಘಂಟೆಗೆ ಚಲಿಸುತ್ತದೆ. ಈ ಗುರಿಯನ್ನು ತಲುಪಲು, TM೪ ವಿದ್ಯುದ್ಬಲ ವ್ಯವಸ್ಥೆಗಳು(ಹೈಡ್ರೋ-ಕ್ಯೂಬೆಕ್ ನ ಒಂದು ಅಂಗವಿಭಾಗ) ಒಂದು ಸಮರ್ಥ MФTIVETM ಸರಣಿ ವಿದ್ಯುತ್ ಮೋಟಾರನ್ನು ಒದಗಿಸುತ್ತವೆ.[೨೬]

ಟಾಟಾ ಇಂಡಿಕಾ ವಿಸ್ಟಾ EVX, ಪ್ರೋಗ್ರೆಸ್ಸಿವ್ ಇನ್ಶೂರೆನ್ಸ್ ಆಟೋಮೋಟಿವ್ X ಪ್ರೈಜ್ ಸ್ಪರ್ಧೆಯ ನಾಲ್ಕು ಸುತ್ತುಗಳಲ್ಲಿ ಮೂರನೇ ಹಂತದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಿತು.[೨೭]

ಇಂಡಿಕಾ ವಿಸ್ಟಾ ಹೊಸ ಆವಿಷ್ಕಾರದ ಪರಿಕಲ್ಪನೆ S

ಬದಲಾಯಿಸಿ

ಅದರ ವಿನ್ಯಾಸದ ಕೌಶಲವನ್ನು ವಿವರಿಸುವ ಅಧ್ಯಯನ, ಇಂಡಿಕಾ ವಿಸ್ಟಾ ಹೊಸ ಆವಿಷ್ಕಾರ Sನ್ನು ೨೦೧೦ರ ದೆಹಲಿ ಆಟೋ ಎಕ್ಸ್ಪೋ ನಲ್ಲಿ ಟಾಟಾ ಸಂಸ್ಥೆ ಪ್ರದರ್ಶಿಸಿತು.

ಇಂಡಿಕಾ ಸಿಲುಯೆಟ್ ಪರಿಕಲ್ಪನೆಯ ಹೊಸ ಕಾರು

ಬದಲಾಯಿಸಿ

ನವದೆಹಲಿಯಲ್ಲಿ ನಡೆದ ಭಾರತದ ೨೦೦೬ರ ಆಟೋ ಎಕ್ಸ್ಪೋ ನಲ್ಲಿ, ಟಾಟಾ ಇಂಡಿಕಾ ಸಿಲುಯೆಟ್ ಹೊಸ ಕಾರನ್ನು ಅನಾವರಣಗೊಳಿಸಿತು. ಒಂದು ಮೂಲ, ಅಧಿಕ-ಸಾಮರ್ಥ್ಯದ ಕಾರು ಹಿಂಭಾಗದ-ಚಕ್ರದ ಚಲನೆಯ ಶಕ್ತಿ, ವಿಸ್ತೃತ ಭಾಗ, ಹಾಗು ೩.೫ ಲೀಟರಿನ 330 hp (246 kW)V೬ನ್ನು ಒಳಗೊಂಡಿರುತ್ತದೆ.[೨೮] ಕಾರು ೪.೫ ಸೆಕೆಂಡುಗಳಲ್ಲಿ ೦-೧೦೦ ಕಿಮೀ/ಪ್ರತಿ ಘಂಟೆಗೆ ವೇಗದ ಸಾಮರ್ಥ್ಯ ಹೊಂದಿದೆ, ಹಾಗು 270 km/h (170 mph)ರಷ್ಟು ಗರಿಷ್ಠತೆ ಹೊಂದಿರುತ್ತದೆ. ಪ್ರಸಕ್ತದಲ್ಲಿ ಸಿಲುಯೆಟ್ ಆವಿಷ್ಕಾರವಾದ ಏಕೈಕ ವಾಹನವಾಗಿದೆ, ಜೊತೆಗೆ ಸಾಧಾರಣ ಇಂಡಿಕಾಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಇಂಡಿಕಾ ರಾಲಿ ಮಾದರಿ

ಬದಲಾಯಿಸಿ

ಕ್ರೀಡೆಗಾಗಿ ಮುಕ್ತ,ನಿಲಂಬಲ ಹಾಗು 180 km/h (110 mph)ರಷ್ಟು ಸಾಮರ್ಥ್ಯ ಹೊಂದಿರುವ ದೃಢೀಕೃತವಾದ ಒಂದು ೧೫೦೦ cc ೧೧೫ bhp (೮೬ kW) ಇಂಡಿಕಾವನ್ನು ಟಾಟಾ ಮೋಟರ್ಸ್ ಹಾಗು ಜಯಂ ಆಟೋಮೋಟಿವ್ಸ್ ನ J. ಆನಂದ್ ಜಂಟಿಯಾಗಿ ಸಿದ್ಧಪಡಿಸಿದ್ದಾರೆ.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Express News Service (2008-08-28). "All-new Indica rolled out in city". Expressindia.com. Archived from the original on 2012-09-29. Retrieved 2010-12-10.
  2. 3 Aug, 2009, 06.26PM IST,PTI (2009-08-03). "Tata Motors sales jump 18 pc in July". Economictimes.indiatimes.com. Retrieved 2010-12-10.{{cite web}}: CS1 maint: multiple names: authors list (link) CS1 maint: numeric names: authors list (link)
  3. "Rearview". Tata Motors. 2010-04-26. Archived from the original on 2010-12-06. Retrieved 2010-12-10.
  4. "Tata B-Line Specification" (PDF). Archived from the original (PDF) on 2010-03-31. Retrieved 2010-12-13.
  5. "Tata's XETA". thehindubusinessline.com. Retrieved 2008-01-16.
  6. "Tata Indica Xeta GLG (Petrol) Price | Buy Tata Car India". Infibeam.com. Archived from the original on 2009-06-05. Retrieved 2009-05-01.
  7. "Indica new version launched". Hindu.com. 2004-01-20. Archived from the original on 2004-02-18. Retrieved 2010-12-10.
  8. "The new-look Indica". Thehindubusinessline.com. 2007-01-14. Retrieved 2010-12-10.
  9. "Indica, Mumbai's future taxi". Expressindia.com. 1999-11-09. Retrieved 2010-12-10.
  10. "Telco launches CNG version of Indica". Hinduonnet.com. 2001-05-17. Archived from the original on 2010-08-20. Retrieved 2010-12-10.
  11. "Tata Motors offers CNG options for Indica, Indigo". Thehindubusinessline.com. 2006-07-21. Retrieved 2010-12-10.
  12. "Hitchhiker's guide to hatchbacks". Indianexpress.com. 2008-06-22. Retrieved 2010-12-10.
  13. (Italian)(Quattroruote) Tata Vista: passaporto indiano, cuore italiano Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ.
  14. "Tata Vista Ego specification" (PDF). Archived from the original (PDF) on 2011-04-28. Retrieved 2010-12-13.
  15. "Tata Motors launches new vehicle models at the New Delhi Auto Expo". tata.com. Archived from the original on 2008-03-06. Retrieved 2008-01-10.
  16. "All-new Indica Vista launched". Hindu.com. 2008-08-24. Archived from the original on 2008-08-26. Retrieved 2010-12-10.
  17. "Tatas may launch electric Indica by early 2011". The Hindu Business Line. 2009-11-25. Retrieved 2010-02-24.
  18. "Tatas plan to drive out electric car on Indica platform". Hindustantimes.com. 2008-07-27. Archived from the original on 2009-01-26. Retrieved 2010-12-10.
  19. "bases". Movele.ayesa.es. Archived from the original on 2009-08-22. Retrieved 2009-10-17.
  20. "Tata Motors Unveils Electric Versions Of Indica And Ace". .lexisnexis.com. Archived from the original on 2011-05-21. Retrieved 2010-12-10.
  21. ೨೧.೦ ೨೧.೧ http://www.autonews.com/article/20090304/ANE02/903049987/1193
  22. ೨೨.೦ ೨೨.೧ "Tata gets £10m UK loan". Autocar.co.uk. 2009-09-18. Retrieved 2009-10-17.
  23. "TMETC acquires 50.3 per cent stake in Norway's Miljo Grenland/Innovasjon; to launch first electric vehicle, Indica EV, in 2009". Tata.com. 2008-10-14. Archived from the original on 2013-07-30. Retrieved 2010-12-10.
  24. Industry consultancy Ipsos' Greater China region. "INDIA [photo added 15:45BST]: Tata to launch EV next year". Just-auto.com. Archived from the original on 2009-03-29. Retrieved 2010-12-10.
  25. "Electrovaya Partners with Tata Motors and Miljø to Launch Electric Car and Battery Production in Norway". Greencarcongress.com. 2008-10-14. Retrieved 2010-12-10.
  26. "Aperçu COM 2009-005 An". Hydroquebec.com. 2009-01-15. Retrieved 2009-05-01.
  27. "Competition Results | Progressive Automotive XPRIZE". Progressiveautoxprize.org. Archived from the original on 2010-12-22. Retrieved 2010-12-12.
  28. ":: ಆಟೋಕಾರ್ ಇಂಡಿಯಾ - ಕಾರ್ ಹಾಗು ಬೈಕ್ ಮ್ಯಾಗಜಿನ್::". Archived from the original on 2007-09-27. Retrieved 2011-01-19.

ಪೆಟ್ರೋಲ್ ಹಾಗು ಡೀಸಲ್ ಎರಡರಿಂದಲೂ ಚಾಲನೆ ಮಾಡಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ ಇಂಜಿನ್ ನೊಂದಿಗೆ ಇಂಡಿಕಾ V೨ ಕಾರನ್ನು ಬಿಡುಗಡೆ ಮಾಡಲಾಯಿತು.

ಹೊರಗಿನ ಕೊಂಡಿಗಳು

ಬದಲಾಯಿಸಿ