ಜಕುಝಿ ಎಂಬುದು ನೀರಿನ ಸುಳಿಯ ಸ್ನಾನದತೊಟ್ಟಿಗಳು (ಅಥವಾ ಆವರ್ತದ ಸ್ನಾನದ ತೊಟ್ಟಿಗಳು) ಹಾಗೂ ಆರೋಗ್ಯ ಚಿಲುಮೆಗಳನ್ನು ತಯಾರಿಸುವ ಒಂದು ಕಂಪನಿಯಾಗಿದೆ. ಅಂಗಮರ್ದನ ಮಾಡುವ ಧಾರೆಮೂತಿಗಳೊಂದಿಗಿನ (ಮಸಾಜಿಂಗ್‌ ಜೆಟ್ಸ್‌) ಒಂದು ಸ್ನಾನದ ತೊಟ್ಟಿಯು ಇದರ ಮೊದಲ ಉತ್ಪನ್ನವಾಗಿತ್ತು. ವಿಶೇಷವಾಗಿ ಗುರುತಿಸಲ್ಪಟ್ಟ ಜಕುಝಿ ಎಂಬ ಹೆಸರು ಅಥವಾ ಸರಕುಮುದ್ರೆಯು ನೀರಿನ ಧಾರೆಮೂತಿಗಳೊಂದಿಗಿನ ಯಾವುದೇ ಸ್ನಾನದ ತೊಟ್ಟಿಗೆ ಉಲ್ಲೇಖಿಸಲು ಸಾಮಾನ್ಯವಾಗಿ ಬಳಸಲ್ಪಡುತ್ತಿದೆ, ಮತ್ತು ಈ ಮೂಲಕ ಅದನ್ನೊಂದು ಸಾರ್ವತ್ರೀಕರಿಸಿದ ಸರಕುಮುದ್ರೆಯೆಂದು ಪರಿಗಣಿಸಬಹುದಾಗಿದೆ. ತಾನು ಉತ್ಪಾದಿಸುವ "ಸ್ನಾನದತೊಟ್ಟಿಗಳು ಜಕುಝಿಗಳಾಗಿವೆ, ಮತ್ತು ಉಳಿದವರ ತಯಾರಿಕೆಯ ಉತ್ಪನ್ನಗಳು ಕೇವಲ ಬಿಸಿಯಾಗಿರುವ ಸ್ನಾನದತೊಟ್ಟಿಗಳಾಗಿವೆ" ಎಂದು ಪ್ರಚಾರಮಾಡುವ ಮೂಲಕ ಈ ಅಭಿಪ್ರಾಯಕ್ಕೆ ಪ್ರತ್ಯಭಿಪ್ರಾಯವನ್ನು ಹೇಳಲು ಕಂಪನಿಯು ಪ್ರಯತ್ನಿಸಿದೆ.

Jacuzzi
ಸಂಸ್ಥೆಯ ಪ್ರಕಾರPrivate
ಸ್ಥಾಪನೆ1915
ಸಂಸ್ಥಾಪಕ(ರು)Frank, Rachel, Valeriano, Galindo, Candido, Giocondo and Joseph Jacuzzi
ಮುಖ್ಯ ಕಾರ್ಯಾಲಯValvasone (PN) Italy-- Chino Hills, CA
ವ್ಯಾಪ್ತಿ ಪ್ರದೇಶU.S., Canada, Mexico, Europe, Asia, Africa, the Caribbean, Central and South America (excluding Brazil and Chile)
ಪ್ರಮುಖ ವ್ಯಕ್ತಿ(ಗಳು)Executives:Jerry Pasley; Steve Purcell, Senior VP Operations; Erica Moir, VP Product Development, Design & Marketing, Kurt Bachmeyer; Director of Customer Service
ಉದ್ಯಮPlumbing manufacturing
ಉತ್ಪನ್ನhot tubs, bath tubs, showers, toilets, sinks and accessories
ಆದಾಯ$1,202.4M (2006)[]
ನಿವ್ವಳ ಆದಾಯUS$40.4M (2006)[]
ಉದ್ಯೋಗಿಗಳು4,907
ಜಾಲತಾಣJacuzzi.com

ಇತಿಹಾಸ

ಬದಲಾಯಿಸಿ

1900ರ ಸುಮಾರಿಗೆ, ಜಕುಝಿ (ಇಟಲಿಯಲ್ಲಿ ಈ ಹೆಸರನ್ನು ಯಹ್‌-KOOT-ಝೀ ಎಂದು ಉಚ್ಚರಿಸಲಾಗುತ್ತದೆ) ಎಂಬ ಹೆಸರಿನ ಏಳುಮಂದಿ ಸೋದರರು ಇಟಲಿಯಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಬಂದರು. ಅಂತಿಮವಾಗಿ ಅವರು ಕ್ಯಾಲಿಫೋರ್ನಿಯಾದ ಬರ್ಕೆಲಿಯಲ್ಲಿನ ಪಶ್ಚಿಮ ತೀರದ ಬಳಿ ನೆಲೆಗೊಂಡು ಯಂತ್ರಶಿಲ್ಪಿಗಳಾಗಿ ಮಾರ್ಪಟ್ಟರು. ಅವರ ಪೈಕಿ ಒಬ್ಬನಾದ ರಾಕೆಲಿ (ಈ ಹೆಸರನ್ನು "ರಾಹ್‌-KEH-ಲೆಹ್‌" ಎಂದು ಉಚ್ಚರಿಸಲಾಗುತ್ತದೆ), ಸ್ಯಾನ್‌ ಫ್ರಾನ್ಸಿಸ್ಕೊ[][ಸೂಕ್ತ ಉಲ್ಲೇಖನ ಬೇಕು] ಸಮೀಪದಲ್ಲಿನ ಪನಾಮಾ ಪೆಸಿಫಿಕ್‌ ಎಕ್ಸ್‌ಪೊಸಿಷನ್‌‌ನಲ್ಲಿ 1915ರಲ್ಲಿ ಆಯೋಜಿಸಲ್ಪಟ್ಟಿದ್ದ ವಿಮಾನ ಪ್ರದರ್ಶನವೊಂದನ್ನು ಕಂಡು, ಅದರಿಂದ ಪ್ರಭಾವಿತನಾಗಿ ವಿಮಾನನೋದಕ ದಂಡ‌‌‌ಗಳನ್ನು (ಪ್ರೊಪೆಲರ್‌ಗಳನ್ನು) ತಯಾರಿಸಲು ಶುರುಮಾಡಿದ. "ಜಕುಝಿ ಟೂತ್‌ಪಿಕ್‌" ಎಂದು ಹೆಸರಾದ ಒಂದು ವಿಶಿಷ್ಟ ಪ್ರೊಪೆಲರ್‌ನ್ನು ಈ ಸೋದರರು ವಿನ್ಯಾಸಗೊಳಿಸಿದರು. "ಜಕುಝಿ ಬ್ರದರ್ಸ್‌" ಎಂಬ ಹೆಸರಿನ ವಿಮಾನ ತಯಾರಿಕಾ ಕಂಪನಿಯೊಂದನ್ನು ಬರ್ಕೆಲಿಯಲ್ಲಿ ರಾಕೆಲಿ ಮತ್ತು ಅವನ ಸೋದರರು ಹುಟ್ಟುಹಾಕಿದರು. ಈ ಸೋದರರ ಉತ್ಪನ್ನಶ್ರೇಣಿಯು ವರ್ಷಗಳ ನಂತರದ ಬದಲಾಯಿತಾದರೂ, ಈ ಕಂಪನಿಯು 1976ರವರೆಗೆ ವ್ಯವಹಾರ ವಲಯದಲ್ಲಿ ಉಳಿದುಕೊಂಡಿತು. ಸುತ್ತುವರಿಯಲ್ಪಟ್ಟ ಚಾಲಕಕೋಣೆಯ ಮೊಟ್ಟಮೊದಲ ಏಕಫಲಕ ವಿಮಾನವನ್ನು[ಸೂಕ್ತ ಉಲ್ಲೇಖನ ಬೇಕು] ತಯಾರಿಸಿದ್ದು ಕಂಪನಿಯ ಸಾಧನೆಗಳಲ್ಲೊಂದಾಗಿತ್ತು. ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಿಂದ ಯೊಸೆಮೈಟ್‌ ನ್ಯಾಷನಲ್‌ ಪಾರ್ಕ್‌ ಪ್ರದೇಶಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು U.S. ಅಂಚೆ ಸೇವೆಯು ಈ ವಿಮಾನವನ್ನು ಬಳಸಿತು.

ಯೊಸೆಮೈಟ್‌ ಹಾಗೂ ಸ್ಯಾನ್‌ ಫ್ರಾನ್ಸಿಸ್ಕೊ[] ಗಳ [ಸೂಕ್ತ ಉಲ್ಲೇಖನ ಬೇಕು] ಮಧ್ಯೆ 1921ರಲ್ಲಿ ನಡೆದ ಅವರ ವಿಮಾನಗಳ ಪೈಕಿ ಒಂದರ ಡಿಕ್ಕಿಯಾಗಿ, ಜಿಯೋಕಾಂಡೊ ಎಂಬ ಸೋದರನ ಮರಣಕ್ಕೆ ಅದು ಕಾರಣವಾಗಿ ಪರಿಣಮಿಸಿದ್ದರಿಂದ, 1925ರಲ್ಲಿ ಜಕುಝಿ ಬ್ರದರ್ಸ್‌ ಕಂಪನಿಯು ವಿಮಾನ ತಯಾರಿಕೆಯನ್ನು ನಿಲ್ಲಿಸಿತು. ವಿಮಾನದ ಹೈಡ್ರಾಲಿಕ್‌ ಪಂಪುಗಳನ್ನು ತಯಾರಿಸುವಲ್ಲಿ ಕಂಪನಿಯು ಹೊಂದಿದ್ದ ತಾಂತ್ರಿಕ-ಕುಶಲತೆ ಅಥವಾ ಪ್ರಾಯೋಗಿಕ-ಜ್ಞಾನವನ್ನು ಆಳದ ಬಾವಿಯ ಒಂದು ಹೊಸ ವಿಧದ ಕೃಷಿಯ ಪಂಪಿನ ತಯಾರಿಕೆಯೆಡೆಗೆ ರಾಕೆಲಿ ತಿರುಗಿಸಿದ. ಅವರ ವಿನ್ಯಾಸವು ಒಂದು ಪರಿವರ್ತನಾಶೀಲ ಹೊಸ ಪಂಪ್‌‌[][ಸೂಕ್ತ ಉಲ್ಲೇಖನ ಬೇಕು] ಆಗಿ ಮಾರ್ಪಟ್ಟಿತು. 1930ರಲ್ಲಿ ಜರುಗಿದ ಕ್ಯಾಲಿಫೋರ್ನಿಯಾ ಸಂಸ್ಥಾನದ ಮೇಳದಲ್ಲಿ ಈ ಸೋದರರು ಬಂಗಾರದ ಪದಕವೊಂದನ್ನು ಸ್ವೀಕರಿಸಿದರು.

1948ರಲ್ಲಿ, ಸೋದರ ಕ್ಯಾಂಡಿಡೊ ತನ್ನ ಮಗ ಕೆನ್ನೆತ್‌ಗಾಗಿ ಒಂದು ಸಬ್‌ಮರ್ಸಿಬಲ್‌ ಸ್ನಾನದತೊಟ್ಟಿಯ ಪಂಪ್‌ನ್ನು ಅಭಿವೃದ್ಧಿಪಡಿಸಲೆಂದು ಪಂಪುಗಳ ತಯಾರಿಕೆಯಲ್ಲಿನ ಕಂಪನಿಯ ಪರಿಣತಿಯನ್ನು ಬಳಸಿಕೊಂಡ. ಕೆನ್ನೆತ್‌ 1943ರಲ್ಲಿ [][ಸೂಕ್ತ ಉಲ್ಲೇಖನ ಬೇಕು] ತನ್ನ 15ನೇ ತಿಂಗಳ ವಯಸ್ಸಿನಲ್ಲಿ ಸಂಧಿವಾತ ಸಮಸ್ಯೆಗೆ ಈಡಾಗಿದ್ದ ಮತ್ತು ದೀರ್ಘಕಾಲದ ನೋವಿನಿಂದ ಆತ ನರಳುತ್ತಿದ್ದ. ಆ ಹುಡುಗ ಸ್ಥಳೀಯ ಆಸ್ಪತ್ರೆಗಳಲ್ಲಿ ನಿಯತವಾದ ಜಲಚಿಕಿತ್ಸೆಯ ಉಪಚಾರಗಳನ್ನು ಪಡೆಯುತ್ತಿದ್ದನಾದರೂ, ಆಸ್ಪತ್ರೆಗೆ ಭೇಟಿನೀಡುವ ನಡುವಿನ ದಿನಗಳಲ್ಲಿನ ತನ್ನ ಮಗನ ನರಳಾಟವನ್ನು ಕ್ಯಾಂಡಿಡೊಗೆ ನೋಡಲಾಗುತ್ತಿರಲಿಲ್ಲ. ಮನೆಯಲ್ಲಿರುವ ಸ್ನಾನದತೊಟ್ಟಿಯಲ್ಲಿ ತನ್ನ ಮಗನಿಗೆ ನೀರಿನ ಸುಳಿಯ ಅಥವಾ ಆವರ್ತದ ಹಿತವಾದ ಉಪಶಾಮಕ ಚಿಕಿತ್ಸೆಗಳನ್ನು ನೀಡಲು ತಮ್ಮ ಕಂಪನಿಯ ಕೃಷಿಯ ನೀರಿನ ಪಂಪುಗಳನ್ನು ಅಳವಡಿಸಿಕೊಳ್ಳಬಹುದೆಂಬುದನ್ನು ಅವನು ಅರಿವಿಗೆ ತಂದುಕೊಂಡ. ಅಂತಿಮವಾಗಿ ಕೆನ್ನೆತ್‌ ಜಕುಝಿಯು ಕಂಪನಿಯ ಮೇಲ್ವಿಚಾರಣೆಯನ್ನು ವಹಿಸಿಕೊಂಡ.

1955ರಲ್ಲಿ, ಸದರಿ ಪಂಪಿಗೆ "J-300" ಎಂದು ಮರುನಾಮಕರಣ ಮಾಡಿ ಒಂದು ಚಿಕಿತ್ಸಾ ಸಾಧನವಾಗಿ ಮಾರುಕಟ್ಟೆ ಮಾಡಲು, ಬಚ್ಚಲುಮನೆಯ ಪರಿಕರಗಳನ್ನು ಪೂರೈಕೆ ಮಾಡುವ ಅಂಗಡಿಗಳಲ್ಲಿ ಅದನ್ನು ಮಾರಾಟಮಾಡಲು ಅವನ ಈ ಸಂಸ್ಥೆಯು ನಿರ್ಧರಿಸಿತು [][ಸೂಕ್ತ ಉಲ್ಲೇಖನ ಬೇಕು]. ಅಪರಿಚಿತವಾಗಿರುವ ಉತ್ಪನ್ನಕ್ಕೆ ಒಂದಷ್ಟು ಪ್ರಚಾರವನ್ನು ಹುಟ್ಟುಹಾಕುವ ಸಲುವಾಗಿ, TVಯ ಕ್ವೀನ್‌ ಫಾರ್‌ ಎ ಡೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ನೀಡಲಾಗುವ ಕೊಡುಗೆಗಳಲ್ಲಿ ಒಯ್ಯಬಹುದಾದ ಜಕುಝಿಗಳು ಸೇರಿಸಲ್ಪಟ್ಟವು. ಸೋತು ಸುಸ್ತಾಗಿರುವ ಗೃಹಿಣಿಯರಿಗಾಗಿ ಒಂದು ಉಪಶಾಮಕವಾಗಿ ಇದನ್ನು ಮಾರಾಟಕ್ಕಿಡಲಾಯಿತು. ಸೋತು ಸೊರಗದ ವ್ಯಕ್ತಿಗಳೆಂದೇ ನಿರ್ವಿವಾದವಾಗಿ ಪರಿಗಣಿಸಲ್ಪಟ್ಟಿದ್ದ ರಾಂಡಾಲ್ಫ್‌ ಸ್ಕಾಟ್‌ ಮತ್ತು ಜೇನ್‌ ಮ್ಯಾನ್ಸ್‌ಫೀಲ್ಡ್‌‌ರಂಥ ಹಾಲಿವುಡ್‌ ತಾರೆಯರು ಈ ಉತ್ಪನ್ನದ ಕುರಿತು ಮೆಚ್ಚುಗೆಯ ಮಹಾಪೂರವನ್ನೇ ಹರಿಸಲು ಶುರುಮಾಡಿದಾಗ, ಜಕುಝಿ ನೀರಿನ ಸುಳಿಯ ಸ್ನಾನದತೊಟ್ಟಿಯು ತನ್ನ ಅಸಾಧಾರಣವಾದ ಕೀರ್ತಿಯನ್ನು ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿತು. ಜ್ಯಾಕ್‌ ಬೆನ್ನಿಯನ್ನು ಜಕುಝಿಗೆ ಸಂಬಂಧಿಸಿದ ಓರ್ವ ವಕ್ತಾರನನ್ನಾಗಿ ನೇಮಿಸಿಕೊಳ್ಳಲಾಯಿತು.

J-300 ಪಂಪು ಒಯ್ಯಬಹುದಾದ ಒಂದು ಉಪಕರಣವಾಗಿದ್ದು, ಅದನ್ನು ಬಚ್ಚಲಮನೆಯ ಯಾವುದೇ ಅವರಣದಲ್ಲಿ ಇರಿಸಬಹುದಾಗಿತ್ತು. ವೈದ್ಯಕೀಯ ಸಮುದಾಯವು ತಾನು ಕೈಗೊಳ್ಳುವ ಜಲ-ಚಿಕಿತ್ಸೆಯ ಕಾರ್ಯಸೂಚಿಗಳಿಗೆ ಸಂಬಂಧಿಸಿದಂತೆ ಈ ಉತ್ಪನ್ನವು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ ಎಂದು ಗುರುತಿಸಿತು. ಶಾರೀರಿಕ ಚಿಕಿತ್ಸಕರು ಮತ್ತು ಮೂಳೆತಜ್ಞರು, ಅವುಗಳನ್ನು ಚಿಕಿತ್ಸಾಲಯಗಳು ಮತ್ತು ಮನೆಗಳಲ್ಲಿ ಬಳಸಬಹುದೆಂದು ಶಿಫಾರಸುಮಾಡಿದರು.

1968ರಲ್ಲಿ, ಸ್ನಾನದತೊಟ್ಟಿಯ ಪಾರ್ಶ್ವಗಳಿಗೆ ಧಾರೆಮೂತಿಗಳನ್ನು ಅಳವಡಿಸುವ ಮೂಲಕ ಮೊಟ್ಟಮೊದಲ ಸ್ವಸಂಪೂರ್ಣ, ಸಂಪೂರ್ಣವಾಗಿ ಸಂಘಟಿತವಾದ ನೀರಿನ ಸುಳಿಯ ಸ್ನಾನದ ತೊಟ್ಟಿಯನ್ನು ಕ್ಯಾಂಡಿಡೊ ಜಕುಝಿಯು ಮಾರುಕಟ್ಟೆಗೆ ತಂದಿತು. "ರೋಮನ್ನರ ಸ್ನಾನದತೊಟ್ಟಿ" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಧಾರೆಮೂತಿಗಳು, ಅನುಭೂತಿಯನ್ನು ಸುಧಾರಿಸುವ ಸಲುವಾಗಿ 50-50 ಅನುಪಾತದಲ್ಲಿ ಗಾಳಿ/ನೀರನ್ನು ಬಳಕೆ ಮಾಡುತ್ತಿದ್ದವು. ಜಕುಝಿಯು

ವೈಭವದ ಜೀವನಶೈಲಿಯ ಒಂದು ಸಂಕೇತವಾಗಿ ಮಾರ್ಪಟ್ಟಿತು. ಒಳಾಂಗಣಗಳು ಮತ್ತು ಹೊರಾಂಗಣಗಳೆರಡೂ ಕಡೆಗಳಲ್ಲಿ, ವಿಹಾರ ಕೇಂದ್ರಗಳು ಮತ್ತು ಖಾಸಗಿ ಗೃಹಗಳಲ್ಲಿ ನೂರಾರು ಸಾವಿರಾರು ಸಂಖ್ಯೆಯು ಸದರಿ ಒಯ್ಯಬಹುದಾದ ಜಕುಝಿ ಸಾಧನಗಳು ಅಳವಡಿಸಲ್ಪಟ್ಟವು. ಹಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳು ವೈಯಕ್ತಿಕ ಬಳಕೆಗೆ ಅವುಗಳನ್ನು ಬಳಸಲು ಶುರುಮಾಡಿದರು.

ಆದರೂ, ಇದರ ಜನಪ್ರಿಯತೆ ಹೊರತಾಗಿಯೂ, ಈ ನೀರಿನ ಸುಳಿಯ ಸ್ನಾನದ ತೊಟ್ಟಿಯನ್ನು ಜಕುಝಿ ಬ್ರದರ್ಸ್ ಕಂಪನಿಯಲ್ಲಿ ಬಹುಮಟ್ಟಿಗೆ ಇನ್ನೂ ಒಂದು ಉಪಸರಕಾಗಿಯೇ ಪರಿಗಣಿಸಲಾಗಿತ್ತು. ಅಲ್ಲಿಯವರೆಗೂ ಜಕುಝಿ ಬ್ರದರ್ಸ್‌ ಕಂಪನಿಯ ಬಹುಪಾಲು ಆದಾಯವು ನೀರಿನ ಪಂಪುಗಳು, ಸಮುದ್ರದ ಅಥವಾ ನೌಕಾ ಧಾರೆಮೂತಿಗಳು, ಹಾಗೂ ಈಜುಕೊಳದ ಉಪಕರಣಗಳ ಮಾರಾಟಗಳಿಂದ ಬರುತ್ತಿತ್ತು.

1970ರ ದಶಕದ ಆರಂಭದಲ್ಲಿ, ಅಂತನಿರ್ಮಿತ ಬಿಸಿಮಾಡುವ ಮತ್ತು ಸೋಸುವಿಕೆಯ ವ್ಯವಸ್ಥೆಗಳೊಂದಿಗಿನ ಬೃಹತ್‌ ಗಾತ್ರದ ಘಟಕಗಳನ್ನು ಕಂಪನಿಯು ಉತ್ಪಾದಿಸಿತು. ಆರೋಗ್ಯ ಚಿಲುಮೆ ಉದ್ಯಮ ಎಂಬುದಾಗಿ ಇಂದು ನಾವು ತಿಳಿದಿರುವ ಉದ್ಯಮಕ್ಕೆ ಇದು ಆರಂಭವಾಗಿತ್ತು, ಮತ್ತು ಸ್ನಾನದ ತೊಟ್ಟಿಯ ಉತ್ಪನ್ನಗಳೊಂದಿಗೆ ಜಕುಝಿ ಹೆಸರನ್ನು ಇದು ದೃಢವಾಗಿ ಸಂಬಂಧ ಕಲ್ಪಿಸಿ ನೆಲೆಗಾಣಿಸಿತು. ಅಂದು ಓರ್ವ ರೂಪದರ್ಶಿಯಾಗಿದ್ದ ಸುಝೇನ್‌ ಸೋಮರ್ಸ್‌ ಎಂಬಾಕೆಯನ್ನು ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದ ಜಕುಝಿಯ ಮೊದಲ ಕೆಲವೊಂದು ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಯಿತು. ಈ ಉತ್ಪನ್ನದ ಸಂಘಟಿತ ವಿನ್ಯಾಸವು ಸುಲಭವಾದ ಅಳವಡಿಕೆ ಹಾಗೂ ಒಯ್ಯಲಾಗುವಿಕೆಗೆ ಅನುವುಮಾಡಿಕೊಟ್ಟಿತು, ಹಾಗೂ ಸಾವಿರಾರು ಮಂದಿ ಮನೆಮಾಲೀಕರು ಈ ಘಟಕಗಳನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡರು. ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ಕಂಪನಿಯ ಉತ್ಪನ್ನಶ್ರೇಣಿಯು ವಿಸ್ತರಣೆಗೊಂಡಿತು. ಬಿಸಿನೀರಿನ ಸ್ನಾನದತೊಟ್ಟಿಗಳು, ನೀರಿನ ಸುಳಿಯ ಸ್ನಾನದತೊಟ್ಟಿಗಳು, ಅಥವಾ ಎರಡೂ ವ್ಯವಸ್ಥೆಯೂ ಇರುವ ಉಪಕರಣಗಳಂಥ ಬಹು-ಬಳಕೆಯ ರಚನೆಗಳಲ್ಲಿ ಕಾರ್ಯನಿರ್ವಹಿಸುವ ಮಾದರಿಗಳು ಈ ಉತ್ಪನ್ನಶ್ರೇಣಿಯಲ್ಲಿ ಸೇರಿಕೊಂಡವು. ಈ ಮಾದರಿಗಳನ್ನು ಒಳಾಂಗಣಗಳು ಅಥವಾ ಹೊರಾಂಗಣಗಳೆರಡರಲ್ಲೂ ಅಳವಡಿಸಬಹುದಾಗಿತ್ತು.

ಇಂದು, ಜಕುಝಿ ಬ್ರಾಂಡಿನ ಬಿಸಿನೀರಿನ ಸ್ನಾನದತೊಟ್ಟಿಗಳು, ಬಚ್ಚಲ ವ್ಯವಸ್ಥೆಗಳು, ವೃಷ್ಟಿಸ್ನಾನದ ಸಾಧನಗಳು (ಷವರ್‌ಗಳು), ಶೌಚಾಲಯಗಳು, ಬಚ್ಚಲತೊಟ್ಟಿಗಳು (ಸಿಂಕ್‌ಗಳು), ಮತ್ತು ಇತರ ಪರಿಕರಗಳು

ವಾಸಯೋಗ್ಯ ಮನೆಗಳು, ಹೊಟೇಲುಗಳು, ಮತ್ತು ವಿಹಾರ ನೌಕಾಯಾನದ ವಿದೇಶಿ ಹಡಗುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಅಷ್ಟೇ ಅಲ್ಲ ಈ ಉತ್ಪನ್ನಗಳು ವಿಶ್ವಾದ್ಯಂತವಿರುವ ಉನ್ನತ-ಶ್ರೇಣಿಯ ಆರೋಗ್ಯ ಚಿಲುಮೆಗಳಲ್ಲಿ ಜನಪ್ರಿಯವಾಗಿವೆ. ಈಗ ಸನ್‌ಡಾನ್ಸ್‌ ಸ್ಪಾಸ್‌ ಇಂಕ್‌. ಕಂಪನಿಯಿಂದ ತಯಾರಿಸಲ್ಪಡುತ್ತಿರುವ ಜಕುಝಿ ಉತ್ಪನ್ನಗಳು ವಿಶ್ವಾದ್ಯಂತದ ಸುಮಾರು 60 ದೇಶಗಳಲ್ಲಿ ವಿತರಿಸಲ್ಪಡುತ್ತಿವೆ.

ಕ್ಯಾಲಿಫೋರ್ನಿಯಾದ ಚಿನೋದಲ್ಲಿ ಸನ್‌ಡಾನ್ಸ್‌ ಸ್ಪಾಸ್‌ನ ಘಟಕವು ನೆಲೆಗೊಳಿಸಲ್ಪಟ್ಟಿದೆ. ಈ ಘಟಕವು ವಿಶ್ವದಲ್ಲಿನ[] [ಸೂಕ್ತ ಉಲ್ಲೇಖನ ಬೇಕು] ಮೊಟ್ಟಮೊದಲ ISO 9001 ಪ್ರಮಾಣಿತ ಬಿಸಿನೀರಿನ ತೊಟ್ಟಿಯ ಉತ್ಪಾದನಾ ಸೌಕರ್ಯವಾಗಿತ್ತು. ತನ್ನ ದೇಶದ ಸ್ಥಳೀಯ ಬಳಕೆಗಾಗಿ ಹಾಗೂ ರಫ್ತು ವ್ಯವಹಾರದ ಅಗತ್ಯಗಳಿಗಾಗಿ ದಿನವೊಂದಕ್ಕೆ ಸುಮಾರು 300 ಆರೋಗ್ಯ ಚಿಲುಮೆಗಳಷ್ಟರವರೆಗೆ ಉತ್ಪಾದನೆಯನ್ನು ಮಾಡುವ ಸಾಮರ್ಥ್ಯವನ್ನು ಈ ಘಟಕವು ಹೊಂದಿತ್ತು. ಈ ಘಟಕದ ಉತ್ಪನ್ನ ಶ್ರೇಣಿಯು ಅನೇಕ ಅನನ್ಯ ಲಕ್ಷಣಗಳನ್ನು ಹೊಂದಿದೆ. ಅವುಗಳೆಂದರೆ, ಒಡೆತನದ ಹಕ್ಕು (ಪೇಟೆಂಟ್‌) ಪಡೆದಿರುವ ಧಾರೆಮೂತಿಗಳು, ಕಾಮನಬಿಲ್ಲಿನಂಥ ಪರಿಣಾಮ ನೀಡುವ ಜಲಪಾತಗಳು, ಸಂಶ್ಲೇಷಿತ (ಕೃತಕ) ಬಿಸಿಲು-ನಿರೋಧಕ ಹೊದಿಕೆ ಪದಾರ್ಥ, ಸ್ಟೀರಿಯೋಗಳು, ದಕ್ಷತಾಶಾಸ್ತ್ರೀಯ ಆಸನ ವ್ಯವಸ್ಥೆ, ಮೂರು-ಪದರಗಳುಳ್ಳ ಲೋಹಗಟ್ಟುಗಳು, ಸಂಪೂರ್ಣ ಫೋಮ್‌ ರಬ್ಬರಿನ ನಿರೋಧನ, ಮತ್ತು ಒಂದು ಘನರೂಪದ A.B.S. ಶೌಚದ ಬೋಗುಣಿಯ ತಳಭಾಗ ಇವೇ ಮೊದಲಾದವು.

2006ರ ಅಕ್ಟೋಬರ್‌ನಲ್ಲಿ, ಅಪೊಲೊ ಮ್ಯಾನೇಜ್‌ಮೆಂಟ್‌ ಎಂಬ ಒಂದು ಬೃಹತ್‌ ಖಾಸಗಿ ಇಕ್ವಿಟಿ ಸಂಸ್ಥೆಯು, 990 ದಶಲಕ್ಷ $ನಷ್ಟು ಮೊತ್ತಕ್ಕೆ ಜಕುಝಿ ಬ್ರಾಂಡ್‌ನ ಉತ್ಪನ್ನಗಳ ಹತೋಟಿ ಕ್ರಯವನ್ನು ಮಾಡುತ್ತಿರುವುದಾಗಿ ಪ್ರಕಟಿಸಿತು.[]

2008ರಲ್ಲಿ ಕಂಪನಿಯು ತನ್ನ ವಿಶ್ವದ ಕೇಂದ್ರಕಚೇರಿಯನ್ನು ಚಿನೋ ಬೆಟ್ಟಗಳಲ್ಲಿರುವ ದಿ ಷೋಪ್ಸ್‌ ಎಂಬಲ್ಲಿಗೆ ವರ್ಗಾಯಿಸಿತು.

ಇತರ ಉತ್ಪನ್ನಗಳು

ಬದಲಾಯಿಸಿ

US ನೌಕಾದಳಕ್ಕೆ ಸೇರಿದ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ಸೇವೆ ಸಲ್ಲಿಸಿದ ಗಸ್ತು ತಿರುಗುವಿಕೆಯ ದೋಣಿಯಾದ ರಿವರ್‌, ಜಕುಝಿ ಬ್ರದರ್ಸ್‌ ಕಂಪನಿಯ ಪಂಪು-ಧಾರೆಮೂತಿಗಳನ್ನು ಬಳಸಿಕೊಂಡಿತು. ಇದು 220 hp (164 kW) ವಿಶಿಷ್ಟತೆಯ ಜೋಡಿ ಡೆಟ್ರಾಯಿಟ್‌ ಡೀಸೆಲ್‌ ಎಂಜಿನುಗಳಿಂದ ಚಾಲಿಸಲ್ಪಡುತ್ತಿತ್ತು. ಇವು ಸದರಿ ದೋಣಿಗೆ ಅಸಾಧಾರಣವಾದ ಪೂರ್ವನಿಯೋಜಿತ ಮತ್ತು ನಿಯಂತ್ರಿತ ಚಲನಶೀಲತೆಯನ್ನು ನೀಡಿದವು. ಅಷ್ಟೇ ಅಲ್ಲ, ಕಳೆಗಳು ಅಥವಾ ಭಗ್ನಾವಶೇಷಗಳಲ್ಲಿ ಸಿಕ್ಕಿಬೀಳುವ ನೋದಕ ದಂಡ‌ಗಳ (ಪ್ರೊಪೆಲರ್‌ಗಳ) ಅಗತ್ಯವನ್ನು ಇವು ತೆಗೆದುಹಾಕಿದವು.

ಆಕರಗಳು

ಬದಲಾಯಿಸಿ
  1. ೧.೦ ೧.೧ Jacuzzi Brands Corporation: Information and Much More from Answers.com
  2. ೨.೦ ೨.೧ ಡಲ್ಲಾಸ್‌ ಕ್ರಾನಿಕಲ್‌ ಸೆಪ್ಟೆಂಬರ್‌ 16, 2008
  3. ೩.೦ ೩.೧ http://jacuzzihottubs.com/about/timeline.html
  4. http://inventors.about.com/library/inventors/bljacuzzi.htm
  5. "ಆರ್ಕೈವ್ ನಕಲು". Archived from the original on 2013-05-25. Retrieved 2010-04-14.
  6. ಜಕುಝಿ ಬ್ರಾಂಡ್‌ ಈಸ್‌ ಗೋಯಿಂಗ್‌ ಪ್ರೈವೇಟ್‌. ರಾಯಿಟರ್ಸ್‌, ಅಕ್ಟೋಬರ್‌ 12, 2006


ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಜಕುಝಿ&oldid=1145747" ಇಂದ ಪಡೆಯಲ್ಪಟ್ಟಿದೆ