ಚಿನುವ ಅಚಿಬೆ
ಚಿನುವ ಅಚಿಬೆ (೧೯೩೦-೨೦೧೩) ನೈಜೀರಿಯ ದೇಶದ ಪ್ರಖ್ಯಾತ ಸಾಹಿತಿ. ಇವರು ಸಾಹಿತ್ಯದಲ್ಲಿ ಇಡೀ ಆಫ್ರಿಕ ಖಂಡವನ್ನೇ ಪ್ರತಿನಿಧಿಸುತ್ತಾರೆ. ಇವರ ಕೃತಿಗಳು ಮುಖ್ಯವಾಗಿ ಆಫ್ರಿಕ ದ ಜನಾಂಗಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. "ಥಿಂಗ್ಸ್ ಫಾಲ್ ಅಪಾರ್ಟ್"(೧೯೫೮)ಕೃತಿ ನೈಜೀರಿಯದ ಆದಿವಾಸಿ ಜನಾಂಗ ದ ಜೀವನ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಛಿದ್ರವಾಗುವ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. "ಆರೋ ಆಫ್ ಗಾಡ್"(೧೯೬೪),"ನೋ ಲಾಂಗರ್ ಅಟ್ ಈಸ್"(೧೯೬೦), "ಎ ಮಾನ್ ಆಫ್ ದಿ ಪೀಪಲ್"(೧೯೬೬) ಮುಂತಾದವುಗಳು ಇವರ ಮುಖ್ಯ ಕೃತಿಗಳು.
ಬಾಹ್ಯ ಸಂಪರ್ಕಗಳು
ಬದಲಾಯಿಸಿChinua Achebe ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- [೧], ಚಿನುವ ಅಚಿಬೆ ಅವರೊಂದಿಗೆ ಯು.ಆರ್. ಅನಂತಮೂರ್ತಿಯವರ ಸಂದರ್ಶನ