ಚಿಟ್ಟಾಣಿ ರಾಮಚಂದ್ರ ಹೆಗಡೆ

ಚಿಟ್ಟಾಣಿ ರಾಮಚಂದ್ರ ಹೆಗಡೆ (೧೯೩೩ ಜನವರಿ ೧ - ೨೦೧೭ ಅಕ್ಟೋಬರ್ ೦೩) ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[]  

ಚಿಟ್ಟಾಣಿ ರಾಮಚಂದ್ರ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ ಗದಾಯುದ್ದ ಪ್ರಸಂಗದ ಕೌರವ ಪಾತ್ರದಲ್ಲಿ.
Born(೧೯೩೩-೦೧-೦೧)೧ ಜನವರಿ ೧೯೩೩
ಹೊನ್ನಾವರ ,ಉತ್ತರಕನ್ನಡ,ಕರ್ನಾಟಕ.
DiedOctober 3, 2017(2017-10-03) (aged 84)
Nationalityಭಾರತ
Other namesಚಿಟ್ಟಾಣಿ
Occupationಯಕ್ಷಗಾನ ಕಲಾವಿದ
Years active1965–2017
Known forಕೌರವ, ದುಷ್ಟಬುದ್ಧಿ, ಭಸ್ಮಾಸುರ ಪಾತ್ರಗಳು ಯಕ್ಷಗಾನದಲ್ಲಿ
Titleಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕಲಾವಿದ
Spouseಸುಶೀಲಾ ಹೆಗಡೆ
Awardsಪದ್ಮಶ್ರೀ (2012),ರಾಜ್ಯೋತ್ಸವ ಪ್ರಶಸ್ತಿ(1991),
Honoursಪದ್ಮಶ್ರೀ ಪ್ರಶಸ್ತಿ

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯಲ್ಲಿ ಜನಿಸಿದ್ದ ಅವರು, ೨ನೇ ತರಗತಿಗೆ ಶಾಲೆ ಬಿಟ್ಟು, ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದರು. ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ೧೪ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. []

ನಿರ್ವಹಿಸಿದ ಪಾತ್ರಗಳು

ಬದಲಾಯಿಸಿ

ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅವರು ಪರಿಚಿತರಾಗಿದ್ದರು. ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣ ಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದಲ್ಲಿ ಪರಿಚಿತರಾಗಿದ್ದರು.

ಪ್ರಶಸ್ತಿ-ಪುರಸ್ಕಾರಗಳು

ಬದಲಾಯಿಸಿ
  1. 1991 – ರಾಜ್ಯೋತ್ಸವ ಪ್ರಶಸ್ತಿ
  2. 2004 – ಜನಪದಶ್ರೀ
  3. 2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
  4. 2009 – ಶಿವರಾಮ ಕಾರಂತ ಪ್ರಶಸ್ತಿ
  5. 2012 – ಪದ್ಮಶ್ರೀ []
  6. 2012 – ಆಳ್ವಾಸ್ ನುಡಿಸಿರಿ ಪ್ರಶಸ್ತಿ
  7. 2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ[]

೮೪ನೆ ವಯಸ್ಸಿನಲ್ಲಿ ನಿಧನರಾದರು.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ". prajavani.net/.
  2. "ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥ, ಕೆಎಂಸಿಗೆ ದಾಖಲು". kannada.oneindia.com.
  3. "Padmashree". www.kannadigaworld.com , 4 October 2017.
  4. "Chittani Ramachandra Hegde, renowned Yakshagana artist,". www.firstpost.com, 4 October 2017.


ಚಿತ್ರಶಾಲೆ

ಬದಲಾಯಿಸಿ