ಜಾನು (ಚಲನಚಿತ್ರ)
ಜಾನು 2012 ರ ಕನ್ನಡ ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದು ಜಯಣ್ಣ ಕಂಬೈನ್ಸ್ ನಿರ್ಮಿಸಿದ್ದಾರೆ. ಯಶ್ ಮತ್ತು ದೀಪಾ ಸನ್ನಿಧಿ ನಾಯಕ ನಾಯಕಿಯಾಗಿದ್ದು, ರಂಗಾಯಣ ರಘು, ಸಾಧು ಕೋಕಿಲ, ಶೋಬರಾಜ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತಸಂಯೋಜಕರು. [೨] ಈ ಚಲನಚಿತ್ರವು 1 ಜೂನ್ 2012 ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಯಿತು. [೩] ಈ ಚಲನಚಿತ್ರವನ್ನು 2018 ರಲ್ಲಿ ಒಡಿಯಾದಲ್ಲಿ ಲವ್ ಎಕ್ಸ್‌ಪ್ರೆಸ್ ಎಂದು ರೀಮೇಕ್ ಮಾಡಲಾಯಿತು. [೪]
ಜಾನು | |
---|---|
ನಿರ್ದೇಶನ | ಪ್ರೀತಂ ಗುಬ್ಬಿ |
ನಿರ್ಮಾಪಕ |
|
ಲೇಖಕ | ಗುರುರಾಜ್. ಎಂ. ದೇಸಾಯಿ [ಸಂಭಾಷಣೆ] |
ಚಿತ್ರಕಥೆ | ಪ್ರೀತಂ ಗುಬ್ಬಿ |
ಕಥೆ | ಪ್ರೀತಂ ಗುಬ್ಬಿ |
ಪಾತ್ರವರ್ಗ |
|
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ಎಸ್. ಕೃಷ್ಣ |
ಸಂಕಲನ | Deepu. ಎಸ್. ಕುಮಾರ್ |
ಸ್ಟುಡಿಯೋ | ಜಯಣ್ಣ ಕಂಬೈನ್ಸ್ |
ವಿತರಕರು | ಜಯಣ್ಣ ಫಿಲಮ್ಸ್ |
ಬಿಡುಗಡೆಯಾಗಿದ್ದು | 2012 ರ ಜೂನ್ 1 |
ಅವಧಿ | 2 ಗಂಟೆಗಳು 17 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹ 4 ಕೋಟಿ [೧] |
ಪಾತ್ರವರ್ಗ
ಬದಲಾಯಿಸಿ- ಸಿದ್ಧಾರ್ಥ್ ಪಾತ್ರದಲ್ಲಿ ಯಶ್
- ಜಾನು ಪಾತ್ರದಲ್ಲಿ ದೀಪಾ ಸನ್ನಿಧಿ
- ರಂಗಾಯಣ ರಘು
- ಸಾಧು ಕೋಕಿಲ
- ಲಯ ಕೋಕಿಲಾ
- ಚಿಕ್ಕಣ್ಣ
- ಮಧು ಗುರುಸ್ವಾಮಿ
- ರಾಘವ ಉದಯ್
- ಶೋಬರಾಜ್
- ರಾಕ್ಲೈನ್ ಸುಧಾಕರ್
- ರಾಜಶೇಖರ್ ನಾಯ್ಡು
- ಸಂಗೀತಾ
- ಎಂ ಎಸ್ ಉಮೇಶ್
- ರವಿವರ್ಮ
ನಿರ್ಮಾಣ
ಬದಲಾಯಿಸಿಹಾಗೆ ಸುಮ್ಮನೆ ಮತ್ತು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ನಂತರ, ಪ್ರೀತಂ ಗುಬ್ಬಿ ಹಿಂದಿನ ಚಿತ್ರಗಳಂತೆ ನಿರ್ಮಾಪಕರಾದ ಜಯಣ್ಣ ಕಂಬೈನ್ಸ್‌ನೊಂದಿಗೆ ಸೇರಿಕೊಂಡರು.
ಬಾಕ್ಸ್ ಆಫೀಸ್ ನಲ್ಲಿ
ಬದಲಾಯಿಸಿಜಾನು ಬಹು ನಿರೀಕ್ಷಿತ ಚಿತ್ರವಾಗಿದ್ದು ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಆದರೆ ಚಿತ್ರವು ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು, ಆದರೂ ಅದು 50 ದಿನಗಳ ಓಟವನ್ನು ಪೂರ್ಣಗೊಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ. [೫]
ಧ್ವನಿಮುದ್ರಿಕೆ
ಬದಲಾಯಿಸಿವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಆಲ್ಬಮ್ ಐದು ಹಾಡುಗಳನ್ನು ಒಳಗೊಂಡಿದೆ. [೬] ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಆಲ್ಬಮ್ 13 ಮೇ 2012 ರಂದು ಬಿಡುಗಡೆಯಾಯಿತು. [೭]
Track listing | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಏನ್ ಸಮಾಚಾರ ರೀ" | ಯೋಗರಾಜ ಭಟ್ | ಟಿಪ್ಪು | 4:08 |
2. | "ಕದ್ದು ಮುಚ್ಚಿ" | ಜಯಂತ ಕಾಯ್ಕಿಣಿ | ಅನುರಾಧಾ ಭಟ್ | 3:38 |
3. | "ಕಣ್ ಮುಚ್ರೋ ಕಣ್ ಮುಚ್ರಿ" | ಯೋಗರಾಜ ಭಟ್ | ವಿ.ಹರಿಕೃಷ್ಣ | 4:11 |
4. | "ನೀನೇ ನನ್ನ ಸವಿಗನಸು" | ಜಯಂತ ಕಾಯ್ಕಿಣಿ | ಸೋನು ನಿಗಮ್ | 4:10 |
5. | "ಸ್ವಲ್ಪ ಬಿಟ್ಕೊಂಡು" | ಯೋಗರಾಜ ಭಟ್ | ವಿ.ಹರಿಕೃಷ್ಣ, ಲಕ್ಷ್ಮಿ ವಿಜಯ್ | 4:19 |
ಒಟ್ಟು ಸಮಯ: | 20:26 |
ಉಲ್ಲೇಖಗಳು
ಬದಲಾಯಿಸಿ- ↑ https://www.news18.com/news/india/sandalwood-progress-report-of-first-half-of-2012-485642.html
- ↑ "IndiaGlitz - Lavish song for Jaanu - Kannada Movie News". Retrieved 2016-10-26.
- ↑ "IndiaGlitz - Jaanu gets U certificate - Telugu Movie News". Retrieved 2016-10-26.
- ↑ "Love Express Trailer | Odia Movie | Swaraj & Sunmeera".
- ↑ "Completes 50 days". Archived from the original on 2013-07-21.
- ↑ "Jaanu (Original Motion Picture Soundtrack) - EP". iTunes. Retrieved 2 March 2015.
- ↑ "'Jaanu' five songs audio'". indiaglitz.com. 15 May 2012.