ಜಯಂತ್ ಯಾದವ್
ಜಯಂತ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀಯಲ್ಲಿ ಹರಿಯಾಣ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.[೧]
ಆರಂಭಿಕ ಜೀವನ
ಬದಲಾಯಿಸಿಜಯಂತ್ ಯಾದವ್ ಜನವರಿ ೨೦, ೧೯೯೦ ರಂದು ದೆಹಲಿಯಲ್ಲಿ ಜನಿಸಿದರು. ೨೦೧೧ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ತಮ್ಮ ೨೧ನೇ ವಯ್ಯಸ್ಸಿಗೆ ಇವರು ಹರಿಯಾಣ ತಂಡದ ಪರವಾಗಿ ರಣಜಿ ಟ್ರೋಫೀಯಲ್ಲಿ ಪಾದಾರ್ಪಣೆ ಮಾಡಿದರು. ೨೦೧೪-೧೫ ರಣಜಿ ಟ್ರೋಫೀಯಲ್ಲಿ ಹರಿಯಾಣ ತಂಡದ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಇಂಡಿಯಾ 'ಎ' ತಂಡಕ್ಕೆ ಆಯ್ಕೆಯಾದರು.[೨][೩][೪][೫]
ವೃತ್ತಿ ಜೀವನ
ಬದಲಾಯಿಸಿಐಪಿಎಲ್ ಕ್ರಿಕೆಟ್
ಬದಲಾಯಿಸಿಮೇ ೦೯, ೨೦೧೫ರಂದು ಛತ್ತೀಸ್‌ಘಡ್‌ದ ರಾಯ್ಪುರ್‌ನಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ವಿರುದ್ಧ ನಡೆದ ೪೫ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. [೬]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಅಕ್ಟೋಬರ್ ೨೯, ೨೦೧೬ರಲ್ಲಿ ವಿಶಾಖಪಟ್ನಂನಲ್ಲಿ ನ್ಯೂ ಜೀಲ್ಯಾಂಡ್ ವಿರುದ್ದ ನಡೆದ ಐದನೇ ಏಕದಿನ ಪಂದ್ಯದ ಮೂಲಕ ಜಯಂತ್ ಯಾದವ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೧೭, ೨೦೧೬ರಲ್ಲಿ ವಿಶಾಖಪಟ್ನಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೭][೮]
ಪಂದ್ಯಗಳು
ಬದಲಾಯಿಸಿ- ಟೆಸ್ಟ್ ಕ್ರಿಕೆಟ್ : ೦೪ ಪಂದ್ಯಗಳು.[೯][೧೦][೧೧]
- ಏಕದಿನ ಕ್ರಿಕೆಟ್ : ೦೧ ಪಂದ್ಯಗಳು.
- ಐಪಿಎಲ್ ಕ್ರಿಕೆಟ್ : ೧೦ ಪಂದ್ಯಗಳು.
ವಿಕೇಟ್‍ಗಳು
ಬದಲಾಯಿಸಿ- ಟೆಸ್ಟ್ ಪಂದ್ಯಗಳಲ್ಲಿ : ೧೧
- ಏಕದಿನ ಪಂದ್ಯಗಳಲ್ಲಿ : ೦೧
- ಐಪಿಎಲ್ ಪಂದ್ಯಗಳಲ್ಲಿ : ೦೪
ಶತಕಗಳು
ಬದಲಾಯಿಸಿ- ಟೆಸ್ಟ್ ಪಂದ್ಯಗಳಲ್ಲಿ : ೦೧.
ಅರ್ಧ ಶತಕಗಳು
ಬದಲಾಯಿಸಿ- ಟೆಸ್ಟ್ ಪಂದ್ಯಗಳಲ್ಲಿ : ೦೧
ಡಿಸೆಂಬರ್ ೦೮, ೨೦೧೬ರಲ್ಲಿ ಮುಂಬೈಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜಯಂತ್ ಯಾದವ್ ದಾಖಲೆಯ ಆಟವಾಡಿದರು. 9ನೇ ಕ್ರಮಾಂಕದಲ್ಲಿ ಬಂದ ಜಯಂತ್ ಯಾದವ್ ಲಂಚ್ ವಿರಾಮದ ವೇಳೆ ಅಜೇಯ ೯೨ ರನ್ ಗಳಿಸಿದ್ದರು. ಇನ್ನಿಂಗ್ಸ್ ಒಂದರಲ್ಲಿ ಈ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಭಾರತೀಯರ ಪಟ್ಟಿಯಲ್ಲಿ ಜಯಂತ್ ಯಾದವ್ ಅಗ್ರಸ್ಥಾನಕ್ಕೇರಿದರು. ಈ ಮೂಲಕ ೫೧ ವರ್ಷಗಳ ದಾಖಲೆಯನ್ನು ಜಯಂತ್ ಅಳಿಸಿಹಾಕಿದರು. ಫಾರೂಕ್ ಎಂಜಿನಿಯರ್ ಅವರು ೧೯೬೫ರಲ್ಲಿ ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ೯೦ ರನ್ ಗಳಿಸಿದ್ದು ಈವರೆಗೆ ದಾಖಲೆಯಾಗಿ ಉಳಿದಿತ್ತು.[೧೨][೧೩][೧೪]
ಉಲ್ಲೇಖಗಳು
ಬದಲಾಯಿಸಿ- ↑ https://kannada.oneindia.com/ipl-2017/jayant-yadav-plr26/
- ↑ https://www.cricbuzz.com/profiles/8182/jayant-yadav
- ↑ https://sports.ndtv.com/cricket/players/60086-jayant-yadav-playerprofile
- ↑ "ಆರ್ಕೈವ್ ನಕಲು". Archived from the original on 2018-07-29. Retrieved 2018-09-21.
- ↑ http://www.howstat.com/cricket/Statistics/Players/PlayerOverview.asp?PlayerID=4390
- ↑ https://www.cricbuzz.com/live-cricket-scorecard/14638/delhi-daredevils-vs-sunrisers-hyderabad-45th-match-indian-premier-league-2015
- ↑ https://www.cricbuzz.com/live-cricket-scorecard/16829/india-vs-new-zealand-5th-odi-new-zealand-tour-of-india-2016
- ↑ https://www.cricbuzz.com/live-cricket-scorecard/16869/india-vs-england-2nd-test-england-tour-of-india-2016-17
- ↑ http://www.espncricinfo.com/india/content/player/447587.html
- ↑ http://www.varthabharati.in/article/kreede/52275
- ↑ https://www.news18.com/cricketnext/profile/jayant-yadav/59611.html
- ↑ https://kannada.asianetnews.com/sports/virat-kohli-and-jayant-yadav-record-batting
- ↑ https://kannada.mykhel.com/cricket/ashwin-jadeja-jayant-set-new-indian-record-3rd-test-001776.html
- ↑ https://www.cricbuzz.com/live-cricket-scorecard/16871/ind-vs-eng-4th-test-england-tour-of-india-2016-17