ಪದ್ಮ ಪುರಾಣದಲ್ಲಿ ಉಲ್ಲೇಖಿತವಾಗಿರುವ ಒಂದು ಧಾರ್ಮಿಕ ವ್ರತ. ಪಾಪ ಪರಿಹಾರಾರ್ಥಕವಾಗಿ ಮಾಡುವ ಶರೀರ ದಂಡನೆಯ ವ್ರತವಿದು.ಚಂದ್ರನ ವೃದ್ಧಿ-ಕ್ಷಯವನ್ನು ಅವಲಂಬಿಸಿರುವ ವ್ರತ.


ಈ ವ್ರತದಂತೆ ಅಮಾವಾಸ್ಯೆಯ ದಿನಉಪವಾಸವನ್ನು ಮಾಡಬೇಕು. ನಂತರ ಚಂದ್ರನ ಪ್ರಗತಿಯಂತೆ ದಿನಕ್ಕೊಂದು ತುತ್ತಿನಂತೆ ಆಹಾರವನ್ನು ಹೆಚ್ಚಿಸುತ್ತಾ ಹೋಗಬೇಕು. ಅಂದರೆ ಪಾಡ್ಯದ ದಿನ ಒಂದು ತುತ್ತನ್ನೂ, ಬಿದಿಗೆಯ ದಿನ ಎರಡು ತುತ್ತನ್ನೂ, ತದಿಗೆಯ ದಿನ ಮೂರು ತುತ್ತು ಆಹಾರವನ್ನೂ ಸೇವಿಸಬೇಕು. ಅಂತೆಯೇ ಹುಣ್ಣಿಮೆಯ ದಿನ ೧೫ ತುತ್ತುಗಳ ಆಹಾರ ಸೇವನೆ ಮಾಡಬೇಕು.


ಮತ್ತೆ ಕೃಷ್ಣ ಪಕ್ಷ ಪ್ರಾರಂಭವಾಗಲು ಆಹಾರ ಸೇವನೆಯನ್ನು ಕಡಿಮೆ ಮಾಡುತ್ತಾ ಹೋಗಬೇಕು. ಇದರಂತೆ ಹುಣ್ಣಿಮೆಯ ಮಾರನೆಯದಿನ ೧೪ ತುತ್ತು, ಅದರ ನಂತರದ ದಿನ ೧೩ ತುತ್ತುಗಳ ಆಹಾರ ಸೇವನೆ. ಹೀಗೆ ಮುಂದೆ ಅಮಾವಾಸ್ಯೆಯ ದಿನ ಒಂದು ತುತ್ತೂ ಅನ್ನಾಹಾರ ಸೇವಿಸದೇ ಉಪವಾಸ ಮಾಡಬೇಕು. ಈ ವ್ರತದ ಆಚರಣೆಯಿಂದ ಮಾಡಿರುವ ಪಾಪಗಳಿಗೆ ಪ್ರಾಯಶ್ಚಿತ್ತ ದೊರೆಯುತ್ತದೆ ಎಂಬ ನಂಬಿಕೆ ಇದೆ.