ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು

ವಸತಿ ಶಾಲೆ

ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಬಾಳೆಹೊನ್ನೂರು (ಜನವಿಬಾ) ಸಮೀಪದ ಸೀಗೋಡಿನಲ್ಲಿರುವ ವಸತಿ ಶಾಲೆಯಾಗಿದೆ. ಭಾರತ ಸರ್ಕಾರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ  ನವೋದಯ ವಿದ್ಯಾಲಯ ಸಮಿತಿಯಿಂದ ಈ ಶಾಲೆ ನಡೆಸಲ್ಪಡುತ್ತಿದೆ .

ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು

Jawahar Navodaya Vidyalaya,Chikmagalur

ಚಿತ್ರ:Navodaya logo color.jpg
ಪ್ರಜ್ನಾ೦ ಬ್ರಹ್ಮ
Consciousness is Brahman
Location
ಸೀಗೊಡು,ಬಾಳೆಹೊನ್ನೂರು,ಕೊಪ್ಪ,ಚಿಕ್ಕಮಗಳೂರು,ಕರ್ನಾಟಕ India
ಹೈದರಾಬಾದ್ ವಲಯ
Information
ಸ್ಥಾಪನೆ 23 ಅಕ್ಟೋಬರ್ 1986
Grades VI - XII (6th-12th)
Campus size 40 acres (16 ha)
Campus type ಗ್ರಾಮೀಣ
Nickname ಜನವಿಬಾ (JNVB)
Affiliation CBSE
Website


ಇತಿಹಾಸ

ಬದಲಾಯಿಸಿ

ಜವಾಹರ ನವೋದಯ ವಿದ್ಯಾಲಯ, ಚಿಕ್ಕಮಗಳೂರು 1986 ರ ಅಕ್ಟೋಬರ್ 23 ರಂದು ಕಾಫಿ ಸಂಶೋಧನಾ ಕೇಂದ್ರ(ಸಿ ಆರ್ ಎಸ್) ನಲ್ಲಿ  ಪ್ರಾರಂಭವಾಯಿತು.  ಎರಡು ವರ್ಷಗಳ ನಂತರ ಇದನ್ನು ಸೀಗೋಡಿನಲ್ಲಿ ಶಾಶ್ವತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.  ಜನವಿಬಾ 40 ಎಕರೆಗಳಷ್ಟು ವಿಸ್ತಾರವಾದ ಹಸಿರು ಪ್ರದೇಶದಲ್ಲಿದ್ದು, ಚಿಕ್ಕಮಗಳೂರಿನಿಂದ 58 ಕಿಮೀ ಮತ್ತು ಬಾಳೆಹೊನ್ನೂರಿನಿಂದ 5 ಕಿಮೀ ಮತ್ತು ಶೃಂಗೇರಿಯಿ೦ದ 30ಕಿಮೀ ದೂರದಲ್ಲಿದೆ.

ವಿದ್ಯಾರ್ಥಿ ನಿಲಯ

ಬದಲಾಯಿಸಿ

ಇಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ  ಪ್ರತ್ಯೇಕ ನಿಲಯಗಳಿವೆ.  ಅರಾವಳಿ (ನೀಲಿ) , ನೀಲಗಿರಿ(ಹಸಿರು), ಶಿವಾಲಿಕ್ (ಕೆ೦ಪು), ಉದಯಗಿರಿ(ಹಳದಿ) ಎ೦ಬ ನಾಲ್ಕು  ಮನೆಗಳಿದ್ದು ವಿದ್ಯಾರ್ಥಿಗಳನ್ನು ಈ ನಾಲ್ಕು ಹೌಸ್ ( ವಿದ್ಯಾರ್ಥಿ ನಿಲಯ) ಗಳಿಗೆ ವಿಭಾಗಿಸಲಾಗುತ್ತದೆ.

ವಿದ್ಯಾರ್ಥಿಗಳ ವಲಸೆ

ಬದಲಾಯಿಸಿ

ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ಸಮೀಕರಣವನ್ನು ಉತ್ತೇಜಿಸುವ ದೊಡ್ಡ ಗುರಿ ಹೊಂದಿರುವ ನವೋದಯ ವಿದ್ಯಾಲಯ ಸಮಿತಿ , ವಿದ್ಯಾರ್ಥಿ ವಲಸೆ  ಒಂದು ಪ್ರಮುಖ ಅಂಶವಾಗಿದೆ. ಜನವಿಬಾದಿ೦ದ ಪ್ರತಿವರ್ಷ ಜ.ನ.ವಿ ಪಾಂಧಾನ ( ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆ) ಇಲ್ಲಿಗೆ ೯ನೆ ತರಗತಿಯ ಸುಮಾರು ೨೦  ವಿದ್ಯಾರ್ಥಿಗಳು ೧ವರ್ಷಕ್ಕೆ ವಲಸೆ ಹೋಗಿಬರುತ್ತಾರೆ. ಅದೆ ರೀತಿ ಆ ಶಾಲೆಯ  ವಿದ್ಯಾರ್ಥಿಗಳು ಇಲ್ಲಿಗೆ ೧ವರ್ಷಕ್ಕೆ ವಲಸೆ ಬರುತ್ತಾರೆ.

ಹಳೆವಿದ್ಯಾರ್ಥಿಗಳ ಸಂಘ ( ಅಲುಮ್ನಿ ಅಸೋಸಿಯೇಷನ್)

ಬದಲಾಯಿಸಿ

ಜವಾಹರ್ ನವೋದಯ ವಿದ್ಯಾಲಯ, ಬಾಳೆಹೊನ್ನರು ಅಲುಮ್ನಿ ಅಸೋಸಿಯೇಷನನ್ನು 1993 ರಲ್ಲಿ ರಚಿಸಲಾಯಿತು.ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು  ಪ್ರತಿವರ್ಷ ಡಿಸೆ೦ಬರ್ ಮೊದಲನೇ ವಾರಾ೦ತ್ಯದಲ್ಲಿ  ಜನವಿಬಾ ಶಾಲೆಗೆ ಬ೦ದು ಅಲ್ಲಿನ ವಿದ್ಯಾರ್ಥಿಗಳಿಗೆ , ಅವರ ಉತ್ತಮ ಭವಿಷ್ಯಕ್ಕಾಗಿ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಾಗಾರವನ್ನು ಈ ಸ೦ಘದ ವತಿಯಿ೦ದ ಮಾಡುತ್ತಾರೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

JNVB website Archived 2017-11-09 ವೇಬ್ಯಾಕ್ ಮೆಷಿನ್ ನಲ್ಲಿ.

JNVCKM Alumni Association

NVS official Website