ಟಾಟಾ ಇಂಡಿಗೊ
ಟಾಟಾ ಇಂಡಿಗೊ ಭಾರತದ ಟಾಟಾ ಮೋಟಾರ್ಸ್ ಸಂಸ್ಥೆಯು ತಯಾರಿಸಿರುವ ಮಧ್ಯಮ ಗಾತ್ರದ ಮೋಟಾರು ಕಾರು.
Tata Indigo Manza ಟಾಟಾ ಇಂಡಿಗೊ ಮಾಂಜ | |
Assembly | ಪುಣೆ, ಮಹಾರಾಷ್ಟ್ರ, ಭಾರತ |
---|---|
Class | ಕಾಂಪ್ಯಾಕ್ಟ್ ಕಾರು |
ಇಂಡಿಗೊ (೨೦೦೨-೨೦೦೯) (ಮೊದಲ ಪೀಳಿಗೆ)
ಬದಲಾಯಿಸಿಇಂಡಿಗೊ ಸಿಡಾನ್ (೨೦೦೨-೨೦೦೯)
ಬದಲಾಯಿಸಿManufacturer | Tata Motors |
---|---|
Production | 2002–present |
Class | Subompact car |
Body style | 4-door sedan 4-door station wagon |
Layout | Front engine, front-wheel drive |
Engine | 1.4 L I4 1.4 L turbodiesel I4 1.4 L Intercooled turbodiesel I4 1.4 L DiCOR I4 |
Transmission | 5-speed manual |
Wheelbase | 2,450 mm (96.5 in) XL: 2,650 mm (104.3 in) |
Length | 4,150 mm (163.4 in) CS: 3,988 mm (157.0 in) Marina: 4,158 mm (163.7 in) XL: 4,377 mm (172.3 in) |
Width | 1,700 mm (66.9 in) |
Height | 1,540 mm (60.6 in) Marina: 1,575 mm (62.0 in) |
Related | Tata Indica |
Designer(s) | I.DE.A Institute |
ಟಾಟಾ ಸಂಸ್ಥೆಯು ೨೦೦೨ರಲ್ಲಿ,ಭಾರತದ ಸ್ಪರ್ಧಾತ್ಮಕ ದೇಶೀಯ ಸಿಡಾನ್(ಮುಚ್ಚುಕಾರು): ದಿ ಇಂಡಿಗೊವನ್ನು ಮಾರುಕಟ್ಟೆಗೆ ಪರಿಚಯಿಸಿತು. ಆಂತರಿಕವಾಗಿ ವಿನ್ಯಾಸಗೊಂಡ ಇದು, ಟಾಟಾ ಇಂಡಿಕಾದ ಸಿಡಾನ್ ರೂಪಾಂತರವಾಗಿದೆ, ಇಂಡಿಕಾ ಕಾರಿನಲ್ಲಿರುವ ಹಲವಾರು ಭಾಗಗಳು ಇದರಲ್ಲೂ ಇವೆ. ಟರ್ಬೋಡೀಸಲ್ ಹಾಗು ಪೆಟ್ರೋಲ್ ಇಂಜಿನ್ ಗಳು, ಒಂದು ಇಂಟರ್ಕೂಲ್ಡ್ 'TDI' ಇಂಜಿನ್, ಹಾಗು ಡಿಕೋರ್ ಇಂಜಿನ್ ಗಳನ್ನು ಅಳವಡಿಸಿ ಬಿಡುಗಡೆಯಾದ ಮಾಡಲಾಯಿತು. ಸಣ್ಣಪುಟ್ಟ ಪರಿಷ್ಕರಣೆಗಳೊಂದಿಗೆ ೨೦೦೬ರಲ್ಲಿ ಇದನ್ನು ಮರುವಿನ್ಯಾಸಗೊಳಿಸಲಾಯಿತು, ಈ ಬದಲಾವಣೆಯಲ್ಲಿ ಎರಡು ಚೇಂಬರ್(ಮುಂಭಾಗ) ತಲೆದೀಪಗಳು ಹಾಗು ವಿವಿಧ ಬಂಪರುಗಳನ್ನು(ಡಿಕ್ಕಿತಡೆ) ಸೇರಿಸಲಾಗಿತ್ತು. ಇದರ ಸ್ಥಾನವನ್ನು ೨೦೦೯ರಲ್ಲಿ ಟಾಟಾ ಇಂಡಿಗೊ ಮಾಂಜಾ ಆಕ್ರಮಿಸಿತು.
ಇಂಡಿಗೊ ಮರಿನಾ (೨೦೦೪-೨೦೧೦)
ಬದಲಾಯಿಸಿಸ್ಟೇಶನ್ ವ್ಯಾಗನ್ ರೂಪಂತರವಾದ ಇಂಡಿಗೊ ಮರಿನಾ (ವಿದೇಶಿ ಮಾರುಕಟ್ಟೆಗಳಲ್ಲಿ ಇಂಡಿಗೊ SW ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ) ನವದೆಹಲಿಯ ಆಟೋ ಎಕ್ಸಪೋ ೨೦೦೪ರಲ್ಲಿ ಅನಾವರಣಗೊಂಡಿತು. ಇಂಡಿಗೊ ಮರಿನಾ ಮಾದರಿಗೆ ಸೇರಿಸಲಾದ ಹಲವಾರು ಹೆಚ್ಚುವರಿ ವೈಶಿಷ್ಟ್ಯಗಳೆಂದರೆ ತತ್ ಕ್ಷಣವೇ ಸ್ಥಳವನ್ನು ಗಮನಿಸಬಹುದಾದ ದೀಪದೊಂದಿಗಿನ ಮುಂಭಾಗ ಹಾಗು ಹಿಂಭಾಗದ ಕ್ಯಾಬಿನ್ ದೀಪಗಳು, HVAC ವ್ಯವಸ್ಥೆ, ನಾಲ್ಕು ಸ್ಪೋಕ್ ಚಕ್ರ, ಅಲ್ಯೂಮಿನಿಯಂ ಗೇರ್ ಬದಲಾಯಿಸುವ ನಾಬ್, ಪವರ್ ವಿಂಡೋಸ್, ಕಾರಿನ ಹೊರಭಾಗದ ಬಣ್ಣವುಳ್ಳ ಬಂಪರ್ ಗಳು, ರೂಫ್ ರೈಲ್ ಗಳು, ಬಾಗಿಲ ಮೇಲೆ ರಬ್ ರೈಲ್ ಗಳು, ಚಕ್ರಕ್ಕೆ ಸಂಪೂರ್ಣವಾದ ಕವರ್ ಗಳು, ಡಿಜಿಟಲ್ ಗಡಿಯಾರ, ಒಳಕ್ಕೆಳೆದುಕೊಳ್ಳಬಲ್ಲ ಲಗೇಜ್ ಕವರ್, ಆಚೆ ಈಚೆ ಪ್ರಭಾವ ಬೀರುವ ಕಿರಣಗಳು, ಬಾಗಿಕೊಳ್ಳಬಹುದಾದ ಸ್ಟೀರಿಂಗ್ ಅಂಕಣ. ೨೦೧೦ರ ಸುಮಾರಿಗೆ, ಮರಿನಾದ ತಯಾರಿಕೆಯನ್ನು ಕಡಿಮೆ ಮಾಡಲಾಗಿದೆ, ಜೊತೆಗೆ ವಾಹನವು ಟಾಟಾ ಡೀಲರ್ ಶಿಪ್ ಇರುವ ಯಾವುದೇ ಅಂಗಡಿಗಳಲ್ಲಿ ಸುಲಭವಾಗಿ ದೊರಕುವುದಿಲ್ಲ.
ಇಂಡಿಗೊ XL (೨೦೦೭-ಪ್ರಸಕ್ತದವರೆಗೆ)
ಬದಲಾಯಿಸಿದೊಡ್ಡ ಚಕ್ರಾಂತರ ರೂಪಾಂತರವಾದ ಟಾಟಾ ಇಂಡಿಗೊ XL ಜನವರಿ ೨೦೦೭ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಯಿತು.[೧]. ಇದು ಇಂಡಿಗೊ ಸಿಡಾನ್ ನ ದೊಡ್ಡ ಚಕ್ರಾಂತರ ರೂಪಾಂತರ. ಇದು 200 mm (7.9 in)ರಷ್ಟು ವಿಸ್ತಾರವಾದ ಚಕ್ರಾಂತರ ಹಾಗು ೧೦೧ hp ಇಂಜಿನ್ ನನ್ನು ಹೊಂದಿದೆ.ಪೆಟ್ರೋಲ್ ಮಾದರಿಯು MPFI ೧೬ ಕವಾಟಗಳ ಎರಡು ಕ್ಯಾಮ್ ಇಂಜಿನ್ ನನ್ನು ಹೊಂದಿದ್ದರೆ, ಡೀಸಲ್ ನ ಮಾದರಿಯು ಆಂತರಿಕವಾಗಿ ಅಭಿವೃದ್ಧಿಯಾದ DICOR ಇಂಜಿನ್ ನನ್ನು ಹೊಂದಿರುತ್ತದೆ. ಕೆಲವೊಂದು ವಿಶಿಷ್ಟ್ಯತೆಗಳೆಂದರೆ ಪವರ್ಡ್ ಮುಂಭಾಗದ ಆಸನಗಳು(ಚಾಲಕ ಹಾಗು ಪ್ರಯಾಣಿಕ), ಪ್ರತ್ಯೇಕ ನಿಯಂತ್ರಣಗಳೊಂದಿಗೆ ಹಿಂಭಾಗದಲ್ಲಿ ಏರ್ ಕಂಡೀಷ್ನಿಂಗ್ ಸ್ವಿಚ್ಚುಗಳ ಫಲಕ, ಸ್ವಯಂಚಾಲಿತ ಪವರ್ ಡೌನ್ ಕಾರ್ಯನಿರ್ವಹಿಸುವ ಎಲ್ಲ ನಾಲ್ಕು ಪವರ್ ವಿಂಡೋಗಳು, ಹಾಗು ಕಾರ್ ದೂರವಾಣಿ.ಟಾಟಾ ಇಂಡಿಗೋ XLನಲ್ಲಿರುವ ಹೆಚ್ಚುವರಿ ವೈಶಿಷ್ಟ್ಯತೆಗಳಲ್ಲಿ ಉತ್ತಮವಾದ ಹೈಎಂಡ್ ಲಕ್ಷಣಗಳಿಂದ ಸಜ್ಜಿತವಾಗಿದೆ ಉದಾಹರಣೆಗೆ ೩೨ ಬಿಟ್ ಮೈಕ್ರೋಪ್ರೋಸ್ಸೇಸರ್, ೧೩೯೬ cc , ೧೬ ಕವಾಟದ ಇಂಜಿನ್, 100 PS (74 kW; 99 hp)ರಷ್ಟು ಪವರ್, 200 mm (7.9 in)ರಷ್ಟು ವಿಸ್ತಾರವಾದ ಚಕ್ರಾಂತರ, ಇಂಧನ ಟ್ಯಾಂಕ್ ಸಾಮರ್ಥ್ಯ:42 L (9.2 imp gal; 11.1 US gal)
ಇಂಡಿಗೋ CS (೨೦೦೮-ಪ್ರಸಕ್ತದವರೆಗೆ)
ಬದಲಾಯಿಸಿಟಾಟಾ ಸಂಸ್ಥೆಯು ಟಾಟಾ ಇಂಡಿಗೋ CS ಅನ್ನು ೨೦೦೮ರ ನವದೆಹಲಿ ಆಟೋ ಎಕ್ಸ್ಪೋನಲ್ಲಿ ಬಿಡುಗಡೆ ಮಾಡಿತು. CS ಎಂದರೆ ಕಾಂಪ್ಯಾಕ್ಟ್ ಸಿಡಾನ್ ಹಾಗು ಇದು ವಿಶ್ವದ ಅತ್ಯಂತ ಚಿಕ್ಕ ಮುಚ್ಚುಕಾರು ಇದಾಗಿದೆ. ಇಂಡಿಗೋ CS, ಕಡಿಮೆ ತೆರಿಗೆ ನಿರ್ಬಂಧಕ್ಕೆ ಒಳಪಡುತ್ತದೆ. ಪೆಟ್ರೋಲ್ ಹಾಗು ಡೀಸಲ್ ನ ಪ್ರತಿ ರೂಪಾಂತರದಲ್ಲೂ ಮೂರು ಮಾದರಿಗಳಿವೆ. ಇಂಡಿಗೋ CS ಪೆಟ್ರೋಲ್ ೧.೨ ಲೀಟರ್, 65 PS (48 kW; 64 hp), MPFI ಇಂಜಿನ್ ಮಾದರಿ ಹಾಗು ಡೀಸಲ್ ಮಾದರಿಯಲ್ಲಿ ೧.೪ ಲೀಟರ್ TCIC ಇಂಜಿನ್. ಇಂಡಿಗೋ CS, ಆರಂಭದಲ್ಲಿ ಇಂಡಿಕಾ ಮುಂಜಾಲರಿ ಹಾಗು ತಲೆದೀಪಗಳೊಂದಿಗೆ ಬಿಡುಗಡೆಯಾಯಿತು, ಜೊತೆಗೆ ಇಂಡಿಗೋ ಎರಡು ಚೇಂಬರ್ ತಲೆದೀಪಗಳು ಹಾಗು ಮುಂಜಾಲರಿಯೊಂದಿಗೆ ೨೦೦೯ರಲ್ಲಿ ಬಿಡುಗಡೆಯಾಯಿತು. DiCORನ ಆಯ್ಕೆಯನ್ನೂ ಸಹ ಸೇರಿಸಲಾಗಿತ್ತು.
ಇದು ಒಂದು ಹೊಸ BS-೪ ಅನುವರ್ತನಾಶೀಲ ಕಾಮನ್ ರೈಲ್ CR೪ ಇಂಜಿನ್ ಹಾಗು ತಾಂತ್ರಿಕ ವರ್ಗ ಹಾಗು ವಿನ್ಯಾಸದಲ್ಲಿ, ೨೦೧೦ ರಷ್ಟರ ಹೊತ್ತಿಗೆ ಸುಧಾರಣೆ ಕಂಡಿತು, ಜೊತೆಗೆ ಇಂಡಿಗೊ CS e-ಸರಣಿ ಎಂಬ ಹೆಸರನ್ನು ಪಡೆಯಿತು.
ವೈಶಿಷ್ಟ್ಯಗಳು ಇಂಡಿಗೊ CS ವಿಶ್ವದ ಅತ್ಯಂತ ಚಿಕ್ಕ ಮುಚ್ಚುಕಾರಾಗಿದೆ, ಜಾರುಕಾರಿನ ಗಾತ್ರದಲ್ಲಿದ್ದು, ಮುಚ್ಚುಕಾರಿನಷ್ಟು ವಿಶಾಲವಾಗಿದೆ. ನಸು ಹಳದಿಕಂದುಬಣ್ಣದ ಒಳಾಂಗಣಗಳು, ಹೊಸ AC ಸಲಕರಣೆ ಕಪಾಟು, ಓದುವ ದೀಪ, ಸ್ಪೋರ್ಟಿ ಸ್ಟೀರಿಂಗ್ ಚಕ್ರ, ಸಲಕರಣೆ ಇಡಲು ಅಂಕಣ, ಹೊಸ ಮಾದರಿಯ ಮುಂಭಾಗದ ಮುಂಜಾಲರಿ, ಮುಂಭಾಗದ ಹಾಗು ಹಿಂಭಾಗದ ಬಂಪರ್, ಮೃದುವಾದ ಉತ್ತಮ ಗುಣಮಟ್ಟದ ಆಸನಗಳು, ಸೆಂಟರ್ ಕ್ಲಸ್ಟರ್ & ಏರ್ ಕಂಡೀಷ್ನಿಂಗ್ ನಿಯಂತ್ರಣಗಳು, ತೀಕ್ಷ್ಣ ಪ್ರಕಾಶವನ್ನು,ಒಳಭಾಗದಿಂದ ಹಿಂಭಾಗವನ್ನು ಕಾಣಬಹುದಾದ ಕನ್ನಡಿ, ಹಾಗು ಅಕ್ಷಾಧಾರ ವ್ಯವಸ್ಥೆಯಿಂದ ಸುಸಜ್ಜಿತವಾದ ಸ್ವತಂತ್ರ ಮ್ಯಾಕ್ ಪ್ಹೆರ್ಸನ್ ಕಬ್ಬಿಣದ ತುಂಡುಗಳುಳ್ಳ ೩೮೦ ಲೀಟರಿನ ಡಿಕ್ಕಿ ಜಾಗ.
ಇಂಡಿಗೋ ಮಾಂಜಾ (೨೦೦೯-ಪ್ರಸಕ್ತದವರೆಗೆ) (ಎರಡನೇ ಪೀಳಿಗೆ)
ಬದಲಾಯಿಸಿTata Indigo Manza | |
Manufacturer | Tata Motors |
---|---|
Production | 2009–present |
Class | Compact car |
Body style | 4-door sedan |
Layout | Front engine, front-wheel drive |
Platform | Tata X1 platform |
Engine | 1.4L Saffire 90 hp (67 kW) L೪ ೧.೩L Quadrajet diesel 90 hp (67 kW) |
Transmission | ೫-speed manual |
Wheelbase | 2,520 mm (99.2 in) |
Length | 4,413 mm (173.7 in) |
Width | 1,703 mm (67.0 in) |
Height | 1,550 mm (61.0 in) |
Related | Tata Elegante Tata Indica Vista |
Designer(s) | Tata Motors |
ಟಾಟಾ ಮೋಟರ್ಸ್ ಸಂಸ್ಥೆಯು ಇಂಡಿಗೊ ಮಾಂಜಾವನ್ನು ೧೪ ಅಕ್ಟೋಬರ್ ೨೦೦೯ರಲ್ಲಿ ಬಿಡುಗಡೆ ಮಾಡಿತು. ಈ ಮಾದರಿಯು ಟಾಟಾ X೧ ವೇದಿಯನ್ನು ಆಧರಿಸಿದೆ, ಇದನ್ನು ಟಾಟಾ ಮೋಟರ್ಸ್ ಸಂಸ್ಥೆಯು ೨೦೦೭ರ ಜಿನೀವಾ ಮೋಟರ್ ಷೋನಲ್ಲಿ ತಮ್ಮ ಪರೀಕ್ಷಣಾ ಮಾದರಿಯಾದ ಎಲೆಗಂಟೆ ಕಾನ್ಸೆಪ್ಟ್ ನಲ್ಲಿ ಪ್ರದರ್ಶಿಸಿತು. ಇದರ ಬೆಲೆ ೪.೮ ಲಕ್ಷಗಳಿಂದ ೬.೭೫ ಲಕ್ಷಗಳ ನಡುವೆ ಇದೆ.[೨] ಇದರ ಬಿಡುಗಡೆಯು, ಇಂಡಿಗೊದ ಹಿಂದಿನ ಸಿಡಾನ್ ಮಾದರಿಯ ಕ್ರಮೇಣ ಬಳಕೆಯೊಂದಿಗೆ ತಾಳೆಯಾಯಿತು. ನಾಲ್ಕು ಮಾದರಿಗಳೆಂದರೆ ಆಕ್ವಾ, ಔರಾ, ಔರಾ(ABS) ಹಾಗು ಔರಾ +. ಇಂಜಿನ್ ೧.೪ ಲೀಟರ್ ಪೆಟ್ರೋಲ್ ಹಾಗು ೧.೩ ಲೀಟರ್ ಡೀಸಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಇದು ಫಿಯೆಟ್ ಲೀನಿಯಾಕ್ಕೆ ಸದೃಶವಾಗಿದೆ.
ಟಾಟಾ ಮೋಟರ್ಸ್ ಸಂಸ್ಥೆಯು, ಇಂಡಿಗೊ ಮಾಂಜಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವೇದಿಕೆಯಾಗೇ ಉಳಿಯುತ್ತದೆಂದು ಜೊತೆಗೆ ಹಿಂದಿನ ಉತ್ಪನ್ನಗಳಲ್ಲಾದಂತೆ ಇತರ ದೊಡ್ಡ ಸಂಖ್ಯೆಯಲ್ಲಿ ಈ ಮಾದರಿ ಉತ್ಪಾದನೆಯಾಗುವುದಿಲ್ಲವೆಂದು ದೃಢಪಡಿಸಿದೆ .[೩]
ವೈಶಿಷ್ಟ್ಯಗಳು
ಬದಲಾಯಿಸಿಮಾಂಜಾದ ಕೆಲವು ಅತ್ಯಂತ ಸುಸಜ್ಜಿತ ಲಕ್ಷಣಗಳಾದ ೨ DIN ಮ್ಯೂಸಿಕ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ, ಇದು USB, AUX ಹಾಗು ಬ್ಲ್ಯೂಟೂಥ್ ಕನೆಕ್ಟಿವಿಟಿಗೆ ನೆರವಾಗುತ್ತದೆ, ಚಾಲಕರಿಗೆ ಮಾಹಿತಿ ವ್ಯವಸ್ಥೆ, ಸ್ಟೀರಿಂಗ್ ನ ಮೇಲೆ ಅಳವಡಿಸಲಾದ ಧ್ವನಿ ನಿಯಂತ್ರಣಗಳು, ABS, ಮುಂಭಾಗದಲ್ಲಿ ಎರಡು ಗಾಲಿಚೀಲಗಳು, ಕಾರ್ ಕೆಂಪುಗೆರೆಯನ್ನು ದಾಟಿದರೆ ಕೆಂಪು ಬಣ್ಣಕ್ಕೆ ತಿರುಗುವ ಬಣ್ಣ ಬದಲಾಯಿಸುವ ವೇಗಮಾಪಕ, ಸ್ಥಳಾಂತರಗೊಳ್ಳದ ಇಂಜಿನ್ ಹಾಗು ಲಭ್ಯವಿರುವ ಮಾದರಿಗಳನ್ನು ಆಧರಿಸಿರುವ ಸೆಂಟ್ರಲ್ ಲಾಕಿಂಗ್.
-
ಭಾರತೀಯ ಸೇನೆಯಲ್ಲಿ ಇಂಡಿಗೊದ ಬಳಕೆ
-
ಪರಿಷ್ಕೃತ ಇಂಡಿಗೊ ಮರೀನ
-
ಪರಿಷ್ಕೃತ ಇಂಡಿಗೊ ಮರೀನ ಹಿಂಭಾಗ
-
ಇಂಡಿಗೊ CSನ ಮಾದರಿ ೧
ಟಿಪ್ಪಣಿಗಳು
ಬದಲಾಯಿಸಿ- ↑ "Tata unveils Indigo XL at Rs 6.7 lakh". tata.com/tata_motors. Archived from the original on 2007-07-13. Retrieved 2008-01-10.
- ↑ "Tata Motors launches Indigo Manza". The Economic Times. 2009-10-14. Retrieved 2009-10-15.
- ↑ "Tata launches Indigo Manza sedan". Business Standard Motoring. 2009-10-14. Archived from the original on 2009-10-17. Retrieved 2009-10-15.
ಹೊರಗಿನ ಕೊಂಡಿಗಳು
ಬದಲಾಯಿಸಿ- ಇಂಡಿಗೊ ಅಧಿಕೃತ ಅಂತರಜಾಲ Archived 2008-11-19 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಡಿಗೊ ಮರೀನ ಅಧಿಕೃತ ಅಂತರಜಾಲ Archived 2005-07-08 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಡಿಗೊ XL ಅಧಿಕೃತ ಅಂತರಜಾಲ [ಶಾಶ್ವತವಾಗಿ ಮಡಿದ ಕೊಂಡಿ]
- ಇಂಡಿಗೊ CS ಅಧಿಕೃತ ಅಂತರಜಾಲ Archived 2010-01-07 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಡಿಗೊ ಮಾನ್ಜ ಅಧಿಕೃತ ಅಂತರಜಾಲ Archived 2011-02-01 ವೇಬ್ಯಾಕ್ ಮೆಷಿನ್ ನಲ್ಲಿ.