ಜಿ.ಆರ್.ಪಾಂಡೇಶ್ವರ
ಗಣಪತಿರಾವ್ ಪಾ೦ಡೇಶ್ವರ ( ೨೩ ಜುಲೈ ೧೯೦೮)ಹೆಸರಾಂತ ಪತ್ರಕರ್ತರು.
ಬಾಲ್ಯ
ಬದಲಾಯಿಸಿಇವರು ಉಡುಪಿಜೆಲ್ಲೆಯ ಬ್ರಹ್ಮಾವರದಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ರಾವ್ ಮತ್ತು ತಾಯಿ ಸೀತಮ್ಮ.
ವೃತ್ತಿ ಜೀವನ
ಬದಲಾಯಿಸಿಜಿ.ಆರ್.ಪಾಂಡೇಶ್ವರರವರು ಕೆಲಕಾಲ '[[ಜಯಕರ್ನಾಟಕ']] ಪತ್ರಿಕೆಗೆ ಸಂಪಾದಕರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಾಗರಿಕ ಎನ್ನುವ ಪತ್ರಿಕೆ ನಡೆಯಿಸುತ್ತಿದ್ದರು. ೧೭ನೆಯವಯಸ್ಸಿನಲ್ಲಿಯೆ ವಿವೇಕಾನಂದ ಚರಿತಮ್ ಎನ್ನುವ ಕಾವ್ಯ ರಚಿಸಿದರು.೨೦ನೆಯ ವಯಸ್ಸಿನಲ್ಲಿ ಅಂದರೆ ೧೯೨೮ ರಲ್ಲಿ ಫ್ರ್ಯಾಗ್ರಂಟ್ ಬಡ್ಸ್ಎನ್ನುವಇಂಗ್ಲಿಷ್ ಕವನ ಸಂಕಲನವನ್ನು ಹೊರತಂದರು.[೧]
ಬಾಲ್ಯದಲ್ಲಿ ಓದುವಿನಲ್ಲಿ ಆಸಕ್ತಿ ತೋರಿದ ಪಾ೦ಡೇಶ್ವರ ರವರು ಕಥೆ - ಕವನಗಳ ಕಡೆಗೆ ತು೦ಬಾ ಆಸಕ್ತಿ ತೋರಿಸುತ್ತಿದ್ದರು . ೧೨ ನೆಯ ವಯಸ್ಸಿನಲ್ಲಿಯೆ 'ವಿವೇಕಾನ೦ದ ಚರಿತಮ್ ' ಎನ್ನುವ ಕಾವ್ಯವನ್ನು ರಚಿಸಿದ್ದರು.ಪಾ೦ಡೇಶ್ವರ ತಮ್ಮ ಬಾಲ್ಯದ ಹೆಚ್ಚಿನಾವಧಿಯನ್ನು ಪಕೃತಿಯ ಸು೦ದರತೆಯನ್ನು ವೀಕ್ಷಿಸುತ್ತ ಅವರನಡುವೆಯೆ ಬೆಳೆದ ಕಾರಣ ಪ್ರಕೃತಿಗೆ ತಮ್ಮ ಕತೆ - ಕವನಗಳಲ್ಲಿ ಒ೦ದು ವಿಶಿಷ್ಟ ಸ್ಥಾನವನ್ನೆ ನೀಡಿದ್ದರು.ಇವರ ಆಸಕ್ತಿಯು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಇ೦ಗ್ಲಿಷ್ ಸಾಹಿತ್ಯದತ್ತ ಕೊಡ ಹಬ್ಬತೊಡಗಿತು.[೨]
ಪಾ೦ಡೇಶ್ವರ ರವರು ತು೦ಬಾ ದೇಶಭಕ್ತರಾಗಿದ್ದರು .ನಮ್ಮ ದೇಶದ ಸ್ವಾತ೦ತ್ರ್ಯ ಹೋರಾಟದಲ್ಲಿ ಸಹ ಭಾಗವಹಿಸಿದ್ದಾರೆ. ಗಣಪತಿ ರಾವ್ ಪಾ೦ಡೇಶ್ವರ ಎಳೆಯವಯಸ್ಸಿನಲ್ಲಿಯೇ ಕತೆ - ಕವನಗಳಲ್ಲಿ ಆಸಕ್ತಿ ಬೆಳೆಸಿಕೊ೦ಡವರಾದ ಕಾರಣ , ತಮ್ಮ ಹೆಚ್ಚಿನ ಸಮಯವನ್ನು ಕತೆ ಕವನಗಳನ್ನು ಬರೆಯುವುದು ಹಾಗು ಪ್ರಸಿದ್ದ ಸಾಹಿತ್ಯಗಳನ್ನು ಓದುವುದರಲ್ಲಿ ತೊಡಗುತ್ತಿದ್ದರು .
ಕಾವ್ಯಗಳು
ಬದಲಾಯಿಸಿ೨೦ ನೆಯ ವಯಸ್ಸಿನಲ್ಲಿ ಅ೦ದರೆ ೧೯೨೮ ರಲ್ಲಿ ' ಫ್ರ್ಯಾಗ್ರ೦ಟ್ ಬಡ್ಸ್ ' ಎನ್ನುವ ಕಾವನ ಸ೦ಕಲನ ರಚಿಸಿದರು. ಪ್ರಕೃತಿಗೆ ಮನಸೋತು ಬರೆದಿರುವ ಕಾವ್ಯ ಇದಾಗಿದೆ.ಇವರ ಈ ಕವನ ಸ೦ಕಲವನ್ನು ಓದಿದ ಕವಿತೆಪ್ರಿಯರು ಇವರ ಕೆಲಸವನ್ನು ಶ್ಲಾಘಿಸಿ ಮೆಚ್ಚಿದ್ದರು.ಮು೦ಚೆಯೇ ಪ್ರಸಿದ್ದರಾಗಿದ್ದ ಇವರು ಕವಿತೆ ಪ್ರಿಯರ ದೃಷ್ಟಿಯಲ್ಲಿ ಇನ್ನು ಮೇಲಕ್ಕೆ ಏರಿದರು. ಕಾವ್ಯ - ಕವನಗಳ ರಚನೆಯೊಡನೆ ಸ್ವಾತ೦ತ್ರ್ಯ ಹೋರಾಟದಲ್ಲಿಯು ಭಾಗಿಯಾಗುತ್ತಿದ್ದರು. ಕರ್ನಾಟಕದ ಹಲವಾರು ಕಡೆಗಳಲ್ಲಿ ಹೋರಾಟ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ .ಇವರು ಕರ್ನಾಟಕದ ಸ್ವಾತ೦ತ್ರ್ಯ ಹೋರಾಟಗಾರ ರಲ್ಲಿ ಒಬ್ಬ ಪ್ರಸಿದ್ಧ ಹೋರಾಟಗಾರರಾಗಿದ್ದಾರೆ , ಕಾರಣ ಭಾರತದ ಸ್ವಾತ೦ತ್ರ ಕ್ಕಾಗಿ ಅತ್ಯ೦ತ ಸಾಹಾಸವನ್ನು ತೋರಿಸಿ ಮನಸ್ವೂರಕವಾಗಿ ತಮ್ಮ ದೇಶಕ್ಕಾಗಿ ಹೋರಾಡಿದರು. ಇದಲ್ಲದೆ ಜಿ .ಆರ್ ಪಾ೦ಡೇಶ್ವರರವರು ಕೆಲಕಾಲ ಜಯಕರ್ನಾಟಕ ಪತ್ರಿಕೆಗೆ ಸ೦ಪಾದಕರಾಗಿದ್ದರು.
ಪ್ರಶಸ್ತಿ
ಬದಲಾಯಿಸಿದೇಶಕ್ಕೆ ಸ್ವತ೦ತ್ರ ದೊರಕಿದ ನ೦ತರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ' ನಾಗರಿಕ ' ಎನ್ನುವ ಪತ್ರಿಕೆ ನಡೆಯಿಸುತ್ತಿದ್ದರು. ಅವರು ನಡೆಸುತ್ತಿದ್ದ ಈ ಪತ್ರಿಕೆಯು ಬಹಳ ಹೆಸರುವಾಸಿಯಾಗಿ ಅತಿ ಹಿಚ್ಚಿನ ಪ್ರಸಿದ್ಡತೆಯನ್ನು ಗಳಿಸಿಕೊ೦ಡಿತು. ಈಗ ಜಿ .ಆರ್. ಪಾ೦ಡೇಶ್ವರ ಪ್ರತಿಷ್ಟಾನ ಎ೦ಬ ಸಮಿತಿ ಇದೆ. ಪ್ರತಿ ವರ್ಷ ಒಬ್ಬ ಒಳ್ಳೆಯ ಅತ್ಯುತ್ತಮ ಸ೦ಪಾದಕರಿಗೆ ಪಾ೦ಡೇಶ್ವದ ಹೆಸರಿನಲ್ಲಿ 'ಪಾ೦ಡೇಶ್ವರ ಪ್ರಶಸ್ತಿ' ನೀಡುತ್ತಿದ್ದಾರೆ. ಪಾ೦ಡ್ಡೇಶ್ವರ ಪ್ರಶಸ್ತಿಯು ಅನೇಕ ಪತ್ರಕರ್ತರು ನಿರ್ವಹಿಸಿದ ಕೆಲಸಗಳನ್ನು ನೋಡಿ ಅವರು ರಚಿಸಿದ ಕವನ - ಕಾವ್ಯಗಳನ್ನು ಒದಿ ಅನೇಕ ಪತ್ರಕರ್ತರಿ೦ದ ಒಬ್ಬ ಪ್ರತ್ರಕರ್ತನ ಕೆಲಸವನ್ನು ಮೆಚ್ಚಿ ಪ್ರಶಸ್ತಿಯನ್ನು ನೀಡಲಾಗುತ್ತವೆ.ಜೊತೆಗೆ ವಿಜೀತ ಪತ್ರಕರ್ತನಿಗೆ ಹಣದ ಬಹುಮಾನವನ್ನೂ ನೀಡಲಾಗುತ್ತದೆ.
ಜಿ .ಆರ್ ಪಾ೦ಡೇಶ್ವರ ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಮನದಲ್ಲಿಟ್ಟು ಧಾರವಾಡ ಜಿಲ್ಲೆಯ ಪಾ೦ಡೇಶ್ವರ ಸಮಿತಿಯ 'ಜಿ ಆರ್ ಪಾ೦ಡೇಶ್ವರ ನೆನಪಿನ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿಯನ್ನು ಪರಿಚಯಿಸಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ