ಜಾಕೊಬಸ್ ಹೆನ್ರಿಕಸ್ ವಾಂಟ್ ಹಾಫ್
ಜೇಕಬ್ಸ್ ಹೆನ್ರಿಕಸ್ ವಾಂಟ್ ಹಾಫ್ | |
---|---|
ಜನನ | ರಾಟರ್‍ಡಾಮ್, ನೆದರ್‍ಲ್ಯಾಂಡ್ | ೩೦ ಆಗಸ್ಟ್ ೧೮೫೨
ಮರಣ | 1 March 1911 ಬರ್ಲಿನ್,ಜರ್ಮನಿ | (aged 58)
ರಾಷ್ಟ್ರೀಯತೆ | ಡಚ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ ರಾಸಾಯನಶಾಸ್ತ್ರ |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಡಾಕ್ಟರೇಟ್ ಸಲಹೆಗಾರರು | ಎಡ್ವರ್ಡ್ ಮಲ್ಡರ್ |
ಗಮನಾರ್ಹ ವಿದ್ಯಾರ್ಥಿಗಳು | ಫ್ರೆಡ್ರಿಕ್ ಜಿ ಡೊನ್ನಾನ್ |
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು |
|
ಪರಿಚಯ
ಬದಲಾಯಿಸಿಜೇಕಬ್ ಹೆನ್ರಿಕಸ್ ವಾಂಟ್ ಹಾಫ್ ಇವರು ಡಚ್ ಭೌತ ಹಾಗೂ ರಾಸಾಯನ ಶಾಸ್ತ್ರಜ್ಞರು. ರಾಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಮೊದಲಿಗರಾದ ಇವರು ಅಗಸ್ಟ್ ೩೦,೧೮೫೬ರಲ್ಲಿ ನೆದರ್‍ಲ್ಯಾಂಡ್‍ನ ರಾಟರ್‍ಡಾಮ್ ಎಂಬಲ್ಲಿ ಜನಿಸಿದರು. ಇವರ ತಂದೆ ಜೇಕಬ್ ಹೆನ್ರಿಕಸ್ ವಾಂಟ್ ಹಾಫ್,ಎಸ್.ಆರ್. ಹಾಗೂ ತಾಯಿ ಆಲಿಡಾ ಕಾಫ್ ವಾಂಟ್ ಹಾಫ್.
ಜೀವನ
ಬದಲಾಯಿಸಿನೆದರ್ಲ್ಯಾಂಡಿನ ರಾಟರ್‍ಡಾಮಿನ ಶಾಲೆಯೊಂದರಲ್ಲಿ ವಾಂಟ್ ಹಾಫ್ ವಿದ್ಯಾಭ್ಯಾಸವನ್ನು ಆರಂಭಿಸಿದರು. ಬಾಲ್ಯದಿಂದಲೇ ಕಲಿಕೆಯಲ್ಲಿ ಮುಂದಿದ್ದ ಇವರಿಗೆ ವಿಜ್ಞಾನ ಮತ್ತು ಪ್ರಕೃತಿ ಮೇಲೆ ತುಂಬಾ ಆಸಕ್ತಿ. ಜೊತೆಗೆ ತಂದೆಯವರಿಂದ ನಿತ್ಯ ವಿಲಿಯಂ ಷೇಕ್ಸ್ಪಿಯರ್ ರವರ ಕಾವ್ಯವಾಚನವನ್ನು ಕೇಳಿ ಕಾವ್ಯ ಮತ್ತು ತತ್ವಶಾಸ್ತ್ರದ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡರು. ಲಾರ್ಡ್ ಬೈರನ್ ರವರನ್ನು ಆರಾಧ್ಯ ಕವಿಯನ್ನಾಗಿಸಿಕೊಂಡವರು. ರಾಸಾಯನ ಶಾಸ್ತ್ರದಲ್ಲಿ ತೀವ್ರವಾದ ಆಸಕ್ತಿ ಹೊಂದಿದ್ದರೂ ತಂದೆ-ತಾಯಿಯರ ಒತ್ತಾಯದ ಮೇರೆಗೆ ಡಿಪ್ಲೊಮಾ ಒಂದಕ್ಕೆ ಸೇರಬೇಕಾಯಿತು. ತನ್ನ ೧೯ನೇ ವರ್ಷದಲ್ಲಿ ಅಗಸ್ಟ್ ಕ್ಯಾಂಟ್ ಮತ್ತಿತರ ಪ್ರಖ್ಯಾತ ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು, ವೇವಲ್ಲನ 'ಪುರೋಗಾಮಿ ವಿಜ್ಞಾನಿಗಳ ಚರಿತ್ರೆ', ಟೈನೆಯ 'ಬುದ್ಧಿವಂತಿಕೆ'- ಇವೇ ಮೊದಲಾದವುಗಳನ್ನು ಓದಿ, ಆಸಕ್ತನಾಗಿ ಡೆಲ್ಟ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಪ್ಟೆಂಬರ್ ೧೮೬೯ರಲ್ಲಿ ಸೇರಿದನು. ಮೂರು ವರ್ಷದ ತರಬೇತಿಯನ್ನು ಎರಡು ವರ್ಷದಲ್ಲಿ ಮೊದಲಿಗನಾಗಿ ಮುಗಿಸಿ, ರಾಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಲೈಡೆನ್ ವಿಶ್ವವಿದ್ಯಾಲಯವನ್ನು ಸೇರಿದನು. ಅಲ್ಲಿಂದ ಬಾನ್ ಹಾಗೂ ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ಉಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ೧೮೭೪ರಲ್ಲಿ ಡಾಕ್ಟರೇಟ್ ಪಡೆದರು. ವಾಂಟ್ ಹಾಫ್ ೧೮೭೮ರಲ್ಲಿ ಜೊಹಾನಾ ಫ್ರಾಂಸೀನಾ ಮೀಜ಼್ ಅವರನ್ನು ಮದುವೆಯಾದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ವಾಂಟ್ ಹಾಫ್ ತಮ್ಮ ೧೯೧೧ರ ಮಾರ್ಚ್ ೧ರ೦ದು ಕ್ಷಯ ರೋಗದ ಕಾರಣ ಬರ್ಲಿನ್‍ನ ಸ್ಟೆಗ್ಲಿಟ್ಜ್ ಎಂಬಲ್ಲಿ ಮರಣ ಹೊಂದಿದರು. ಆಂಸ್ಟರ್ಡಾಮ್ ಮತ್ತು ಉಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ಈಗಲೂ ಇವರ ನೆನಪಿನ ವಿಗ್ರಹವು ಕಂಗೊಳಿಸುತ್ತಿದೆ.
ಸಂಶೋಧನೆ ಮತ್ತು ಬರಹಗಳು
ಬದಲಾಯಿಸಿವಿಶ್ವವಿದ್ಯಾಲಯದಲ್ಲಿ ಅಭ್ಯಸಿಸುತ್ತಿರುವಾಗಲೇ ವಾಂಟ್ ಹಾಫ್ 'ಸಾವಯವ ಸಂಯುಕ್ತಗಳ ದ್ಯುತಿಭ್ರಮಣ ರಚನಾವಿನ್ಯಾಸಗಳ ಪರಸ್ಪರ ಸಂಬಂಧ ಮತ್ತು ಮೂರು ಆಯಾಮಗಳನ್ನು ಬೇಡುವ ಸೂತ್ರಗಳು' ಎಂಬ ಪುಸ್ತಕವನ್ನು ಬರೆದಿದ್ದರು. ಅದು ಜರ್ಮನಿಯ 'ಕ್ರಾಂತಿಕಾರಿ ಬರಹ' ಎಂದೇ ಪ್ರಸಿದ್ಧವಾಗಿತ್ತು. ಸ್ಟ್ರೀರಿಯೋ ರಾಸಾಯನವಿಜ್ಞಾನ[೧], ವಾಂಟ್ ಹಾಫ್-ಲೆಬೆಲರ ವಾದ - ಚತುರ್ವೇಲೆನ್ಸೀಯ, ಇಂಗಾಲದ ಪರಮಾಣು ಸಾವಯವ ಸಂಯುಕ್ತಗಳ ರಚನೆಯಲ್ಲಿ ಪ್ರದರ್ಶಿಸಬಹುದಾದ ಅಸಮ್ಮತಿಯ ಕಲ್ಪನೆ ಇವುಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಮುಂದೆ ೧೮೮೪ರಲ್ಲಿ 'ಕ್ರಿಯಾತ್ಮಕ ರಾಸಾಯನಿಕ ಸಮತೋಲ' ಎಂಬ ಇವರ ಪುಸ್ತಕ ಪ್ರಕಟವಾಯಿತು. ಈ ಪುಸ್ತಕದಲ್ಲಿ ರಾಸಾಯನಿಕ ದರಗಳು, ಕಾರಕಗಳ ಪರಸ್ಪರ ಕ್ರಿಯಾಸೆ, ಚಲ ಸಮತೋಲಗಳು- ಮುಂತಾದವುಗಳ ಬಗ್ಗೆ ವಿವರವಿದೆ. ಇದು ಉದ್ಯಮದಲ್ಲಿ ರಾಸಾಯನಿಕ ಕ್ರಿಯೆಗಳ ತಾಂತ್ರಿಕ ನಿರ್ವಹಣೆಗೆ ಉಪಯುಕ್ತವಾಗಿದೆ. ೧೮೮೫ರಲ್ಲಿ ಪ್ರಾಯೋಗಿಕ ಪುಷ್ಟಿ ಕೊಟ್ಟು 'ಅನಿಲಸ್ಥಿತಿ ಅಥವಾ ಸಾರರಿಕ್ತ ದ್ರಾವಣಸ್ಥಿತಿಯಲ್ಲಿ ರಾಸಾಯನಿಕ ಸಮತೋಲ ನಿಯಮಗಳು', 'ರಾಸಾಯನಿಕ ಸಮತೋಲನ ವಿದ್ಯುತ್ ಉಪಭಾಗಗಳು' ಇತ್ಯಾದಿ ಇವರ ಪ್ರಬಂಧಗಳನ್ನು ಸ್ವೀಡನ್ನಿನ ವಿಜ್ಞಾನ ಅಕಾಡೆಮಿಯು ಪ್ರಕಟಗೊಳಿಸಿತು. ವಾಂಟ್ ಹಾಫ್ ಅರ್ಹಿನಿಯಸ್[೨], ಆಸ್ವಲ್ಡ್, ಪೆಕೆಲ್ ಹ್ಯಾರಿಂಗ್ ಇವರ ಜೊತೆ ಅಧ್ಯಯನ ನಡೆಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿಉಲೇಖ
ಬದಲಾಯಿಸಿ- ↑ https://www.khanacademy.org/science/organic-chemistry/stereochemistry-topic
- ↑ https://www.nobelprize.org/nobel_prizes/chemistry/laureates/1903/arrhenius-bio.html
- ↑ https://royalsociety.org/grants-schemes-awards/awards/davy-medal/
- ↑ "ಆರ್ಕೈವ್ ನಕಲು". Archived from the original on 2016-12-08. Retrieved 2016-11-27.
ಬಾಹ್ಯ ಸ೦ಪರ್ಕ
ಬದಲಾಯಿಸಿ- Patrick Coffey, Cathedrals of Science: The Personalities and Rivalries That Made Modern Chemistry, Oxford University Press, 2008. ISBN 978-0-19-532134-0
- Hornix WJ, Mannaerts SHWM, van 't Hoff and the emergence of Chemical Thermodynamics, Delft University Press, 2001, ISBN 90-407-2259-5
- https://www.nobelprize.org/nobel_prizes/chemistry/laureates/1901/hoff-bio.html