ಜಿ.ಟಿ.ನಾರಾಯಣ ರಾವ್

(ಜಿ.ಟಿ. ನಾರಾಯಣ ರಾವ್ ಇಂದ ಪುನರ್ನಿರ್ದೇಶಿತ)

ಜಿ. ಟಿ. ಎನ್, ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾದ, ಗುಡ್ಲೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ '(ಗುತಿನಾ)', ಹೆಸರಾಂತ ವಿಜ್ಞಾನ ಲೇಖಕಕರು.[]

'ಪ್ರೊ. ಜಿ. ಟಿ. ನಾರಾಯಣರಾಯರು'

ಜನನ, ಹಾಗೂ ವಿದ್ಯಾಭ್ಯಾಸ

ಬದಲಾಯಿಸಿ
  • ಸನ್, ೧೯೨೬ ರ ಜನವರಿ, ೧ ರಂದು 'ಮಡಿಕೇರಿ'ಯಲ್ಲಿ ಜನಿಸಿದ '(ಜಿ.ಟಿ.ನಾ)', ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದವರು. ಎನ್ಎಸ್ಎಸ್ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಅವರಿಗೆ, ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಮಯ ಕುರಿತು, ಅಪಾರ ಆಸಕ್ತಿ ಇತ್ತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ’ಜಿಟಿಎನ್” ಗಹನವಾದ ವಿಜ್ಞಾನದ ಸಂಗತಿಗಳನ್ನು ಸರಳವಾಗಿ ಬರೆದವರು.
  • ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ `ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ' ಒಂದು ಅಮೂಲ್ಯ ಆಕರ ಗ್ರಂಥ. 'ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ವಿ. ರಾಮನ್' ರವರನ್ನು ಬೆಂಗಳೂರಿನಲ್ಲಿಯೂ, ಡಾ.'ಎಸ್. ಚಂದ್ರಶೇಖರ್' ರವರನ್ನು ಚಿಕಾಗೋದಲ್ಲಿಯೂ ಭೇಟಿ ಮಾಡಿ, ಅವರಿಬ್ಬರ ಬಗೆಗೆ ವೈಜ್ಞಾನಿಕ ಜೀವನ ಚರಿತ್ರೆಗಳನ್ನೂ ರಚಿಸಿದವರು, 'ಜಿ.ಟಿ.ನಾ'. ಅವರು, ಇಂಗ್ಲಿಷಿನಿಂದ ಕನ್ನಡಕ್ಕೆ, ವೈಜ್ಞಾನಿಕ ಕೃತಿಗಳನ್ನೂ, ವಿಜ್ಞಾನ ಲೇಖನಗಳನ್ನೂ ವಿಪುಲವಾಗಿ ಅನುವಾದಿಸಿದ್ದಾರೆ. ೬೦ ಕ್ಕೂ ಅಧಿಕ ಕನ್ನಡ, ಹಾಗೂ ೩ ಇಂಗ್ಲಿಷ್ ಕೃತಿಗಳನ್ನು ಅವರು ರಚಿಸಿದ್ದಾರೆ.[]

ಕೃತಿಗಳು

ಬದಲಾಯಿಸಿ
  1. ಕೃಷ್ಣ ವಿವರಗಳು
  2. ವಿಶ್ವದ ಕತೆ,
  3. ಸೂಪರ್ನೋವಾ,
  4. ರಾಮನ್ ಸಂದರ್ಶನ,
  5. ಸುಬ್ರಹ್ಮಣ್ಯನ್ ಚಂದ್ರಶೇಖರ್-ರವರ ಜೀವನ ಚರಿತ್ರೆ []
  6. ರಾಮಾನುಜನ್ ಬಾಳಿದರಿಲ್ಲಿ,
  7. ವಿಜ್ಞಾನ ಸಪ್ತರ್ಷಿಗಳು,
  8. ಐನ್ಸ್ಟೈನ್ ಬಾಳಿದರಿಲ್ಲಿ,
  9. ಕೊಪರ್ನಿಕಸ್ ಕ್ರಾಂತಿ,
  10. ಜಾತಕ ಮತ್ತು ಭವಿಷ್ಯ,
  11. ಎನ್ಸಿಸಿ ದಿನಗಳು,
  12. ನೋಡೋಣು ಬಾರಾ ನಕ್ಷತ್ರ.-ಖಗೋಳವಿಜ್ಞಾನ ಕುರಿತ ಪುಸ್ತಕ
  13. ಫರ್ಮಾ ಯಕ್ಷಪ್ರಶ್ನೆ,
  14. ವೈಜ್ಞಾನಿಕ ಮನೋಧರ್ಮ,
  15. ಆಕಾಶದಲ್ಲಿ ಭಾರತ,
  16. ಮುಗಿಯದ ಪಯಣ,- ಆತ್ಮಕಥೆ
  17. ದೇವ ಸ್ಮರಣೆ - ಬಾಗಲೋಡಿ ದೇವರಾಯ ಸ್ಮರಣ ಸಂಪುಟ (ಸಂಪಾದನೆ)
  18. ಸಂಗೀತ ರಸನಿಮಿಷಗಳು ಅವರ ಪ್ರಮುಖ ಕೃತಿಗಳು.
  19. ಭವಿಷ್ಯ ವಿಜ್ಞಾನ

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  1. 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'
  2. 'ಕನ್ನಡ ಸಾಹಿತ್ಯ ಪರಿಷತ್ತಿನ ಎಚ್.ನರಸಿಂಹಯ್ಯ ಪ್ರಶಸ್ತಿ',
  3. 'ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ',
  4. 'ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ' ಮತ್ತು
  5. 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಅವರನ್ನು ಹುಡುಕಿಕೊಂಡು ಬಂದಿದ್ದವು.
  6. 'ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ,' ಅವರಿಗೆ `ಗೌರವ ಡಾಕ್ಟರೇಟ್' ಪ್ರಶಸ್ತಿ ನೀಡಿ ಗೌರವಿಸಿತ್ತು.

ಜೂನ್ ೨೭ ೨೦೦೮ರಂದು ಮೈಸೂರಿನಲ್ಲಿ ಬೆಳಿಗ್ಗೆ ಏಳು ಗಂಟೆಗೆ ಮೈಸೂರು ನಗರದ, 'ವಿಕ್ರಂ ಆಸ್ಪತ್ರೆ'ಯಲ್ಲಿ ನಿಧನರಾದರು. 'ಜಿಟಿಎನ್' ಅವರ ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡದೆ ಅವರ ಇಚ್ಛೆಯಂತೆ 'ಜೆಎಸ್ಎಸ್' ಆಸ್ಪತ್ರೆಗೆ ದಾನ ಮಾಡಲಾಯಿತು. ಪತ್ನಿ, 'ಲಕ್ಷ್ಮಿದೇವಿ', ಪುತ್ರರಾದ 'ಅಶೋಕವರ್ಧನ Archived 2012-10-20 ವೇಬ್ಯಾಕ್ ಮೆಷಿನ್ ನಲ್ಲಿ.', 'ಅನಂತವರ್ಧನ', 'ಆನಂದವರ್ಧನ', ಅಪಾರ ಬಂಧು-ಬಳಗ ಹಾಗೂ ಶಿಷ್ಯವರ್ಗವನ್ನು ಅಗಲಿದ್ದಾರೆ. ಧರ್ಮಸ್ಥಳದ ಧರ್ಮಾಧಿ ಕಾರಿ, 'ಡಿ.ವೀರೇಂದ್ರ ಹೆಗ್ಗಡೆ' ಕೂಡ ಜಿಟಿಎನ್ ಶಿಷ್ಯರಲ್ಲೊಬ್ಬರು. ಕನ್ನಡ ಚಲನಚಿತ್ರ ನಿರ್ದೇಶಕ ಅಭಯ ಸಿಂಹ, ಇವರ ಮೊಮ್ಮಗ.[]

ಉಲ್ಲೇಖಗಳು

ಬದಲಾಯಿಸಿ
  1. http://aryabhatappc.blogspot.in/2011/02/supernoakannada-g-t-narayana-rao1996.html
  2. http://www.astronomytoday.com/blog/prof-gt-narayana-rao-india/
  3. http://navakarnataka.blogspot.in/2013/08/srinivasa-ramanujan-by-g-t-narayana-rao.html
  4. http://www.thehindu.com/todays-paper/tp-national/tp-karnataka/tributes-paid-to-narayana-rao/article1287781.ece

ಹೊರಗಿನ ಸಂಪರ್ಕಗಳು

ಬದಲಾಯಿಸಿ