ಜೊಲ್‍ಪಾನ್ ಪದವು ಅಸ್ಸಾಮಿ ಪಾಕಶೈಲಿಯಲ್ಲಿ ಲಘು ಆಹಾರಗಳನ್ನು ಸೂಚಿಸುತ್ತದೆ. ಇವನ್ನು ಹಲವುವೇಳೆ ಬೆಳಗ್ಗಿನ ತಿಂಡಿಯ ವೇಳೆ ಬಡಿಸಲಾಗುತ್ತದಾದರೂ, ಇವನ್ನು ಬಿಹು ಹಬ್ಬಗಳು ಅಥವಾ ವಿವಾಹಗಳಲ್ಲಿ ಕೂಡ ಬಡಿಸಬಹುದು.[] ಜೊಲ್‍ಪಾನ್ ಶಬ್ದವು ಎಲ್ಲ ತಯಾರಿಕೆಗಳನ್ನು ಒಳಗೊಳ್ಳುತ್ತದೆ, ಅವೆಂದರೆ ಜೊಲ್‍ಪಾನ್, ಪೀಠಾ, ಲಾರು, ಮತ್ತು ಚಹಾ. ಬೆಳಗ್ಗಿನ ತಿಂಡಿಗೆ ಬಡಿಸಲಾದ ಇತರ ಸಾಮಾನ್ಯ ಜೊಲ್‍ಪಾನ್‍ಗಳೆಂದರೆ ರೋಟಿ, ಲುಚಿ, ಘುಗನಿ ಮತ್ತು ಕೆಲವೊಮ್ಮೆ ಪರಾಠಾ ಇತ್ಯಾದಿ.

ಜೊಲ್‍ಪಾನ್‍ನ ವೈವಿಧ್ಯಗಳಲ್ಲಿ ಬೋರಾ ಸಾಉಲ್, ಕೋಮಲ್ ಸಾಉಲ್, ಶಾಂಡೊ, ಚೀರಾ, ಮುರಿ, ಮೊಸರು, ಬೆಲ್ಲದ ಜೊತೆಗೆ ಅಖೋಯಿ ಹಾಗೂ ವಿವಿಧ ಪೀಠಾ ಸೇರಿವೆ.

ಪೀಠಾ ಎಂದರೆ ಅಕ್ಕಿಯ ಖಾದ್ಯ ಅಥವಾ ಪ್ಯಾನ್‍ಕೇಕ್. ಇದು ತೆಳುವಾದ ಚಪ್ಪಟೆಯ ಖಾದ್ಯವಾಗಿದ್ದು ಇದನ್ನು ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಬಿಸಿ ತವಾ ಅಥವಾ ಬಾಣಲೆಯ ಮೇಲೆ ತಯಾರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Joe Bindloss Northeast India - Page 66 2009 "The Assamese are fond of chira – unhusked rice, beaten flat and softened with yoghurt and jaggery (palm sugar) for breakfast. This is just one of dozens of jolpan.. ."


ಹೊರಗಿನ ಕೊಂಡಿಗಳು

ಬದಲಾಯಿಸಿ