ಜಿಸ್ಯಾಟ್‌–17 ದೂರಸಂಪರ್ಕ ಉಪಗ್ರಹ

ಏರಿಯಾನ್‌ 5 ವಾಹಕ

ಬದಲಾಯಿಸಿ
 
ಯುರೋಪಿನ ಸ್ಪೇಸ್ಪೋರ್ಟ್ನಲ್ಲಿ (ಸೆಂಟ್ರಲ್ ಸ್ಪಾಟಿಯಲ್ ಗಯಾನಾಯಿಸ್ ಅಥವಾ ಸಿ.ಎಸ್.ಜಿ) ಏರಿಯೆನ್ ಮತ್ತು ವೆಗಾ ಉಡಾವಣಾಗಳ ಮೂಲಭೂತ ಸೌಕರ್ಯಗಳ ನಕ್ಷೆ, ಫ್ರೆಂಚ್ ಗಯಾನಾ
  • ಫ್ರೆಂಚ್‌ ಗಯಾನದ ಕೌರೊ ಉಡಾವಣೆ ಕೇಂದ್ರದಿಂದ ಗುರುವಾರ ನಸುಕಿನಲ್ಲಿ (ಭಾರತೀಯ ಕಾಲಮಾನ 30 ಜೂನ್ 2017 2.45ಕ್ಕೆ) ಉಪಗ್ರಹವನ್ನು ಹೊತ್ತ ‘ಏರಿಯಾನ್‌ 5’ ಉಡಾವಣಾ ವಾಹನ ಆಕಾಶಕ್ಕೆ ಜಿಗಿಯಿತು.
  • 3,477 ಕೆ.ಜಿ ತೂಕದ ಉಪಗ್ರಹವು ಉಡಾವಣೆಗೊಂಡ 39 ನಿಮಿಷಗಳಲ್ಲಿ ನಿಗದಿತ ದೀರ್ಘವೃತ್ತಾಕಾರದ ಭೂಸ್ಥಾಯಿ ವರ್ಗಾವಣೆ ಕಕ್ಷೆಯನ್ನು ಸೇರಿತು. ಉಡಾವಣಾ ವಾಹನದಿಂದ ಉಪಗ್ರಹವು ಬೇರ್ಪಟ್ಟ ತಕ್ಷಣವೇ ಹಾಸನದ ಮಾಸ್ಟರ್‌ ಕಂಟ್ರೋಲ್‌ ಫೆಸಿಲಿಟಿ ಕೇಂದ್ರ ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.
 
Ariane 5ES ಏರಿಯಾನ್‌ 5 ಮಾದರಿ
  • ಉಡಾವಣೆ ಫೋಟೊ:[[೧]]

ಜಿಸ್ಯಾಟ್‌–17 ಉಪಗ್ರಹ

ಬದಲಾಯಿಸಿ
  • ಉಪಗ್ರಹ ಸುಸ್ಥಿತಿಯಲ್ಲಿದ್ದು, ಸಹಜವಾಗಿ ಕಾರ್ಯ ನಿರ್ವಹಣೆ ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಉಪಗ್ರಹದ ಕಕ್ಷೆಯನ್ನು ಸಮಭಾಜಕ ವೃತ್ತದಿಂದ ಮೇಲಕ್ಕೆ ಏರಿಸುವ ಮೂಲಕ ಭೂಸ್ಥಾಯಿ ಕಕ್ಷೆಗೆ ಸೇರಿಸಲಾಗುವುದು. ಕಕ್ಷೆಯನ್ನು ಏರಿಸುವ ಕಾರ್ಯಾಚರಣೆ ಸಂದರ್ಭದಲ್ಲೇ ಜಿಸ್ಯಾಟ್‌ನ ಎರಡು ಸೌರ ಫಲಕಗಳು ಮತ್ತು ಆ್ಯಂಟೆನಾ ಪ್ರತಿಬಿಂಬಕಗಳು ತೆರೆದುಕೊಳ್ಳುವ ಮೂಲಕ ಕಾರ್ಯಾರಂಭಿಸುತ್ತವೆ. ಭಾರತದ ಇತರ ಭೂಸ್ಥಾಯಿ ಉಪಗ್ರಹಗಳ ಸಮೀಪದಲ್ಲೇ ಇದನ್ನು ನೆಲೆಗೊಳಿಸಲಾಗುತ್ತದೆ. ಕೊನೆಯ ಹಂತದಲ್ಲಿ ಸಂವಹನ ಪೇಲೋಡ್‌ನ ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು.
  • ಎರಡು ತಿಂಗಳಲ್ಲಿ ಮೂರನೇ ಸಂವಹನ ಉಪಗ್ರಹವನ್ನು ಇಸ್ರೊ ಉಡಾವಣೆ ಮಾಡಿದೆ. ವಿವಿಧ ರೀತಿಯ ಸಂಪರ್ಕ, ಹವಾಮಾನ ದತ್ತಾಂಶ ಮತ್ತು ಉಪಗ್ರಹ ಆಧಾರಿತ ಶೋಧನೆಗೆ ಇದನ್ನು ಬಳಸಲಾಗುತ್ತದೆ.

ಸಂವಹನ ಉಪಗ್ರಹಗಳು

ಬದಲಾಯಿಸಿ
  • ಓಟ್ಟು ಸಂವಹನ 21 ಉಪಗ್ರಹಗಳ ಉಡಾವಣೆ
  • ಏರಿಯಾನ್‌ ರಾಕೆಟ್‌ ಮೂಲಕ ಒಟ್ಟು 21 ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಿದೆ.
  • ಮುಂದಿನ ಉಡಾವಣೆ 5000 ಕೆ.ಜಿ ತೂಕದ ಜಿಸ್ಯಾಟ್‌–11

31 ಸಂವಹನ ಉಪಗ್ರಹಗಳು

ಬದಲಾಯಿಸಿ

ಇಸ್ರೊ ಇಲ್ಲಿಯವರೆಗೆ 31 ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ 19 ಸಂವಹನ ಉಪಗ್ರಹಗಳನ್ನು ಏರಿಯಾನ್‌ ರಾಕೆಟ್‌ ಮೂಲಕವೇ ಹಾರಿ ಬಿಡಲಾಗಿದೆ. 10 ಉಪಗ್ರಹಗಳನ್ನು ಜಿಎಸ್‌ಎಲ್‌ವಿ, ಒಂದನ್ನು ಪಿಎಸ್‌ಎಲ್‌ವಿ ಹಾಗೂ ಇನ್ನೊಂದು ಉಪಗ್ರಹವನ್ನು ಜಿಎಸ್‌ಎಲ್‌ವಿ ಮಾರ್ಕ್‌–3 ಮೂಲಕ ಉಡಾವಣೆ ಮಾಡಲಾಗಿದೆ. ಇವುಗಳಲ್ಲಿ ಮೂರು ಉಪಗ್ರಹಗಳು ಉಡಾವಣಾ ವೈಫಲ್ಯದಿಂದ ನಷ್ಟಗೊಂಡಿವೆ.[] []

ಉಲ್ಲೇಖ

ಬದಲಾಯಿಸಿ
  1. ಕಕ್ಷೆ ಸೇರಿದ ಜಿಸ್ಯಾಟ್‌–17 ಸಂವಹನ ಉಪಗ್ರಹ;ಪ್ರಜಾವಾಣಿ ವಾರ್ತೆ;30 Jun, 2017
  2. "GSAT-17". Archived from the original on 2017-07-31. Retrieved 2017-06-30.