ಝಾನ್ಸಿ ಕೋಟೆ ಅಥವಾ ಝಾನ್ಸಿ ಕಾ ಕಿಲಾ ಉತ್ತರ ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿನ ಬಂಗೀರಾ ಎಂಬ ದೊಡ್ಡ ಗುಡ್ಡದ ಶಿಖರದ ಮೇಲೆ ಸ್ಥಿತವಾಗಿರುವ ಒಂದು ಕೋಟೆ. ಇದು ಬಲ್ವಂತ್ ನಗರದಲ್ಲಿ ಚಂದೇಲ ರಾಜರ ಭದ್ರನೆಲೆಯಾಗಿ ೧೧ರಿಂದ ೧೭ನೇ ಶತಮಾನದವರೆಗೆ ಕಾರ್ಯನಿರ್ವಹಿಸಿತ್ತು.

ಝಾನ್ಸಿ ಕೋಟೆ, ಸು. 1882
ಚಿತ್ರ:Jhansi kila.jpg
ಝಾನ್ಸಿ ಕೋಟೆ, ರಾತ್ರಿಯ ನೋಟ
 
ಕಡಕ್ ಬಿಜ್ಲಿ, 2007
 
ರಾಣಿ ಲಕ್ಷ್ಮೀಬಾಯಿ ತನ್ನ ಕುದುರೆ ಬಾದಲ್‍ದೊಂದಿಗೆ ಹಾರಿದ ಸ್ಥಳ (ದಂತಕಥೆಯ ಪ್ರಕಾರ)

ಗುಡ್ಡಗಾಡು ಪ್ರದೇಶದಲ್ಲಿ ನಿಂತಿರುವ ಈ ಕೋಟೆಯು ಉತ್ತರ ಭಾರತದ ಶೈಲಿಯ ಕೋಟೆ ನಿರ್ಮಾಣವು ದಕ್ಷಿಣಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸುತ್ತದೆ. ದಕ್ಷಿಣದಲ್ಲಿ, ಹೆಚ್ಚಿನ ಕೋಟೆಗಳನ್ನು ಸಮುದ್ರತಳಗಳ ಮೇಲೆ ನಿರ್ಮಿಸಲಾಗಿದೆ, ಉದಾಹರಣೆಗೆ ಕೇರಳದ ಬೇಕಲ್ ಕೋಟೆ. ಕೋಟೆಯ ಗ್ರಾನೈಟ್ ಗೋಡೆಗಳು 16 ರಿಂದ 20 ಅಡಿಗಳಷ್ಟು ದಪ್ಪವಾಗಿದ್ದು, ದಕ್ಷಿಣ ಭಾಗದಲ್ಲಿ ನಗರದ ಗೋಡೆಗಳು ಸಂಧಿಸುತ್ತವೆ. ಕೋಟೆಯ ದಕ್ಷಿಣ ಮುಖವು ಬಹುತೇಕ ೯೦ ಡಿಗ್ರೀ ಕೋನದಲ್ಲಿದೆ.[] ಕೋಟೆಗೆ ಪ್ರವೇಶ ನೀಡುವ 10 ದ್ವಾರಗಳಿವೆ. ಅವುಗಳೆಂದರೆ ಖಂಡೇರಾವ್ ದ್ವಾರ, ದಾಟಿಯಾ ದ್ವಾರ, ಭಂಡೇರಿ ದ್ವಾರ (1857 ರ ಯುದ್ಧದಲ್ಲಿ ರಾಣಿ ಲಕ್ಷ್ಮಿ ಬಾಯಿ ಈ ದ್ವಾರದಿಂದ ತಪ್ಪಿಸಿಕೊಂಡರು), ಉನ್ನಾವ್ ದ್ವಾರ, ಬಡಾಗಾಂವ್ ದ್ವಾರ, ಲಕ್ಷ್ಮಿ ದ್ವಾರ, ಸಾಗರ್ ದ್ವಾರ, ಓರ್ಛಾ ದ್ವಾರ, ಸೈಯಾರ್ ದ್ವಾರ ಮತ್ತು ಚಾಂದ್ ದ್ವಾರ. ಕೋಟೆಯಲ್ಲಿರುವ ಗಮನಾರ್ಹವಾದ ದೃಶ್ಯಗಳೆಂದರೆ ಶಿವ ದೇವಾಲಯ, ಪ್ರವೇಶದ್ವಾರದಲ್ಲಿರುವ ಗಣೇಶ ದೇವಾಲಯ ಮತ್ತು 1857 ರ ದಂಗೆಯಲ್ಲಿ ಬಳಸಲ್ಪಟ್ಟ ಕಡಕ್ ಬಿಜ್ಲಿ ಫಿರಂಗಿ. ಕೋಟೆಯಿಂದ ಕುದುರೆಯ ಮೇಲೆ ಕುಳಿತು ಹಾರಿದ ರಾಣಿ ಲಕ್ಷ್ಮೀಬಾಯಿಯ ಚಕಿತಗೊಳಿಸುವ ಸಾಧನೆಯನ್ನು ಸ್ಮಾರಕ ಫಲಕವು ನೆನಪಿಸುತ್ತದೆ. ರಾಣಿ ಮಹಲ್ ಹತ್ತಿರದಲ್ಲಿದೆ. ಇದನ್ನು 19 ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಈಗ ಪುರಾತತ್ವ ವಸ್ತು ಸಂಗ್ರಹಾಲಯವಿದೆ.

 
ಝಾನ್ಸಿ ಕೋಟೆಯ ಹಜಾರದ ಹಾದಿ

ಉಲ್ಲೇಖಗಳು

ಬದಲಾಯಿಸಿ
  1. Edwardes, Michael (1875) Red Year. London: Sphere Books; p. 119

ಹೊರಗಿನ ಕೊಂಡಿಗಳು

ಬದಲಾಯಿಸಿ