ಜೇಮ್ಸ್ ಕ್ಯಾಮೆರಾನ್

ಜೇಮ್ಸ್ ಫ್ರಾನ್ಸಿಸ್ ಕ್ಯಾಮೆರಾನ್ (ಜನನ ಆಗಸ್ಟ್ ೧೬, ೧೯೫೪) ಒಬ್ಬ ಕೆನೇಡಿಯನ್ ಚಲನಚಿತ್ರ ನಿರ್ಮಾಪಕ, ಆವಿಷ್ಕಾರಿ, ಎಂಜಿನಿಯರ್, ಫಿಲಾಂತ್ರೊಪಿಸ್ಟ್, ಮತ್ತು ಸಮುದ್ರ-ಆಳದ ಅನ್ವೇಷಕರಾಗಿದ್ದಾರೆ. ದಿ ಟರ್ಮಿನೇಟರ್ (೧೯೮೪) ಎಂಬ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಚಲನಚಿತ್ರದ ಮೂಲಕ ಇವರು ತಮ್ಮ ಪ್ರಥಮ ಪ್ರಮುಖ ಯಶಸ್ಸನ್ನು ಕಂಡುಕೊಂಡರು. ಅನಂತರ ಅವರು ಹಾಲಿವುಡ್‌ನ ಸುಪ್ರಸಿದ್ಧ ನಿರ್ದೇಶಕರಾದರು. ಏಲಿಯನ್ಸ್ (೧೯೮೬) ರಚಿಸಲು ಮತ್ತು ನಿರ್ದೇಶಿಸಲು ಅವರನ್ನು ನೇಮಿಸಲಾಯಿತು; ಮೂರು ವರ್ಷಗಳ ನಂತರ ಅವರು ದಿ ಅಬಿಸ್ (೧೯೮೯) ಚಿತ್ರವನ್ನು ನಿರ್ದೇಶಿಸಿದರು.

ಜೇಮ್ಸ್ ಕ್ಯಾಮೆರಾನ್
ಜೇಮ್ಸ್ ಕ್ಯಾಮೆರಾನ್
ಜನನ
ಜೇಮ್ಸ್ ಫ್ರಾನ್ಸಿಸ್ ಕ್ಯಾಮರಾನ್

೧೬ ಆಗಸ್ಟ್ ೧೯೫೪
ಕಾಪುಸ್ಕಾಸಿನ್ಗ್, ಒಂಟಾರಿಯೊ, ಕೆನಡಾ
ವಿದ್ಯಾಭ್ಯಾಸಬ್ರಿಯಾ ಒಲಿಂಡ ಹೈಸ್ಕೂಲ್
ವೃತ್ತಿ(ಗಳು)ಚಿತ್ರ ನಿರ್ಮಾಪಕ, ಪರಿಸರವಾದಿ, ಸಂಶೋಧಕ, ಲೋಕೋಪಕಾರಿ
ಹೆಸರಾಂತ ಕೆಲಸಗಳುಅವತಾರ್, ಟೈಟಾನಿಕ್, ಎಲಿಯನ್ಸ್, ಟರ್ಮಿನೇಟರ್, ಟರ್ಮಿನೇಟರ್ 2: ಜಡ್ಜ್ಮೆಂಟ್ ಡೇ, ದಿ ಅಬಿಸ್
ಸಂಗಾತಿ(s)ಶರೋನ್ ವಿಲಿಯಮ್ಸ್ (1978-84),
ಗೇಲ್ ಅನ್ನಿ ಹರ್ಡ್ (1985-89),
ಕ್ಯಾಥರಿನ್ ಬಿಗೆಲೊ (1989-91),
ಲಿಂಡಾ ಹ್ಯಾಮಿಲ್ಟನ್ (1997-99),
ಸುಜ಼ಿ ಅಮಿಸ್ (2000-ಇಲ್ಲಿಯವರೆಗೆ)

ಟರ್ಮಿನೇಟರ್ ೨: ಜಡ್ಜ್‌ಮೆಂಟ್ ಡೇ (೧೯೯೧)ನಲ್ಲಿ ಅವರ ಸ್ಪೆಷಲ್ ಎಫೆಕ್ಟ್ಸ್ ಬಳಕೆಗಾಗಿ ಅವರು ಮತ್ತಷ್ಟು ಪ್ರಖ್ಯಾತಿಯನ್ನು ಗಳಿಸಿದರು. ತಮ್ಮ ಟ್ರೂ ಲೈಸ್ (೧೯೯೪) ಚಿತ್ರದ ನಂತರ, ಕ್ಯಾಮೆರಾನ್ ಆ ಸಮಯದಲ್ಲಿನ ಬೃಹತ್ ಪ್ರಮಾಣದ ಚಿತ್ರ ಟೈಟಾನಿಕ್ (೧೯೯೭) ಕೈಗೆತ್ತಿಕೊಂಡರು ಮತ್ತು ಈ ಚಿತ್ರದ ಮೂಲಕ ಅವರು ಅಕಾಡೆಮಿ ಅವಾರ್ಡ್ಸ್‌ನ, ಬೆಸ್ಟ್ ಪಿಕ್ಚರ್ ಮತ್ತು ಬೆಸ್ಟ್ ಡೈರೆಕ್ಟರ್ ವರ್ಗದಲ್ಲಿ ವಿಜೇತರಾದರು. ಟೈಟಾನಿಕ್ ನಂತರ, ಅವರು ಸುಮಾರು ೧೦ ವರ್ಷಗಳ ಅವಧಿ ತೆಗೆದುಕೊಳ್ಳುವ ಒಂದು ಚಿತ್ರವನ್ನು ಆರಂಭಿಸಿದರು: ಅವರ ವೈಜ್ಞಾನಿಕ-ಕಾಲ್ಪನಿಕ ಕಥೆ ಅವತಾರ್ (೨೦೦೯)[]. ಈ ಚಿತ್ರಕ್ಕಾಗಿ ಅವರು ಅದೇ ಮೂರು ಅಕಾಡೆಮಿ ಅವಾರ್ಡ್ಸ್‌‌ಗಳಿಗೆ ನಾಮಿನೇಟ್ ಆಗಿದ್ದರು. ಟೈಟಾನಿಕ್ ಮತ್ತು ಅವತಾರ್ ಚಿತ್ರಗಳ ನಡುವಿನ ಅವಧಿಯಲ್ಲಿ, ಕ್ಯಾಮೆರಾನ್‌ರವರು ಅನೇಕ ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿಗಳನ್ನು ಚಲನಚಿತ್ರ)ಗಳನ್ನು ಸಿದ್ಧಪಡಿಸುವುದರಲ್ಲಿ ಅನೇಕ ವರ್ಷ ಕಳೆದರು (ನಿರ್ದಿಷ್ಟವಾಗಿ ಜಲಾಂತರದ ಡಾಕ್ಯುಮೆಂಟರಿಗಳು) ಮತ್ತು ಇದರ ಜೊತೆಯಲ್ಲಿಯೇ ಡಿಜಿಟಲ್ 3ಡಿ ಫ್ಯೂಶನ್ ಕ್ಯಾಮೆರಾ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದರು. ಭಾಗಶಃ ವಿಜ್ಞಾನಿ ಮತ್ತು ಭಾಗಶಃ ಕಲಾವಿದ ಎಂದು ಒಬ್ಬ ಜೀವನಚರಿತ್ರೆ ರಚನಾಕಾರರಿಂದ ವ್ಯಾಖ್ಯಾನಿಸಲ್ಪಟ್ಟ ಕ್ಯಾಮೆರಾನ್‌ರವರು, ಚಲನಚಿತ್ರ ಲೋಕಕ್ಕೂ ಮತ್ತು ರಿಮೋಟ್ ವೆಹಿಕಲ್ ತಂತ್ರಜ್ಞಾನಗಳಲ್ಲಿಯೂ ಸಹ ತಮ್ಮ ಕೊಡುಗೆ ನೀಡಿದ್ದಾರೆ.[] ೨೦೧೨ ಮಾರ್ಚ್ ೨೬ ರಂದು, ಕ್ಯಾಮೆರಾನ್‌ರವರು ಡೀಪ್‌ಸೀ ಚಾಲೆಂಜರ್ ಸಬ್‌ಮರ್ಸಿಬಲ್‌ನಲ್ಲಿ, ಮಹಾಸಾಗರದ ಆಳದ ಭಾಗವಾಗಿರುವ, ಮರಿಯಾನ ಟ್ರೆಂಚ್ ತಳವನ್ನು ತಲುಪಿದರು. ಏಕಾಂಗಿಯಾಗಿ ಹಾಗೆ ತಳಭಾಗಕ್ಕೆ ತಲುಪುವ ಪ್ರಪ್ರಥಮ ವ್ಯಕ್ತಿ ಇವರಾಗಿದ್ದಾರೆ ಮತ್ತು ಹೀಗೆ ತಳಭಾಗಕ್ಕೆ ಇಳಿದಿರುವ ವ್ಯಕ್ತಿಗಳಲ್ಲಿ ಇವರು ಮೂರನೆಯವರಾಗಿದ್ದಾರೆ.[],[],[]

ಅವರು ಟೈಟಾನಿಕ್ ಚಿತ್ರಕ್ಕಾಗಿ ಮೂರು ಅಕಾಡೆಮಿ ಅವಾರ್ಡ್ಸ್ ಗೆದ್ದಿದ್ದಾರೆ. ಕ್ಯಾಮೆರಾನ್‌‌‌‌ರವರ ನಿರ್ದೇಶನದ ಪ್ರಯತ್ನವಾಗಿ ನಾರ್ತ್ ಅಮೇರಿಕಾದಲ್ಲಿ ಒಟ್ಟು ಸುಮಾರು ಯುಎಸ್ $೨ ಬಿಲಿಯನ್ ಮತ್ತು ಪ್ರಪಂಚದಾದ್ಯಂತ ಯುಎಸ್$೬ ಬಿಲಿಯನ್ ಗಳಿಸಿದೆ. ಹಣದುಬ್ಬರಕ್ಕೆ ಸರಿಹೊಂದಿಸದೇ ಲೆಕ್ಕಿಸಿದರೆ, ಕ್ಯಾಮೆರಾನ್‌ರವರ ಟೈಟಾನಿಕ್ ಮತ್ತು ಅವತಾರ್ ಚಿತ್ರಗಳು, ಕ್ರಮವಾಗಿ $೨.೧೯ ಬಿಲಿಯನ್ ಮತ್ತು $೨.೭೮ ಬಿಲಿಯನ್ ಸಂಗ್ರಹಿಸುವ ಮೂಲಕ, ಸರ್ವಕಾಲಿಕ ಅತೀ ಹೆಚ್ಚು ಗಳಿಕೆ ಕಂಡ ಚಿತ್ರಗಳಾಗಿವೆ. ಮಾರ್ಚ್ ೨೦೧೧ ರಲ್ಲಿ, ಇವರು ಹಾಲಿವುಡ್‌ನ ಅತೀ ಹೆಚ್ಚು ಗಳಿಕೆಯ ವ್ಯಕ್ತಿ ಎಂದು ವ್ಯಾನಿಟಿ ಫೇರ್ ಹೆಸರಿಸಿತು, ಮತ್ತು ಅವರ ೨೦೧೦ರ ಅಂದಾಜಿತ ಆದಾಯವು $೨೫೭ ಮಿಲಿಯನ್ ಆಗಿತ್ತು. ಅಕ್ಟೋಬರ್ ೨೦೧೩ ರಲ್ಲಿ, ಅವರು ಸಸ್ಯಾಹಾರವನ್ನು ಸಾರ್ವಜನಿಕವಾಗಿ ಉತ್ತೇಜಿಸಿದ್ದರಿಂದ ಹಾಗೂ ಪರಿಸರ ಜಾಗೃತಿ ಮೂಡಿಸುವಲ್ಲಿ ಅವರ ಪ್ರಯತ್ನಗಳ ಗುರುತಾಗಿ, ವೆನೆಜ಼ುಲಾದಲ್ಲಿ ಗುರುತಿಸಲಾದ ಹೊಸ ಜಾತಿಯ ಕಪ್ಪೆಗೆ ಪ್ರಿಸ್ಟಿಮಾಂಟಿಸ್ ಜೇಮ್ಸ್‌ಕ್ಯಾಮೆರೊನಿ ಎಂದು ಅವರ ಹೆಸರನ್ನು ಇಡಲಾಯಿತು.[],[]

ಆರಂಭಿಕ ವೃತ್ತಿ ಜೀವನ

ಬದಲಾಯಿಸಿ
 
James Cameron in Moscow, April 2012-2

ಗ್ಸೆನೊಜೆನೆಸಿಸ್ (೧೯೭೮)ನಲ್ಲಿ ಇವರು ನಿರ್ದೇಶಕರು, ಲೇಖಕರು, ನಿರ್ಮಾಪಕರು ಮತ್ತು ಪ್ರೊಡಕ್ಷನ್ ವಿನ್ಯಾಸಕರಾಗಿದ್ದರು. ಅನಂತರ ೧೯೭೯ರಲ್ಲಿ ರಾಕ್ ಅಂಡ್ ರೋಲ್ ಹೈ ಸ್ಕೂಲ್ ಎಂಬ ಚಲನಚಿತ್ರದಲ್ಲಿ ಪ್ರೊಡಕ್ಷನ್ ಸಹಾಯಕರಾದರು, ಆದರೂ ಇವರ ಹೆಸರನ್ನು ಅದರಲ್ಲಿ ಪ್ರಕಟಿಸಲಿಲ್ಲ. ಚಲನಚಿತ್ರ-ರೂಪಿಸುವ ತಂತ್ರಜ್ಞಾನಗಳ ಬಗ್ಗೆ ತಮ್ಮ ಕಲಿಕೆಯನ್ನು ಮುಂದುವರೆಸುತ್ತಾ, ಕ್ಯಾಮರಾನ್‌ರವರು ರೊಜರ್ ಕಾರ್ಮನ್ ಸ್ಟುಡಿಯೋಸ್‌‌ನಲ್ಲಿ ಮಿನಿಯೇಚರ್-ಮಾದರಿಗಳನ್ನು ಸಿದ್ಧಪಡಿಸುವವರಾಗಿ ಕೆಲಸವನ್ನು ಆರಂಭಿಸಿದರು. ಶೀಘ್ರವಾಗಿ ತಯಾರಿಸಲ್ಪಟ್ಟ, ಕಡಿಮೆ-ಬಜೆಟ್ ಪ್ರೊಡಕ್ಷನ್‌ಗಳನ್ನು ರೂಪಿಸುವ ಕಾರ್ಯವು, ಕ್ಯಾಮರಾನ್‌ರವರಿಗೆ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಕಲಿಸಿತು. ಶೀಘ್ರದಲ್ಲೇ, ಬ್ಯಾಟಲ್ ಬಿಯಾಂಡ್ ದ ಸ್ಟಾರ್ಸ್ (೧೯೮೦) ಎಂಬ ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರದಲ್ಲಿ ಆರ್ಟ್ ನಿರ್ದೇಶಕರಾಗಿ ಉದ್ಯೋಗವನ್ನು ಪಡೆದರು.

ಜಾನ್ ಕಾರ್ಪೆಂಟರ್‌‌ರವರ ಎಸ್ಕೇಪ್ ಫ್ರಮ್ ನ್ಯೂ ಯಾರ್ಕ್ (೧೯೮೨) ಚಿತ್ರದಲ್ಲಿ ಅವರು ಸ್ಪೆಶಲ್ ಎಫೆಕ್ಟ್ಸ್ ಕೆಲಸದ ವಿನ್ಯಾಸ ಮತ್ತು ನಿರ್ದೇಶನವನ್ನು ನಡೆಸಿದರು, ಗ್ಯಾಲಕ್ಸಿ ಆಫ್ ಟೆರರ್ (೧೯೮೧) ಚಿತ್ರದಲ್ಲಿ ಪ್ರೊಡಕ್ಷನ್ ವಿನ್ಯಾಸಗಾರರಾಗಿ ಕೆಲಸ ಮಾಡಿದರು ಮತ್ತು ಆಂಡ್ರಾಯ್ಡ್ (೧೯೮೨) ಚಿತ್ರದ ವಿನ್ಯಾಸದ ಬಗ್ಗೆ ಇವರ ಸಲಹೆ ಪಡೆಯಲಾಯಿತು.

೧೯೮೧ರಲ್ಲಿ, ಪಿರಾನ ಚಿತ್ರದ ಎರಡನೇ ಭಾಗವಾದ ಪಿರಾನ II: ದ ಸ್ಪಾನಿಂಗ್ ಚಿತ್ರಕ್ಕೆ ಸ್ಪೆಶಲ್ ಎಫೆಕ್ಟ್ಸ್ ನಿರ್ದೇಶಕರಾಗಿ ಕ್ಯಾಮೆರಾನ್‌‌ರವರನ್ನು ನೇಮಿಸಿಕೊಳ್ಳಲಾಯಿತು. ಮೂಲ ನಿರ್ದೇಶಕರಾಗಿದ್ದ, ಮಿಲ್ಲರ್ ಡ್ರೇಕ್‌‌ರವರು, ನಿರ್ಮಾಪಕರಾದ ಓವಿಡಿಯೊ ಅಸ್ಸೊನಿಟಿಸ್‌‌ರವರೊಂದಿಗೆ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯ ಮಧ್ಯದಲ್ಲೇ ನಿರ್ಗಮಿಸಿದರು ಮತ್ತು ಅವರು ಕ್ಯಾಮೆರಾನ್‌‌‌ರವರಿಗೆ ಪ್ರಥಮ ಬಾರಿ ನಿರ್ದೇಶಕರಾಗಿ ಉದ್ಯೋಗವನ್ನು ನೀಡಿದರು. ಒಳಾಂಗಣ ದೃಶ್ಯಗಳನ್ನು ರೋಮ್, ಇಟಲಿಯಲ್ಲಿ ಚಿತ್ರೀಕರಿಸಲಾಯಿತು, ಮತ್ತು ನೀರಿನ-ಒಳಗಿನ ದೃಶ್ಯಗಳನ್ನು ಗ್ರಾಂಡ್ ಕೇಮನ್ ಐಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಯಿತು. ಚಲನಚಿತ್ರವನ್ನು ಜಮೈಕಾದಲ್ಲಿ ಸಿದ್ಧಪಡಿಸಲಾಯಿತು. ಆ ಸ್ಥಳದಲ್ಲಿ, ಅನೇಕ ಸಮಸ್ಯೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪ್ರೊಡಕ್ಷನ್ ನಿಧಾನವಾಯಿತು. ಕೆರೊಲ್ ಡೇವಿಸ್’ಳ ಪ್ರಥಮ ದೃಶ್ಯದಲ್ಲಿ ಆಕೆಯನ್ನು ಹತ್ತಿರದಿಂದ ಚಿತ್ರೀಕರಿಸಲು ವಿಫಲವಾದದ್ದಕ್ಕೆ ಜೇಮ್ಸ್ ಕ್ಯಾಮೆರಾನ್‌‌ರವರನ್ನು ಕೆಲಸದಿಂದ ತೆಗೆಯಲಾಯಿತು. ಮರುದಿನದ ಚಿತ್ರೀಕರ್ಣ ಆರಂಭಿಸುವ ಮುನ್ನ, ಆಕೆಯನ್ನು ಹತ್ತಿರದಿಂದ ಚಿತ್ರೀಕರಿಸಬೇಕೆಂದು ಒವಿಡಿಯೊ, ಕ್ಯಾಮೆರಾನ್‌ಗೆ ಆದೇಶಿಸಿದರು. ತಕ್ಕ ರೀತಿಯ ಬೆಳಕನ್ನು ಪುನಃ ಸೃಷ್ಟಿಸಲು ಕ್ಯಾಮೆರಾನ್ ಇಡೀ ದಿನ ರೆಸಾರ್ಟ್ ಸುತ್ತಲೂ ದೋಣಿಯಲ್ಲಿ ಓಡಾಡಿದರು, ಆದರೂ ಸಹ ಹತ್ತಿರದಿಂದ ಚಿತ್ರೀಕರಿಸಲು ವಿಫಲರಾದರು. ಅವರನ್ನು ಕೆಲಸದಿಂದ ತೆಗೆದುಹಾಕಿದ ನಂತರ, ಸ್ಥಳದಲ್ಲೇ ಇದ್ದು, ಚಿತ್ರೀಕರಣದಲ್ಲಿ ಸಹಾಯ ಮಾಡಬೇಕೆಂದು ಒವಿಡಿಯೊ, ಕ್ಯಾಮೆರಾನ್‌‌ರವರನ್ನು ಆಹ್ವಾನಿಸಿದರು. ರೋಮ್‌ಗೆ ಹೋದ ನಂತರ, ಕ್ಯಾಮೆರಾನ್‌‌ರವರು ಫೂಡ್ ಪಾಯ್ಸನಿಂಗ್‌‌ನಿಂದಾಗಿ ಅಸ್ವಸ್ಥರದಾಗ, ಒವಿಡಿಯೊರವರು ಎಡಿಟಿಂಗ್ ಮೇಲ್ವಿಚಾರಣೆಯನ್ನು ತಾವೇ ನಡೆಸಿದರು. ಅವರು ಅಸ್ವಸ್ಥರಾಗಿದ್ದಾಗ, ಭವಿಷ್ಯತ್ ಲೋಕದಿಂದ ತನ್ನನ್ನು ಕೊಲ್ಲಲೆಂದು ಕಳುಹಿಸಲ್ಪಟ್ಟ, ಯಾರಿಂದಲೂ ಸೋಲಿಸಲಾಗದ ಒಬ್ಬ ರೊಬೊಟ್ ಹಿಟ್‌ಮ್ಯಾನ್ ಬಗ್ಗೆ ವಿಚಿತ್ರ ಕನಸನ್ನು ಕಂಡರು. ಇದು ಅವರಿಗೆ ದ ಟರ್ಮಿನೇಟರ್ ಆಲೋಚನೆಯನ್ನು ನೀಡಿತು ಮತ್ತು ಅನಂತರದಲ್ಲಿ ಇದು ಅವರ ಚಲನಚಿತ್ರ ವೃತ್ತಿಯನ್ನು ಉನ್ನತಕ್ಕೇರಿಸಿತು.

ವೈಯಕ್ತಿಕ ಜೀವನ

ಬದಲಾಯಿಸಿ

ಕ್ಯಾಮೆರಾನ್‌‌ರವರು ಐದು ಬಾರಿ ವಿವಾಹವಾಗಿದ್ದಾರೆ ಮತ್ತು ಅವರ ಪತ್ನಿಯರ ಹೆಸರುಗಳು ಹೀಗಿವೆ: ಶಾರೊನ್ ವಿಲಿಯಮ್ಸ್ (೧೯೭೮-೧೯೮೪), ಗೇಲ್ ಆನ್ನೆ ಹರ್ಡ್ (೧೯೮೫-೧೯೮೯), ನಿರ್ದೇಶಕಿ ಕ್ಯಾತ್ರಿನ್ ಬಿಗೆಲೊ (೧೯೮೯-೧೯೯೧), ಲಿಂಡಾ ಹ್ಯಾಮಿಲ್ಟನ್ (೧೯೯೭-೧೯೯೯, ಮಗಳು ಜೊಸೆಫೀನ್ ೧೯೯೩ ರಲ್ಲಿ ಜನಿಸಿದಳು), ಮತ್ತು ಸೂಸಿ ಅಮಿಸ್ (೨೦೦೦-ಇಲ್ಲಿಯವರೆಗೆ). ಕ್ಯಾಮೆರಾನ್ ೧೯೯೧ರಿಂದಲೂ ಹ್ಯಾಮಿಲ್ಟನ್ ಅನ್ನು ಡೇಟಿಂಗ್ ಮಾಡುತ್ತಿದ್ದರು. ಆದರೂ, ವಿವಾಹವಾದ ಎಂಟು ತಿಂಗಳ ನಂತರ ಅವರು ಬೇರ್ಪಟ್ಟರು ಮತ್ತು ಕ್ಯಾಮರಾನ್‌‌ರವರ ಟೈಟಾನಿಕ್ ಚಿತ್ರಕ್ಕೆ ಆಸ್ಕರ್ ಸಿಕ್ಕಿದ ಕೆಲವೇ ದಿನಗಳಲ್ಲಿ, ಅವರಿಬ್ಬರೂ ತಮ್ಮ ವಿವಾಹ ವಿಚ್ಚೇದನವನ್ನು ಪ್ರಕಟಿಸಿದರು. ವಿಚ್ಚೇದನ ಒಪ್ಪಂದವಾಗಿ, ಕ್ಯಾಮೆರಾನ್‌‌ರವರು ಹ್ಯಾಮಿಲ್ಟನ್‌ಗೆ $೫೦ ಮಿಲಿಯನ್ ನೀಡಬೇಕೆಂದು ಆದೇಶಿಸಲಾಯಿತು. ವಿಚ್ಛೇದನಕ್ಕೆ, ಕ್ಯಾಮೆರಾನ್‌‌ರವರು ಕೆಲಸದ ಕಡೆಗಿನ ಅತಿಯಾದ ಏಕಾಗ್ರತೆಯಿಂದಾಗಿ ಅವರ ಉಳಿದೆಲ್ಲಾ ಜವಾಬ್ದಾರಿಗಳನ್ನು ಮಾಡದೇ ಇರುತ್ತಿದ್ದ ಕಾರಣ ಜೊತೆಗೆ ಟೈಟಾನಿಕ್ ಚಿತ್ರದಲ್ಲಿ ಅವರು ಲಿಸ್ಸಿ ಕ್ಯಾಲ್ವರ್ಟ್ ಎಂಬ ಪಾತ್ರಕ್ಕೆ ನೇಮಿಸಿಕೊಂಡಿದ್ದ ಸೂಸಿ ಅಮಿಸ್‌ಳೊಂದಿಗಿನ ಸಂಬಂಧವೇ ಕಾರಣ ಎಂದು ಅನಂತರದಲ್ಲಿ ಹ್ಯಾಮಿಲ್ಟನ್ ಪ್ರಕಟಿಸಿದಳು. ಅವರು ಅಮಿಸ್‌ಳನ್ನು ೨೦೦೦ ಇಸವಿಯಲ್ಲಿ ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕ್ಯಾಮೆರಾನ್, ನ್ಯೂ ಜಿಲ್ಯಾಂಡ್‌ನಲ್ಲಿ ಅವತಾರ್ ಚಿತ್ರೀಕರಣ ಮಾಡುವಾಗ ಆ ದೇಶವನ್ನು ಬಹಳ ಇಷ್ಟಪಟ್ಟಿದ್ದರಿಂದ, ಅವರು ಈಗ ಅಲ್ಲೇ ವಾಸಿಸುತ್ತಿದ್ದಾರೆ.

ಕ್ಯಾಮೆರಾನ್‌ರವರು ನಾಸಾ ಅಡ್ವೈಸರಿ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ ಮತ್ತು ಮುಂಬರುತ್ತಿರುವ ಮಾನವ-ಸಹಿತ ಮಾರ್ಸ್ ಮಿಶನ್‌ನಲ್ಲಿ ಕ್ಯಾಮೆರಾಗಳನ್ನು ಇರಿಸುವ ಯೋಜನೆಯ ಮೇಲೆ ಕಾರ್ಯಮಾಡುತ್ತಿದ್ದಾರೆ. ಕ್ಯಾಮೆರಾನ್‌ರವರು, ಮಂಗಳ ಗ್ರಹದಲ್ಲಿ ವಸಾಹತು ಸ್ಥಾಪನೆಗಾಗಿ ಹೋರಾಡುತ್ತಿರುವ ಲಾಭ-ರಹಿತ ಸಂಸ್ಥೆಯಾಗಿರುವ, ಮಾರ್ಸ್ ಸೊಸೈಟಿಗಾಗಿ ಭಾಷಣಗಳನ್ನು ಮಾಡಿದ್ದಾರೆ ಮತ್ತು ಹಣ ಸಂಗ್ರಹಿಸಿದ್ದಾರೆ.[]

ಪ್ರಮುಖ ಚಲನಚಿತ್ರಗಳು

ಬದಲಾಯಿಸಿ
  1. ದ ಟರ್ಮಿನೇಟರ್
  2. ರಾಂಬೊ: ಫಸ್ಟ್ ಬ್ಲಡ್ ಪಾರ್ಟ್ II
  3. ಏಲಿಯನ್ಸ್
  4. ದ ಅಬಿಸ್
  5. ಟರ್ಮಿನೇಟರ್ 2
  6. ಟೈಟಾನಿಕ್
  7. ಟ್ರೂ ಲೈಸ್
  8. ಅವತಾರ್

ಪ್ರಶಸ್ತಿಗಳು

ಬದಲಾಯಿಸಿ
  • ಟರ್ಮಿನೇಟರ್ ೨: ಜಡ್ಜ್‌ಮೆಂಟ್ ಡೇ ಚಿತ್ರಕ್ಕಾಗಿ (೨೦೧೦ ರಲ್ಲಿ ಅವತಾರ್ ಪ್ರಶಸ್ತಿಯ ಕೊನೆಯ ಹಂತವನ್ನು ತಲುಪಿತ್ತು)
  • ೧೯೯೨ರಲ್ಲಿ ಸೈನ್ಸ್ ಫಿಕ್ಷನ್ ಅಂಡ್ ಫ್ಯಾಂಟಸಿ ರೈಟರ್ಸ್ ಆಫ್ ಅಮೇರಿಕಾದಿಂದ ಆರಂಭಿಕ ಬ್ರಾಡ್ಬರಿ ಅವಾರ್ಡ್ ಸ್ವೀಕರಿಸಿದರು.
  • ಟೈಟಾನಿಕ್‌ಗಾಗಿ ಅವರು ಅಕಾಡೆಮಿಕ್ ಅವಾರ್ಡ್ಸ್ನಲ್ಲಿ ಬೆಸ್ಟ್ ಪಿಕ್ಚರ್ (ಜಾನ್ ಲಾಂಡೌ ನೊಂದಿಗೆ ಹಂಚಿಕೊಂಡಿದ್ದಾರೆ), ಬೆಸ್ಟ್ ಡೈರೆಕ್ಟರ್ ಮತ್ತು ಬೆಸ್ಟ್ ಫಿಲ್ಮ್ ಎಡಿಟಿಂಗ್ (ಕಾನ್ರಾಡ್ ಬಫ್ ಮತ್ತು ರಿಚರ್ಡ್ ಎ ಹ್ಯಾರಿಸ್ ರವರೊಂದಿಗೆ ಹಂಚಿಕೊಂಡಿದ್ದಾರೆ) ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದರು.
  • ಒಂದೇ ಸಂಜೆಯಲ್ಲಿ ಮೂರು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಕೆಲವೇ ಚಿತ್ರನಿರ್ದೇಶಕರಲ್ಲಿ ಕ್ಯಾಮೆರಾನ್ ಸಹ ಒಬ್ಬರಾಗಿದ್ದಾರೆ ಮತ್ತು ಬೆಸ್ಟ್ ಮೋಶನ್ ಪಿಕ್ಚರ್-ಡ್ರಾಮ ಮತ್ತು ಬೆಸ್ಟ್-ಡೈರೆಕ್ಟರ್ ಗಾಗಿ ಗೋಲ್ಡಾನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದಿದ್ದಾರೆ.[]
  • “ಕೆನೇಡಿಯನ್ ಚಿತ್ರನಿರ್ದೇಶಕರಾಗಿ ವಿಶಿಷ್ಠ ಔದ್ಯೋಗಿಕ ಸಾಧನೆಯ” ಗುರುತಾಗಿ, ಒಟ್ಟಾವದಲ್ಲಿರುವ ಕಾರ್ಲ್ಟನ್ ಯೂನಿವರ್ಸಿಟಿ, ಜೂನ್ ೧೩, ೧೯೯೮ ರಲ್ಲಿ ಡಾಕ್ಟರ್ ಆಫ್ ಫೈನ್ ಆರ್ಟ್ಸ್ ಎಂಬ ಗೌರವ ಪದವಿಯನ್ನು ನೀಡಿತು. ಕ್ಯಾಮೆರಾನ್ ರವರು ಸ್ವತಃ ಈ ಪದವಿಯನ್ನು ಸ್ವೀಕರಿಸಿದರು ಮತ್ತು ಘಟಿಕೋತ್ಸವದ ಭಾಷಣ ಮಾಡಿದರು.
  • ಅಂತರಾಷ್ಟ್ರೀಯ ಚಲನಚಿತ್ರ ಕೈಗಾರಿಕೆಯಲ್ಲಿ ಅವರ ಸಾಧನೆಗಳಿಗಾಗಿ ಸೇಂಟ್. ಕ್ಯಾಥರೀನ್ಸ್, ಓಂಟಾರಿಯೊದಲ್ಲಿರುವ ಬ್ರಾಕ್ ಯೂನಿವರ್ಸಿಟಿ ಯಿಂದ ಅಕ್ಟೋಬರ್ ೧೯೯೮ ರಲ್ಲಿ ಗೌರವ ಡಾಕ್ಟರೇಟ್ ಸಹ ಸ್ವೀಕರಿಸಿದರು.

೧೯೯೮ ರಲ್ಲಿ ಟೊರಾಂಟೊದಲ್ಲಿರುವ ರಯರ್ಸನ್ ಯೂನಿವರ್ಸಿಟಿಯಿಂದ ಕಾನೂನುಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲು, ಅಲ್ಲಿನ ಘಟಿಕೋತ್ಸವದಲ್ಲಿ ಭಾಗವಹಿಸಿದರು. ಕೆನಡಾ ಅಥವಾ ಅಂತರಾಷ್ಟ್ರೀಯವಾಗಿ ಅಸಾಧಾರಣ ಕೊಡುಗೆಗಳನ್ನು ನೀಡಿರುವ ವ್ಯಕ್ತಿಗಳಿಗೆ ಈ ಯೂನಿವರ್ಸಿಟಿಯು ತನ್ನ ಅತ್ಯುನ್ನತ ಗೌರವದ ಪ್ರಶಸ್ತಿಯನ್ನು ನೀಡುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "ಅವತಾರ್".
  2. "ಜೇಮ್ಸ್ ಕ್ಯಾಮೆರಾನ್ ಜೀವನಚರಿತ್ರೆಕಾರರ ಮಾತು".
  3. "ಸಮುದ್ರದ ಕೆಳಗಡೆ ಜಲಾಂತರ್ಗಾಮಿ ಪ್ರಯಾಣದಲ್ಲಿ ಚಿತ್ರ ನಿರ್ಮಾಪಕ".
  4. "ಜೇಮ್ಸ್ ಕ್ಯಾಮೆರಾನ್‌ ಮರಿಯಾನ ಟ್ರೆಂಚ್ ಡೈವ್".
  5. "ಜೇಮ್ಸ್ ಕ್ಯಾಮೆರಾನ್‌ ಭೂಮಿಯ ಅತಿ ಆಳದಲ್ಲಿ".
  6. "ಕ್ಯಾಮೆರಾನ್‌ರು ಸಸ್ಯಾಹಾರಿ". Archived from the original on 2019-09-29. Retrieved 2015-11-12.
  7. "ಹೊಸ ಜಾತಿಯ ಕಪ್ಪೆಗೆ ಪ್ರಿಸ್ಟಿಮಾಂಟಿಸ್ ಜೇಮ್ಸ್‌ಕ್ಯಾಮೆರೊನಿ ಹೆಸರು".
  8. "ಮಂಗಳ ಗ್ರಹ ಯೋಜನ". Archived from the original on 2006-12-23. Retrieved 2015-11-12.{{cite web}}: CS1 maint: bot: original URL status unknown (link)
  9. "೭೦ ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿಗಳಲ್ಲಿ ೧೧ ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿ ಟೈಟಾನಿಕ್ ದಾಖಲೆ".