ಜೂಹಿ ಚಾವ್ಲಾ (ಹಿಂದಿ:जूही चावला, ಜನನ ೧೩ ನವೆಂಬರ್ ೧೯೬೭) ಒಬ್ಬ ಭಾರತೀಯ ನಟಿ, ಚಿತ್ರ ನಿರ್ಮಾಪಕಿ ಹಾಗು ಕಿರುತೆರೆ ನಿರೂಪಕಿ.೧೯೮೪ರ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದ ನಂತರ, ಚಾವ್ಲಾ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದರು. ಇವರು ಬಾಲಿವುಡ್ ನ ಮುಂಚೂಣಿ ನಟಿಯರಲ್ಲಿ ಒಬ್ಬರೆನಿಸಿದ್ದಾರೆ, ಹಾಗು ಖಯಾಮತ್ ಸೆ ಖಯಾಮತ್ ತಕ್ ಹಾಗು ಡರ್ರ್ ನಂತಹ ರೊಮ್ಯಾಂಟಿಕ್ ಚಲನಚಿತ್ರಗಳಿಂದ ಹಿಡಿದು ಹಮ್ ಹೈ ರಾಹಿ ಪ್ಯಾರ್ ಕೆ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ, ಈ ಚಿತ್ರದ ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಸಂದಿದೆ, ಜೊತೆಗೆ ಎಸ್ ಬಾಸ್ ಹಾಗು ಇಷ್ಕ್ ನಂತಹ ಚಿತ್ರಗಳಲ್ಲೂ ನಟಿಸಿದ್ದಾರೆ.[][] ಚಾವ್ಲಾ, ಚಿತ್ರಗಳಲ್ಲಿನ ಹಾಸ್ಯಕ್ಕಿರುವ ಸಮಯ ಸ್ಪೂರ್ತಿ,ಟೈಮಿಂಗ್ ಹಾಗು ತೆರೆಯ ಮೇಲೆ ತಮ್ಮ ಉತ್ಸಾಹಭರಿತ ವ್ಯಕ್ತಿತ್ವದಿಂದಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ.[][]

Juhi Chawla

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Juhi S Chawla
(1967-11-13) ನವೆಂಬರ್ ೧೩, ೧೯೬೭ (ವಯಸ್ಸು ೫೭)
Ludhiana, Punjab, India
ವೃತ್ತಿ Film actress, Producer, Television presenter
ವರ್ಷಗಳು ಸಕ್ರಿಯ ೧೯೮೬–present
ಪತಿ/ಪತ್ನಿ Jai Mehta (೧೯೯೭-present)

೨೦೦೦ದ ಇಸವಿಯಲ್ಲಿ, ೭೦ಕ್ಕೂ ಹೆಚ್ಚು ಮುಖ್ಯವಾಹಿನಿಯ ಹಿಂದಿ ಚಿತ್ರಗಳಲ್ಲಿ ನಟಿಸಿದ ನಂತರ, ಚಾವ್ಲಾ ಕಲಾತ್ಮಕ ಹಾಗು ಸ್ವತಂತ್ರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆ ತಮ್ಮ ಮಾತೃಭಾಷೆ ಪಂಜಾಬಿ ಚಿತ್ರದಲ್ಲೂ ಅಭಿನಯಿಸಿದ್ದಾರೆ, ಜೊತೆಗೆ ಬಹುತೇಕವಾಗಿ ಕಲಾತ್ಮಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.[] ಈಕೆ ತಮ್ಮ ಚಿತ್ರಗಳಾದ ಝಂಕಾರ್ ಬೀಟ್ಸ್ , ೩ ದಿವಾರೇ , ಮೈ ಬ್ರದರ್ ನಿಖಿಲ್ ಹಾಗು ಬಸ್ ಏಕ್ ಪಲ್ ನಂತಹ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಉತ್ತಮ ವಿಮರ್ಶೆಯನ್ನು ಗಳಿಸಿದ್ದಾರೆ.[] ೨೦೦೦ನೇ ಇಸವಿಯಿಂದ, ಚಾವ್ಲಾ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸುವುದರ ಜೊತೆಗೆ ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದರು.

ಆರಂಭಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ

ಜೂಹಿ ಚಾವ್ಲಾ ಭಾರತದ ಪಂಜಾಬ್‌ ಪ್ರಾಂತದ ಲುಧಿಯಾನದಲ್ಲಿ ಜನಿಸಿದರು. ಇವರು ಡಾ. ಎಸ್. ಚಾವ್ಲಾ ಹಾಗು ಮೋನಾ ಚಾವ್ಲಾ ದಂಪತಿಗೆ ಜನಿಸಿದ ಪ್ರಥಮ ಪುತ್ರಿ.

ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಳ್ಳುವ ಮೊದಲು ಅವರು ಲುಧಿಯಾನದಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. HR ಮುಂಬೈನಲ್ಲಿ ವಿಶೇಷ ಪರಿಣತಿಯೊಂದಿಗೆ ಸಿಂಡೆನ್ಹಾಮ್ ಕಾಲೇಜ್‌ನಿಂದ ಪದವಿ ಪಡೆದ ಜೂಹಿ,[] ೧೯೮೪ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್‌‌ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡರು; ತದನಂತರ ೧೯೮೪ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪೋಷಾಕು ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.[] ಇವರು ಉತ್ತಮ ನೃತ್ಯಗಾರ್ತಿಯೂ ಹೌದು. ಬಾಜೆ ಪಾಯಲ್(ನೃತ್ಯಗಾರರು/ನಟಿಯರ ಸಂದರ್ಶನದ ಸಂಗ್ರಹವನ್ನು ಆಧರಿಸಿದ ಒಂದು ಚಲನಚಿತ್ರ) ಸಂದರ್ಶನದಲ್ಲಿ, ತಾವು ಮೂರು(೩) ವರ್ಷಗಳ ಕಾಲ ಕಥಕ್ ನೃತ್ಯಶೈಲಿಯನ್ನು ಅಭ್ಯಾಸ ಮಾಡಿದ್ದಾಗಿ ಜೊತೆಗೆ ಅಭ್ಯಾಸವನ್ನು ನಿಲ್ಲಿಸಿದ್ದಕ್ಕಾಗಿ ತಮಗೆ ಪಶ್ಚಾತ್ತಾಪವಿದೆಯೆಂದು ಹೇಳುತ್ತಾರೆ, ನೃತ್ಯದ ಅಭ್ಯಾಸವನ್ನು ಮುಂದುವರೆಸಿದ್ದರೆ ನಟಿಯಾಗಿ ತಮ್ಮ ವೃತ್ತಿಜೀವನಕ್ಕೆ ಸಹಾಯಕವಾಗಿರುತ್ತಿತ್ತೆಂದು ನುಡಿಯುತ್ತಾರೆ. ಹಲವು ಪ್ರತಿಭೆಗಳ ಜೂಹಿ ಒಬ್ಬ ನುರಿತ ಶಾಸ್ತ್ರೀಯ ಸಂಗೀತಗಾರ್ತಿಯೂ ಹೌದು. ಕಳೆದ ಆರು ವರ್ಷಗಳಿಂದ ಆ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ಚಾವ್ಲಾ ೧೯೮೬ರಲ್ಲಿ ಸಲ್ತನತ್ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು. ಇವರು ೧೯೮೭ರಲ್ಲಿ ರವಿಚಂದ್ರನ್ ನಿರ್ದೇಶನದ ಕನ್ನಡ ಕ್ಲ್ಯಾಸಿಕ್ ಚಿತ್ರ ಪ್ರೇಮಲೋಕದಲ್ಲೂ ನಟಿಸಿದ್ದಾರೆ. ೧೯೮೮ರಲ್ಲಿ ಬಿಡುಗಡೆಯಾದ ಖಯಾಮತ್ ಸೆ ಖಯಾಮತ್ ತಕ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರ ಗಿಟ್ಟಿಸಿಕೊಂಡರು, ಚಿತ್ರದಲ್ಲಿ ಇವರು ಅಮೀರ್ ಖಾನ್ ರೊಂದಿಗೆ ಜೊತೆಯಾಗಿ ನಟಿಸಿದ್ದಾರೆ. ಚಿತ್ರವು ಶೇಕ್ಸ್ಪಿಯರ್ ನ ರೋಮಿಯೋ ಅಂಡ್ ಜ್ಯೂಲಿಯೆಟ್ ನ ಆಧುನಿಕ ರೂಪಾಂತರವಾಗಿದ್ದು, ಹೆಚ್ಚು ವಿಮರ್ಶೆ ಹಾಗು ಭಾರಿ ಯಶಸ್ಸನ್ನು ಗಳಿಸಿತು. ಇದು ಅತ್ಯುತ್ತಮ ಚಿತ್ರವೆಂದು ಫಿಲಂಫೇರ್ ಪ್ರಶಸ್ತಿಯನ್ನು ಗಳಿಸಿತು. ಜೊತೆಗೆ ಚಾವ್ಲಾ ಲಕ್ಸ್ ಹೊಸ ಮುಖ ಫಿಲಂಫೇರ್ ಪ್ರಶಸ್ತಿಯನ್ನು ಗಳಿಸಿದರು, ಹಾಗು ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ಮೊದಲ ಬಾರಿಗೆ ನಾಮನಿರ್ದೇಶನಗೊಂಡರು.[] ಚಿತ್ರವು ತರುವಾಯ ಅತ್ಯುತ್ಕೃಷ್ಟ ಕ್ಲ್ಯಾಸಿಕ್ ದರ್ಜೆ ಗಳಿಸಿತು.[][೧೦]

೧೯೯೦ರಲ್ಲಿ, ಇವರು ಪ್ರತಿಬಂಧ್ ನಂತಹ ಚಿತ್ರಗಳಲ್ಲಿ ಅಭಿನಯಿಸಿದರು, ಇದು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸನ್ನು ಗಳಿಸುವುದರ ಜೊತೆಗೆ ಚಿತ್ರದ ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಗೆ ನಾಮನಿರ್ದೇಶನಗೊಳ್ಳುವ ಅವಕಾಶ ನೀಡಿತು, ಹಾಗು ಸ್ವರ್ಗ್ .ಇದರ ಉದಾಹರಣೆಯಾಗಿದೆ.[೧೧] ೧೯೯೨ರಲ್ಲಿ, ಇವರು ಬೋಲ್ ರಾಧಾ ಬೋಲ್ ಚಿತ್ರದ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು, ಈ ಚಿತ್ರವೂ ಸಹ ಭಾರಿ ಯಶಸ್ಸನ್ನು ಗಳಿಸಿತು.[೧೨][೧೩]

೧೯೯೩ರಲ್ಲಿ, ಸಾಧಾರಣ ಯಶಸ್ಸು ಗಳಿಸಿದ ಆಯಿನಾ ಚಿತ್ರದಲ್ಲಿ ನಟಿಸಿದರು, ಹಾಗು ಸನ್ನಿ ಡಿಯೋಲ್ ಗೆ ಎದುರಾಗಿ ಲೂಟೇರೆ ಹಾಗು ಮಹೇಶ್ ಭಟ್ ನಿರ್ದೇಶನದ ಹಮ್ ಹೈ ರಾಹಿ ಪ್ಯಾರ್ ಕಿ ಯಂತಹ ಯಶಸ್ವೀ ಚಿತ್ರಗಳಲ್ಲಿ ನಟಿಸಿದರು.[೧೪] ಇದರ ನಂತರ ಯಶ್ ಚೋಪ್ರಾರ ರೋಮಾಂಚಕ ಚಿತ್ರ ಡರ್ರ್ ನಲ್ಲಿ ಪ್ರಮುಖ ಪಾತ್ರ ವಹಿಸಿದರು, ಚಿತ್ರವು ಭಾರತದಲ್ಲಿ ಆ ವರ್ಷದ ಹೆಚ್ಚು ಹಣ ಗಳಿಸಿದ ಮೂರನೇ ಚಿತ್ರವಾಯಿತು.[೧೪] ಇವರು ಹಮ್ ಹೈ ರಾಹಿ ಪ್ಯಾರ್ ಕಿ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಫಿಲಂಫೇರ್ ಪ್ರಶಸ್ತಿಯನ್ನು ಗಳಿಸಿದರು.[೧೫] ೧೯೯೪-೬ರ ನಡುವೆ ಚಾವ್ಲಾರ ಹೆಚ್ಚಿನ ಚಿತ್ರಗಳು ಸೋಲನ್ನು ಕಂಡವು, ಆದಾಗ್ಯೂ ದರಾರ್ ಚಿತ್ರದಲ್ಲಿನ ಹತಾಶಳಾದ ಪತ್ನಿಯ ಪಾತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.[೧೬] ೧೯೯೭ರಲ್ಲಿ, ಎಸ್ ಬಾಸ್ , ದೀವಾನಾ ಮಸ್ತಾನಾ ಹಾಗು ಇಷ್ಕ್ ನಂತಹ ಹಾಸ್ಯಭರಿತ ರೊಮ್ಯಾಂಟಿಕ್ ಚಿತ್ರಗಳೊಂದಿಗೆ ಮರುಹುಟ್ಟನ್ನು ಪಡೆದರು. ಇಷ್ಕ್ ಚಿತ್ರವು ಆ ವರ್ಷದ ಅಧಿಕ ಹಣ ಗಳಿಸಿದ ಚಿತ್ರವಾಯಿತು, ಹಾಗು ಚಾವ್ಲಾ ಎಸ್ ಬಾಸ್ ಚಿತ್ರದಲ್ಲಿನ ರೂಪದರ್ಶಿ ಪಾತ್ರದಿಂದ ಆರನೇ ಬಾರಿಗೆ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.[೧೭][೧೮]

ಅಮೀರ್ ಖಾನ್ ರೊಂದಿಗಿನ ಚಾವ್ಲಾ ಜೋಡಿಯನ್ನು ಹಾಗು ತೆರೆಯ ಮೇಲಿನ ಅವರಿಬ್ಬರ ಕೆಮಿಸ್ಟ್ರಿಯನ್ನು ಸಾಮಾನ್ಯವಾಗಿ ಮಾಧ್ಯಮವು ಯಶಸ್ವೀ ಜೋಡಿಯೆಂದು ಉಲ್ಲೇಖಿಸುತ್ತದೆ.[೧೯] ಇವರು ಶಾರುಖ್ ಖಾನ್ ರೊಂದಿಗೂ ಸಹ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದ ಚಿತ್ರಗಳಲ್ಲಿ ರಾಜು ಬನ್ ಗಯಾ ಜೆಂಟಲ್ಮನ್ , ಡರ್ರ್ , ಡ್ಯೂಪ್ಲಿಕೇಟ್ ಹಾಗು ಎಸ್ ಬಾಸ್ ಚಿತ್ರಗಳು ಸೇರಿವೆ.

ಚಿತ್ರ:Juhi Chawla.png
3 ದೀವಾರೆ ಚಿತ್ರದಲ್ಲಿನ ಚಂದ್ರಿಕಾ ಪಾತ್ರದಲ್ಲಿ ಜೂಹಿ ಚಾವ್ಲಾ

೨೦೦೦ರ ಅವಧಿಯುದ್ದಕ್ಕೂ, ಚಾವ್ಲಾ ಸ್ವತಂತ್ರ ಹಾಗು ಕಲಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಂಡರು, ಹಾಗು ಈ ಪ್ರಕಾರದಲ್ಲಿ ಅವರ ನಟನೆಯ ಚಿತ್ರಗಳಾದ ೩ ದಿವಾರೇ , ೭½ ಫೇರೆ ಹಾಗು ಮೈ ಬ್ರದರ್ ನಿಖಿಲ್ ವಿಮರ್ಶೆಗೆ ಒಳಪಟ್ಟಿವೆ, ಮೈ ಬ್ರದರ್ ನಿಖಿಲ್ ಚಿತ್ರವನ್ನು ತರಣ್ ಆದರ್ಶ್ "ಆಕೆಯ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು" ಹೆಸರಿಸುತ್ತಾರೆ.[೨೦][೨೧][೨೨] ೩ ದಿವಾರೇ ಚಿತ್ರಕ್ಕಾಗಿ ಇವರು ಸ್ಟಾರ್ ಸ್ಕ್ರೀನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಳಿಸಿದರು.

ಇವರು ನಿಖಿಲ್ ಅದ್ವಾನಿಯವರ ಚಿತ್ರ Salaam-e-Ishq: A Tribute To Love ರಲ್ಲೂ ಕಾಣಿಸಿಕೊಂಡರು, ಚಿತ್ರದ ಅಭಿನಯಕ್ಕಾಗಿ ಉತ್ತಮ ವಿಮರ್ಶಾ ಪ್ರತಿಕ್ರಿಯೆಯನ್ನು ಗಳಿಸಿದರು.[೨೩] ಇವರು ಬಸ್ ಏಕ್ ಪಲ್ (೨೦೦೬) ಚಿತ್ರದಲ್ಲಿ ಉರ್ಮಿಳ ಮಾತೊಂಡ್ಕರ್ ಹಾಗು ಸ್ವಾಮೀ ಚಿತ್ರದಲ್ಲಿ ಮನೋಜ್ ಬಾಜಪೈ ಜೊತೆ ನಟಿಸಿದ್ದಾರೆ. ಜೂಹಿಯವರ ಇತ್ತೀಚಿಗೆ ಬಿಡುಗಡೆಯಾದ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ರೊಂದಿಗೆ ಅಭಿನಯಿಸಿದ ರವಿ ಚೋಪ್ರಾರ ಭೂತನಾಥ್ ಸೇರಿದೆ, ಚಿತ್ರದಲ್ಲಿ "ಚಲೋ ಜಾನೆ ದೋ" ಹಾಡಿನ ಮೂಲಕ ಮೊದಲ ಬಾರಿಗೆ ಗಾಯನವನ್ನು ಮಾಡಿದ್ದರೆ. ೨೦೦೮ರಲ್ಲಿ ಬಿಡುಗಡೆಯಾದ ಕ್ರೇಜಿ ೪ ಎಂಬ ಮತ್ತೊಂದು ಚಿತ್ರದಲ್ಲಿ ಇರ್ಫಾನ್ ಖಾನ್ ಹಾಗು ಅರ್ಶದ್ ವಾರ್ಸಿರೊಂದಿಗೆ ನಟಿಸಿದ್ದಾರೆ. ಭೂತನಾಥ್ ಹಾಗು ಕ್ರೇಜಿ ೪ ಎರಡೂ ಚಿತ್ರಗಳು ಭಾರತದಲ್ಲಿ ವಿಮಾರ್ಶಾತ್ಮಕ ಹಾಗು ಭಾರಿ ಯಶಸ್ಸನ್ನು ಕಂಡವು. ೨೦೦೯ರಲ್ಲಿ, ಲಕ್ ಬೈ ಚಾನ್ಸ್ ಚಿತ್ರದಲ್ಲಿ ಒಂದು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು, ಚಿತ್ರಕ್ಕಾಗಿ ಇವರು ತಮ್ಮ ಕೂದಲಿಗೆ ಹೊಂಬಣ್ಣವನ್ನು ಹಚ್ಚಿಕೊಂಡಿದ್ದರು. ಚಿತ್ರದ ಕುರಿತು ವ್ಯಾಪಕವಾದ ಸಕಾರಾತ್ಮಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು, ಹಾಗು ಬಾಕ್ಸ್ ಆಫೀಸ್‌‌ನಲ್ಲಿಯೂ ಉತ್ತಮ ಆರಂಭ ಕಂಡಿತು.[೨೪]

ಚಾವ್ಲಾ ಹಿಂದಿಯಲ್ಲದೆ ಹಲವಾರು ಇತರ ಹಿಂದಿಯೇತರ ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಇವರು ಮೂರು ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ: ಶಹೀದ್ ಉದ್ಧಂ ಸಿಂಗ್ (೨೦೦೦), ದೇಸ್ ಹೋಯಾ ಪರ್ದೇಸ್ (೨೦೦೪), ಹಾಗು ವಾರಿಸ್ ಷಾ: ಇಷ್ಕ್ ದಾ ವಾರಿಸ್ (೨೦೦೬). ಇವರ ಮೊದಲ ಮಲಯಾಳಂ ಚಲನಚಿತ್ರ ಹರಿಕೃಷ್ಣನ್ಸ್ , ಚಿತ್ರದಲ್ಲಿ ಇವರು ಮೋಹನ್ ಲಾಲ್ ಹಾಗು ಮಮೂಟ್ಟಿಯೊಂದಿಗೆ ನಟಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು, ಇದರಲ್ಲಿ ಪ್ರೇಮಲೋಕ ಎಂಬ ಯಶಸ್ವೀ ಚಿತ್ರ ಹಾಗು ಶಾಂತಿ ಕ್ರಾಂತಿ ಹಾಗು ಕಿಂದರ ಜೋಗಿ ಎಂಬ ಸೋತ ಚಿತ್ರಗಳೂ ಸೇರಿವೆ. ಈ ಎಲ್ಲ ಮೂರು ಚಿತ್ರಗಳಲ್ಲಿ ಜನಪ್ರಿಯ ಕನ್ನಡ ನಟ ರವಿಚಂದ್ರನ್ ಜೊತೆಗೆ ಅಭಿನಯಿಸಿದ್ದರು. ಪ್ರಸಕ್ತದಲ್ಲಿ, ಒನಿರ್ ರ ಮುಂದಿನ ಚಿತ್ರ ಐ ಆಮ್ ಮೇಘಾ ದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಾವ್ಲಾರ ಬಾಲ್ಯದ ಗೆಳತಿಯಾಗಿ ಮನೀಶ ಕೊಯಿರಾಲ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರವು, ವಿವಿಧ ಕಥಾಹಂದರವುಳ್ಳ ಕೆಲವು ಚಲನಚಿತ್ರಗಳನ್ನು ಒಳಗೊಂಡಿದೆ, ಇದರಲ್ಲಿ ಐ ಆಮ್ ಮೇಘಾ ಸಹ ಒಂದು.

ಕಿರುತೆರೆ

ಬದಲಾಯಿಸಿ

೨೦೦೦ದಲ್ಲಿ, ಚಾವ್ಲಾ ಹಲವಾರು ದೂರದರ್ಶನ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ, ಅದರಲ್ಲೂ ವಿಶೇಷವಾಗಿ ಫಿಲಂಫೇರ್ ಪ್ರಶಸ್ತಿಗಳು ಹಾಗು ಜೀ ಸಿನೆ ಪ್ರಶಸ್ತಿ ಸಮಾರಂಭಗಳನ್ನು ನಡೆಸಿಕೊಟ್ಟಿದ್ದಾರೆ. ಚಾವ್ಲಾ ಝಲಕ್ ದಿಕ್ಲಾ ಜಾ ಎಂಬ ಮನೋರಂಜನಾ ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಸರೋಜ್ ಖಾನ್ ಹಾಗು ವೈಭವಿ ಮರ್ಚೆಂಟ್ ರ ಜೊತೆಗೆ ತೀರ್ಪುಗಾರರಾಗಿದ್ದರು.[೨೫]

ನಿರ್ಮಾಪಕಿ

ಬದಲಾಯಿಸಿ

ಜೂಹಿ ನಂತರದಲ್ಲಿ ನಿರ್ಮಾಪಕಿಯಾಗಿ ಶಾರುಖ್ ಖಾನ್ ಹಾಗು ನಿರ್ದೇಶಕ ಅಜೀಜ್ ಮಿರ್ಜಾರ ಜೊತೆಗೂಡಿ ಡ್ರೀಮ್ಜ್ ಅನ್ಲಿಮಿಟೆಡ್ ನಿರ್ಮಾಣ ಸಂಸ್ಥೆಯ ಸಹ ಒಡತಿಯಾಗುತ್ತಾರೆ.[೨೬] ನಿರ್ಮಾಣ ಸಂಸ್ಥೆಯು ನಿರ್ಮಿಸಿದ ಮೊದಲ ಎರಡು ಚಲನಚಿತ್ರಗಳೆಂದರೆ ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ ಹಾಗು ಅಶೋಕ .ಸಂಸ್ಥೆಯ ಮೂರನೇ ಚಿತ್ರ, ಚಲ್ತೆ, ಚಲ್ತೆ , ಸಂಸ್ಥೆಗೆ ಮೊದಲ ಯಶಸ್ಸನ್ನು ಗಳಿಸಿಕೊಟ್ಟಿತು.[೨೭]

ವೈಯಕ್ತಿಕ ಜೀವನ

ಬದಲಾಯಿಸಿ

ಜೂಹಿ ಚಾವ್ಲಾ, ಕೈಗಾರಿಕೋದ್ಯಮಿ ಜೈ ಮೆಹ್ತಾರನ್ನು ವರಿಸಿದ್ದಾರೆ; ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ;[೨೮] ೨೦೦೧ರಲ್ಲಿ ಜನಿಸಿದ ಮಗಳು[೨೯] ಹಾಗು ೨೦೦೩ರಲ್ಲಿ ಜನಿಸಿದ ಒಬ್ಬ ಮಗ.[೨೯] ೧೯೯೮ರಲ್ಲಿ ಡೂಪ್ಲಿಕೇಟ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಇವರ ತಾಯಿ ಪ್ರೇಗ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ನಿಧನರಾದರು.

  • ಅರ್ಜುನ್‌ (13) ಹಾಗೂ ಝಾನ್ವಿ (16) ಎನ್ನುವ ಇಬ್ಬರು ಮಕ್ಕಳಿದ್ದು ಅವರೇ ತಮ್ಮ ಬದುಕು ಎಂದು ಹೇಳಿಕೊಂಡಿದ್ದಾರೆ.(2017)[೩೦]

ಜೈ ಮೆಹ್ತಾ ಹಾಗು ಜೂಹಿ ಚಾವ್ಲಾ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಅಡಿ ಇಂಡಿಯನ್ ಪ್ರೀಮಿಯರ್ ಲೀಗ್ ನ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ನ ಸಹ ಒಡೆತನವನ್ನು ಶಾರುಖ್ ಖಾನ್ ರೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ನಟಿಯಾಗಿ

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಇತರ ಟಿಪ್ಪಣಿಗಳು
೧೯೮೬ ಸಲ್ತನತ್ ಜರೀನಾ
೧೯೮೭ ಪ್ರೇಮಲೋಕ ಶಶಿಕಲ ಕನ್ನಡ ಚಿತ್ರ
೧೯೮೮ ಖಯಾಮತ್ ಸೆ ಖಯಾಮತ್ ತಕ್ ರಶ್ಮಿ ವಿಜೇತೆ, ಲಕ್ಸ್ ಹೊಸ ಮುಖ ಫಿಲ್ಮ್‌ಫೇರ್ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ಪರುವ ರಾಗಂ ಶಶಿಕಲ ತಮಿಳು ಚಲನಚಿತ್ರ
೧೯೮೯ ಚಾಂದಿನಿ ದೇವಿಕಾ ಅತಿಥಿ ಪಾತ್ರ
ವಿಕ್ಕಿ ದಾದಾ ಶ್ಯಾಮಲೀ ತೆಲುಗು ಚಿತ್ರ
ಲವ್ ಲವ್ ಲವ್ ರೀಮಾ ಗೋಸ್ವಾಮಿ
ಗೂಂಜ್ ಸಂಗೀತಾ ಕಾಲೆಕರ್
೧೯೯೦ ಕಾಫಿಲಾ ಕಲ್ಪನಾ ಅವಸ್ತಿ
ಸ್ವರ್ಗ್ ಜ್ಯೋತಿ
ಪ್ರತಿಬಂಧ್ ಶಾಂತಿ ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ತುಮ್ ಮೇರೆ ಹೋ ಪಾರೋ
ಜೆಹರೀಲೆ
ಶಾನ್ದಾರ್ ತುಳಸಿ
C.I.D. ಇನ್ಸ್ಪೆಕ್ಟರ್ ರಕ್ಷಾ ಶರ್ಮ
೧೯೯೧ ಶಾಂತಿ ಕ್ರಾಂತಿ ಜ್ಯೋತಿ ತೆಲುಗು ಚಿತ್ರ
ಶಾಂತಿ ಕ್ರಾಂತಿ ಜ್ಯೋತಿ ಕನ್ನಡ ಚಿತ್ರ
ನಾಟ್ಟುಕ್ಕು ಒರು ನಲ್ಲವನ್ ತಮಿಳು ಚಲನಚಿತ್ರ
ಬೇನಾಮ್ ಬಾದಷಾ ಜ್ಯೋತಿ
ಕರ್ಜ್ ಚುಕಾನ ಹೈ ರಾಧ
ಬಾಭಿ
೧೯೯೨ ಬೋಲ್ ರಾಧಾ ಬೋಲ್ ರಾಧ ಅತ್ಯತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ರಾಧಾ ಕಾ ಸಂಗಂ
ರಾಜು ಬನ್‌ ಗಯಾ ಜಂಟಲ್‌ಮನ್‌ ರೇಣು
ಮೇರೆ ಸಜನ ಸಾಥ್ ನಿಭಾನ
ಬೆವಫ್ಫಾ ಸೆ ವಫ್ಫಾ ರುಕ್ಸಾರ್
ದೌಲತ್ ಕಿ ಜಂಗ್ ಆಶಾ ಅಗ್ರವಾಲ್
೧೯೯೩ ಲೂಟೆರೆ
ಶತ್ರಂಜ್
ಇಜ್ಜತ್ ಕಿ ರೋಟಿ
ಪೆಹ್ಲಾ ನಶಾ
ತಡಿಪಾರ್ ಅತಿಥಿ ಪಾತ್ರ
ಆಯಿನಾ ರೀಮಾ ಮಾಥುರ್
ಡರ್‌ ಕಿರಣ್ ಅವಸ್ತಿ
ಹಮ್ ಹೇ ರಾಹಿ ಪ್ಯಾರ್ ಕಿ ವೈಜಯಂತಿ ಐಯ್ಯರ್ ವಿಜೇತೆ, ‌ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ
ಕಭಿ ಹಾಂ ಕಭಿ ನಾ ಅಥಿತಿ ಪಾತ್ರ
೧೯೯೪ ಈನಾ ಮೀನಾ ಡೀಕಾ ಮೀನಾ
ದಿ ಜೆಂಟಲ್ಮನ್
ಅಂದಾಜ್ ಸರಸ್ವತಿ
ಅಂದಾಜ್‌ ಅಪ್ನಾ ಅಪ್ನಾ ಸ್ವಯಂ ಪಾತ್ರ ಅಥಿತಿ ಪ್ರದರ್ಶನ
ಘರ್ ಕಿ ಇಜ್ಜತ್ ಗೀತಾ
ಭಾಗ್ಯವಾನ್ ಗೀತಾ
ಪರಮಾತ್ಮ
ಸಾಜನ್ ಕಾ ಘರ್ ಲಕ್ಷ್ಮಿ
೧೯೯೫ ರಾಮ್‌ ಜಾನೆ ಬೇಲಾ
ಕರ್ತವ್ಯ ಕಾಜಲ್ ಸಹಾಯ್
ನಾಜಯಾಝ್ ಇನ್ಸ್ಪೆಕ್ಟರ್ ಸಂಧ್ಯಾ
ಆತಂಕ್ ಹೀ ಆತಂಕ್ ನೇಹಾ
೧೯೯೬ ತಲಾಶಿ
ಲೋಫರ್ ಕಿರಣ್ ಮಾಥುರ್
ಬಂದಿಶ್ ಕಾಂತ
ದರಾರ್ ಪ್ರಿಯ ಭಾಟಿಯಾ ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
೧೯೯೭ ಯಸ್‌ ಬಾಸ್‌ ಸೀಮಾ ಕಪೂರ್ ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ '
ಇಷ್ಕ್‌ ಮಧು
Mr. ಅಂಡ್ Mrs. ಖಿಲಾಡಿ ಶಾಲು
ದೀವಾನಾ ಮಸ್ತಾನಾ Dr ನೇಹಾ ಶರ್ಮ
೧೯೯೮ ಸಾತ್ ರಂಗ್ ಕೆ ಸಪ್ನೆ ಜಲಿಮಾ
ಹರಿಕೃಷ್ಣನ್ಸ್ ಮೀರಾ ವರ್ಮ ಮಲಯಾಳಂ ಚಿತ್ರ
ಡ್ಯುಪ್ಲಿಕೇಟ್‌ ಸೋನಿಯಾ ಕಪೂರ್
ಜ್ಹೂಟ್ ಬೋಲೇ ಕೌವಾ ಕಾಟೆ ಉರ್ಮಿಳ ಅಭಯಂಕರ್
೧೯೯೯ ಸಫಾರಿ ಅಂಜಲಿ ಅಗರ್ವಾಲ್
ಅರ್ಜುನ್ ಪಂಡಿತ್ ನಿಶಾ ಚೋಪ್ರ
ಶಹೀದ್ ಉದ್ಧಂ ಸಿಂಗ್ ನೂರ್ ಜಹಾನ್
೨೦೦೦ ಗ್ಯಾಂಗ್ ಸನಂ
ಕಾರೂಬಾರ್: ದಿ ಬಿಸ್ನೆಸ್ ಆಫ್ ಲವ್ ಸೀಮಾ ಸಕ್ಸೇನಾ
ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ ರಿಯಾ ಬ್ಯಾನರ್ಜಿ
೨೦೦೧ ಒನ್ ೨ ಕಾ ೪ ಗೀತಾ ಚೌಧರಿ
ಏಕ ರಿಷ್ತಾ ಪ್ರೀತಿ ಕಪೂರ್
ಆಮ್ದನಿ ಅಟ್ಟನ್ನಿ ಖರ್ಚಾ ರುಪೈಯಾ ಜ್ಹೂಮ್ರಿ
೨೦೦೩ ೩ ದೀವಾರೆ ಚಂದ್ರಿಕಾ
ಝಂಕಾರ್ ಬೀಟ್ಸ್ ಶಾಂತಿ
೨೦೦೪ ದೇಸ್ ಹೋಯಾ ಪರ್ದೇಸ್ ಜಸ್ಸಿ ಪಂಜಾಬಿ ಚಿತ್ರ
೨೦೦೫ ಮೈ ಬ್ರದರ್ ನಿಖಿಲ್ ಅನಾಮಿಕಾ
ಪಹೇಲಿ ಗಜ್ರೋಬಾಯಿ
ಖಾಮೋಶ್: ಕೌಫ್ ಕಿ ಕೌಫ್ನಾಕ್ ರಾತ್ ಡಾ.ಸಾಕ್ಷಿ ಸಾಗರ್
Home Delivery: Aapko... Ghar Tak ಪಾರ್ವತಿ ಕಕ್ಕರ್
೭½ ಫೇರೆ ಅಸ್ಮಿ ಗಣತ್ರ
Dosti: Friends Forever ಅದಿತಿ
೨೦೦೬ ಬಸ್ ಏಕ್ ಪಲ್ ಐರಾ ಮಲ್ಹೊತ್ರಾ
ವಾರಿಸ್ ಷಾ-ಈಶ್ಕ ದ ವಾರಿಸ್ ಭಾಗ್ಭಾರಿ
೨೦೦೭ Salaam-e-Ishq: A Tribute To Love ಸೀಮಾ
ಸ್ವಾಮಿ ರಾಧಾ
ಓಂ ಶಾಂತಿ ಓಂ ಸ್ವಯಂ ಆಕೆಯೇ ಪಾತ್ರ ಅತಿಥಿ ಪಾತ್ರ
೨೦೦೮ ಭೂತನಾಥ್ ಅಂಜಲಿ ಶರ್ಮಾ
ಕ್ರೇಜಿ ೪ ಡಾ.ಸೋನಾಲಿ
ಕಿಸ್ಮತ್ ಕನೆಕ್ಷನ್ ಹಸೀನಾ ಬನೊ ಜಾನ್
೨೦೦೯ ಲಕ್‌ ಬೈ ಚಾನ್ಸ್‌ ಮಿಂಟಿ
ಕಲ್ ಕಿಸ್ನೆ ದೇಖಾ ಅತಿಥಿಪಾತ್ರ
೨೦೧೦ ಐ ಆಮ್ ಮೇಘಾ ಮೇಘಾ
ಸುಖ್ಮಣಿ ಪಂಜಾಬಿ ಚಿತ್ರ

ನಿರ್ಮಾಪಕಿಯಾಗಿ

ಬದಲಾಯಿಸಿ
  • ೨೦೦೦ - ಫಿರ್ ಭಿ ದಿಲ್ ಹೇ ಹಿಂದೂಸ್ತಾನಿ
  • ೨೦೦೧ - ಅಶೋಕ
  • ೨೦೦೩ - ಚಲ್ತೆ ಚಲ್ತೆ

ಇವನ್ನೂ ಗಮನಿಸಿ

ಬದಲಾಯಿಸಿ
  • ಭಾರತೀಯ ಚಲನಚಿತ್ರ ನಟಿಯರ ಪಟ್ಟಿ

ಉಲ್ಲೇಖಗಳು

ಬದಲಾಯಿಸಿ
  1. Taliculam, Sharmila (19 January 2000). "'There have been many ups and downs'". Rediff.com. Retrieved 2009-05-29.
  2. "Not The End". The Tribune. 10 May 2001. Retrieved 2009-08-10. {{cite web}}: Italic or bold markup not allowed in: |publisher= (help)
  3. Verma, Sukanya (11 March 2004). "The real stars of Bollywood". Rediff.com. Retrieved 2009-05-29.
  4. ೪.೦ ೪.೧ Doval, Nikita (21 March 2005). "Juhi II". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2009-05-29. {{cite news}}: Italic or bold markup not allowed in: |publisher= (help)
  5. Verma, Sukanya (2008-03-19). "Readers pick: Bollywood's most under-rated". Rediff.com. Retrieved 2009-04-21.
  6. "imdb.com". Juhi Chawla's early life. Retrieved 8 April 2007.
  7. "geocities.com". Miss Universe and Juhi Chawla. Archived from the original on 2007-03-30. Retrieved 8 April 2007.
  8. "Filmfare Awards Listing" (PDF). Archived from the original (PDF) on 2009-06-12. Retrieved 2011-01-12.
  9. 25 ನೋಡಲೇಬೇಕಾದ ಬಾಲಿವುಡ್ ಚಲನಚಿತ್ರಗಳು Archived 2008-09-15 ವೇಬ್ಯಾಕ್ ಮೆಷಿನ್ ನಲ್ಲಿ.. Indiatimes.com
  10. Derné, Steve (1995). Culture in Action: Family Life, Emotion, and Male Dominance in Banaras, India‏. SUNY Press‏. p. 97. ISBN 0791424251.
  11. "Box office India". Archived from the original on 2012-07-23. Retrieved 2011-01-12.
  12. "Filmfare Nominations 1992". The Times Of India. Archived from the original on 2012-07-16. Retrieved 2011-01-12.
  13. "Box Office Report". Archived from the original on 2013-10-17. Retrieved 2011-01-12.
  14. ೧೪.೦ ೧೪.೧ "Box Office Report 1993". Archived from the original on 2012-07-21. Retrieved 2011-01-12.
  15. "filmfareawards.indiatimes.com". Chawla wins Best Actress at Filmfare. Archived from the original on 9 ಜುಲೈ 2012. Retrieved 8 April 2007.
  16. "Box Office Report 1994". Archived from the original on 2013-01-07. Retrieved 2011-01-12.
  17. "Filmfare nominations 1997". Archived from the original on 2013-10-17. Retrieved 2011-01-12.
  18. "Box Office 1997". boxofficeindia.com. Archived from the original on 7 April 2007. Retrieved 8 April 2007.
  19. Srinivasan, V S (27 March 1998). "The rise, fall and rise of Juhi Chawla". Rediff.com. Retrieved 2009-06-08.
  20. "indiafm.com". Review of 3 Deewarein. Retrieved 8 April 2007.
  21. "indiafm.com". Review of 7% Phere. Retrieved 8 April 2007.
  22. "indiafm.com". Review of My Brother Nikhel. Retrieved 8 April 2007.
  23. "indiafm.com". Review of SEI. Retrieved 8 April 2007.
  24. "Juhi Chawla dons blonde look for 'Luck By Chance'". Chennai, India: ದಿ ಹಿಂದೂ. 2009-01-21. Archived from the original on 2012-11-04. Retrieved 2009-01-27. {{cite news}}: Italic or bold markup not allowed in: |publisher= (help)
  25. "Jhalak Dikhlaa Jaa Judges". Archived from the original on 2009-03-10. Retrieved 2011-01-12.
  26. "financialexpress.com". Juhi turns producer!. Retrieved 8 April 2007.
  27. "boxofficeindia.com". First hit for Dreamz Unlimited. Archived from the original on 7 April 2007. Retrieved 8 April 2007.
  28. "sawf.org". Juhi Chawla marries Jai Mehta. Retrieved 8 April 2007.
  29. ೨೯.೦ ೨೯.೧ "bollyvista.com". Juhi Chawla on her children. Archived from the original on 23 ಸೆಪ್ಟೆಂಬರ್ 2015. Retrieved 8 April 2007.
  30. "ಸರಳ ಅಮ್ಮ ಜೂಹಿ ಚಾವ್ಲಾ;15 May, 2017". Archived from the original on 2017-05-16. Retrieved 2017-05-15.


ಬಾಹ್ಯ ಕೊಂಡಿಗಳು

ಬದಲಾಯಿಸಿ
Awards
Preceded by
Rekha Hande
Miss India
1984
Succeeded by
ಫಿಲ್ಮ್‌ಫೇರ್‌ ಪ್ರಶಸ್ತಿ
Preceded by Best Actress
for Hum Hain Rahi Pyaar Ke

1993
Succeeded by

ಟೆಂಪ್ಲೇಟು:FilmfareBestActressAward