ಜೇಮ್ಸ್ ಪೀಸ್
ಕೆನ್ನೆತ್ ಜೇಮ್ಸ್ ಪೀಸ್ (ಆಂಗ್ಲ: Kenneth James Peace), ದಿನಾಂಕ ಸೆಪ್ಟೆಂಬರ್ ೨೮, ೧೯೬೩ ರಂದು ಪೇಸ್ಲೀಯಲ್ಲಿ (ಆಂಗ್ಲ: Paisley) ಜನಿಸಿದರು. ಅವರೊಬ್ಬ ಸಂಯೋಜಕರು, ಪಿಯಾನೋ ವಾದಕರು ಹಾಗೂ ದೃಶ್ಯ ಕಲಾವಿದರು.
ಜೀವನ
ಬದಲಾಯಿಸಿಕೆನ್ನೆತ್ ಜೇಮ್ಸ್ ಪೀಸ್ ಸೆಪ್ಟೆಂಬರ್ ೨೮, ೧೯೬೩ ರಂದು ಸ್ಕಾಟ್ಲ್ಯಾಂಡ್‌ನ ಪೇಸ್ಲೀಯಲ್ಲಿ ಜನಿಸಿದರು.[೧][೨] ಅವರು ತಮ್ಮ ಬಾಲ್ಯದ ಹೆಚ್ಚಿನ ಭಾಗವನ್ನು ಪಶ್ಚಿಮ ಸ್ಕಾಟ್ಲ್ಯಾಂಡಿನ ಸಮುದ್ರ ತೀರದಲ್ಲಿರುವ ಹೆಲೆನ್ಸ್‌ಬರಾದಲ್ಲಿ (ಆಂಗ್ಲ: Helensburgh) ಕಳೆದರು.[೧][೩] ಅವರ ಕುಟುಂಬದಲ್ಲಿ ಅನೇಕ ಕಲಾವಿದರಿದ್ದರು (ಆಂಗ್ಲ: John McGhie). ಅವರು ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದ ಜನಪ್ರಿಯ ನೃತ್ಯ ಸಂಗೀತ ಸಂಯೋಜಕರಾಗಿದ್ದ ಫೆಲಿಕ್ಸ್ ಬರ್ನ್ಸ್‌ರ (ಆಂಗ್ಲ: Felix Burns) ಸಂಬಂಧಿ. ತಮ್ಮ ಎಂಟನೆಯ ವಯಸ್ಸಿನಲ್ಲಿ ಪಿಯಾನೋ ಕಲಿಕೆಯನ್ನು ಪ್ರಾರಂಭಿಸಿ ಹದಿನಾಲ್ಕನೇ ವಯಸ್ಸಿನಲ್ಲಿ ಸ್ಕಾಟ್ ಜಾಪ್ಲಿನ್ (ಆಂಗ್ಲ: Scott Joplin) ಅವರ ಸಂಗೀತದೊಂದಿಗೆ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಅದಾದ ಎರಡು ವರ್ಷಗಳ ನಂತರ ಸಂಗೀತ ಮತ್ತು ನಾಟಕಗಳ ರಾಯಲ್ ಸ್ಕಾಟಿಷ್ ಅಕಾಡೆಮಿಯಲ್ಲಿ ಅತ್ಯಂತ ಕಿರಿಯ ಪೂರ್ಣಾವಧಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು (ಈಗ ಅದಕ್ಕೆ ರಾಜಮನೆತನದ ಸಂರಕ್ಷಣಾಲಯ ಎಂಬ ಹೆಸರಿದೆ - ಆಂಗ್ಲ: Royal Conservatoire of Scotland).[೧][೨][೩][೪] ೧೯೮೩ ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ (ಅಂಗ್ಲ: Glasgow University) ಪಿಯಾನೋ ಬೋಧನೆಯಲ್ಲಿ B.A.,[೪][೫] ಪದವಿ ಪಡೆದರು. ಮರುವರ್ಷವೇ ಆರ್‌ಎಸ್‌ಎಎಮ್‌ಡಿ ವಾದ್ಯವೃಂದದಲ್ಲಿ ಮೆಂಡೆಲ್‌ಸನ್ ಪಿಯಾನೊ ಕಛೇರಿ ನಡೆಸಿಕೊಡುವುದರೊಂದಿಗೆ ಸಂಗೀತ ನಿರ್ವಹಣೆಯಲ್ಲಿ ಡಿಪ್ಲೊಮಾ ಪಡೆದರು.[೧] ಸಾಂಪ್ರದಾಯಿಕ ಓದನ್ನು ನಿಲ್ಲಿಸಿದಮೇಲೆ ಪಿಯಾನೋ ವಾದಕರಾಗಿ ಬಹು ಬೇಡಿಕೆಯಲ್ಲಿದ್ದು ೧೯೮೧ ರಿಂದ ೧೯೯೧ ರವರೆಗೆ ಎಡಿನ್‌ಬರಾದಲ್ಲಿ ವಾಸವಾಗಿದ್ದರು.[೧][೩]
ಜೇಮ್ಸ್ ಪೀಸ್ ೧೯೯೧ರಿಂದ ೨೦೦೯ ರವರೆಗೆ ಜರ್ಮನಿಯ (ಜರ್ಮನ್: Bundesrepublik Deutschland) ಬದ್‌ನೌಹೀಮ್‌ನಲ್ಲಿ ನೆಲೆಸಿದ್ದರು.[೬][೭][೮] ೧೯೯೮ ರಿಂದ ಟ್ಯಾಂಗೊ ಕುರಿತು ಅಭ್ಯಾಸ ಮಾಡಿ ಸ್ವಯಂ ಸ್ಫೂರ್ತಿಯಿಂದ ಪಿಯಾನೊ ಸಂಯೋಜನೆಯ "ಟ್ಯಾಂಗೊ ಎಸ್ಕೋಸಿಸ್" (ಆಂಗ್ಲ: Scottish Tango)[೮][೯] ಎಂಬ ಸಿ.ಡಿ.ಯನ್ನು ನಿರ್ಮಾಣ ಮಾಡಿದರು, ಮತ್ತು ೨೦೦೨ ರಲ್ಲಿ ವಿಕ್ಟೋರಿಯಾ ಸಂಗೀತ ಕಾಲೇಜಿನ (ಆಂಗ್ಲ: Victoria College of Music) ಗೌರವ ಸದಸ್ಯರಾದರು.[೩][೮] ಅದೇ ವರ್ಷ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳಿನಲ್ಲಿ ಉತ್ತರ ಜರ್ಮನಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಪ್ರವಾಸವನ್ನು ಕೈಗೊಂಡರು, ಮತ್ತು ನವೆಂಬರ್ ತಿಂಗಳಿನಲ್ಲಿ ಪೂರ್ವ ದೇಶಗಳತ್ತ ಹೊರಟು ಹಾಂಗ್‌ಕಾಂಗ್‍ನಲ್ಲಿ "ಟ್ಯಾಂಗೊ ೧೭" ಮೊದಲ ಪ್ರದರ್ಶನವನ್ನು ನೀಡಿದರು.[೮][೧೦][೧೧]
ಮುಂದಿನ ವರ್ಷಗಳಲ್ಲಿ ಅವರು ಪ್ರದರ್ಶನಗಳನ್ನು ಯೂರೋಪಿನಲ್ಲಿಯೇ ಕೇಂದ್ರೀಕರಿಸಿದರು. ಟ್ಯಾಂಗೊದ ಅವರ ಸ್ವಂತ ರಚನೆಗಳನ್ನು ಈ ಕೆಳಕಂಡ ರಾಜಧಾನಿ ನಗರಗಳಲ್ಲಿ ಪ್ರದರ್ಶಿಸಿದರು: ಆಮ್ಸ್‌ಟರ್‌ಡ್ಯಾಮ್, ಅಥೆನ್ಸ್,[೧೨] ಬರ್ಲಿನ್,[೧೩] ಬ್ರುಸಲ್ಸ್, ಹೆಲ್ಸಿಂಕಿ,[೧೪] ಲಿಸ್ಬನ್,[೧೫] ಲಂಡನ್, ಮಡ್ರಿಡ್,[೧೬] ಓಸ್ಲೋ,[೧೭][೧೮] ರೀಕಾವಿಕ್[೧೯] ಮತ್ತು ವಿಯೆನ್ನ.[೨೦]
ಟ್ಯಾಂಗೊ ಸಂಗೀತ ಪ್ರಕಾರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ೨೦೦೮ ರಲ್ಲಿ ಲಂಡನ್ ಸಂಗೀತ ಕಾಲೇಜು (ಆಂಗ್ಲ: London College of Music) ಇವರಿಗೆ ಗೌರವ ಸದಸ್ಯತ್ವ ನೀಡಿತು.[೧]
ಕೆಲಕಾಲದ ಎಡಿನ್‌ಬರಾ ವಾಸದ ನಂತರ ಫೆಬ್ರುವರಿ,[೩] ೨೦೧೦ ರಲ್ಲಿ ವೀಸ್‌ಬಾಡೆನ್‌ನಲ್ಲಿ (ಜರ್ಮನ್: Wiesbaden) ನೆಲೆಸಲು ಅವರು ಜರ್ಮನಿಗೆ ಹಿಂತಿರುಗಿದರು.[೧][೨] ಇದು ಅವರಿಗೆ ಹೊಸ ಕ್ರಿಯಾಶೀಲತೆಯನ್ನು ನೀಡಿತು. ತಮ್ಮದೇ ರಚನೆಗಳ ಕಿರುಚಲನಚಿತ್ರಗಳನ್ನು ಮಾಡಿದರು. ಈ ಪ್ರಕಾರದಲ್ಲಿ "ವೀಸ್‌ಬಾಡೆನ್‌ನಲ್ಲಿ ಜೇಮ್ಸ್ ಪೀಸ್" ಎಂಬ ಸಾಕ್ಷ್ಯಚಿತ್ರ ಪ್ರಮುಖವಾದುದು.[೨೧][೨೨]
ಪ್ರಶಸ್ತಿಗಳು ಮತ್ತು ಬಹುಮಾನಗಳು
ಬದಲಾಯಿಸಿ● ಮೊದಲ ಬಹುಮಾನ, "ಆಗ್ನೆಸ್ ಮಿಲ್ಲರ್" ಸ್ಪರ್ಧೆ (ಆಂಗ್ಲ: Agnes Millar Prize for sight-reading). ಗ್ಲಾಸ್ಗೊ, ೧೯೮೩[೪]
● ಮೊದಲ ಬಹುಮಾನ, "ಡನ್‌ಬಾರ್ಟನ್‌ಷೈರ್ ಇ.ಐ.ಎಸ್" ಸ್ಪರ್ಧೆ (ಆಂಗ್ಲ: Dunbartonshire E.I.S. Prize for piano accompaniment). ಗ್ಲಾಸ್ಗೊ, ೧೯೮೪[೪]
● ಮೊದಲ ಬಹುಮಾನ, ಸಿಬೆಲಿಯಸ್ ಪ್ರಬಂಧ ಸ್ಪರ್ಧೆ. ಗ್ಲಾಸ್ಗೊ, ೧೯೮೫[೪]
● ಡಿಪ್ಲೊಮಾ, ಟಿ.ಐ.ಎಮ್. ಅಂತಾರಾಷ್ಟ್ರೀಯ ಸಂಯೋಜನಾ ಸ್ಪರ್ಧೆ (ಇಟಾಲಿಯನ್: Torneo Internazionale di Musica). ರೋಮ್, ೨೦೦೦[೧][೨][೫]
● ಡಿಪ್ಲೊಮಾ, ಐಬಿಎಲ್‌ಎ ಫೌಂಡೇಷನ್. ನ್ಯೂ ಯಾರ್ಕ್, ೨೦೦೨[೧][೨][೫]
● ಸಂಸ್ಮರಣಾ ಪದಕ (ಮೊದಲ ದರ್ಜೆ), ಅಂತಾರಾಷ್ಟ್ರೀಯ ಪಿಯಾನೊ ಡ್ಯೂಯೊ ಸಂಘ. ಟೋಕಿಯೊ, ೨೦೦೨[೧][೩][೫][೮][೨೩]
● ಚಿನ್ನದ ಪದಕ, ಲೂಟೀಸ್ ಅಂತಾರಾಷ್ಟ್ರೀಯ ಸಂಘ (ಫ್ರೆಂಚ್: Internationale Académie de Lutèce). ಪ್ಯಾರಿಸ್, ೨೦೦೫[೧][೩]
ಮುಖ್ಯ ರಚನೆಗಳು
ಬದಲಾಯಿಸಿ• ಜಲಪಾತ (ಆಂಗ್ಲ: The Waterfall)[೨೪]
• ಐಡಿಲ್ (ಆಂಗ್ಲ: Idyll)
• ಉದಯ ರಾಗ (ಫ್ರೆಂಚ್: Aubade)
• ಮೌನ ಕಣ್ಣೀರು (ಆಂಗ್ಲ: Silent Tears)
• ಮರೆತುಹೋದ ಎಲೆಗಳು (ಆಂಗ್ಲ: Forgotten Leaves)
• ಓಬೋ ಸೊನಾಟಾ (ಆಂಗ್ಲ: Oboe Sonata)
• ಬ್ಯಾಲಡ್ (ಆಂಗ್ಲ: Ballade)
• ಉತ್ಸವದ ಮೆರವಣಿಗೆ - ೧ (ಆಂಗ್ಲ: Ceremonial March No.1)
• ಉತ್ಸವದ ಮೆರವಣಿಗೆ - ೨ (ಆಂಗ್ಲ: Ceremonial March No.2)
• ಶರತ್ಕಾಲದ ಚಿನ್ನ (ಆಂಗ್ಲ :Autumn Gold)[೨೫]
• ಶಾಶ್ವತ ಗೀತೆ (ಆಂಗ್ಲ: Eternal Song)[೧]
• ಜಾರ್ಜಿಯಾಗಾಗಿ (ಜಾರ್ಜಿಯಾ ಭಾಷೆ: საქართველოსთვის)
ಸಾಹಿತ್ಯ: ತಮರ್ ಚಿಕ್ವಾಯ್ಜ್, ಝುರಚ್ ಚಿಕ್ವಾಯ್ಜ್ ಮತ್ತು ಜೇಮ್ಸ್ ಪೀಸ್
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ Birgitta Lampert. “ಕರ್ಕಶ ಶಬ್ದವಿಲ್ಲದೆ”. Wiesbadener Tagblatt (ಜರ್ಮನ್ ವೃತ್ತಪತ್ರಿಕೆ), ೧೦ ಫೆಬ್ರುವರಿ, ೨೦೧೧
- ↑ ೨.೦ ೨.೧ ೨.೨ ೨.೩ ೨.೪ Julia Anderton. “ಸಿಹಿಕಹಿ ಕತೆಯಂತೆ ಟ್ಯಾಂಗೊ”. Wiesbadener Kurier (ಜರ್ಮನ್ ವೃತ್ತಪತ್ರಿಕೆ), ೨೪ ಮಾರ್ಚ್ ೨೦೧೨
- ↑ ೩.೦ ೩.೧ ೩.೨ ೩.೩ ೩.೪ ೩.೫ ೩.೬ Sabine Klein. “ನನ್ನ ಸಂಗೀತ ನನ್ನಂತೆ ಬಹಳ ರಮ್ಯ”. Frankfurter Rundschau (ಜರ್ಮನ್ ವೃತ್ತಪತ್ರಿಕೆ), ೧೯೯೨. ಸಂಚಿಕೆ ಸಂಖ್ಯೆ ೨೫೪, ಪುಟ ೨
- ↑ ೪.೦ ೪.೧ ೪.೨ ೪.೩ ೪.೪ G. Müller. “ಪಿಯಾನೊದ ಆತ್ಮ ಟ್ಯಾಂಗೊ ನರ್ತನ ಮಾಡುತ್ತದೆ”. Kulturspiegel (ಜರ್ಮನ್ ವೃತ್ತಪತ್ರಿಕೆ), ೧೭ ವೆುೕ, ೨೦೦೧. ಪುಟ ೨
- ↑ ೫.೦ ೫.೧ ೫.೨ ೫.೩ Deutsche Nationalbibliothek. “ಜೇಮ್ಸ್ ಪೀಸ್”
- ↑ ಜೇಮ್ಸ್ ಪೀಸ್. FRIZZ (ಜರ್ಮನ್ ವೃತ್ತಪತ್ರಿಕೆ). ಜನವರಿ, ೨೦೦೨, ಪುಟ ೫
- ↑ Manfred Merz. “ಕಲಾಭಿಜ್ಞತೆ ಮತ್ತು ಸೂಕ್ಷ್ಮತೆಯಿಂದ ಕೂಡಿದ ವರ್ಣಮಯ ರಮ್ಯಲೋಕ”. Wetterauer Zeitung (ಜರ್ಮನ್ ವೃತ್ತಪತ್ರಿಕೆ). ೧೨ ಡಿಸೆಂಬರ್, ೧೯೯೨, ಪುಟ ೧೯
- ↑ ೮.೦ ೮.೧ ೮.೨ ೮.೩ ೮.೪ “ಜೇಮ್ಸ್ ಪೀಸ್”. The Tango Times (ನ್ಯೂಯಾರ್ಕ್ ವೃತ್ತಪತ್ರಿಕೆ), ಚಳಿಗಾಲದ ಸಂಚಿಕೆ ೨೦೦೨/೨೦೦೩. ಸಂಚಿಕೆ ಸಂಖ್ಯೆ ೩೯, ಪುಟಗಳು ೧‒೫
- ↑ ೯.೦ ೯.೧ National Library of Scotland. “Tango escocès”
- ↑ TangoTang (ಸುದ್ದಿಪತ್ರ). ಹಾಂಗ್ ಕಾಂಗ್, ೮ ಅಕ್ಟೋಬರ್, ೨೦೦೨
- ↑ “ಜೇಮ್ಸ್ ಪೀಸ್”. South China Morning Post (ಹಾಂಕಾಂಗ್ ವೃತ್ತಪತ್ರಿಕೆ). ೯ ಅಕ್ಟೋಬರ್, ೨೦೦೨
- ↑ ಸಂಗೀತ ಕಾರ್ಯಕ್ರಮದ ಕರಪತ್ರ {Για σένα, Αγγελική}. ಅಥೆನ್ಸ್, ೨೭ ಅಕ್ಟೋಬರ್, ೨೦೧೬
- ↑ Tangodanza (ಜರ್ಮನ್ ವೃತ್ತಪತ್ರಿಕೆ). ಸಂಚಿಕೆ ಸಂಖ್ಯೆ ೧/೨೦೦೨, ಪುಟ ೯
- ↑ ಸಂಗೀತ ಕಛೇರಿಯ ಪೋಸ್ಟರ್ (ಫಿನ್ಲೆಂಡ್ ಸಂಗೀತ ಪ್ರದರ್ಶನ ಪ್ರವಾಸ, ೨೦೧೪)
- ↑ ಸಂಗೀತ ಕಛೇರಿಯ ಪೋಸ್ಟರ್ (ಪೋರ್ಚುಗಲ್ ಸಂಗೀತ ಪ್ರದರ್ಶನ ಪ್ರವಾಸ, ೨೦೧೬)
- ↑ ಸಂಗೀತ ಕಛೇರಿಯ ಪೋಸ್ಟರ್, “¡Feliz cincuenta cumpleaños - 2013!” (ಸ್ಪೇನ್ ಸಂಗೀತ ಪ್ರದರ್ಶನ ಪ್ರವಾಸ)
- ↑ La Cadena (ಡಚ್ ನಿಯತಕಾಲಿಕೆ). ಸೆಪ್ಟೆಂಬರ್ ೨೦೦೨, ಪುಟ ೨೬
- ↑ Listen.no.: Konsert, ಜೇಮ್ಸ್ ಪೀಸ್ (ಪಿಯಾನೋ). Munch Museum (ಓಸ್ಲೋ). ೧೬ ಅಕ್ಟೋಬರ್, ೨೦೦೪
- ↑ Ríkarður Ö. Pálsson. “Skozkir Slaghörputangoár”. Morgunblaðið (mbl). ರೀಕಾವಿಕ್, ೧೪ ಅಕ್ಟೋಬರ್, ೨೦೦೪
- ↑ ಸಂಗೀತ ಕಾರ್ಯಕ್ರಮದ ಕರಪತ್ರ. ವಿಯೆನ್ನಾ. ೨೩ ಜನವರಿ, ೨೦೦೫
- ↑ ೨೧.೦ ೨೧.೧ National Library of Scotland. “James Peace in Wiesbaden”
- ↑ ೨೨.೦ ೨೨.೧ Deutsche Nationalbibliothek. “James Peace in Wiesbaden”
- ↑ ಅಂತಾರಾಷ್ಟ್ರೀಯ ಪಿಯಾನೊ ಸಂಘ (ಟೋಕಿಯೊ) ಬಹುಮಾನ ವಿಜೇತರ ಯಾದಿ, ೨೦೦೨
- ↑ Staatstheater Wiesbaden (ಸಂಗೀತ ಕಾರ್ಯಕ್ರಮದ ಕರಪತ್ರ). ೧೨/೧೯ ಸೆಪ್ಟೆಂಬರ್, ೨೦೨೧
- ↑ Schwäbische Post. “ಪಿಟೀಲಿನ ಶಬ್ದ ವಾದ್ಯಸಂಗೀತದ ಮೇಲೇರಿದೆ”. ೪ ಜೂನ್, ೧೯೯೪