ಜೊಹ್ಯಾನಿಸ್ಬರ್ಗ್

ಜೊಹ್ಯಾನಿಸ್‍ಬರ್ಗ್ ದಕ್ಷಿಣ ಆಫ್ರಿಕ ಗಣರಾಜ್ಯದ ಅತ್ಯಂತ ದೊಡ್ಡ ನಗರ. ಜೊಹ್ಯಾನಿಸ್‍ಬರ್ಗ್ ದಕ್ಷಿಣ ಆಫ್ರಿಕದ ಪ್ರಮುಖ ಕೈಗಾರಿಕಾ ಕೇಂದ್ರ. ರಾಸಾಯನಿಕ ವಸ್ತುಗಳು, ಬಟ್ಟೆ ಹಾಗೂ ಚರ್ಮದ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಇದು ರಾಂಡ್ ಚಿನ್ನದ ಗಣಿಗಳ ಕೇಂದ್ರ.

ಜೊಹ್ಯಾನಿಸ್ಬರ್ಗ್
Flag of ಜೊಹ್ಯಾನಿಸ್ಬರ್ಗ್
Coat of arms of ಜೊಹ್ಯಾನಿಸ್ಬರ್ಗ್
Country ದಕ್ಷಿಣ ಆಫ್ರಿಕಾ
Provinceಗೌಟೆಂಗ್
Established೧೮೫೬[]
Area
 • City೧,೬೪೪.೯೮ km (೬೩೫.೧೩ sq mi)
 • Urban
೩,೩೫೭ km (೧,೨೯೬ sq mi)
Elevation
೧,೭೫೩ m (೫,೭೫೧ ft)
Population
 (2019)[]
 • City೫೬,೩೫,೧೨೭
 • Density೩,೪೦೦/km (೮,೯೦೦/sq mi)
 • Urban
೮೦,೦೦,೦೦೦
 • Urban density೨,೪೦೦/km (೬,೨೦೦/sq mi)
 • Metro
೧,೦೫,೦೦,೦೦೦
Time zoneUTC+2 (SAST)
Postal code (street)
2001
PO box
2000
Area code010 and 011
Websitewww.joburg.org.za

ಭೌಗೋಲಿಕ ಮಾಹಿತಿ

ಬದಲಾಯಿಸಿ

ವಿಟ್ ವಾಟರ್ಸ್ ರಾಂಡ್ ಇಳುಕಲಿನ ದಕ್ಷಿಣ ಭಾಗದಲ್ಲಿ ಸಮುದ್ರ ಮಟ್ಟಕ್ಕೆ 5,750' ಎತ್ತರದಲ್ಲಿದೆ. ವಾಯುಗುಣ ಹಿತಕರ, ಮಾಧ್ಯ ಉಷ್ಣತೆ ಜುಲೈ ತಿಂಗಳಲ್ಲಿ 10.20 ಅ, ಜನವರಿಯಲ್ಲಿ 20.20 ಅ. ಜನಸಂಖ್ಯೆ 6,54,682 (1970). ಹಲವಾರು ಮುಖ್ಯಸ್ಥಳಗಳಿಂದ ಬರುವ ಹೆದ್ದಾರಿಗಳು ಈ ನಗರದಲ್ಲಿ ಸಂಧಿಸುತ್ತವೆ. ಇಲ್ಲಿಂದ ಪ್ರಿಟೋರಿಯ 36 ಮೈಲಿ. ಬ್ಲೂಮ್‍ಫ್ಯಾಂಟೇನ್ 264 ಮೈಲಿ. ಕೇಪ್‍ಟೌನ್ 907 ಮೈಲಿ. ಡರ್ಬನ್ 406 ಮೈಲಿ. ದೂರದಲ್ಲಿವೆ. ನಗರದ ಆಧುನಿಕ ರೈಲ್ವೆ ಜಂಕ್ಷನ್‍ನಿಂದ ದಿನವಹಿ 1,60,000 ಪ್ರಯಾಣಿಕರ ಸಂಚಾರವಿದೆ. ಜಾನ್ ಸ್ಮಟ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (1947) ನಗರದಿಂದ ಈಶಾನ್ಯಕ್ಕೆ 15 ಮೈ. ದೂರದಲ್ಲಿದೆ.

ಇತಿಹಾಸ

ಬದಲಾಯಿಸಿ

ವಿಟ್ ವಾಟರ್ಸ್ ರಾಂಡ್ ಇಳುಕಲು ಪ್ರದೇಶದ ಬಂಡೆಯ ಸಾಲುಗಳಲ್ಲಿ ಚಿನ್ನದ ಪದರಗಳು ಸಿಕ್ಕಿ (1886), ಜನರಹಿತವಾಗಿದ್ದ ಆ ಸ್ಥಳ ಜಗತ್ತಿನ ದೊಡ್ಡ ಚಿನ್ನದ ಗಣಿ ಪ್ರದೇಶವಾಗಿ ಬೆಳೆಯಿತು. ಅಲ್ಲಿ ಸರ್ವೇಕ್ಷಣೆ ನಡೆಸಿದ ಜೊಹ್ಯಾನ್ ರಿಸಿಕ್ ಎಂಬಾತನಿಂದ ಅಥವಾ ಹೊಸ ಚಿನ್ನದ ಗಣಿಗಳ ಆಡಳಿತ ವಹಿಸಿದ್ದ ಜೊಹ್ಯಾನಿಸ್ ಮೆಯರ್ ಎಂಬಾತನಿಂದ ನಗರಕ್ಕೆ ಈ ಹೆಸರು ಬಂದಿರಬಹುದು. ನಗರ ಬಹುಬೇಗ ಬೆಳೆಯಿತು. ಇದರ ಆಡಳಿತಕ್ಕಾಗಿ ನಗರಸಭೆ ಸ್ಥಾಪಿತವಾಯಿತು (1897). ದಕ್ಷಿಣ ಆಫ್ರಿಕದಲ್ಲಿ ನಡೆದ ಬೋಯರ್ ಯುದ್ದದ (1899-1902) ತರುವಾಯ ಈ ನಗರವೂ ಸೇರಿದ ಟ್ರ್ಯಾನ್ಸ್‍ವಾಲ್ ಪ್ರದೇಶ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1903ರಲ್ಲಿ ಹೊಸ ನಗರಸಭೆ ಸ್ಥಾಪಿತವಾದಾಗ ನಗರದ ಜನಸಂಖ್ಯೆ 1,09,500 ಇತ್ತು. 1910ರಲ್ಲಿ ದಕ್ಷಿಣ ಆಫ್ರಿಕದ ಒಕ್ಕೂಟ (ಯೂನಿಯನ್) ಏರ್ಪಟ್ಟಾಗ ನಗರದ ಬಡಾವಣೆಗಳು 6 ಮೈ. ದೂರ ವ್ಯಾಪಿಸಿದುವು. 1930ರಿಂದ 1950ರ ವರೆಗಿನ ಅವಧಿಯಲ್ಲಿ ಉತ್ತರ ಹಾಗೂ ವಾಯುವ್ಯ ಭಾಗಗಳಲ್ಲಿ ನಗರ 15 ಮೈ. ದೂರ ವ್ಯಾಪಿಸಿಕೊಂಡಿತು. ಐರೋಪ್ಯೇತರ ಜನರ ಬಡಾವಣೆಗಳು ನಗರದ ಪಶ್ಚಿಮ ಮತ್ತು ನೈಋತ್ಯದ ಕಡೆ ವಿಸ್ತರಿಸಿಕೊಂಡಿತು.

ನಗರದ ವಿಶೇಷಗಳು

ಬದಲಾಯಿಸಿ

ನಗರದ ಮುಖ್ಯ ಕಟ್ಟಡಗಳು ಎಲಾಫ್ ಬೀದಿಯಲ್ಲಿವೆ. ಇದು ಮುಖ್ಯ ವ್ಯಾಪಾರಸ್ಥಳ. ಕಮೀಷನರ್ ಸ್ಟ್ರೀಟ್. ಫಾಕ್ಸ್ ಸ್ಟ್ರೀಟ್-ಇವು ಇತರ ವಾಣಿಜ್ಯ ಕೇಂದ್ರಗಳು. ನಗರದ ಈ ಭಾಗದಲ್ಲಿರುವ ಕಟ್ಟಡಗಳೆಂದರೆ : ಸ್ಟಾಕ್ ಎಕ್ಸ್‍ಚೇಂಜ್ (1961), ಪುರಭವನ (1915), ಆಫ್ರಿಕಾನಾ ಮ್ಯೂಸಿಯಂ (1935), ಭೂವಿಜ್ಞಾನ ವಸ್ತುಸಂಗ್ರಹಾಲಯ (1890), ವಿಟ್ ವಾಟೆರ್ಸ್ ರಾಂಡ್ ತಾಂತ್ರಿಕ ಕಾಲೇಜು (1904), ನ್ಯಾಯಾಲಯಗಳು (1910), ಅಂಚೆಕಚೇರಿ (1935), ಆಂಗ್ಲಿಕನ ಚರ್ಚ್ (1926) ಮತ್ತು ಪ್ರಸಿದ್ಧ ಹೋಟಲುಗಳು. ನಗರದ ಈ ಭಾಗಕ್ಕೆ ಈಶಾನ್ಯದಲ್ಲಿ ಕಲಾಭವನ (1915) ಮತ್ತು ಜೋಬರ್ಟ್ ಪಾರ್ಕ್ ಇವೆ. ಉತ್ತರದಲ್ಲಿ ಆಸ್ಪತ್ರೆಗಳು, ಜೊಹ್ಯಾನಿಸ್‍ಬರ್ಗ್ ಶಿಕ್ಷಣ ಕಾಲೇಜು ಮತ್ತು ನಾಟಕಶಾಲೆ (1962) ಇವೆ.

ಮಿಲ್ನರ್ ಪಾರ್ಕ್‍ನಲ್ಲಿರುವ ವಿಟ್ ವಾಟರ್ಸ ರಾಂಡ್ ವಿಶ್ವವಿದ್ಯಾಲಯವನ್ನು 1922ರಲ್ಲಿ ಸ್ಥಾಪಿಸಲಾಯಿತು. ಪ್ರಾಣಿಸಂಗ್ರಹಾಲಯ ಮತ್ತು ದಕ್ಷಿಣ ಆಫ್ರಿಕ ರಾಷ್ಟ್ರೀಯ ಸಮರ ವಸ್ತುಸಂಗ್ರಹಾಲಯ ಎಕ್ಸ್‍ಟೀನ್ ಪಾರ್ಕಿನಲ್ಲಿವೆ. ನಗರದಲ್ಲಿ ಖಗೋಳ ವೀಕ್ಷಣಾಲಯವೊಂದಿದೆ. ಜಾರ್ಜ್ ಹ್ಯಾರಿಸನ್ ಪಾರ್ಕ್ ನಗರದ ಪಶ್ಚಿಮ ಸರಹದ್ದಿನಲ್ಲಿದೆ. 1886ರಲ್ಲಿ ಚಿನ್ನದ ಪದರಗಳ ಬಂಡೆಗಳನ್ನು ಈ ಪ್ರದೇಶದಲ್ಲಿ ಕಂಡುಹಿಡಿದ ಆಸ್ಟ್ರೇಲಿಯದ ಗಣಿತಜ್ಞ ಹ್ಯಾರಿಸನನ ಹೆಸರನ್ನೇ ಈ ಪಾರ್ಕಿಗೆ ಇಡಲಾಗಿದೆ. ನಗರದ ದಕ್ಷಿಣದಲ್ಲಿ ಟರ್ಫಾಂಟೀನ್ ರೇಸ್‍ಕೋರ್ಸ್, ಆಟದ ಬಯಲು, ಚಿನ್ನದ ಗಣಿಗಳ ಮಣ್ಣಿನ ರಾಶಿ ಇವೆ. ದಕ್ಷಿಣ ಆಫ್ರಿಕದ ಅರಣ್ಯ ಪುಷ್ಪಗಳ ಉದ್ಯಾನ ಮತ್ತು ಮೆಲ್‍ರೋಸ್ ಪಕ್ಷಿಧಾಮ ನಗರದ ಉತ್ತರದಲ್ಲಿ ಇವೆ. ಪಕ್ಷಿಧಾಮದಲ್ಲಿ 100 ಬಗೆಯ ಪಕ್ಷಿಗಳಿವೆ.

ವರ್ಣಭೇದ

ಬದಲಾಯಿಸಿ

ಕುಟುಂಬಗಳನ್ನು ದೂರದ ಗ್ರಾಮಗಳಲ್ಲಿ ಬಿಟ್ಟು ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬರುತ್ತಿದ್ದ ಆಫ್ರಿಕದ ಬ್ಯಾಂಟೂ ಜನ 1920ರ ವರೆಗೆ ತಮ್ಮನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದ ಬಿಳಿಯರ ಮನೆಯ ಆವರಣಗಳಲ್ಲಿಯೇ ವಾಸವಾಗಿರುತ್ತಿದ್ದರು. ಕ್ರಮೇಣ ಇವರು ತಮ್ಮ ಕುಟುಂಬಗಳನ್ನು ನಗರಕ್ಕೆ ತಂದು ಅಲ್ಲೇ ನೆಲೆಸತೊಡಗಿದರು. 1923ರ ಅಧಿನಿಯಮದ ಪ್ರಕಾರ ಬ್ಯಾಂಟೂ ಜನಾಂಗದವರಿಗೆ ವಾಸಗೃಹಗಳನ್ನು ಒದಗಿಸುವ ಹೊಣೆ ಸ್ಥಳೀಯ ಅಧಿಕಾರಿಗಳ ಮೇಲೆ ಬಿತ್ತು. ಅಷ್ಟು ಹೊತ್ತಿಗೆ ನಗರಸಭೆ ಪುರಭವನದ ನೈಋತ್ಯಕ್ಕೆ 10 ಮೈ. ದೂರದಲ್ಲಿ ಸ್ಥಳೀಯ ಜನರ ವಸತಿಗೆ ವ್ಯವಸ್ಥೆ ಮಾಡಿತು. ಪುರಭವನದ ಪಶ್ಚಿಮಕ್ಕೆ 4 ಮೈ. ದೂರದಲ್ಲಿ ಬ್ಯಾಂಟೂ ಕುಟುಂಬಗಳಿಗೆ 2,000 ಮನೆಗಳನು ಕಟ್ಟಿಕೊಟ್ಟಿತು. 1951ರ ಹೊತ್ತಿಗೆ 11,000 ಮನೆಗಳಾದುವು. ಸುಲಭ ಬೆಲೆಗೆ ಮನೆಗಳನ್ನು ಕೊಟ್ಟ ಕಾರಣ ನಗರಸಭೆಗೆ 3,00,000 ಪೌಂಡುಗಳ ವೆಚ್ಚವಾಯಿತು. ಕೊನೆಗೆ ಮಿತ ಬಾಡಿಗೆಗೆ ಅನುಕೂಲವಾದ ಮನೆಗಳನ್ನು ಕಟ್ಟಿಸುವ ವ್ಯವಸ್ಥೆಯಾಯಿತು. 1961ರ ಹೊತ್ತಿಗೆ ನಗರಸಭೆ 57,827 ಕುಟುಂಬಗಳಿಗೂ 20,000 ಅವಿವಾಹಿತರಿಗೂ ಮನೆಗಳನ್ನು ಒದಗಿಸಿತು. ಬ್ಯಾಂಟೂ ಜನ ವಾಸಿಸುವ ಭಾಗಕ್ಕೆ ಸೊವಿಟೊ ಎಂದು ಹೆಸರು. ಈತ ಅದರ ವಿಸ್ತಾರ 25 ಚ. ಮೈ. ವರ್ಣೀಯರನ್ನು ಪ್ರತ್ಯೇಕವಾಗಿಡುವ ದಕ್ಷಿಣ ಆಫ್ರಿಕದ ಬಿಳಿಯರ ಸ್ವಾರ್ಥನೀತಿ ಈ ನಗರದಲ್ಲೂ ಜಾರಿಯಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ
  1. "Chronological order of town establishment in South Africa based on Floyd (1960:20–26)" (PDF). pp. xlv–lii. Archived from the original (PDF) on 2019-07-13. Retrieved 2021-08-09.
  2. "Johannesburg". Census 2011.
  3. " Population of Johannesburg


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: