ವಾಟರ್ ಮಾರ್ಕ್

ಭಾರತದಲ್ಲಿ ಚಲಾವಣೆಯಲ್ಲಿರುವ ೧೦ ರೂಪಾಯಿ, ೨೦ ರೂಪಾಯಿ. ಅಥವಾ ಯಾವುದೇ ಮೌಲ್ಯದ ನೋಟುಗಳಲ್ಲಿ ಗಮನಿಸಿದಾಗ ಅದರಲ್ಲಿ ಗಾಂಧಿ ಅಥವಾ ಸಿಂಹಗಳ ಚಿತ್ರವಿರುತ್ತದೆ. ಹಾಗೆ ನೋಡಿದರೆ ಕಾಣಿಸುವುದಿಲ್ಲ. ಬೆಳಕಿಗೆ ಎದುರಾಗಿ ಹಿಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ವಾಟರ್ ಮಾರ್ಕ್ ಎನುತ್ತಾರೆ. ಇದೇ ರೀತಿ ವಿವಿಧ ದೇಶದ ನೋಟುಗಳು ಬೇರೆ ಬೇರೆ ರೀತಿಯ ಚಿನ್ಹೆಗಳನ್ನು ಹೊಂದಿರುತ್ತವೆ.

ನೋಟುಗಳು ನಕಲಿ ನೋಟಗಳನ್ನು ಗುರುತಿಸುವಲ್ಲಿ ನೆರವಾಗಬಲ್ಲ ಒಂದು ಅಂಶ ಇದು. ಮೊದಲಬಾರಿಗೆ ಇದನ್ನು ಬಳಕೆಗೆ ತಂದವರು ಇಟಾಲಿಯನ್ನರು. ೧೨೭೦ರಲ್ಲೇ ಇದನ್ನು ಬಳಸಿದ್ದರು. ಆದರೆ ಅವರು ನೋಟುಗಳಲ್ಲಿ ಬಳಸಿರಲಿಲ್ಲ. ಇಂಗ್ಲೆಂಡಿನಲ್ಲಿ ೧೬೯೭ರಲ್ಲಿ ನೋಟಿನಲ್ಲಿ ಈ ವಾಟರ್ ಮಾರ್ಕನ್ನು ಬಳಸಿದ್ದರು. ನೋಟುಗಳು ನಕಲಿ ಮಾಡಲು ಬಾರದಿರುವಂತೆ ಕಾಪಾಡುವುದು ಉದ್ದೇಶವಾಗಿತ್ತು. ಇದರಲ್ಲೂ ಪ್ರಯೋಗಗಳಾದವು. ಏಕ ವರ್ಣ, ದ್ವಿವರ್ಣ ಮಾರ್ಕುಗಳನ್ನು ಬಳಸುವ ಪ್ರಯತ್ನ ನಡೆಯಿತು. ಬೆಲ್ಜಿಯಮ್ ೧೯೯೮ರಲ್ಲಿ ಬಿಡುಗಡೆ ಮಾಡಿದ ೫೦೦ ಫ್ರಾಂಕ್ ಮೌಲ್ಯದ ನೋಟಿನಲ್ಲಿ ದ್ವಿವರ್ಣದ ಮಾರ್ಕ್ ಬಳಸಲಾಯಿತು. ಆದರೆ ಸಾಮಾನ್ಯವಾಗಿ ಏಕವರ್ಣ ವಾಟರ್ಮಾರ್ಕ್ ಹೆಚ್ಚಾಗಿ ಬಳಕೆಯಲ್ಲಿದೆ.