ಚಿಂತನಶೀಲ ಶಿಕ್ಷಣ
ಚಿಂತನಶೀಲ ವಿದ್ಯಾಭ್ಯಾಸ , ಅಂತರಂಗ ವೀಕ್ಷಣೆ ಮತ್ತು ಅನುಭವದ ಮೂಲಕ ಕಲಿಯುವುದನ್ನೊಳಗೊಂಡ ಉನ್ನತ ಶಿಕ್ಷಣದ ಅಧ್ಯಯನದ ಒಂದು ಸಿದ್ದಾಂತ. ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನವನ್ನು ಸಮರ್ಥಿಸುವ, ಸ್ವಾಧ್ಯಾಯದ ಜೊತೆಯಲ್ಲಿ ವಿಶ್ಲೇಷಣಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯವನ್ನು ಬೆಳೆಸುವ, ಮತ್ತು ಇತರರೊಡನೆ ರಚನಾತ್ಮಕವಾಗಿ ಕಾರ್ಯಪ್ರವೃತ್ತರಾಗುವ ಕುಶಲತೆಯನ್ನು ವಿಕಾಸಗೊಳಿಸುವ ಒಂದು ತತ್ವಮಾರ್ಗ.
ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಅಸಮತೋಲನೆಗಳು ಯಾವುವೆಂದರೆ, ಜೀವನದ ಉದ್ದೇಶ ಮತ್ತು ಅರ್ಥಗಳನ್ನು ವೃದ್ಧಿಗೊಳಿಸಿಕೊಳ್ಳಲು ಬೆಂಬಲವಿಲ್ಲದಿರುವುದು, ಅಥವಾ ವಿದ್ಯಾರ್ಥಿಗಳಿಗೆ “ಅವರು ಯಾರು, ಅವರ ಜೀವನದ ಉನ್ನತ ಗುರಿಗಳನ್ನು ಹೇಗೆ ಅರಸುವುದು, ಮತ್ತು ಉತ್ತಮ ಮಾನವರಾಗಿ ಕಾಲೇಜಿನಿಂದ ಹೇಗೆ ಹೊರಬರುವುದು” ಎನ್ನುವುದನ್ನು ಕಲಿಸುವುದು[೧]. ಶಿಕ್ಷಣ ಕಾರ್ಯಕ್ಷೇತ್ರಗಳಲ್ಲಿ ಚಿಂತನಶೀಲತೆ ಮತ್ತು ಅಂತರಂಗವಿಕ್ಷಣೆಯ ಅಭ್ಯಾಸಗಳು ಇವನ್ನು ಗುರುತಿಸುತ್ತವೆ.
ತತ್ವಮಾರ್ಗ
ಬದಲಾಯಿಸಿಜಗತ್ತಿನ ಎಲ್ಲಡೆಯಲ್ಲಿ ಅನೇಕ ತತ್ವಜ್ಞಾನ ಮತ್ತು ಮತಧರ್ಮಗಳಲ್ಲಿ ಪ್ರಚಲಿತವಾಗಿರಬಹುದಾದ ಚಿಂತನಶೀಲ ಅಭ್ಯಾಸಗಳ ಅನೇಕ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು, ಚಿಂತನಶೀಲ ಶಿಕ್ಷಣವು ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ ಮತ್ತು ಅದರಿಂದಾಗುವ ತಮ್ಮದೇ ಅನುಭವಗಳನ್ನು ತಮ್ಮ ತಮ್ಮ ಅಂತರಂಗದಲ್ಲಿ, ತಾವು ಕಲಿಯುತ್ತಿರುವ ವಿಷಯಗಳಿಗೆ ಓರೆ ಹಚ್ಚಲು ತಿಳಿಸುತ್ತದೆ [೨]. ಚಿಂತನಶೀಲ ಶಿಕ್ಷಣವು ಕೆಲವು ಅಸಾಧಾರಣ (ಉದಾ.: ನೈಸರ್ಗಿಕ ಪ್ರಕ್ರಿಯೆಗಳು, ಸಾಂಸ್ಕ್ರತಿಕ ಉತ್ಪಾದನೆಗಳು, ಮಾನಸಿಕ ಮತ್ತು ಭಾವೋದ್ವೇಗದ ಸ್ಥಿತಿಗಳು, ಪಕ್ಷಪಾತ , ಮಾಧ್ಯಮ) ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಕರೆ ನೀಡುತ್ತದೆ. ಈ ಅಭ್ಯಾಸಗಳಿಂದ ಗಮನವಿಡುವುದು ಮತ್ತು ಕೇಂದ್ರೀಕರಿಸುವುದು, ಪ್ರಜ್ಞೆ ಮತ್ತು ಪರಿವೆಯನ್ನು ಹೆಚ್ಚಿಸುವುದು, ವಿಭಿನ್ನ ವಿಚಾರಗಳನ್ನು ಕೇಳಿಸಿಕೊಳ್ಳುವುದು ಮತ್ತು ಅದರ ಬಗ್ಗೆ ಮಾತನಾಡುವುದು, ಕ್ರಿಯಾತ್ಮಕವಾಗಿ ಸಮಸ್ಯೆಗಳನ್ನು ಬಿಡಿಸುವುದು, ಮತ್ತು ಜಗತ್ತಿನ ಆಗುಹೋಗಗಳ ಮೇಲೆ ನಮ್ಮ ಕೆಲಸಕಾರ್ಯಗಳಿಂದಾಗುವ ಪರಿಣಾಮ-ಇವನ್ನು ತಿಳಿಯಳು ಅವಕಾಶಮಾಡಿಕೊಢುತ್ತದೆ[೩].
ಚಿಂತನಾಶೀಲ ಶಿಕ್ಷಣವೆಂದರೆ, ಕೇವಲ ಧ್ಯಾನದ ಒಂದು ಪಠ್ಯಕ್ರಮ ಸೇರಿಸಿಕೊಂಡಿರುವ ಸಾಂಪ್ರದಾಯಿಕ ಶಿಕ್ಷಣವಲ್ಲ; ಅದು ಆಧುನಿಕ ಪಾಶ್ಚಿಮಾತ್ಯ ಪ್ರಗತಿಪರ ಕಲಾ ಸಂಪ್ರದಾಯದಲ್ಲಿ ಶಿಕ್ಷಣ ಪಡೆಯುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಕೊಡುವ ಒಂದು ಹೊಚ್ಚ ಹೊಸ ಮಾರ್ಗ. ಉದಾಹರಣೆಗೆ, ಅವರ ಶೈಕ್ಷಣಿಕ ಅಧ್ಯಯನವನ್ನು ಆಳವಾಗಿಸಲು, ಪ್ರಸಕ್ತ-ಕ್ಷಣದ ಪ್ರಜ್ಞಾನವನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮಾನಸಿಕ ಧ್ಯಾನಾಭ್ಯಾಸಗಳನ್ನು ಅಳವಡಿಸಕೊಳ್ಳಬಹುದು. ಅಥವಾ ಉತ್ತಮ ಅಂತರ-ಸಂಬಂಧಗಳನ್ನು ಕುದುರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ದೇಹಭಾಷೆಯ ಮೇಲೆ ಗಮನವಿಡಲು, ಉತ್ತಮ ಸಂಭಾಷಣೆ ನಡೆಸುವುದು ಮತ್ತು ಗಮನವಿಟ್ಟು ಆಲಿಸುವುದನ್ನು ಅಭ್ಯಾಸ ಮಾಡಬಹುದು. ಚಿಂತನಾಶೀಲತೆಯ ಅಧ್ಯಯನವು ವಿದ್ಯಾರ್ಥಿಗಳನ್ನು ಜ್ಞಾನಶಾಸ್ತ್ರದ ಮಾದರಿ ಮಾರ್ಗಸೂಚಿಗಳನ್ನು ದೂರವಿರಿಸಿ, ಒಂದು ಮಾನಸಿಕ-ಜಾಗೃತ ಪ್ರಪಂಚದಲ್ಲಿ ಜೀವಿಸಲು ಉತ್ತೇಜನ ನೀಡುತ್ತದೆ.
ಜನಪ್ರಿಯತೆ [ಸಂಪಾದನೆ]
ಬದಲಾಯಿಸಿಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ, ಚಿಂತನಶೀಲ ಅಭ್ಯಾಸಗಳು ಅನೇಕ ಪಠ್ಯಕ್ರಮಗಳಲ್ಲಿ ಅತೀವವಾಗಿ ಸೇರಿಕೊಳ್ಳುತ್ತಿವೆ. ಎಷ್ಟು ಎಂದು ಸಂಖ್ಯೆಗಳಲ್ಲಿ ಕರಾರುವಾಕ್ಕಾಗಿ ಹೇಳುವುದು ದುಸ್ತರ; ಆದರೆ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ (ಪರ್ಯಾಯ ಶಾಲೆಗಳಷ್ಟೇ ಅಲ್ಲದೆ) ಪಬ್ಲಿಕ್ ಶಿಕ್ಷಣ ಸಂಸ್ಥೆಗಳು ಈ ಆಭ್ಯಾಸಗಳು ಮತ್ತೂ ಹೆಚ್ಚಾಗಿ ಸ್ವೀಕರಿಸುತ್ತಿವೆ ಎಂದು, ಇತ್ತೀಚೆಗೆ ಹೊರಬಂದಿರುವ ಸಮೀಕ್ಷೆಗಳು ತಿಳಿಸುತ್ತವೆ [೪].
ಚಿಂತನಶೀಲ ಅಧ್ಯಯನಗಳು ಇನ್ನೂ ಅನೇಕ ಶಿಸ್ತುಗಳಲ್ಲಿ ಅಳವಡಿಸಕೊಳ್ಳಬಹುದು. ಇದನ್ನು ಈಗಾಗಲೇ ವಿವೇಕಯುತ ಸಂಪ್ರದಾಯಗಳಷ್ಟೇ ಅಲ್ಲದೆ, ವೈಜ್ಞಾನಿಕ ಚಿಂತನೆ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮತ್ತು ವ್ಯವಹಾರದ ಕ್ಷೇತ್ರಗಳಲ್ಲಿಯೂ ಬುದ್ಧಿವಂತಿಕೆ ಮತ್ತು ಸೌಖ್ಯಗಳನ್ನು ವರ್ಧಿಸಲು ಅನ್ವಯಿಸಲಾಗುತ್ತಿದೆ[೫]. ವಿಶ್ವವಿದ್ಯಾಲಯಗಳಲ್ಲಿ, ಕ್ರ್ಝಿಸ್ಝ್ಟೋಫ್ ಕೊನೇಕ್ಕಿ ಅವರ "ಪ್ರಾಕ್ಟೀಸಿಂಗ್ ಮೆಡಿಟೇಷನ್ ಆಫ್ ಹಠ-ಯೋಗ" ಎಂಬ ಪಠ್ಯದ ಚಿಂತನಶೀಲ ವಿಧಾನಗಳನ್ನು ಸಮಾಜಶಾಸ್ತ್ರ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು.
ಚಿಂತನಶೀಲ ಶಿಕ್ಷಣದ ತತ್ವವು ಅಮೇರಿಕಾ ಸಂಯುಕ್ತ ರಾಷ್ಟ್ರದಲ್ಲಿ ೧೯೭೪ ರಿಂದ ಪ್ರಚಲಿತವಾಗಿದೆ[೬]. ಆದರಿದು ( ಮಾನಸಿಕ ಧ್ಯಾನಾಭ್ಯಾಸ ಮತ್ತು ಯೋಗದಂತಹ) ಚಿಂತನಶೀಲ ಅಭ್ಯಾಸವೆಂದು ಎಲ್ಲ ಸ್ತರದ ಶಿಕ್ಷಣತಜ್ಞರ ಆಸಕ್ತಿಯನ್ನು ಪ್ರಜ್ವಲಿಸಿ ಇತ್ತೀಚೆಗಷ್ಟೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಇದು ಉನ್ನತ ಶಿಕ್ಷಣತಜ್ಙರ ಸಂಘ-ಸಂಸ್ಥೆಗಳಿಗೆ ಚಿಂತನಶೀಲ ಶಿಕ್ಷಣವನ್ನು ಮುಂದುವರೆಸಲು ಸ್ಫೂರ್ತಿ ನೀಡಿದೆ. ದಿ ಅಸೋಸಿಯೇಷನ್ ಫಾರ್ ಕಾಂಟಂಪ್ಲೇಟಿವ್ ಮೈನ್ಡ್ ಇನ್ ಹೈಯರ್ ಎಡುಕೇಷನ್ (ಎಸಿಎಮ್‌ಎಚ್‌ಇ) ಎಂಬ ಸಂಸ್ಥೆಯಲ್ಲಿ ೭೫೦ನ್ನು ಮೀರಿದ ಸಂಖ್ಯೆಯಲ್ಲಿ ಶಿಕ್ಷಕವರ್ಗದವರು, ಆಡಳಿತ ವರ್ಗದವರು, ಮತ್ತು ಉನ್ನತ ಶಿಕ್ಷಣ ತಜ್ಞರು ಸೇರಿದ್ದಾರೆ. ಎಸಿಎಮ್‌ಎಚ್‌ಇ ಸಂಸ್ಥೆಯು ೨೦೦೮ರಲ್ಲಿ ಸೆಂಟರ್ ಫಾರ್ ಕಾಂಟಂಪ್ಲೇಟಿವ್ ಮೈನ್ಡ್ ಇನ್ ಸೊಸೈಟಿ -ಇವರಿಂದ ಮ್ಯಸಾಚುಸೆಟ್ಸ್ ನಲ್ಲಿ ಪ್ರಾರಂಭವಾಯಿತು. ಅಲ್ಲಿ ಚಿಂತನಶೀಲ ಶಿಕ್ಷಣವನ್ನು ಕುರಿತ ೨೦೦೯ರಿಂದ ವಾರ್ಷಿಕ ಸಮ್ಮೇಳನವನ್ನು ಏರ್ಪಡಿಸುತ್ತಾ ಬಂದಿದೆ. ಈ ಸಂದರ್ಭಗಳು ಪಠ್ಯಕ್ರಮ ವಿಸ್ತರಣೆಗೆ ಉತ್ತೇಜನವನ್ನು ನೀಡುತ್ತವೆ. ಸಮಗ್ರವಾದ ಚಿಂತನಶೀಲ ಅಧ್ಯಯನವನ್ನು ಕುರಿತ ಕಾರ್ಯಕ್ರಮಗಳಿಗೆ ೧೩೦ನ್ನು ಮೀರಿದ ಸಂಖ್ಯೆಯಲ್ಲಿ ಫೆಲೋಷಿಪ್‌ಗಳನ್ನು ಕೊಡಲಾಗಿದೆ [೭]. ಎಸಿಎಮ್‌ಎಚ್‌ಇ ಸಂಸ್ಥೆಯ ಸ್ವರೂಪ ನಿರ್ಮಾಣವು ೧೯೯೭ರಿಂದ ೨೦೦೯ರ ವರೆಗೆ ಕೊಟ್ಟ ಈ ಫೆಲೋಷಿಪ್ ಗಳಿಂದ ಪ್ರಾರಂಭವಾಯಿತು. ಚಿಂತನಶೀಲ ವಿಧಾನಗಳನ್ನು ಅಳವಡಿಸಿಕೊಂಡು, ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸಿ, ಶಿಕ್ಷಣ ಕೊಡಲು ಅನುವು ಮಾಡಿದಕ್ಕೆ, ಈ ಫೆಲೋಷಿಪ್ ಗಳನ್ನು ೧೫೩ ಶಿಕ್ಷಕವರ್ಗದವರಿಗೆ, ೧೦೭ ಕಾಲೇಜುಗಳಲ್ಲಿ ಮತ್ತ ವಿಶ್ವವಿದ್ಯಾಲಯಗಳಲ್ಲಿ ಕೊಡಲಾಗಿದೆ. ಚಿಂತನಶೀಲ ವಿಧಾನಗಳನ್ನು ಉನ್ನತ ಶಿಕ್ಷಣದ ಶಿಸ್ತುಗಳಲ್ಲಿ ಉಪಯೋಗಿಸುವ ಒಂದು ಸಮುದಾಯವನ್ನು ರಚಿಸಲು ಈ ಮೊದಲ ಹೆಜ್ಜೆ ಸಹಾಯ ಮಾಡಿದೆ[೮].
ಚಿಂತನಶೀಲ ಶಿಕ್ಷಣದ ಉದ್ದೇಶವು ಚಿಂತನಾಶೀಲ ಅಭ್ಯಾಸಗಳನ್ನು ಮತ್ತು ದೃಷ್ಟಿಗಳನ್ನು ಪಠ್ಯಕ್ರಮಗಳಲ್ಲಿ ಸಮಗ್ರಗೋಳಿಸುವುದೇ ಆಗಿದ್ದರೂ ಚಿಂತನಾಶೀಲತೆಯ ಶಿಸ್ತು-ಅದರ ಅನುಭವವನ್ನು ಪರಿಶಿಲಿಸುವುದರಲ್ಲಿಯೂ ಸಹ ಬೆಳವಣಿಗೆಯಾಗುತ್ತಿದೆ. ಇದರ ಪ್ರಾರಂಭಿಕೆಯನ್ನು ಬ್ರೌನ್ ಯೂನಿವರ್ಸಿಟಿಯ ಹೆರಾಲ್ಡ್ ರಾಥ್, ಅವರು ಔಪಚಾರಿಕವಾಗಿ ಈ ಅಧ್ಯಯನಗಳನ್ನು ಒಟ್ಟಾಗಿ ಕೊಡುಗೆ ನೀಡಿದ್ದಾರೆ. ಅವರು, ಮತಧರ್ಮಗಳ ಅಧ್ಯಯನದ ಪ್ರೊಫೆಸರ್ ಮತ್ತು ಚಿಂತನಶೀಲ ಅಧ್ಯಯನಗಳ ಪ್ರಾರಂಭಿಕೆಯ ಡೈರೆಕ್ಟರ್ ಆಗಿರುವರು [೯].
ಚಿಂತನಶೀಲ ಶಿಕ್ಷಣವು ಜ್ಯಾಝ್ ಮತ್ತು ಚಿಂತನಶೀಲ ಅಧ್ಯಯನ ಪಠ್ಯಕ್ರಮದಲ್ಲಿ ಲಲಿತಕಲಾ ಪದವಿಯಕೋರ್ಸ್ ಒಂದನ್ನು , ಮಿಷಿಗನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಧ್ಯಾನದ ವಿಧಾನ ಮತ್ತು ಮತ್ತಿತರ ಸಂಬಂಧಿತ ಪಠ್ಯಕ್ರಮಗಳನ್ನು ಜ್ಯಾಝ್ ಮತ್ತು ಸಮಸ್ತ ಸಂಗೀತದ ತರಬೇತಿಯ ಜೊತೆಯಲ್ಲಿ ಕೊಡಲಾಗುತ್ತಿದೆ.
ಕೊಲೆರಾಡೋನ ದಿ ರಾಕೀ ಮೌನ್‌ಟನ್ ಕಾಟೆಂಪ್ಲೆಟಿವ್ ಹೈಯರ್ ಎಜುಕೇಷನ್ ನೆಟ್‌ವರ್ಕ್ (ಆರ್‌ಎಮ್‌ಸಿಎಚ್‌ಇಎನ್),ಸೆಪ್ಟೆಂಬರ್ ೨೦೦೬ ರಲ್ಲಿ ನರೋಪಾ ಯೂನಿವರ್ಸಿಟಿಯ ಪೀಟರ್ ಶ್ನೈಡರ್ ಎಂಬುವವರ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈತ ಕೊಲೊರಾಡೋ-ಬೌಲ್ಡರ್ ಯೂನಿವರ್ಸಿಟಿಯಲ್ಲಿ ಸುಪ್ರಸಿದ್ಧ ವಾಸ್ತುಶಾಸ್ತ್ರದ ಪ್ರೊಫೆಸರ್ ಆಗಿರುವರು. ಅವರ ಜೊತೆಯಲ್ಲಿದ್ದ, ನರೋಪಾದ ಮಾಜಿ ಅಧ್ಯಕ್ಷೆಯಾದ ಮತ್ತು ಪ್ರಸಿದ್ಧ ನೃತ್ಯಗಾರ್ತಿ, ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿಯಾದ ಬಾರ್ಬರಾ ಡಿಲ್ಲೇ ಎಂಬುವವರು ಮಾತನಾಡಿದರು.
ಚಿಂತನಶಶೀಲ ಮಾಧ್ಯಮ ಪಠ್ಯಕ್ರಮಗಳು ಇತ್ತೀಚೆಗೆ ಬೆಳಕಿಗೆ ಬಂದಿರುವ, ಸಮಾಜದಲ್ಲಿ ಇಂದು ತಂತ್ರಜ್ಷಾನದ ಒಳಹರಿವಿನ ಸಂದರ್ಭದಲ್ಲಿ, ತುರ್ತಾಗಿ ಗಮನಿಸಬೇಕಾದ ವಿಷಯ. ಅದರ ಪ್ರಭಾವ ಹೆಚ್ಚಾಗುತ್ತಲೇ ಇರುವಂತೆ, ಚಿಂತನಾಶೀಲ ಶಿಕ್ಷಣವು, ನೈತಿಕ ಹೊಣೆಯುಳ್ಳ ಮತ್ತು ಆರ್ಥಿಕವಾಗಿ ತಡೆದುಕೊಳ್ಳಬಲ್ಲ, ಮಾನವ-ಉನ್ನತಿಯ ಕಟ್ಟಡವನ್ನು ಕಟ್ಟುವ ಗುರಿಯನ್ನು ಹೊಂದಿದೆ[೧೦].
“ಕಾಂಟಂಪ್ಲೆಟಿವ್ ಸೈಕಾಲಜಿ” ಎಂಬ ಪುಸ್ತಕವನ್ನು ಬರೆದಿರುವ ಡಾ. ಹ್ಯಾನ್ ಎಫ್. ಡಿ ವಿಟ್ ಅವರು ಇದರ ಮೊದಲನೆಯ ಕ್ರಮಬದ್ಧ ಚಟುವಟಿಕೆಯ ರೂಪುರೇಖೆಯನ್ನು ರಚಿಸಿದ್ದಾರೆ. ಇದರಲ್ಲಿ ಈ ವಿಷಯವನ್ನು ಹೇಗೆ ಸಂಪೂರ್ಣವಾಗಿ ಬೆಳೆಸುವುದೆಂದು ಸಲಹೆಕೊಟ್ಟಿದ್ದಾರೆ[೧೧].
ಉಲ್ಲೇಖಗಳು
ಬದಲಾಯಿಸಿ- ↑ https://archive.org/details/excellencewithou00lewi
- ↑ https://journals.sagepub.com/doi/10.1177/1541344603259311
- ↑ http://www.news.cornell.edu/stories/2014/07/contemplative-practices-boost-problem-solving
- ↑ https://www.tandfonline.com/doi/abs/10.1080/14681366.2018.1465111
- ↑ https://sunypress.edu/content/download/452874/5511743/version/1/file/9781438452395_imported2_excerpt.pdf
- ↑ "ಆರ್ಕೈವ್ ನಕಲು". Archived from the original on 2006-08-31. Retrieved 2022-07-07.
- ↑ "ಆರ್ಕೈವ್ ನಕಲು". Archived from the original on 2022-07-03. Retrieved 2022-07-07.
- ↑ "ಆರ್ಕೈವ್ ನಕಲು" (PDF). Archived from the original (PDF) on 2020-02-05. Retrieved 2022-07-07.
- ↑ http://www.brown.edu/academics/contemplative-studies/concentrating-contemplative-studies
- ↑ https://en.wikipedia.org/wiki/Contemplative_education#cite_note-11
- ↑ https://web.archive.org/web/20121013184753/http://shambhala.org/teachers/acharya/hdewit.php