ಜಾನ್ ಪೀಟರ್ ಬರ್ಜರ್ (೫ನೇ ನವೆಂಬರ್ ೧೯೨೬) ಬ್ರಿಟಿಷ್ ಕಲಾವಿಮರ್ಶಕ, ಚಿತ್ರಕಲಾವಿದ, ಕವಿ ಮತ್ತು ಕಾದಂಬರಿಕಾರ. ೧೯೭೨ರಲ್ಲಿ ಬರ್ಜರ್ ಬರೆದ 'ಜಿ' ಕಾದಂಬರಿಗೆ ಬುಕರ್ ಪ್ರಶಸ್ತಿ ಲಭಿಸಿತ್ತು. ಅದೇ ವರ್ಷ ಬಿಬಿಸಿ ಸರಣಿಯಾಗಿ ರಚಿಸಲಾದ 'ವೇಸ್ ಆಫ್ ಸೀಯಿಂಗ್' ತಾತ್ವಿಕ ಲೇಖನವು ಮುಂದೆ ಅನೇಕ ವಿಶ್ವವಿದ್ಯಾಲಯಗಳ ಪಠ್ಯವೂ ಆಗಿತ್ತು. ೧೯೪೪-೪೬ರ ನಡುವೆ ಸೈನ್ಯದಲ್ಲಿದ್ದ ಇವರು ನಂತರ ಲಂಡನ್ನಿನ ಚೆಲ್ಸಿ ಕಲಾಶಾಲೆಗೆ ಸೇರಿಕೊಂಡು, ನಂತರ ಕಲಾವಿದನಾಗಿ ತಮ್ಮ ಕೃತಿಗಳನ್ನು ಲಂಡನ್ನಿನ ಅನೇಕ ಗ್ಯಾಲರಿಗಳಲ್ಲಿ ಪ್ರದರ್ಶಿಸಿದರು. ಮಾರ್ಕ್ಸ್‌ವಾದಿ ಬರ್ಜರ್ ಆಧುನಿಕ ಕಲೆಯನ್ನು ಕುರಿತಾದ ತೀವ್ರತರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರಿಂದಲೇ ಸಾಕಷ್ಟು ವಿವಾದಕ್ಕೊಳಗಾದರು. ೧೯೬೨ರಲ್ಲಿ ಬ್ರಿಟನ್ನಿನ ಜೀವನಶೈಲಿಯಿಂದ ಬೇಸತ್ತು ಸ್ವಯಂಪ್ರೇರಣೆಯಿಂದ ಫ್ರಾನ್ಸಿನಲ್ಲಿ ನೆಲಸಿದ್ದರು. 'ಜಿ' ಕಾದಂಬರಿಯಿಂದ ಬಂದ ಪ್ರಶಸ್ತಿ ಹಣದಲ್ಲಿ ಅರ್ಧವನ್ನು ಬ್ರಿಟನ್ನಿನ ಬ್ಲಾಕ್ ಪಾಂತರ್ ಪಾರ್ಟಿಗೂ ಉಳಿದರ್ಧವರ್ನ್ನು ವಲಸಿಗ ಕೆಲಸಗಾರರನ್ನು ಕುರಿತು ಅಧ್ಯಯನ ಮಾಡಲೂ ವ್ಯಯಿಸಿದ್ದರು. ಇವರ ಬರವಣಿಗೆಯು ಸಮಾಜಶಾಸ್ತ್ರೀಯ ಅಧ್ಯಯನ, ಕಥನ, ಕಾವ್ಯಗಳೆಲ್ಲಾ ಪ್ರಕಾರದಲ್ಲಿದ್ದರೂ ಜೀವದಾನುಭವದ ಕುರಿತದ್ದೇ ಆಗಿದೆ.

John Berger (Strasbourg, 2009)
John Berger
Berger in 2009
ಜನನJohn Peter Berger[]
(೧೯೨೬-೧೧-೦೫)೫ ನವೆಂಬರ್ ೧೯೨೬
Stoke Newington, ಲಂಡನ್, England
ಮರಣ2 January 2017(2017-01-02) (aged 90)
Paris, France
ವೃತ್ತಿNovelist
ಭಾಷೆEnglish
ರಾಷ್ಟ್ರೀಯತೆBritish
ವಿದ್ಯಾಭ್ಯಾಸSt Edward's School, Oxford
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆChelsea School of Art; Central School of Art
ಪ್ರಕಾರ/ಶೈಲಿWriter
ಪ್ರಮುಖ ಪ್ರಶಸ್ತಿ(ಗಳು)James Tait Black Memorial Prize; Booker Prize (1972)

ಪ್ರಶಸ್ತಿಗಳು

ಬದಲಾಯಿಸಿ
  1. ನೋಡುವ ಬಗೆ ಜಾನ್ ಬರ್ಜರ್‌ನ ಮೂಲಪುಸ್ತಕ ವೇಸ್ ಆಫ್ ಸೀಯಿಂಗ್(en:Ways of Seeing)ನ ಕನ್ನಡ ಅನುವಾದ, ಎಚ್.ಎ ಅನಿಲ್ ಕುಮಾರ್, ‌ISBN 978-1-907219-61-0

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "John Berger, Provocative Art Critic, Dies at 90". The New York Times. 2 January 2017. Retrieved 3 January 2017.